ಅಕ್ಟೋಬರ್ 2025ರಲ್ಲಿ ಭಾರತದ ಟೆಲಿಕಾಂ ಪರಿಸ್ಥಿತಿ ಹೇಗಿದೆ?..TRAI ರಿಪೋರ್ಟ್!
ಅಕ್ಟೋಬರ್ 2025ರಲ್ಲಿ ಭಾರತೀಯ ಟೆಲಿಕಾಂ ವಲಯವು ಸ್ವಲ್ಪ ಮಟ್ಟಿನ ಚೇತರಿಕೆಯನ್ನು ದಾಖಲಿಸಿದೆ. TRAI ಬಿಡುಗಡೆ ಮಾಡಿದ ಇತ್ತೀಚಿನ ವೈರ್‌ಲೆಸ್ ಸಬ್ಸ್ಕ್ರಿಪ್ಷನ್ ವರದಿ ಪ್ರಕಾರ, ಈ ಅಕ್ಟೋಬರ್ ತಿಂಗಳಿನಲ್ಲಿ ಖಾಸಾಗಿ ಟೆಲಿಕಾಂ ಕಂಪೆನಿಗಳಾದ ಜಿಯೋ ಮತ್ತು ಏರ್‌ಟೆಲ್ ತಮ್ಮ ಬಳಕೆದಾರ ಆಧಾರವನ್ನು ಮತ್ತಷ್ಟು ಬಲಪಡಿಸಿದರೆ, Vodafone Idea (Vi) ತನ್ನ ನಷ್ಟವನ್ನು ತಡೆಯಲು ವಿಫಲವಾಗಿದೆ. ಇತ್ತ ಸರ್ಕಾರಿ ನಿಯಮಿತ ಟೆಲಿಕಾಂ ಸಂಸ್ಥೆ BSNL ಕೂಡ ಸ್ವಲ್ಪ ಮಟ್ಟಿನ ಚಂದಾದಾರರನ್ನು ಹೆಚ್ಚಿಸಿಕೊಂಡಿದೆ. ಈ ಕುರಿತ ಸಂಪೂರ್ಣ ಮಾಹಿತಿತು ಈ ಕೆಳಕಂಡಂತಿದೆ.
Jio: ಇನ್ನೂ ಅಗ್ರಸ್ಥಾನದಲ್ಲೇ
ರಿಲಯನ್ಸ್ ಜಿಯೋ ಅಕ್ಟೋಬರ್ ತಿಂಗಳಲ್ಲಿ 32 ಲಕ್ಷ ಹೊಸ ವೈರ್‌ಲೆಸ್ ಬಳಕೆದಾರರನ್ನು ಸೇರಿಸಿಕೊಂಡಿದೆ. ಸೆಪ್ಟೆಂಬರ್‌ಗಿಂತ ಈ ಸಂಖ್ಯೆ ಕಡಿಮೆಯಿದ್ದರೂ, ಅತ್ಯಧಿಕ ಹೊಸ ಗ್ರಾಹಕರನ್ನು ಸೆಳೆಯುವ ಸಂಸ್ಥೆಯ ಸ್ಥಾನವನ್ನು ಜಿಯೋ ಉಳಿಸಿಕೊಂಡಿದೆ. ಈ ವೃದ್ಧಿಯಿಂದ ಜಿಯೋನ ಒಟ್ಟು ಗ್ರಾಹಕರ ಸಂಖ್ಯೆ 48 ಕೋಟಿ 47 ಲಕ್ಷ ದಾಟಿದ್ದು, ಕಂಪನಿಯ ಮಾರುಕಟ್ಟೆ ಹಂಚಿಕೆ ಇನ್ನಷ್ಟು ಬಲವಾಗಿದೆ. 4G/5G ಜಾಲ ವಿಸ್ತರಣೆ ಮತ್ತು ಅಗ್ಗದ ಡೇಟಾ ಪ್ಲಾನ್‌ಗಳು ಬಳಕೆದಾರರನ್ನು ಆಕರ್ಷಿಸುವ ಮೂಲಕ ಟೆಲಿಕಾಂ ವಲಯದಲ್ಲಿ ಮಾರುಕಟ್ಟೆ ನಾಯಕನಾಗಿ ತನ್ನ ಸ್ಪಷ್ಟ ಸ್ಥಾನವನ್ನು ಕಾಯ್ದುಕೊಂಡಿದೆ.
Airtel: ಸ್ಥಿರ ಮತ್ತು ಬಲವಾದ ವೃದ್ಧಿ
ಭಾರ್ತಿ ಏರ್‌ಟೆಲ್ ಅಕ್ಟೋಬರ್‌ನಲ್ಲಿ 12.52 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿಕೊಂಡಿದೆ. ಇದರಿಂದ ಏರ್‌ಟೆಲ್‌ನ ಒಟ್ಟು ಬಳಕೆದಾರ ಆಧಾರ 39 ಕೋಟಿ 37 ಲಕ್ಷ ಗೆ ತಲುಪಿದೆ. ಪ್ರೀಮಿಯಂ ಸೇವೆ, ಉತ್ತಮ ಕವರೇಜ್ ಮತ್ತು ವಿಶ್ವಾಸಾರ್ಹ ಜಾಲವು ಏರ್‌ಟೆಲ್‌ಗೆ ನಿರಂತರ ಬಲವಾಗಿ ಕಾಪಾಡುತ್ತಿದೆ.

BSNLಗೆ ನಿಧಾನವಾದರೂ ಧನಾತ್ಮಕ ಬೆಳವಣಿಗೆ
ಸರ್ಕಾರಿ ಸಂಸ್ಥೆ BSNL ಅಕ್ಟೋಬರ್‌ನಲ್ಲಿ 2.69 ಲಕ್ಷ ಹೊಸ ಗ್ರಾಹಕರನ್ನು ಪಡೆದಿದೆ. MTNL ಜೊತೆ ಸೇರಿ PSU ಸಂಸ್ಥೆಗಳ ಒಟ್ಟು ಹಂಚಿಕೆ 7.92% ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ BSNL ನ ಬಲವಾದ ಹಾಜರಿಯು ಅದರ ಗ್ರಾಹಕ ಆಧಾರ ವೃದ್ಧಿಗೆ ಮುಖ್ಯ ಕಾರಣವಾಗಿದೆ.
Viಗೆ ಮತ್ತೊಂದು ಕಠಿಣ ತಿಂಗಳು
Vodafone Idea (Vi) ಈ ತಿಂಗಳು ಮತ್ತೆ ದೊಡ್ಡ ಹೊಡೆತಕ್ಕೆ ಗುರಿಯಾಗಿದೆ. ಕಂಪನಿ 20.83 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದು, ಇದರ ಪರಿಣಾಮವಾಗಿ ಒಟ್ಟು ಬಳಕೆದಾರ ಸಂಖ್ಯೆ 20 ಕೋಟಿ 7 ಲಕ್ಷ ಮಟ್ಟಕ್ಕೆ ಇಳಿದಿದೆ. ಮಾರುಕಟ್ಟೆ ಹಂಚಿಕೆ 17.13% ಕ್ಕೆ ಕುಸಿದಿದೆ. ಇದುಖಾಸಗಿ ಸಂಸ್ಥೆಗಳಲ್ಲಿ ಅತಿ ಕಡಿಮೆ.
ಒಟ್ಟಾರೆ ಗ್ರಾಹಕರ ಏರಿಕೆ
ಭಾರತದ ಮೊಬೈಲ್ + FWA ಸೇರಿ ಒಟ್ಟು ವೈರ್‌ಲೆಸ್ ಸಬ್ಸ್ಕ್ರಿಪ್ಷನ್‌ಗಳು ಸೆಪ್ಟೆಂಬರ್ ಅಂತ್ಯದ ವೇಳೆಗೆ 1182.32 118 ಕೋಟಿ 23 ಲಕ್ಷ) ಮಿಲಿಯನ್ ಇತ್ತು. ಇದು ಅಕ್ಟೋಬರ್ ತಿಂಗಳಿನಲ್ಲಿ 1184.62 (118 ಕೋಟಿ 46 ಲಕ್ಷ) ಮಿಲಿಯನ್‌ಗೆ ಏರಿಕೆಯಾಗಿದೆ. ಈ ಮೂಲಕ ಅಕ್ಟೋಬರ್‌ನಲ್ಲಿ ದೇಶದ ವೈರ್‌ಲೆಸ್ ಮಾಡುಕಟ್ಟೆಯು 0.19% ತಿಂಗಳ ವೃದ್ಧಿ ದಾಖಲಾಗಿದೆ. ಆದರೆ, ನಗರ ಬಳಕೆದಾರರು ಸೆಪ್ಟೆಂಬರ್‌ನ 64 ಕೋಟಿ 1.7 ಲಕ್ಷ ನಿಂದ ಅಕ್ಟೋಬರ್‌ನಲ್ಲಿ 63 ಕೋಟಿ 99 ಲಕ್ಷ ಗೆ ಇಳಿದಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಬಳಕೆದಾರರು 53 ಕೋಟಿ 2.7 ಲಕ್ಷ ನಿಂದ 53 ಕೋಟಿ 18.8 ಲಕ್ಷ ಗೆ ಹೆಚ್ಚಿದ್ದಾರೆ.
ಒಟ್ಟಾರೆಯಾಗಿ, ಅಕ್ಟೋಬರ್ 2025ರ ವೇಳೆಗೆ ಜಿಯೋ ಮತ್ತು ಏರ್‌ಟೆಲ್ ಮಾರುಕಟ್ಟೆ ಆಧಿಪತ್ಯವನ್ನು ಬಲಪಡಿಸುತ್ತಿವೆ. BSNL ನಿಧಾನಗತಿಯಲ್ಲಿದ್ದರೂ ವೃದ್ಧಿಯ ಸೂಚನೆಗಳನ್ನು ತೋರಿಸುತ್ತಿದೆ. ಆದರೆ, Vi ತನ್ನ ಗ್ರಾಹಕ ನಷ್ಟ ತಡೆಯಲು ತಕ್ಷಣ ಜಾಲ ಸುಧಾರಣೆ ಮತ್ತು ಹೂಡಿಕೆ ಅಗತ್ಯವನ್ನು ಹೊಂದೆ. ಅಕ್ಟೋಬರ್ ಡೇಟಾ ನೋಡಿದರೆ, ಮುಂದೆ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸ್ಪರ್ಧೆ ಇನ್ನೂ ಗಟ್ಟಿಯಾಗಲಿದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ, Vi ತನ್ನ ಗ್ರಾಹಕರನ್ನು ನಿರಂತರವಾಗಿ ಕಳೆದುಕೊಳ್ಳುತ್ತಿರುವುದು ಏಕೆ?..ಈ ಕುರಿತಂತೆ ನಿಮ್ಮ ಅನಿಸಿಕೆಗಳೇನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








