Subscribe to Gizbot

ಬರಲಿದೆ ಹೊಸ ನುಬಿಯಾ ಸ್ಮಾರ್ಟ್‍ಫೋನ್ : 6ಜಿಬಿ ರಾಮ್ ಮತ್ತು ಸ್ನಾಪ್‍ಡ್ರಾಗನ್ 617 ಮೈಕ್ರೊಚಿಪ್ ನೊಂದಿಗೆ

ನುಬಿಯಾ ಚೀನಾದ ಸ್ಮಾರ್ಟ್‍ಫೋನ್ ಉತ್ಪಾದಕ ಕಂಪನಿಯಾಗಿದೆ. ಈಗ ಈ ಕಂಪನಿಯು ಮತ್ತೆ ಸುದ್ದಿಯಾಗಲು ಕಾರಣವೊಂದಿದೆ. ಈ ಕಂಪನಿಯ ನಿಗೂಢ ಎನ್ನಬಹುದಾದ ಮೊಡೆಲ್ ಸಂಖ್ಯೆ ಎನ್‍ಎಕ್ಸ್591ಜೆ ಅನ್ನು ಬೆಂಚ್‍ಮಾರ್ಕ್ ನ ಜಾಲತಾಣ ಗೀಕ್‍ಬೆಂಚ್ ನಲ್ಲಿ ಕಾಣಲು ಸಿಕ್ಕಿದೆ.

ಬರಲಿದೆ ಹೊಸ ನುಬಿಯಾ ಸ್ಮಾರ್ಟ್‍ಫೋನ್

ಎಂದಿನಂತೆ, ಬೆಂಚ್‍ಮಾರ್ಕ್ ಪಟ್ಟಿ ನುಬಿಯಾ ಫೋನಿನ ಮುಖ್ಯ ಫೀಚರ್ಸ್ ಅನ್ನು ಪ್ರಕಟ ಪಡಿಸಿದೆ. ಈ ಫೋನ್ ಕ್ವ್ಯಾಲ್‍ಕೊಮ್ ನ ಸ್ನಾಪ್‍ಡ್ರಾಗನ್ 617 ಪ್ರೊಸೆಸರ್ ನೊಂದಿಗೆ ಬರಲಿದೆ. ಇದರ ಸ್ಟೊರೆಜ್ ಸಾಮಥ್ರ್ಯದ ಬಗ್ಗೆ ಯಾವ ವಿವರಣೆಯೂ ಸಿಕ್ಕಿಲ್ಲಾ. ತಂತ್ರಾಶದ ಬಗ್ಗೆ ಹೇಳುವುದಾದರೆ, ನುಬಿಯಾ ಎನ್‍ಎಕ್ಸ್591ಜೆ ಆಂಡ್ರೊಯಿಡ್ 7.1.1 ನೌಗಟ್ ಅನ್ನು ಒಳಗೊಂಡಿರಲಿದೆ. ದುರದೃಷ್ಟವಶಾತ್ ಗೀಕ್‍ಬೆಂಚ್ ಪಟ್ಟಿಯಿಂದ ಬೇರಾವ ಮಾಹಿತಿಯೂ ದೊರೆತಿಲ್ಲಾ.

ಹೀಗಾಗಿ, ಈ ಕ್ಷಣ ನುಬಿಯಾ ಹೊಸ ಫೋನು ಯಾವ ರೀತಿಯದ್ದಾಗಿದೆ ಎಂದು ಹೇಳುವುದು ಅಸಾಧ್ಯದ ಮಾತು. ಆದರೂ ಕೆಲ ಗಾಳಿ ಸುದ್ದಿ ಎಲ್ಲೆಡೆ ಹರಡುತ್ತಿದೆ. ಬಂದ ಊಹಾಪೋಹ ಮಾಹಿತಿ ಪ್ರಕಾರ ಈ ಮಾಡೆಲ್ ನುಬಿಯಾ ಜೆಡ್17 ಗಿಂತ ಕೆಳಮಟ್ಟದ ವರ್ಷನ್ ಆಗಿದೆ. ಸಧ್ಯದ ಸ್ಥಿತಿಯಲ್ಲಿ ಇದು ಕೇವಲ ಮಸಾಲೆಹಾಕಿದ ಸುದ್ದಿ ಎಂದು ಹೇಳಬಹುದಾಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹೇಳಬೇಕೆಂದರೆ, ನುಬಿಯಾ ಇತ್ತೀಚೆಗೆ ನುಬಿಯಾ ಎಮ್2 ಎನ್ನುವ ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿತು, ಅದರ ಬೆಲೆ ರೂ. 22,999. ಈ ಹೊಸ ಫೋನಿನ ಮುಖ್ಯಾಂಶ ಈ ಫೋನಿನ ಹಿಂದುಗಡೆಯಿದ್ದ ಡುಯಲ್ ಕ್ಯಾಮೆರಾ.

ಈ ಡುಯಲ್ ಕ್ಯಾಮೆರಾ ಎರಡು 13 ಮೆಗಾಪಿಕ್ಸೆಲ್ ಸೋನಿ ಸಿಎಮ್‍ಒಎಸ್ ಸೆನ್ಸರ್ಸ್ ಹೊಂದಿದೆ. ಒಂದು ಮೊನೊಕ್ರೊಮ್ ಮತ್ತೊಂದು ಆರ್‍ಜಿಬಿ. ಇದರ ಜೊತೆ ಜೊತೆಗೆ ಕ್ಯಾಮೆರಾ ಡುಯಲ್ ಎಫ್2.2 ಅಪೆರ್ಚರ್, ಆರ್‍ಜಿಬಿ+ಮೊನೊ ಐಎಸ್‍ಪಿ, 0.1ಎಸ್ ಹೈಬ್ರಿಡ್ ಫೋಕಸ್ ಪಿಡಿಎಎಫ್ ಮತ್ತು ಕೊನ್ಟ್ರಾಸ್ಟ್ ಗಳನ್ನು ಹೊಂದಿದೆ.

ಇನ್ನೂ ನುಬಿಯಾ ಎಮ್2 ಸ್ಮಾರ್ಟ್‍ಫೋನಿನ ಮುಂದಿನ ಭಾಗದ ಕ್ಯಾಮೆರಾ, 16 ಎಮ್‍ಪಿ ಇಸೊಸೆಲ್ ಸಿಎಮ್‍ಒಎಸ್ ಸಿಎಮ್‍ಒಸ್ ಕ್ಯಾಮೆರಾ ಹೊಂದಿದೆ. ಈ ಕ್ಯಾಮೆರಾ ವಿಶೇಷತೆಯೆಂದರೆ 2 ಮೈಕ್ರೊ ಮೀಟರ್ ವರ್ಚುವಲ್ ಪಿಕ್ಸೆಲ್ ಗಾತ್ರ ( ಪಿಕ್ಸೆಲ್ - ಬಿನ್ನಿಂಗ್ ತಂತ್ರಜ್ಞಾನ), ಎಫ್/2.0 ಅಪೆರ್ಚರ್ ಮತ್ತು 80 ಡಿಗ್ರಿ ವೈಡ್ ಆಂಗಲ್ ಲೆನ್ಸ್ ಹೊಂದಿದೆ ಜೊತೆಗೆ 4ಕೆ ವೀಡಿಯೊ ತೆಗೆಯುವಷ್ಟು ಕ್ಷಮತೆ ಹೊಂದಿದೆ.

ನುಬಿಯಾ ಎಮ್2 ಸ್ಮಾರ್ಟ್‍ಫೋನಿನಲ್ಲಿನ ಇತರ ಫೀಚರ್ಸ್‍ಗಳೆಂದರೆ 5.5 ಇಂಚಿನ ಫುಲ್-ಎಚ್‍ಡಿ (1080*1920 ಪಿಕ್ಸೆಲ್ಸ್) ಒನ್-ಸೆಲ್ ಅಮೊಲೆಡ್ ಪರದೆ, ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 625 ಚಿಪ್‍ಸೆಟ್, 4ಜಿಬಿ ರಾಮ್, 64ಜಿಬಿ ತನಕ ಹೆಚ್ಚಿಸಬಹುದಾದ ಸ್ಟೊರೆಜ್, ಆಂಡ್ರೊಯಿಡ್ ಮಾರ್ಷ್‍ಮ್ಯಾಲೊ ಮತ್ತು 3630 ಎಮ್‍ಎಎಚ್ ಬ್ಯಾಟರಿ.

ಒಳ್ಳೆ ಫೀಚರ್ಸ್ ಗಳೊಂದಿಗೆ ಬಂದಿರುವ ನುಬಿಯಾ ಎಮ್2 ವನ್ನು ನೋಡಿ, ನುಬಿಯಾ ದ ಮುಂದಿನ ಸ್ಮಾರ್ಟ್‍ಫೋನ್ ಕೂಡ ಜನರನ್ನು ಸೆಳೆಯುವ ಯತ್ನ ಮಾಡಬಹುದೆಂಬ ನಿರೀಕ್ಷೆಯಿದೆ.

English summary
A Nubia smartphone carrying 6GB of RAM has just made an appearance on Geekbench.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot