NVIDIA ದಿಂದ ಜೀಫೋರ್ಸ್ RTX 2080 ಮತ್ತು RTX 2070 ಸೂಪರ್ ಜಿಪಿಯು ಬಿಡುಗಡೆ!
ಟೆಕ್ ವಲಯದಲ್ಲಿ ಲ್ಯಾಪ್‌ಟಾಪ್‌ಗಳಿಗೆ ಉತ್ತಮ ಮಾರುಕಟ್ಟೆ ಇದೆ. ಮೊದಲಿನಿಂದಲೂ ಲ್ಯಾಪ್‌ಟಾಪ್‌ಗಳಿಗೆ ಬಾರಿ ಬೇಡಿಕೆ ಇದ್ದು, ಇತ್ತೀಚಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಲ್ಯಾಪ್‌ಟಾಪ್‌ಗಳು ಲಬ್ಯವಿದ್ದು, ಗೇಮಿಂಗ್ ಲ್ಯಾಪ್‌ಟಾಪ್‌ಗಳು ಕೂಡ ಸಿಗುತ್ತಿವೆ. ಇನ್ನು ಟೆಕ್ ವಲಯದಲ್ಲಿರುವ ಲ್ಯಾಪ್‌ಟಾಪ್ ಬೇಡಿಕೆಗಳನ್ನ ನೋಡಿ ಹಲವು ಕಂಪೆನಿಗಳು ಲ್ಯಾಪ್‌ಟಾಪ್ ಕ್ಷೇತ್ರದಲ್ಲೂ ತಮ್ಮ ಕೈ ಚಳಕ ತೊರಿದ್ದು ಹೊಸ ಮಾದರಿಯ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸುತ್ತಲೇ ಬಂದಿವೆ.

ಇದೀಗ ಟೆಕ್ನಾಲಜಿ ಸಾಕಷ್ಟು ಮುಂದುವರೆದಿದ್ದು, ಲ್ಯಾಪ್‌ಟಾಪ್‌ಗಳು ಕೇವಲ ವೈಯುಕ್ತಿಕ ಹಾಗೂ ಕಚೇರಿ ಕೆಲಸಗಳಿಗೆ ಸೀಮಿತವಾಗಿಲ್ಲ. ಬದಲಿಗೆ ಹೊಸ ಹೊಸ ತಲೆಮಾರಿನ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಗೆ ಎಂಟ್ರಿ ಆಗುತ್ತಿದ್ದು, ಪ್ರಸ್ತುತ ಯುವಜನತೆಗಾಗಿಯೇ ಗೇಮಿಂಗ್ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಯಲ್ಲಿವೆ. ಸದ್ಯ ಇದೀಗ ಈ ಹೊಸ ತಲೆಮಾರಿನ ಗೇಮಿಂಗ್ ಲ್ಯಾಪ್‌ಟಾಪ್‌ಗಳಿಗಾಗಿ NVIDIA ಇಂದು ತನ್ನ ಉನ್ನತ-ಮಟ್ಟದ ಜೀಫೋರ್ಸ್ RTX 2080 ಸೂಪರ್ ಮತ್ತು ಜೀಫೋರ್ಸ್ RTX 2070 ಸೂಪರ್ ಜಿಪಿಯುಗಳನ್ನು ಪ್ರಕಟಿಸಿದೆ. ಹಾಗಾದ್ರೆ ಇವುಗಳ ವಿನ್ಯಾಸ ಹೇಗಿದೆ ಅನ್ನೊದನ್ನ ತಿಳಿಸಿಕೊಡ್ತಿವಿ ಈ ಲೇಖನವನ್ನ ಓದಿ.

NVIDIA ತನ್ನ ಜೀಫೋರ್ಸ್ RTX 2080 ಸೂಪರ್ ಮತ್ತು ಜೀಫೋರ್ಸ್ RTX 2070 ಸೂಪರ್ ಜಿಪಿಯುಗಳನ್ನು ಪ್ರಕಟಿಸಿದೆ. ಈ ಮೂಲಕ ಗೇಮಿಂಗ್ ಲ್ಯಾಪ್‌ಟಾಪ್‌ಗಳಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ, ಸ್ಲಿಮ್ ಗೇಮಿಂಗ್ ಲ್ಯಾಪ್‌ಟಾಪ್‌ಗಳಲ್ಲಿ ಉಷ್ಣ ಮತ್ತು ವಿದ್ಯುತ್ ನಿರ್ವಹಣೆಗಾಗಿ ಕಂಪನಿಯು ತನ್ನ ಮ್ಯಾಕ್ಸ್-ಕ್ಯೂ ಟೆಕ್ನಾಲಜಿಯನ್ನ ಇನ್ನಷ್ಟು ಆಪ್ಡೇಟ್ ಮಾಡಿದೆ. ಇದು ಹೆಚ್ಚು ಪೋರ್ಟಬಲ್ ಡಿವೈಸ್‌ಗಳಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಅನುಮತಿಸುತ್ತದೆ ಎಂದು ಕಂಪೆನಿ ಹೇಳಿದೆ.

ಇನ್ನು ಈಗಾಗಲೇ NVIDIA ತನ್ನ ಪಾಲುದಾರ ಬ್ರಾಂಡ್‌ಗಳಾದ ಎಚ್‌ಪಿ, ಲೆನೊವೊ, ಡೆಲ್, ಎಂಎಸ್‌ಐ, ಆಸುಸ್, ರೇಜರ್, ಗಿಗಾಬೈಟ್, ಗಳಿಗಾಗಿ ಜೀಫೋರ್ಸ್ ಆರ್‌ಟಿಎಕ್ಸ್ 2060 ಜಿಪಿಯು ಒಳಗೊಂಡ ಹಲವಾರು ಹೊಸ ಗೇಮಿಂಗ್ ಮತ್ತು ಉತ್ಪಾದಕತೆಯ ಲ್ಯಾಪ್‌ಟಾಪ್‌ಗಳನ್ನು ಹೈಲೈಟ್ ಮಾಡುತ್ತಿದೆ. ಒಟ್ಟಾರೆಯಾಗಿ, 100 ಕ್ಕೂ ಹೆಚ್ಚು ಹೊಸ ಮಾದರಿಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು NVIDIA ಹೇಳಿದೆ. ಇದಲ್ಲದೆ ಹೊಸ ಜಿಪಿಯುಗಳ ಜೊತೆಗೆ ತನ್ನ ಇತ್ತೀಚಿನ ಜೀಫೋರ್ಸ್ ಆರ್ಟಿಎಕ್ಸ್ ಸೂಪರ್ ಸರಣಿಯನ್ನು ಲ್ಯಾಪ್‌ಟಾಪ್‌ಗಳಿಗೆ ಮೊದಲ ಬಾರಿಗೆ ತರುತ್ತಿದೆ. ಮೂಲ ಜಿಫೋರ್ಸ್ RTX ಆವೃತ್ತಿಯಂತೆ ಇದು ಕೂಡ ಟ್ಯೂರಿಂಗ್ ಆರ್ಕಿಟೆಕ್ಚರ್ ಅನ್ನು ಆಧರಿಸಿವೆ.

ಇದಲ್ಲದೆ ಈ ಜಿಪಿಯುಗಳು ಕಡಿಮೆ ರೆಸಲ್ಯೂಷನ್‌ಗಳ ಡಿಸ್‌ಪ್ಲೆ ಫ್ರೇಮ್‌ಗಳ ಎಐ ಆಧಾರಿತ ಅಪ್‌ಸ್ಕೇಲಿಂಗ್‌ಗಾಗಿ ಹಾರ್ಡ್‌ವೇರ್ ರೇ ಟ್ರೇಸಿಂಗ್ ಮತ್ತು ಡಿಎಲ್‌ಎಸ್ಎಸ್ 2.0 ಅನ್ನು ನೀಡುತ್ತವೆ. ಲ್ಯಾಪ್‌ಟಾಪ್‌ಗಳಲ್ಲಿ ಬ್ಯಾಟರಿಯ ಬಾಳಿಕೆಯನ್ನು ಶೇಕಡಾ 20 ರಷ್ಟು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ ಎಂದು NVIDIA ಹೇಳಿಕೊಂಡಿದೆ. ಇನ್ನು ಎನ್‌ವಿಡಿಯಾದ ಹೊಸ ಮ್ಯಾಕ್ಸ್-ಕ್ಯೂ ಟೆಕ್ನಾಲಜಿ ಆಪ್ಡೆಟ್ ಮಾಡಿರುವುದರಿಂದ ಸಿಪಿಯು ಮತ್ತು ಜಿಪಿಯುಗಳ ನಡುವಿನ ಕ್ರಿಯಾತ್ಮಕ ಉಷ್ಣ ನಿರ್ವಹಣೆಯನ್ನು ಒಟ್ಟಿಗೆ ಮಾಡಲು ಅನುವು ಮಾಡಿಕೊಡುತ್ತದೆ, ಪ್ರತಿಯೊಂದನ್ನು ಹೆಚ್ಚು ಬಳಸಬೇಕಾದಾಗ ಪ್ರತಿಯೊಂದೂ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು ಅನುವು ಮಾಡಿಕೊಡುತ್ತದೆ.

ಇನ್ನು ಜೀಫೋರ್ಸ್ RTX 2080 ಸೂಪರ್ 3,072 ಪ್ರೊಗ್ರಾಮ್ ಮೆಬಲ್ CUDA ಕೋರ್‌ಗಳನ್ನ ಹೊಂದಿದೆ ಮತ್ತು 1560 ಮೆಗಾಹರ್ಟ್ ವರೆಗೆ ಕಾರ್ಯುನಿರ್ವಹಿಸುತ್ತದೆ. ಇದು 8GB JDDR6 ಮೆಮೊರಿಯನ್ನ ಹೊಂದಿದೆ. ಮತ್ತು ಒಟ್ಟು ವಿದ್ಯುತ್ ಬಳಕೆ 80 ರಿಂದ 150W ನಡುವೆ ಇರುತ್ತದೆ. ಜೀಫೋರ್ಸ್ RTX 2070 ಸೂಪರ್ 2,304 ಕೋರ್‌ಗಳನ್ನ ಹೊಂದಿದೆ ಮತ್ತು ಗರಿಷ್ಠ ವರ್ಧಕ ವೇಗ 1455 ಮೆಗಾಹರ್ಟ್ ಆಗಿದೆ. ಈ ಮಾದರಿಯು 8GB JDDR6 ಮೆಮೊರಿಯನ್ನು ಸಹ ಹೊಂದಿದ್ದು, ವಿದ್ಯುತ್ ಬಳಕೆಯನ್ನು 80 ರಿಂದ 115Wಗೆ ರೇಟ್ ಮಾಡಲಾಗಿದೆ. ಅಲ್ಲದೆ ಜಿಫೋರ್ಸ್ RTX 2060 ಜಿಪಿಯುನ ಲ್ಯಾಪ್‌ಟಾಪ್ ಆವೃತ್ತಿಯನ್ನು ಒಳಗೊಂಡ ಅನೇಕ ಹೊಸ ಗೇಮಿಂಗ್ ಲ್ಯಾಪ್‌ಟಾಪ್‌ಗಳು 99 999. ರೂ ಬೆಲೆಯಿಂದ ಪ್ರಾರಂಭವಾಗಲಿದ್ದು, ಈ ಹೊಸ ಮಾದರಿಗಳು ಏಪ್ರಿಲ್ 15 ರಿಂದ ಮಾರಾಟವಾಗಲಿವೆ.


Click it and Unblock the Notifications




