ಫಿಂಗರ್‌ಪ್ರಿಂಟ್‌ ಬೇಕಿಲ್ಲ..! ಆಫ್‌ಲೈನ್‌ನಲ್ಲಿಯೂ ಇನ್ಮುಂದೆ ಆಧಾರ್‌ ಪರಿಶೀಲನೆ..!

|

ಸೇವಾ ಪೂರೈಕೆದಾರರು ದೃಢೀಕರಣವಿಲ್ಲದೆ ಯೂನೀಕ್ ಐಡಿಯನ್ನು ನಿಯಂತ್ರಿಸುವಂತಹ ಇಆಧಾರ್ ಮತ್ತು ಕ್ಯೂಆರ್ ಕೋಡ್ ನಂತಹ ಆಫ್ ಲೈನ್ ಪರಿಶೀಲನಾ ಸಾಧನಗಳನ್ನು ಇನ್ನು ಮುಂದೆ ಬಳಕೆ ಮಾಡಬಹುದು. ಬಯೋಮೆಟ್ರಿಕ್ ನ ಯಾವುದೇ ಆಕ್ಸಿಸ್ ಗೆ ಅಥವಾ 12 ಡಿಜಿಟ್ ನ ಸಂಖ್ಯೆಯನ್ನು ಬಹಿರಂಗಪಡಿಸುವಂತಹ ಅಥವಾ ಆಧಾರ್ ಕಾರ್ಡ್ ನ್ನು ನೀಡುವ ಅಧಿಕಾರ ಹೊಂದಿರುವ ಯುಐಡಿಎಐ ಸಂಸ್ಥೆ ಪ್ರಕಟಣೆ ನೀಡಿದೆ.

ಈ ಸ್ಟೇಟ್ ಮೆಂಟ್ ನ್ನು ಯುಐಡಿಎಐ ನೀಡಲು ಪ್ರಮುಖ ಕಾರಣ ಆಧಾರ್ ನ್ನು ಎಲ್ಲಾ ಕಡೆಗಳಲ್ಲಿ ಬಳಸುವಿಕೆಯ ವಿರುದ್ಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು.ಕಾನೂನಾತ್ಮಕ ವಿಚಾರಗಳಿಗೆ ಗೌರವ ನೀಡುತ್ತಾ ನಾವು ಈ ಅವಕಾಶವನ್ನು ನೀಡುತ್ತಿದ್ದೇವೆ ಎಂದು ಯುಐಡಿಎಐನ ಸಿಇಓ ಆಗಿರುವ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.

ಫಿಂಗರ್‌ಪ್ರಿಂಟ್‌ ಬೇಕಿಲ್ಲ..! ಆಫ್‌ಲೈನ್‌ನಲ್ಲಿಯೂ ಇನ್ಮುಂದೆ ಆಧಾರ್‌ ಪರಿಶೀಲನೆ.!

“ಯುಐಡಿಎಐ ಆಫ್ ಲೈನ್ ಆಯ್ಕೆಯಲ್ಲಿ ಬರುತ್ತಿದೆ. ಇದು ಸುಪ್ರೀಂ ಕೋರ್ಟಿನ ತೀರ್ಪಿನ ಅನ್ವಯವೇ ಇದೆ. ಯುಐಡಿಎಐ ಸರ್ವರ್ ಗೆ ಹಿಟ್ ಮಾಡದೆಯೂ ಕೂಡ ಆಧಾರ್ ಐಡಿಯನ್ನು ಜನರು ವೆರಿಫೈ ಮಾಡಿಸಿಕೊಳ್ಳಬಹುದು. ಅದಕ್ಕಾಗಿ ಅವರು ಇಆಧಾರ್ ನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಅವರಿಗೆ ತಮ್ಮ ಆಧಾರ್ ನಂಬರ್ ನ್ನು ಮಾಸ್ಕ್ ಮಾಡುವ ಅಂದರೆ ಮರೆಮಾಚುವ ಆಯ್ಕೆಯೂ ಇದೆ.ಅಷ್ಟೇ ಅಲ್ಲ ಕ್ಯೂಆರ್ (ಕ್ವಿಕ್ ರೆಸ್ಪಾನ್ಸ್) ಕೋಡ್ ಕೂಡ ಇರುತ್ತದೆ. ಈ ಕೋರ್ ಅವರ ಆಧಾರ್ ನಂಬರ್ ನ್ನು ಕ್ಯಾರಿ ಮಾಡುವುದಿಲ್ಲ. ಅಂದರೆ ಆಧಾರ್ ನಂಬರ್ ಇಲ್ಲದೆಯೂ ಕೂಡ ಕ್ಯೂಆರ್ ಕೋಡ್ ನ್ನು ಬಳಕೆ ಮಾಡಬಹುದು,” ಎಂದು ಪಾಂಡೇ ತಿಳಿಸಿದ್ದಾರೆ.

ಈ ಆಯ್ಕೆಯ ಮೂಲಕ ಸರ್ವೀಸ್ ಪ್ರೊವೈಡರ್ ಗಳು ಪ್ರತಿಯೊಬ್ಬರ ಐಡೆಂಟಿಟಿಯನ್ನು ಪರೀಕ್ಷಿಸಬಹುದು. ಅದಕ್ಕಾಗಿ ಇನ್ನೊಂದು ಸೆಕ್ಯುರಿಟಿ ಪರದೆಯನ್ನು ಕೂಡ ಸೇರಿಸುವ ಅವಕಾಶವಿರುತ್ತದೆ. ಉದಾಹರಣೆಗೆ ಒನ್ ಟೈಮ್ ಪಾಸ್ ವರ್ಡ್ ನ್ನು ಕಳುಹಿಸುವ ಮೂಲಕ ಹೆಚ್ಚಿನ ವೆರಿಫಿಕೇಷನ್ ಪ್ರೊಸೆಸ್ ನ್ನು ನಡೆಸಲು ಸರ್ವೀಸ್ ಪ್ರೊವೈಡರ್ ಗಳಿಗೆ ಅವಕಾಶವಿದೆ.

ಇದರಲ್ಲಿ ನೀಡಲಾಗುವ ಮಾಹಿತಿಗಳು ಹೆಸರು, ಅಡ್ರೆಸ್ ಮತ್ತು ಫೋಟೋ ಆಗಿರುತ್ತದೆ. ಹಾಗಾಗಿ ಈ ದಾಖಲಾತಿಗಳು ಇತರೆ ಹಲವು ಸರ್ಕಾರಿ ಡಾಕ್ಯುಮೆಂಟ್ ಗಳಿಂದಲೂ ಪಡೆಯಲು ಸಾಧ್ಯವಿದೆ. ಆಧಾರ್ ನಂಬರ್ ನ್ನು ಮರೆಮಾಚಿ ಇಡಬಹುದು ಮತ್ತು ರೀಡಿಆಕ್ಟ್ ಮಾಡಲು ಅವಕಾಶವಿರುತ್ತದೆ. ಇದು ವಿಳಾಸದ ವಿಚಾರಕ್ಕಾಗಿ ನಡೆಯುವ ಗೌಪ್ಯತೆಯಾಗಿರುತ್ತದೆ.

ಫಿಂಗರ್‌ಪ್ರಿಂಟ್‌ ಬೇಕಿಲ್ಲ..! ಆಫ್‌ಲೈನ್‌ನಲ್ಲಿಯೂ ಇನ್ಮುಂದೆ ಆಧಾರ್‌ ಪರಿಶೀಲನೆ.!

ನವದೆಹಲಿಯಲ್ಲಿ ವರ್ಕ್ ಶಾಪ್:

ಮುಂದಿನ ವಾರ ನವದೆಹಲಿಯಲ್ಲಿ ಯುಐಡಿಎಐ ಒಂದು ವರ್ಕ್ ಶಾಪ್ ನ್ನು ಮಾಡಲು ಪ್ಲಾನ್ ಮಾಡುತ್ತಿದೆ. ಟೆಕ್ ಕಮ್ಯುನಿಟಿ ಜನರಿಗೆ ಆಫ್ ಲೈನ್ ಆಧಾರ್ ವೆರಿಫಿಕೇಷನ್ ಬಗ್ಗೆ ಇಲ್ಲಿ ವಿವರಣೆ ನೀಡಲಾಗುತ್ತದೆ .

ಬ್ಯಾಂಕ್ ಅಕೌಂಟ್, ಮೊಬೈಲ್ ಕನೆಕ್ಷನ್ ಮತ್ತು ಶಾಲಾ ದಾಖಲಾತಿಗಳಿಗೆ ಆಧಾರ್ ಸಂಖ್ಯೆ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಈ ನಿಟ್ಟಿನಲ್ಲಿ ಕಡ್ಡಾಯವಿಲ್ಲದ ಈ ಪ್ರದೇಶಗಳಲ್ಲಿ ಹೇಗೆ ವೆರಿಫಿಕೇಷನ್ ಪ್ರೊಸೆಸ್ ಮಾಡುವುದು ಎಂಬ ಪ್ರಶ್ನೆಗೆ ಉತ್ತರವಾಗಿ ಇದೀಗ ಯುಐಡಿಎಐ ಆಫ್ ಲೈನ್ ವೆರಿಫಿಕೇಷನ್ ಪ್ರೊಸೆಸ್ ನ್ನು ಪರಿಚಯಿಸಿದೆ. ಸುಪ್ರೀಂ ಕೋರ್ಟ್ ಮುಂದಿನ 15 ದಿನಗಳ ಒಳಗೆ ಟೆಲಿಕಾಂ ಕಂಪೆನಿಗಳು ಆಧಾರ್ ಬಯೋಮೆಟ್ರಿಕ್ ದೃಢೀಕರಣವನ್ನು ನಿಲ್ಲಿಸುವ ಯೋಜನೆಯನ್ನು ಸಲ್ಲಿಸುವಂತೆ ತಿಳಿಸಿದೆ.

Best Mobiles in India

English summary
Offline verification modes of Aadhaar now available: UIDAI. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X