ಓಲಾದಿಂದ ಮತ್ತೊಂದು ಫೀಚರ್‌..! ಎಐ ರೈಡ್‌ ಮಾನಿಟರಿಂಗ್‌ ಸಿಸ್ಟಮ್‌..!

By Gizbot Bureau
|

ಆಪ್‌ ಆಧಾರಿತ ಕ್ಯಾಬ್‌ ಪೂರೈಕೆದಾರ ಕಂಪನಿ ಓಲಾ ಮತ್ತೊಂದು ಮಹತ್ವದ ಫೀಚರ್‌ ಒಂದನ್ನು ಭಾರತದಾದ್ಯಂತ ವಿಸ್ತರಿಸಲು ಮುಂದಾಗಿದೆ. ಹೌದು, ತನ್ನ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸುರಕ್ಷತಾ ವೈಶಿಷ್ಟ್ಯ 'ಗಾರ್ಡಿಯನ್‌'ನ್ನು ದೇಶದ ಹಲವು ನಗರಗಳಿಗೆ ವಿಸ್ತರಿಸಿದೆ. 'ಗಾರ್ಡಿಯನ್‌' ಫೀಚರ್‌ ನೈಜ ಸಮಯದ ಮಾಹಿತಿಯನ್ನು ಬಳಸಿಕೊಂಡು ಸ್ವಯಂಚಾಲಿತವಾಗಿ ಅನಿಯಮಿತ ಟ್ರಿಪ್‌ ಚಟುವಟಿಕೆಗಳಾದ ದೀರ್ಘಾವಧಿ ನಿಲುಗಡೆ ಮತ್ತು ಅನಿರೀಕ್ಷಿತ ಮಾರ್ಗ ಬದಲಾವಣೆಗಳನ್ನು ಕಂಡುಹಿಡಿಯುತ್ತದೆ.

ಪೈಲಟ್‌ ನಂತರ ವಿಸ್ತರಣೆ

ಪೈಲಟ್‌ ನಂತರ ವಿಸ್ತರಣೆ

ಸೆಪ್ಟೆಂಬರ್‌ 2018ರಲ್ಲಿ ಗಾರ್ಡಿಯನ್‌ ಫೀಚರ್‌ನ್ನು ಭಾರತದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು.

ಪ್ರಾಯೋಗಿಕ ಯೋಜನೆಯ ಯಶಸ್ವಿ ಅನುಷ್ಠಾನದ ನಂತರ ಗಾರ್ಡಿಯನ್‌ನ್ನು ಈಗ ದೇಶದ 16 ನಗರಗಳಿಗೆ ವಿಸ್ತರಿಸಲಾಗಿದ್ದು, ಆಸ್ಟ್ರೇಲಿಯಾದ ಪರ್ತ್‌ನಲ್ಲಿಯೂ ಜಾರಿಯಾಗಿದೆ. ಮುಂದಿನ ತ್ರೈಮಾಸಿಕದೊತ್ತಿಗೆ 'ಗಾರ್ಡಿಯನ್‌'ನ್ನು ಹೆಚ್ಚಿನ ನಗರಗಳಿಗೆ ವಿಸ್ತರಿಸುವ ಗುರಿಯನ್ನು ಓಲಾ ಹೊಂದಿದೆ.

ಗ್ರಾಹಕರ ಸುರಕ್ಷತೆ

ಗ್ರಾಹಕರ ಸುರಕ್ಷತೆ

ಗ್ರಾಹಕರ ಸುರಕ್ಷತೆಯನ್ನು ಪ್ರಮುಖವಾಗಿಸಿಕೊಂಡು ಹೊಸ ಫೀಚರ್‌ಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಿದ್ದೇವೆ. ಮಾನವ ಹಸ್ತಕ್ಷೇಪದ ಭರವಸೆಯೊಂದಿಗೆ ಗಾರ್ಡಿಯನ್ ಕೃತಕ ಬುದ್ಧಿಮತ್ತೆಯ ನಿಖರತೆಯನ್ನು ಒಟ್ಟುಗೂಡಿಸುತ್ತದೆ. ಮತ್ತು ನಾವು ಕಾರ್ಯನಿರ್ವಹಿಸುವ ಮಾರುಕಟ್ಟೆಗಳಲ್ಲಿ ಏಕರೂಪದ ಮತ್ತು ಸುರಕ್ಷಿತ ಚಲನಶೀಲತೆಯ ಅನುಭವವನ್ನು ಪ್ರಬಲಗೊಳಿಸುತ್ತದೆ ಎಂದು ಓಲಾ ಮುಖ್ಯ ಮಾರಾಟ ಮತ್ತು ಮಾರುಕಟ್ಟೆ ಅಧಿಕಾರಿ ಅರುಣ್ ಶ್ರೀನಿವಾಸ್ ಹೇಳಿದ್ದಾರೆ.

ಸುರಕ್ಷತಾ ಪ್ರತಿಕ್ರಿಯೆ ಪಡೆ

ಸುರಕ್ಷತಾ ಪ್ರತಿಕ್ರಿಯೆ ಪಡೆ

ಹೊಸ 'ಗಾರ್ಡಿಯನ್' ಫೀಚರ್‌ನಿಂದ ನೈಜ ಸಮಯದಲ್ಲಿ ಸಂಸ್ಥೆಯ ಮೀಸಲು 24x7 ಸುರಕ್ಷತಾ ಪ್ರತಿಕ್ರಿಯೆ ತಂಡ ಎಚ್ಚರಿಕೆಗಳನ್ನು ಸ್ವೀಕರಿಸುತ್ತದೆ. ಅದು ಗ್ರಾಹಕರು ಮತ್ತು ಚಾಲಕರು ಸುರಕ್ಷಿತವಾಗಿದೆಯೆ ಎಂದು ದೃಢೀಕರಿಸಲು ಮತ್ತು ರೈಡ್‌ ಪೂರ್ಣಗೊಳ್ಳುವವರೆಗೆ ಕರೆ ಸಹಾಯವನ್ನು ಎಸ್‌ಆರ್‌ಎಫ್‌ ನೀಡುತ್ತದೆ. ಓಲಾ ಪ್ರಕಾರ, ಈ ವೈಶಿಷ್ಟ್ಯವನ್ನು ಯಂತ್ರ ಕಲಿಕೆ (ಎಂಎಲ್) ಸಾಮರ್ಥ್ಯಗಳ ಮೇಲೆ ನಿರ್ಮಿಸಲಾಗಿದೆ, ಇದು ಅಪಾಯದ ಸಂಕೇತ ಮತ್ತು ತ್ವರಿತ ರೆಸಲ್ಯೂಶನ್‌ನ್ನು ಸುಧಾರಿಸಲು ನೆರವಾಗುತ್ತದೆ.

ಬೆಂಗಳೂರಿನಲ್ಲಿ ಜಾರಿ

ಬೆಂಗಳೂರಿನಲ್ಲಿ ಜಾರಿ

ಓಲಾದ ಪ್ರಮುಖ ಫೀಚರ್‌ ಆಗಿರುವ ಗಾರ್ಡಿಯನ್‌ನ್ನು ರಾಜಧಾನಿ ಬೆಂಗಳೂರಿನಲ್ಲಿ ಈ ಮೊದಲೇ ಜಾರಿಗೊಳಿಸಲಾಗಿದೆ. ಅಂದರೆ, 2018 ಸೆಪ್ಟೆಂಬರ್‌ನಲ್ಲಿ ಮುಂಬೈ, ಪುಣೆ ಜೊತೆ ಬೆಂಗಳೂರಿನಲ್ಲಿ ಗಾರ್ಡಿಯನ್‌ ಫೀಚರ್‌ನ್ನು ಪ್ರಯೋಗಾತ್ಮಕವಾಗಿ ಜಾರಿಗೊಳಿಸಲಾಗಿತ್ತು.

Best Mobiles in India

Read more about:
English summary
Ola Launches Real-Time Ride Monitoring In India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X