Home
ಸುದ್ದಿಜಾಲ

ನುಬಿಯಾ Z60 ಅಲ್ಟ್ರಾ ಫೋನ್‌ ಬಿಡುಗಡೆಗೆ ದಿನಗಣನೆ ಶುರು! ಅಂಡರ್-ಡಿಸ್ಪ್ಲೇ ಸೆಲ್ಫಿ ಕ್ಯಾಮೆರಾ!

ನುಬಿಯಾ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ಗಳು ಗೇಮಿಂಗ್‌ ಪ್ರಿಯರ ಹಾಟ್‌ಫೇವರಿಟ್‌ ಆಗಿದೆ. ತನ್ನ ವಿಭಿನ್ನ ಶೈಲಿಯ ಫೋನ್‌ಗಳ ಮೂಲಕ ನುಬಿಯಾ ಕಂಪೆನಿ ಸೈ ಎನಿಸಿಕೊಂಡಿದೆ. ಇದೀಗ ಹೊಸ ನುಬಿಯಾ Z60 ಅಲ್ಟ್ರಾ ಫೋನ್‌ ಬಿಡುಗಡೆಗೆ ತಯಾರಿ ನಡೆಸಿದೆ. ಈ ಸ್ಮಾರ್ಟ್‌ಫೋನ್‌ ಇದೇ ಡಿಸೆಂಬರ್‌ 19 ರಂದು ಬಿಡುಗಡೆ ಆಗಲಿದೆ ಎಂದು ಕಂಪೆನಿ ದೃಢಪಡಿಸಿದೆ.

ಹೌದು, ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌ ಡಿಸೆಂಬರ್ 19 ರಂದು ಲಾಂಚ್‌ ಆಗಲಿದೆ. ಈ ಸ್ಮಾರ್ಟ್‌ಫೋನ್‌ 16 ಮೆಗಾಪಿಕ್ಸೆಲ್ ಅಂಡರ್-ಡಿಸ್‌ಪ್ಲೇ ಸೆಲ್ಫಿ ಕ್ಯಾಮೆರಾದೊಂದಿಗೆ ಬರುವುದು ಖಚಿತವಾಗಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರಲಿದೆ ಎಂದು ವರದಿಯಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳೊಂದಿಗೆ ಬರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನುಬಿಯಾ Z60 ಅಲ್ಟ್ರಾ ಬಿಡುಗಡೆಗೆ ದಿನಗಣನೆ ! ಅಂಡರ್-ಡಿಸ್ಪ್ಲೇ ಸೆಲ್ಫಿ ಕ್ಯಾಮೆರಾ!

ನುಬಿಯಾ Z60 ಅಲ್ಟ್ರಾ ಡಿಸ್‌ಪ್ಲೇ ರಚನೆ
ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌ 6.8 ಇಂಚಿನ 1.5K OLED ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 1116 x 2480 ಸ್ಕ್ರೀನ್‌ ಪಿಕ್ಸೆಲ್‌ ಸಾಂದ್ರತೆಯನ್ನು ಹೊಂದಿರಲಿದ್ದು, 120Hz ರಿಫ್ರೆಶ್‌ ರೇಟ್‌ನೊಂದಿಗೆ ನಿರೀಕ್ಷಿಸಲಾಗಿದೆ. ಇನ್ನು ಡಿಸ್‌ಪ್ಲೇ 2100 ನಿಟ್ಸ್‌ ಬ್ರೈಟ್‌ನೆಸ್‌ನೊಂದಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ.

ನುಬಿಯಾ Z60 ಅಲ್ಟ್ರಾ ಪ್ರೊಸೆಸರ್‌ ಯಾವುದು?
ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದೆ. ಇದು 14-ಆಧಾರಿತ MyOSನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ 16GB RAM ಮತ್ತು 1TB ಸ್ಟೋರೇಜ್‌ ಸಾಮರ್ಥ್ಯದಲ್ಲಿರಿದೆ ಎಂದು ವರದಿಯಾಗಿದೆ.

ನುಬಿಯಾ Z60 ಅಲ್ಟ್ರಾ ಬಿಡುಗಡೆಗೆ ದಿನಗಣನೆ ! ಅಂಡರ್-ಡಿಸ್ಪ್ಲೇ ಸೆಲ್ಫಿ ಕ್ಯಾಮೆರಾ!

ನುಬಿಯಾ Z60 ಅಲ್ಟ್ರಾ ಕ್ಯಾಮೆರಾ ಸೆಟಪ್‌ ಏನಿರಲಿದೆ?
ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾದೊಂದಿಗೆ ಬರಲಿದೆ. ಇದರ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್‌ ಸೆನ್ಸಾರ್‌ನಲ್ಲಿರಲಿದೆ. ಎರಡನೇ ಕ್ಯಾಮೆರಾ 64ಮೆಗಾಪಿಕ್ಸೆಲ್‌ ಸೆನ್ಸಾರ್‌ ಹಾಗೂ ಮೂರನೇ ಕ್ಯಾಮೆರಾ 50 ಮೆಗಾಪಿಕ್ಸೆಲ್‌ನಲ್ಲಿರಲಿದೆ. ಇದಲ್ಲದೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ.

ನುಬಿಯಾ Z60 ಅಲ್ಟ್ರಾ ಬ್ಯಾಟರಿ ಮತ್ತು ಇತರೆ
ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್‌, ಅಕ್ಸಿಲೆರೋಮೀಟರ್‌ ಅನ್ನು ಒಳಗೊಂಡಿರಲಿದೆ ಎಂದು ವರದಿಯಾಗಿದೆ.

ನುಬಿಯಾ Z60 ಅಲ್ಟ್ರಾ ಬಿಡುಗಡೆಗೆ ದಿನಗಣನೆ ! ಅಂಡರ್-ಡಿಸ್ಪ್ಲೇ ಸೆಲ್ಫಿ ಕ್ಯಾಮೆರಾ!

ನುಬಿಯಾ Z60 ಅಲ್ಟ್ರಾ ಬೆಲೆ ಮತ್ತು ಲಭ್ಯತೆ
ನುಬಿಯಾ Z60 ಅಲ್ಟ್ರಾ ಸ್ಮಾರ್ಟ್‌ಫೋನ್‌ ಮೊದಲಿಗೆ ಚೀನಾದಲ್ಲಿ ಅನಾವರಣಗೊಳ್ಳಲಿದೆ. ಪ್ರಸ್ತುತ ಬಿಡುಗಡೆ ದಿನಾಂಕ ಮಾತ್ರವೇ ಬಹಿರಂಗವಾಗಿದ್ದು, ಬೆಲೆ ವಿವರಗಳು ಬಹಿರಂಗವಾಗಿಲ್ಲ.

ಇತ್ತೀಚಿಗೆ ನುಬಿಯಾ ಬ್ರ್ಯಾಂಡ್‌ ನುಬಿಯಾ ರೆಡ್‌ ಮ್ಯಾಜಿಕ್‌ 9 ಪ್ರೊ+ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ 6.8 ಇಂಚಿನ ಓಎಲ್‌ಇಡಿ BOE Q9+ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಈ ಡಿಸ್‌ಪ್ಲೇಯು, 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಜೊತೆಗೆ ಈ ಫೋನ್‌ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ ಸಾಮರ್ಥ್ಯ ಕೂಡಾ ಪಡೆದಿದೆ.

ಹಾಗೆಯೇ ಈ ಫೋನ್‌ 16GB + 256GB, 16GB + 512GB 24GB + 1TB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಕೂಡಾ ಪಡೆದುಕೊಂಡಿದೆ. 50 ಮೆಗಾ ಪಿಕ್ಸಲ್‌ ಪ್ರಾಥಮಿಕ ಕ್ಯಾಮೆರಾ ಪಡೆದಿದ್ದು, ಜೊತೆಗೆ 16 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಸಹ ನೀಡಲಾಗಿದೆ. ಇದು 5500mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದ್ದು, ಇದಕ್ಕೆ ಪೂರಕವಾಗಿ 165W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಅನ್ನು ಸಹ ಒಳಗೊಂಡಿದೆ.

Best Mobiles in India

English summary
Nubia Z60 Ultra Smartphone Confirmed to Launch on December 19
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+