ರೆಡ್ ಮ್ಯಾಜಿಕ್ ಸೈಬರ್‌ಪಾಡ್ಸ್ ಗೇಮಿಂಗ್ ಇಯರ್‌ಬಡ್ಸ್ ಲಾಂಚ್!
ಗೇಮಿಂಗ್ ಸ್ಮಾರ್ಟ್‌ಫೋನ್, ಗೇಮಿಂಗ್ ಲ್ಯಾಪ್‌ಟಾಪ್‌ಗಳಿಗೆ ಹೆಸರುವಾಸಿಯಾಗಿರುವ ನುಬಿಯಾ ರೆಡ್ ಮ್ಯಾಜಿಕ್ ತನ್ನ ಹೊಸ ಮಾದರಿಯ ಇಯರ್‌ಪಾಡ್ಸ್ ಅನ್ನು ಬಿಡುಡೆ ಮಾಡಿದೆ. ಸದ್ಯ ರೆಡ್ ಮ್ಯಾಜಿಕ್ ಸೈಬರ್‌ಪಾಡ್ಸ್ ಬ್ಲೂಟೂತ್ 5.0 ಸಂಪರ್ಕ ಮತ್ತು ಕಡಿಮೆ-ಲೇಟೆನ್ಸಿ ಮೋಡ್ ಹೊಂದಿರುವ TWS ಗೇಮಿಂಗ್ ಇಯರ್‌ಬಡ್‌ಗಳನ್ನು ಪರಿಚಯಿಸಿದೆ. ಇದಲ್ಲದೆ, ರೆಡ್ ಮ್ಯಾಜಿಕ್ 5 ಎಸ್ ಗೇಮಿಂಗ್ ಸ್ಮಾರ್ಟ್‌ಫೋನ್ ಸಹ ಈಗ ಹೊಸ ಎಕ್ಲಿಪ್ಸ್ ಬ್ಲ್ಯಾಕ್ ಕಲರ್ ರೂಪಾಂತರದಲ್ಲಿ ಬಿಡುಗಡೆಯಾಗಿದೆ.

ಹೌದು, ನುಬಿಯಾ ರೆಡ್ ಮ್ಯಾಜಿಕ್ ತನ್ನ ಹೊಸ ರೆಡ್ ಮ್ಯಾಜಿಕ್ ಸೈಬರ್‌ಪಾಡ್ಸ್ ಟ್ರೂ ವಾಯರ್‌ಲೆಸ್ ಗೇಮಿಂಗ್ ಇಯರ್‌ಬಡ್‌ಗಳನ್ನು ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಆದರೆ ಇಯರ್‌ಬಡ್ಸ್ ಕಂಪನಿಯ ವೆಬ್‌ಸೈಟ್‌ನಲ್ಲಿ ಇದುವರೆಗೆ ಲೈವ್ ಆಗಿಲ್ಲ. ಇನ್ನು ಈ ಇಯರ್‌ಬಡ್ಸ್ ಸ್ಮಾರ್ಟ್‌ಫೋನ್ ಗೇಮಿಂಗ್ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರೆಡ್ ಮ್ಯಾಜಿಕ್ ಸೈಬರ್‌ಪಾಡ್ಸ್ ಟ್ರೂ ವಾಯರ್‌ಲೆಸ್ ಗೇಮಿಂಗ್ ಇಯರ್‌ಬಡ್ಸ್ ಪ್ರತಿ ಇಯರ್‌ಪೀಸ್‌ನಲ್ಲಿ 8mm ಆಡಿಯೋ ಡ್ರೈವರ್‌ಗಳೊಂದಿಗೆ ಬರುತ್ತವೆ. ಇನ್ನು ಈ ಇಯರ್‌ಬಡ್ಸ್ ಬ್ಲೂಟೂತ್ 5.0 ಸಂಪರ್ಕವನ್ನು ಹೊಂದಿದೆ. ಜೊತೆಗೆ ಗೇಮಿಂಗ್‌ಗಾಗಿ ವಿಶೇಷ ಕಡಿಮೆ-ಲೇಟೆನ್ಸಿ ಮೋಡ್ ಅನ್ನು ಹೊಂದಿದೆ. ರೆಡ್ ಮ್ಯಾಜಿಕ್ ಸೈಬರ್‌ಪಾಡ್‌ಗಳು ಮೊಗ್ಗುಗಳಲ್ಲಿ ಟಚ್ ಕಂಟ್ರೋಲ್ ಫೀಚರ್ಸ್‌ಗಳನ್ನು ಹೊಂದಿದೆ. ನುಬಿಯಾ ಫೋನ್‌ಗಳೊಂದಿಗೆ ಒನ್-ಟಚ್ ಕನೆಕ್ಟ್ ಫೀಚರ್ಸ್ ಅನ್ನು ಹೊಂದಿವೆ.

ಇನ್ನು ರೆಡ್ ಮ್ಯಾಜಿಕ್ ಸೈಬರ್‌ಪಾಡ್‌ಗಳು 20 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದ್ದು, ಅದರ ಚಾರ್ಜಿಂಗ್ ಪ್ರಕರಣದೊಂದಿಗೆ ಯುಎಸ್‌ಬಿ-ಸಿ ಚಾರ್ಜ್ ಆಗುತ್ತದೆ ಎಂದು ವರದಿ ಹೇಳಿದೆ. ಇಯರ್‌ಬಡ್‌ಗಳಲ್ಲಿ ಆರ್‌ಜಿಬಿ ಲೈಟಿಂಗ್ ಕೂಡ ಇದೆ. ಇದಲ್ಲದೆ ಈ ಇಯರ್‌ಬಡ್ಸ್‌ಗಳು ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಬಳಕೆದಾರರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳಲಿದೆ. ಇನ್ನು ಈ ಇಯರ್ ಬಡ್ಸ್ ಜೊತೆಗೆ ರೆಡ್ ಮ್ಯಾಜಿಕ್ 5s ಸ್ಮಾರ್ಟ್‌ಫೋನ್ ಈಗ ಹೊಸ ಎಕ್ಲಿಪ್ಸ್ ಬ್ಲ್ಯಾಕ್ ಕಲರ್ ರೂಪಾಂತರದಲ್ಲಿ ಸಹ ಬಿಡುಗಡೆ ಆಗಿದೆ.

ಸದ್ಯ ರೆಡ್ ಮ್ಯಾಜಿಕ್ ಸೈಬರ್‌ಪಾಡ್‌ಗಳಿಗೆ ಯುರೋಪಿನಲ್ಲಿ ಯುರೋ 50 (ಸುಮಾರು 4,400 ರೂ.) ಬೆಲೆ ಇದೆ. ಇನ್ನು ಈ ಇಯರ್ ಬಡ್ಸ್ ಇದೇ ನವೆಂಬರ್ 20 ರಿಂದ ನುಬಿಯಾ ವೆಬ್‌ಸೈಟ್ ಮೂಲಕ ಖರೀದಿಗೆ ಲಭ್ಯವಿರಲಿದೆ. ಅಲ್ಲದೆ ಈ ಇಯರ್‌ಬಡ್‌ಗಳು ಶೀಘ್ರದಲ್ಲೇ ಜಾಗತಿಕವಾಗಿಯೂ ಲಭ್ಯವಾಗುತ್ತವೆ ಎಂದು ನಿರೀಕ್ಷಿಸಲಾಗಿದೆ, ಆದರೆ ಇದಕ್ಕಾಗಿ ಯಾವುದೇ ಟೈಮ್‌ಲೈನ್ ಲಭ್ಯವಿಲ್ಲ.


Click it and Unblock the Notifications