ತುರ್ತಾಗಿ ನಿಸರ್ಗದ ಕರೆಗೆ ಓಗೊಡಲು ‘ಓಲಾ ರೆಸ್ಟ್​ರೂಂ‘ ಕ್ಯಾಬ್ ಬುಕ್ ಮಾಡಿ!!

|

ನಗರೀಕರಣಕ್ಕೆ ಆಧುನಿಕತೆ ಪರಿಹಾರವಾಗಬಲ್ಲದು ಎಂಬುದನ್ನು ಜನಪ್ರಿಯ ಆಪ್ ಆಧಾರಿತ ಕ್ಯಾಬ್ ಸೇವೆ ಒದಗಿಸುವ ಓಲಾ ತೋರಿಸಿಕೊಟ್ಟಿದೆ. ನಗರಗಳಲ್ಲಿ ತುರ್ತು ಶೌಚಾಲಯದ ಅನಿವಾರ್ಯತೆಗಾಗಿ ಓಲಾ ಸಂಸ್ಥೆ ಈ ನೂತನ ಯೋಜನೆಯೊಂದನ್ನು ಪರಿಚಯಪಡಿಸಲು ಮುಂದಾಗಿದ್ದು, ತುರ್ತಾಗಿ ನಿಸರ್ಗದ ಕರೆಗೆ ಇನ್ಮುಂದೆ 'ಓಲಾ ರೆಸ್ಟ್​ರೂಂ' ಬುಕ್ ಮಾಡಬಹುದು.!

ಹೌದು, ಇದು ತಮಾಷೆಯಂತೆ ಕಂಡರೂಜನಪ್ರಿಯ ಓಲಾ ಕ್ಯಾಬ್​ ಸಂಸ್ಥೆ ಗ್ರಾಹಕರಿಗಾಗಿ ಹೊಸದಾದ ಮೊಬೈಲ್​ ಶೌಚಾಲಯ ಯೋಜನೆಯೊಂದನ್ನು ಪರಿಚಯ ಪಡಿಸುತ್ತಿದೆ. ಗ್ರಾಹಕರಿಗಾಗಿ ಮೊಬೈಲ್​ ಶೌಚಾಲಯ ಎಂಬ ವಿನೂತನ ಸೇವೆಯನ್ನು ಪರಿಚಯ ಪಡಿಸಲು ಓಲಾಮುಂದಾಗಿದ್ದು, ಈ ಕುರಿತಾಗಿ ಓಲಾ ಸಂಸ್ಥೆ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಸಂದೇಶವನ್ನು ಹೊರಡಿಸಿದೆ.

ತುರ್ತಾಗಿ ನಿಸರ್ಗದ ಕರೆಗೆ ಓಗೊಡಲು ‘ಓಲಾ ರೆಸ್ಟ್​ರೂಂ‘ ಕ್ಯಾಬ್ ಬುಕ್ ಮಾಡಿ!!

'ಓಲಾ ರೆಸ್ಟ್‌ರೂಂಗಳನ್ನು ಪರಿಚಯಿಸುತ್ತಿದ್ದೇವೆ. ಎಲ್ಲವೂ ಮೊಬೈಲ್ ಆಗಿರಬೇಕು ಎನ್ನುವ ಯುವ ತಲೆಮಾರಿನವರಿಗೆ ಮತ್ತು ಭೇಟಿ ನೀಡಬಯಸುವ ಎಲ್ಲರಿಗಾಗಿ' ಎಂದು ಓಲಾ ಕ್ಯಾಬ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ವೀಡಿಯೋ ಒಂದನ್ನು ಪ್ರಕಟಿಸಿದೆ. ಈ ವೀಡಿಯೋ ಇದೀಗ ವೈರಲ್ ಆಗಿದ್ದು, ಭಾರೀ ವೀಕ್ಷಣೆ ಪಡೆದಿರುವ ಈ ವಿಡಿಯೋವನ್ನು ಹಲವರು ಮೆಚ್ಚಿದ್ದಾರೆ.

ಎಲ್ಲೆಲ್ಲೋ ಇರುವಾಗ ತುರ್ತಾಗಿ ನಿಸರ್ಗದ ಕರೆಗೆ ಓಗೊಡುವ ಅನಿವಾರ್ಯತೆ ಬಂದರೆ ಶೌಚಾಲಯ ಹುಡುಕುತ್ತ ಓಡಾಡುವ ಅಗತ್ಯವಿಲ್ಲದೇ ನೀವಿರುವಲ್ಲಿಗೇ ನಿಮ್ಮನ್ನು ಹುಡುಕಿಕೊಂಡು ಓಲಾದ ಮೊಬೈಲ್ ಶೌಚಾಲಯ ಬರುತ್ತದೆ. ಈ ಸೇವೆ ಅತ್ಯಂತ ಅಗತ್ಯವಿತ್ತು. ಇದಕ್ಕಾಗಿ ಓಲಾ ಸಂಸ್ಥೆಗೆ ಧನ್ಯವಾದಗಳು ಎಂದು ಹಲವರು ಟ್ವಿಟರ್ ಬಳಕೆದಾರರು ಇದನ್ನು ಸ್ವಾಗತಿಸಿದ್ದರೆ.

ಆದರೆ, ಏಪ್ರಿಲ್ 1ರ ಸಮಯದಲ್ಲಿ ಓಲಾ ಇಂತಹದೊಂದು ಸೇವೆಯನ್ನು ನೀಡಲು ಮುಂದಾಗಿರುವುದನ್ನ ಕೆಲವರು ಇದು ಏಪ್ರಿಲ್ ಫೂಲ್ ಮಾಡುವ ತಂತ್ರವಿರಬಹುದೆ? ಎಂದೂ ಸಂದೇಹ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಏನೇ ಆದರೂ, ನಗರ ಪ್ರದೇಶಗಳಿಗೆ ಇಂತಹ ಸೌಲಭ್ಯದ ಅವಶ್ಯವಿತ್ತು. ಅದರಲ್ಲೂ ಮಹಿಳೆಯರಿಗೆ ಇಂತಹ ಸೇವೆ ಸಿಕ್ಕರೆ ಅದಕ್ಕಿಂತ ಸಿಹಿಸುದ್ದಿ ಮತ್ತೇನಿದೆ.

Best Mobiles in India

English summary
The cab aggregator on March 30 tweeted about 'Ola Restrooms' with a video along with the post. ... Introducing Ola Restrooms. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X