Subscribe to Gizbot

ಗೂಗಲ್ ನೊಂದಿಗೆ ಓಲಾ ಕೈಜೋಡಿಸಿದ್ದು ಯಾಕೆ ಗೊತ್ತಾ..?

Written By: Lekhaka

ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಓಲಾ, ಸರ್ಚ್ ಇಂಜಿನ್ ದೈತ್ಯ ಗೂಗಲ್ ಔಟ್ ಸ್ಟೆಷನ್ ನೊಂದಿಗೆ ಪಾಲುದಾರರಾಗಿದ್ದು, ಈ ಮೂಲಕ ತನ್ನ ಕ್ಯಾಬ್ ಬುಕ್ಕಿಂಗ್ ಸೇವೆಯನ್ನು ವಿಸ್ತಾರಗೊಳಿಸಿಕೊಳ್ಳಲು ಮುಂದಾಗಿದೆ.

ಗೂಗಲ್ ನೊಂದಿಗೆ ಓಲಾ ಕೈಜೋಡಿಸಿದ್ದು ಯಾಕೆ ಗೊತ್ತಾ..?

ಭಾರತದಲ್ಲಿ ಒಟ್ಟು 23 ನಗರಗಳಲ್ಲಿ ಬುಕ್ಕಿಂಗ್ ಸೇವೆಯನ್ನು ಆರಂಭಿಸಲಾಗುತ್ತಿದ್ದು, ನಗರದಿಂದ ಆಚೆಗೂ ವಿಸ್ತರಿಸುವ ಸೇವೆ ಇದಾಗಿದೆ. ಅಲ್ಲದೇ ಓನ್ ವೇ ಸೇವೆಯನ್ನು ಸಹ ಆರಂಭಿಸಲಿದೆ.

ಇದೇ ಮೊದಲ ಬಾರಿಗೆ ಓಲಾ ನಗರದಿಂದಾಚೇಗೆ ಸೇವೆಯನ್ನು ವಿಸ್ತರಿಸಲು ಮುಂದಾಗಿದ್ದು, ಸಾಮಾನ್ಯ ಟ್ರಾವಲ್ಸ್ ಗಳಿಗೆ ಇದರಿಂದ ಹೊಡೆತ ಬೀಳುವ ಸಾಧ್ಯತೆ ದಟ್ಟವಾಗಿದೆ.

ಕಳೆದ ಕೇಲವು ದಿನಗಳಿಂದಲೇ ಈ ಸೇವೆಯನ್ನು ಆರಂಭಿಸಲು ಓಲಾ ತಯಾರಿಯನ್ನು ನಡೆಸಿದ್ದು, ಈಗ ಲಾಂಚ್ ಮಾಡಲು ಮುಂದಾಗಿದೆ. ಈ ಸೇವೆಯನ್ನು ನೀಡುವ ಸಲುವಾಗಿಯೇ ಗೂಗಲ್ ಸಹಾಯವನ್ನು ಪಡೆಯಲು ಮುಂದಾಗಿದೆ.

ಸದ್ಯ ಈ ಸೇವೆಯೂ ಮುಂಬೈ, ಡೆಲ್ಲಿ, ಬೆಂಗಳೂರು, ಪುಣೆ, ಹೈದರಬಾದ್, ಚೆನ್ನೈ, ಸೇರಿದಂತೆ ಹಲವು ನಗರಗಳಲ್ಲಿ ದೊರೆಯಲಿದೆ. ಗೂಗಲ್ ಮ್ಯಾಪ್ ಸಹಾಯದಿಂದ ಇದು ರೂಟ್ ಮ್ಯಾಪ್ ಅನ್ನು ದೊರಕಿಸಲಿದೆ. '

ಫೋನ್ ಸ್ಕ್ರೀನ್ ಗುಣಮಟ್ಟವನ್ನು ಪರಿಶೀಲಿಸುವುದು ಹೇಗೆ

ಇದು ಇಂಟರ್ ಸಿಟಿ ಟ್ರಾವಲ್ ಕಸ್ಟಮರ್ ಗಳನ್ನು ಗುರಿಯಾಗಿಟ್ಟುಕೊಂಡು ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ನಗರಕ್ಕೇ ಸಿಮೀತವಾಗಿದ್ದ ಓಲಾ ಈಗ ಊರಿನ ಆಚೇಗೂ ಸೇವೆಯನ್ನು ನೀಡಲು ಮುಂದಾಗಿರುವುದು ಸಂತಸದ ವಿಚಾರ.

Read more about:
English summary
Ola integrated its intra-city cab travel options with Google Maps, enabling customers to discover cab options with estimated fares and ETA.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot