Subscribe to Gizbot

ಆಸ್ಟ್ರೇಲಿಯಾದಲ್ಲಿ ಸೇವೆಯನ್ನು ಆರಂಭಿಸಿದ ಒಲಾ..!

Written By: Precilla Dias

ಭಾರತೀಯ ಮೂಲದ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಒಲಾ ದೇಶದಲ್ಲಿ ಉತ್ತಮ ಕಾರ್ಯಚರಣೆಯನ್ನು ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ತನ್ನ ಸೇವೆಯನ್ನು ದೇಶದಿಂದ ಆಚೆಗೆ ವಿಸ್ತರಿಸಿಲು ಮುಂದಾಗಿದ್ದು, ಆಸ್ಟ್ರೇಲಿಯಾದಲ್ಲಿಯೂ ತನ್ನ ಕ್ಯಾಬ್ ಸೇವೆಯನ್ನು ಪರಿಚಯಿಸಲಿ ಮುಂದಾಗಿದೆ. ಇದೇ ಮೊದಲ ಬಾರಿಗೆ ದೇಶದ ಆಚೆ ತನ್ನ ಸೇವೆಯನ್ನು ಒಲಾ ವಿಸ್ತರಣೆಯನ್ನು ಮಾಡಿದೆ ಎನ್ನಲಾಗಿದೆ.

ಆಸ್ಟ್ರೇಲಿಯಾದಲ್ಲಿ ಸೇವೆಯನ್ನು ಆರಂಭಿಸಿದ ಒಲಾ..!

ಸಿಡ್ನಿ, ಮೆಲ್ಬೋರ್ನ್ ಮತ್ತು ಪರ್ಟ್ ಸಿಟಿಗಳಲ್ಲಿ ಮೊದಲಿಗೆ ಒಲಾ ಸೋಮವಾರದಿಂದ ಕಾರ್ಯ ಚರಣೆಯನ್ನು ಆರಂಭಿಸಿದೆ ಎನ್ನಲಾಗಿದೆ. ಇದಾದ ನಂತರದಲ್ಲಿ ಆಸ್ಟ್ರೇಲಿಯಾ ದೇಶದ ಪ್ರಮುಖ ನಗರಗಳಲ್ಲಿ ಸೇವೆಯನ್ನು ವಿಸ್ತರಣೆ ಮಾಡಲಿದೆ ಎನ್ನಲಾಗಿದೆ. ಈ ಮೂಲಕ ಜಾಗತಿಕ ಕ್ಯಾಬ್ ಸೇವೆಯನ್ನು ನೀಡುತ್ತಿರುವ ಉಬರ್ ಗೆ ಸೆಡ್ಡು ಹೊಡೆಯಲು ಒಲಾ ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಊಬರ್ ಗೆ ಸೆಡ್ಡು:

ಊಬರ್ ಗೆ ಸೆಡ್ಡು:

2012ರಲ್ಲಿ ಉಬರ್ ಆಸ್ಟ್ರೇಲಿಯಾ ಮಾರುಕಟ್ಟೆಯನ್ನು ಪ್ರವೇಶ ಮಾಡಿತ್ತು, ಇದಾದ ಆರು ವರ್ಷಗಳ ನಂತರದಲ್ಲಿ ಒಲಾ ಸಹ ಅಲ್ಲಿಗೆ ಕಾಲಿಟ್ಟಿದ್ದು, ಈ ಮೂಲಕ ಭಾರತದಲ್ಲಿ ಉಬರ್ ಮಣಿಸಿದ ಮಾದರಿಯಲ್ಲಿ ಅಲ್ಲಿಯೂ ಉಬರ್ ಗೆ ಸೆಡ್ಡು ಹೊಡೆದು ಹೊಸ ಮಾದರಿಯ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

2010ರಲ್ಲಿ ಆರಂಭ:

2010ರಲ್ಲಿ ಆರಂಭ:

ಊಬರ್ ಎದುರಾಗಿ ದೇಶದಲ್ಲಿ 2012ರಲ್ಲಿ ಕಾಣಿಸಿಕೊಂಡ ಒಲಾ ಮಾರುಕಟ್ಟೆಯಲ್ಲಿ ಉಬರ್ ಗಿಂತಲೂ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಅಲ್ಲದೇ ದೇಶದಲ್ಲಿ ಒಲಾ ಆಟೋ ಸೇವೆಯಲ್ಲಿಯೂ ಮುಂಚುಣಿಯಲ್ಲಿದೆ ಎನ್ನಲಾಗಿದೆ. ಸುಮಾರು 20 ನಗರಗಳಲ್ಲಿ ಕಾರ್ಯಚರಣೆ ನಡೆಸುತ್ತಿದ್ದು, 125 ಮಿಲಿಯನ್ ಬಳೆದಾರರನ್ನು ಹೊಂದಿದೆ.

ನೋಕಿಯಾದ ಮೊದಲ 4G ವೋಲ್ಟ್ ಫೀಚರ್ ಫೋನ್ ರಿಲೀಸ್!!

How to find out where you can get your Aadhaar card done (KANNADA)
 ಇನ್ನು ಇದೇ:

ಇನ್ನು ಇದೇ:

ಇದಲ್ಲದೇ ಒಲಾ ಮುಂದಿನ ದಿನಗಳಲ್ಲಿ ಬಾಂಗ್ಲಾದೇಶ ಮತ್ತು ಶೀಲಂಕಾದಲ್ಲಿಯೂ ಸೇವೆಯನ್ನು ಆರಂಭಿಸುವ ಸನಿಹದಲ್ಲಿದೆ ಎನ್ನಲಾಗಿದೆ. ಈಗಾಗಲೇ ಮಾತು ಕತೆ ನಡೆದಿದ್ದು, ಶೀಘ್ರವೇ ಈ ರಾಷ್ಟ್ರಗಳಲ್ಲಿ ಒಲಾ ಸೇವೆಯೂ ಆರಂಭವಾಗಲಿದೆ. ಇದರಿಂದಾಗಿ ಊಬರ್ ಹೆಚ್ಚಿನ ಸ್ಪರ್ಧೆಯನ್ನು ಎದುರಿಸಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Ola is set to launch itself in Australia in the coming few months. Company's co-founder and chief executive Bhavish Aggarwal made the announcement on Tuesday in a press statement.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot