ಮಾರುಕಟ್ಟೆಗೆ ಎಂಟ್ರಿ ಕೊಟ್ಟ ನುಬಿಯಾ ರೆಡ್ ಮ್ಯಾಜಿಕ್ 5G ಸ್ಮಾರ್ಟ್‌ಫೋನ್!
ಇತ್ತೀಚಿನ ದಿನಗಳಲ್ಲಿ ಟೆಕ್ ಮಾರುಕಟ್ಟೆಗೆ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ನೀಡಿವೆ. ಸ್ಮಾರ್ಟ್‌ಫೋನ್ ಕಂಪೆನಿಗಳು ತಮ್ಮ ಭಿನ್ನ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿವೆ. ಇವುಗಳಲ್ಲಿ ನುಬಿಯಾ ಕಂಪೆನಿ ಕೂಡ ಒಂದಾಗಿದ್ದು, ಇದು ಗೇಮಿಂಗ್ ಪ್ರಿಯರಿಗಾಗಿಯೇ ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಪ್ರಸಿದ್ಧಿ ಪಡೆದುಕೊಂಡಿದೆ. ಈಗಾಗ್ಲೆ ನುಬಿಯಾ ಕಂಪೆನಿಯ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನ ಆಕರ್ಷಿಸಿದ್ದು, ಇದೀಗ ನುಬಿಯಾ ಕಂಪೆನಿ ಹೊಸ ನುಬಿಯಾ ರೆಡ್ ಮ್ಯಾಜಿಕ್ 5G ಗೇಮಿಂಗ್ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಹೌದು ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ನುಬಿಯಾ ಕಂಪೆನಿ ತನ್ನ ಹೊಸ ನುಬಿಯಾ ರೆಡ್ ಮ್ಯಾಜಿಕ್ 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಗೇಮಿಂಗ್ ಸ್ಮಾರ್ಟ್‌ಫೋನ್ ಅತಿ ಹೆಚ್ಚು ರಿಫ್ರೆಶ್ ರೇಟ್ ಹೊಂದಿರುವ ಸ್ಮಾರ್ಟ್‌ಫೋನ್ ಆಗಿದ್ದು, ಇದರ ಸ್ಕ್ರೀನ್ 144Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಇನ್ನು ನುಬಿಯಾ ರೆಡ್ ಮ್ಯಾಜಿಕ್ 5G ಗೇಮಿಂಗ್ ಸ್ಮಾರ್ಟ್‌ಫೋನ್ ಅಕ್ಟಾ-ಕೋರ್ ಸ್ನಾಪ್‌ಡ್ರಾಗನ್ 865 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡಿಸ್‌ಪ್ಲೇ
ಈ ಸ್ಮಾರ್ಟ್‌ಫೋನ್ 1080 x 2340 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.65 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಅಮೋಲೆಡ್ ಫುಲ್‌ಹೆಚ್‌ಡಿ ಪ್ಲಸ್ ಸ್ಕ್ರೀನ್ ಒಳಗೊಂಡ ಡಿಸ್‌ಪ್ಲೇ ಆಗಿದೆ. ಇನ್ನು ಈ ಡಿಸ್‌ಪ್ಲೇ 144Hz ಅಲ್ಟ್ರಾ ಹೈ ಸ್ಕ್ರೀನ್ ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, 240Hz ಸ್ಕ್ರೀನ್ ಟಚ್ ರಿಪೋರ್ಟಿಂಗ್ ರೇಟ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಡಿಸ್‌ಪ್ಲೇ 19.5:9 ರಾಚನೆಯ ಅನುಪಾತವನ್ನು ಒಳಗೊಂಡಿದೆ. ಜೊತೆಗೆ ಗೇಮಿಂಗ್ ಗಾಗಿ ಉತ್ತಮ ಡಿಸ್‌ಪ್ಲೇ ಮಾದರಿಯನ್ನ ಹೊಂದಿದೆ.

ಪ್ರೊಸೆಸರ್
ನುಬಿಯಾ ರೆಡ್ ಮ್ಯಾಜಿಕ್ 5G ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 865 SoC ಪ್ರೊಸೆಸರ್ ವೇಗವನ್ನು ಹೊಂದಿದ್ದು, ಅಂಡ್ರಾಯ್ಡ್ 10 ರೆಡ್ ಮ್ಯಾಜಿಕ್ ಒಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಕಸ್ಟಮ್ ಅಡ್ರಿನೊ 650 GPU ಹೊಂದಿದೆ. ಇದಲ್ಲದೆ 8GB RAM ಮತ್ತು128GB, 12GB RAM ಮತ್ತು128GB, 16GB RAM ಮತ್ತು 128GB ಅಥವಾ 256GB ಆಂತರಿಕ ಸಾಂರ್ಥ್ಯವನ್ನು ಹೊಂದಿರುವ ಮೂರು ವೇರಿಯೆಂಟ್ ಆಯ್ಕೆಯನ್ನ ಹೊಂದಿದ್ದು. ಮೆಮೊರಿ ಕಾರ್ಡ್ ಅವಕಾಶವನ್ನು ಹೊಂದಿಲ್ಲ.

ಕ್ಯಾಮೆರಾ ವಿನ್ಯಾಸ
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 64 ಮೆಗಾಪಿಕ್ಸೆಲ್‌ಸೋನಿ IMX686 ಸೆನ್ಸಾರ್, ಎರಡನೇ ಕ್ಯಾಮೆರಾ 8ಮೆಗಾಪಿಕ್ಸೆಲ್ ಸೂಪರ್ ವೈಡ್ ಆಂಗಲ್ ಸೆನ್ಸಾರ್, ಹಾಗೂ ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಲೆನ್ಸ್ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ
ನುಬಿಯಾ ರೆಡ್ ಮ್ಯಾಜಿಕ್ 5G ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, 55W ಏರ್ ಕೂಲ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದು ಕೇವಲ 15 ನಿಮಿಷಗಳಲ್ಲಿ 56% ಚಾರ್ಜಿಂಗ್ ಅನ್ನು ನೀಡಲಿದೆ ಎಂದು ಕಂಪೆನಿ ಹೇಳಿದೆ. ಇನ್ನು ಕನೆಕ್ಟಿವಿಟ ಆಯ್ಕೆಗಳಲ್ಲಿ ವೈಫೈ, GPS, ಬ್ಲೂಟೂತ್, 3.5mm ಹೆಡ್‌ಫೋನ್ ಜ್ಯಾಕ್, ಇನ್ ಡಿಸ್‌ಪ್ಲೇ ಫಿಂಗರ್ ಪ್ರಿಂಟ್, ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಏರ್ ಆಂಡ್ ಲಿಕ್ವಿಡ್ ಕೂಲ್ಡ್ ಡ್ಯುಯೆಲ್ ಕೂಲಿಂಗ್ ಸಿಸ್ಟಂ ಅನ್ನು ಹೊಂದಿದ್ದು, 1 ಗ್ರಾಂ ಅಲ್ಟ್ರಾ-ಲೈಟ್ ಫ್ಯಾನ್ ಮೂಲಕ 15,000RPM ವರೆಗೆ ಸ್ಮಾರ್ಟ್‌ಫೋನ್ ಬಿಸಿಯಾಗುವುದನ್ನು ತಡೆಯುತ್ತದೆ.

ಬೆಲೆ ಮತ್ತು ಲಭ್ಯತೆ
ಇನ್ನು ನುಬಿಯಾ ರೆಡ್ ಮ್ಯಾಜಿಕ್ 5G ಬೇಸ್ ಮಾಡೆಲ್ 8GB RAM ಮತ್ತು128GB ಸಾಮರ್ಥ್ಯದ ಸ್ಮಾರ್ಟ್‌ಫೋನ್ CNY 3,799 (ಸುಮಾರು 40,300 ರೂ.) ಬೆಲೆ, ಮತ್ತು 12GB RAM ಮತ್ತು128GB ಆಯ್ಕೆಯ ಸ್ಮಾರ್ಟ್‌ಫೋನ್ CNY 4,099 (ಅಂದಾಜು 43,500.ರೂ,)ಬೆಲೆಯನ್ನ, ಹಾಗೂ 12GB RAM ಮತ್ತು 256GB ಆಯ್ಕೆಗೆ CNY 4,399 ( ಸುಮಾರು 46,700.ರೂ,)ಬೆಲೆಯನ್ನ ಹೊಂದಿದ್ದು, ಇನ್ನು ಟಾಪ್ ಎಂಡ್ ವೇರಿಯೆಂಟ್ ಆಯ್ಕೆಯ 16GB RAM ಮತ್ತು 256GB ಸ್ಮಾರ್ಟ್‌ಫೋನ್ CNY 4,999 (ಅಂದಾಜು 53,000.ರೂ,)ಬೆಲೆಯನ್ನ ಹೊಂದಿದೆ. ಹ್ಯಾಕರ್ ಬ್ಲ್ಯಾಕ್, ಮಾರ್ಸ್ ರೆಡ್, ಸೈಬರ್ ನಿಯೋನ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








