ಮೊಬೈಲ್ ಮಾರುಕಟ್ಟೆಯಲ್ಲಿ ಕಂಪನ ಸೃಷ್ಟಿಸಿದ ರೆಡ್ ಮ್ಯಾಜಿಕ್ 9 ಪ್ರೊ! ಏನ್ರಿ ಇದರ ಡಿಸೈನ್?
ನುಬಿಯಾ ಕಂಪೆನಿ ಗೇಮಿಂಗ್ ಪ್ರಿಯರ ನೆಚ್ಚಿನ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ತನ್ನ ವಿಭಿನ್ನ ಶೈಲಿಯ ಡಿಸೈನ್ ಹಾಗೂ ಪವರ್‌ಫುಲ್ ಕಾರ್ಯದಕ್ಷತೆಗೆ ಈ ಫೋನ್‌ಗಳು ಸೈ ಎನಿಸಿಕೊಂಡಿವೆ. ಇದೀಗ ತನ್ನ ನುಬಿಯಾ ರೆಡ್ ಮ್ಯಾಜಿಕ್ 9 ಪ್ರೊ ಸ್ಮಾರ್ಟ್‌ಫೋನ್ ಅನ್ನು ಗ್ಲೋಬಲ್ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ.
ಹೌದು, ನುಬಿಯಾ ರೆಡ್ ಮ್ಯಾಜಿಕ್ 9 ಪ್ರೊ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 Gen 3SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು UFS 4.0 ತಂತ್ರಜ್ಞಾನವನ್ನು ಬಳಸಿಕೊಂಡು ವಿವಿಧ RAM ಆಯ್ಕೆಗಳು ಮತ್ತು ಶೇಖರಣಾ ಆಯ್ಕೆಗಳೊಂದಿಗೆ ಬರುತ್ತದೆ. ಹಾಗಾದ್ರೆ ಈ ಹೊಸ ಸ್ಮಾರ್ಟ್‌ಫೋನ್ ಫೀಚರ್ಸ್ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರೆಡ್ ಮ್ಯಾಜಿಕ್ 9 ಪ್ರೊ ಫೀಚರ್ಸ್ ಹೇಗಿದೆ?
ರೆಡ್ ಮ್ಯಾಜಿಕ್ 9 ಪ್ರೊ ಸ್ಮಾರ್ಟ್‌ಫೋನ್ 6.8 ಇಂಚಿನ ಫುಲ್ ಹೆಚ್‌ಡಿ ಪ್ಲಸ್ OLED ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1116 x 2480 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು 20:9 ಡಿಸ್‌ಪ್ಲೇ ರಚನೆಯ ಅನುಪಾತದೊಂದಿಗೆ ಬರಲಿದೆ. ಜೊತೆಗೆ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲವನ್ನು ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಪಡೆದುಕೊಂಡಿದೆ.
ರೆಡ್ ಮ್ಯಾಜಿಕ್ 9 ಪ್ರೊ ಪ್ರೊಸೆಸರ್ ಯಾವುದು?
ರೆಡ್ ಮ್ಯಾಜಿಕ್ 9 ಪ್ರೊ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 Gen 3SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಜೊತೆಗೆ Adreno 750 GPU ಸಪೋರ್ಟ್ ಬೆಂಬಲವಿದ್ದು, ರೆಡ್‌ಮ್ಯಾಜಿಕ್ OS 9.0 ನೊಂದಿಗೆ ಆಂಡ್ರಾಯ್ಡ್ 14 ನಲ್ಲಿ ರನ್ ಆಗಲಿದೆ. ಹಾಗೆಯೇ 12GB RAM+256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ರೆಡ್ ಮ್ಯಾಜಿಕ್ 9 ಪ್ರೊ ಕ್ಯಾಮೆರಾ ಸೆಟಪ್ ಏನಿದೆ?
ರೆಡ್ ಮ್ಯಾಜಿಕ್ 9 ಪ್ರೊ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ Samsung GN5 ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ Samsung JN1 ಸೆನ್ಸಾರ್ ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಅಂಡರ್-ಡಿಸ್ಪ್ಲೇ ಫ್ರಂಟ್-ಫೇಸಿಂಗ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ರೆಡ್ ಮ್ಯಾಜಿಕ್ 9 ಪ್ರೊ ಬ್ಯಾಟರಿ ಮತ್ತು ಇತರೆ
ರೆಡ್ ಮ್ಯಾಜಿಕ್ 9 ಪ್ರೊ ಸ್ಮಾರ್ಟ್‌ಫೋನ್ 6500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ, Wi-Fi 6E, ಬ್ಲೂಟೂತ್ 5.4, USB ಟೈಪ್-C ಮತ್ತು NFC ಅನ್ನು ಒಳಗೊಂಡಿದೆ. ಇದಲ್ಲದೆ ಮೂರು ಮೈಕ್ರೊಫೋನ್‌ಗಳ ಜೊತೆಗೆ 3.5mm ಆಡಿಯೋ ಜ್ಯಾಕ್, ಡ್ಯುಯಲ್ 1115K ಸ್ಪೀಕರ್‌ಗಳು ಮತ್ತು DTS:X ಅಲ್ಟ್ರಾ ಬೆಂಬಲವನ್ನು ಆಡಿಯೋ ವೈಶಿಷ್ಟ್ಯಗಳು ಒಳಗೊಂಡಿವೆ.

ಬೆಲೆ ಮತ್ತು ಲಭ್ಯತೆ
ರೆಡ್ ಮ್ಯಾಜಿಕ್ 9 ಪ್ರೊ ಸ್ಮಾರ್ಟ್‌ಫೋನ್ 2GB RAM+256GB ಸಂಗ್ರಹಣೆಯ ಆಯ್ಕೆಯು $649 (ಅಂದಾಜು 53,953ರೂ) ಬೆಲೆ ಹೊಂದಿದೆ. ಇದರ 16GB RAM+512GB ಆಯ್ಕೆಯು $799 (ಅಂದಾಜು 66,422ರೂ) ಬೆಲೆಯನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್ ಡಿಸೆಂಬರ್ 27, 2023 ರಿಂದ ಜಾಗತಿಕ ವೆಬ್‌ಸೈಟ್‌ನಲ್ಲಿ ಮುಂಗಡ-ಕೋರಿಕೆಗೆ ಲಭ್ಯವಿರುತ್ತದೆ. ಈ ಫೋನ್ ಕಪ್ಪು,ಸಿಲ್ವರ್, ಮತ್ತು ಸೈಕ್ಲೋನ್ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ.


Click it and Unblock the Notifications








