Home
ಸುದ್ದಿಜಾಲ

ಲಂಡನ್‌ನಲ್ಲಿಯೂ ಒಲಾ..! ಉಬರ್‌ಗೆ ಮತ್ತೊಂದು ಸುತ್ತಿನ ಹೊಡೆತ...!

By Srinidhi

ದೇಶಿಯ ಟ್ಯಾಕ್ಸಿ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿ, ಸಾಮಾನ್ಯರು ಅತೀ ಕಡಿಮೆ ಬೆಲೆಗೆ ಕ್ಯಾಬ್‌ಗಳಲ್ಲಿ ಸಾಗುವಂತೆ ಮಾಡಿದ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಒಲಾ, ಈ ಬಾರಿ ದೇಶದಿಂದ ಆಚೆಯೂ ಸೇವೆಯನ್ನು ನೀಡಲು ಮುಂದಾಗಿದೆ. ಬ್ರಿಟನ್‌ನಲ್ಲಿ ತನ್ನ ಕ್ಯಾಬ್ ಸೇವೆಯನ್ನು ಆರಂಭಿಸಲಿದೆ. ದೈತ್ಯ ಉಬರ್‌ಗೆ ಈ ಮೂಲಕ ಸೆಡ್ಡು ಹೊಡೆಯಲು ಮುಂದಾಗಿದೆ.

ಲಂಡನ್‌ನಲ್ಲಿಯೂ ಒಲಾ..! ಉಬರ್‌ಗೆ ಮತ್ತೊಂದು ಸುತ್ತಿನ ಹೊಡೆತ...!

ಈಗಾಗಲೇ ಆಸ್ಟೇಲಿಯಾದಲ್ಲಿ ಸೇವೆಯನ್ನು ನೀಡುತ್ತಿರುವ ಒಲಾ, ಜಾಗತಿಕವಾಗಿ ತನ್ನ ಸೇವೆಯನ್ನು ವಿಸ್ತರಿಸುವ ಸಲುವಾಗಿ ಬ್ರಿಟನಿನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಭಾರತದಲ್ಲಿ ಉತ್ತಮವಾಗಿ ಸೇವೆಯನ್ನು ನೀಡುತ್ತಿರುವ ಒಲಾ, ಆಸ್ಟ್ರೇಲಿಯಾದಲ್ಲಿಯೂ ಉತ್ತಮ ಸ್ಥಿತಿಯಲ್ಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನಷ್ಟು ದೊಡ್ಡ ದೇಶಗಳಲ್ಲಿ ಸೇವೆಯನ್ನು ನೀಡುವ ಯೋಜನೆಯನ್ನು ಹೊಂದಿದೆ ಎನ್ನಲಾಗಿದೆ.

ಮೊದಲಿಗೆ:

ಮೊದಲಿಗೆ:

ಬ್ರಿಟನ್ ನ ಪ್ರಮುಖ ನಗರಗಳಾದ ಸೌಥ್ ವೇಲ್ಸ್ ಮತ್ತು ಮ್ಯಾಂಚೆಸ್ಟರ್ ನಲ್ಲಿ ಮೊದಲಿಗೆ ಈ ತಿಂಗಳ ಅಂತ್ಯದಲ್ಲಿ ಒಲಾ ಸೇವೆಯೂ ಆರಂಭವಾಗಲಿದೆ. ಇದಾದ ನಂತರದಲ್ಲಿ ಹಂತ ಹಂತವಾಗಿ ಇಡೀ ದೇಶದಲ್ಲಿಯೇ ತನ್ನ ಕ್ಯಾಬ್ ಜಾಲವನ್ನು ಒಲಾ ವಿಸ್ತರಿಸಲಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಅಲ್ಲಿಯೂ ಉಬರ್‌ಗೆ ಸೆಡ್ಡು:

ಅಲ್ಲಿಯೂ ಉಬರ್‌ಗೆ ಸೆಡ್ಡು:

ಭಾರತ ಮಾತ್ರವಲ್ಲದೇ ಆಸ್ಟ್ರೇಲಿಯಾದಲ್ಲಿಯೂ ಉಬರ್‌ಗೆ ಸೆಡ್ಡು ಹೊಡೆದಿದ್ದ ಒಲಾ, ಈಗ ಮತ್ತೊಮ್ಮೆ ಉಬರ್‌ನೊಂದಿಗೆ ಸ್ಪರ್ದೇಗೆ ನಿಂತಿದೆ. ಸದ್ಯ ಬ್ರಿಟನ್‌ನಲ್ಲಿ ಉಬರ್ ಮತ್ತು ಟ್ಯಾಕ್ಸಿಫೈ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುತ್ತಿದೆ. ಹೀಗಾಗಿ ಒಲಾ ಪ್ರವೇಶದ ನಂತರದಲ್ಲಿ ದೊಡ್ಡ ಪ್ರಮಾಣದ ಸ್ಪರ್ದೆಯನ್ನು ಅಲ್ಲಿಯೂ ಕಾಣಬಹುದಾಗಿದೆ.

ಭಾರತದಲ್ಲಿ ಪ್ರಾಬಲ್ಯ:

ಭಾರತದಲ್ಲಿ ಪ್ರಾಬಲ್ಯ:

ಬೆಂಗಳೂರು ಮೂಲದ ಒಲಾ 2010ರಲ್ಲಿ ಸೇವೆಯನ್ನು ಆರಂಭಿಸಿತ್ತು, ದೇಶದಲ್ಲಿ ಆರಂಭಗೊಂಡ ಮೊದಲ ಆಪ್ ಆಧಾರಿತ ಟ್ಯಾಕ್ಸಿ ಸೇವೆ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿತ್ತು. ಸದ್ಯ ಭಾರತದ 110 ಪ್ರಮುಖ ನಗರಗಳಲ್ಲಿ ಒಲಾ ಕ್ಯಾಬ್ ಸೇವೆಯನ್ನು ಕಾಣಬಹುದಾಗಿದೆ.

Best Mobiles in India

English summary
Ola Takes On Uber Again, Drives Into UK. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+