Home
ಸುದ್ದಿಜಾಲ

ನಕಲಿ ಡ್ರೈವರ್‌ಗಳ ಪತ್ತೆಗೆ ಓಲಾದಿಂದ ಸೆಲ್ಫೀ ದೃಡೀಕರಣ..!

By Gizbot Bureau

ಅದೆಷ್ಟೋ ಸಂದರ್ಬದಲ್ಲಿ ಓಲಾದಲ್ಲಿ ನೀವು ಸಂಚರಿಸುವಾಗ ಗಮನಿಸಿರಬಹುದು. ನಿಮ್ಮ ಮೊಬೈಲ್ ಆಪ್ ನಲ್ಲಿ ಕಾಣಿಸುವ ವ್ಯಕ್ತಿಯು ಕ್ಯಾಬ್ ನಲ್ಲಿ ಡ್ರೈವರ್ ಆಗಿರುವುದಿಲ್ಲ. ಇದು ಖಂಡಿತವಾಗಲೂ ಭದ್ರತಾ ದೃಷ್ಟಿಯಿಂದ ಅಷ್ಟು ಹಿತವಾದುದ್ದಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ನಿಜವಾದ ಡ್ರೈವರ್ ಇಲ್ಲದ ಕ್ಯಾಬ್ ನಲ್ಲಿ ಸಂಚರಿಸುವಾಗ ಒಂದು ರೀತಿಯ ಭಯ ಪ್ರಯಾಣಿಕರನ್ನು ಕಾಡುತ್ತದೆ.

ಹೀಗೆ ರಿಜಿಸ್ಟರ್ ಆಗಿರುವ ಡ್ರೈವರ್ ಕ್ಯಾಬ್ ನಲ್ಲಿ ಇಲ್ಲದೇ ಇತರರು ಡ್ರೈವಿಂಗ್ ಮಾಡುತ್ತಿರುವ ಸಂಗತಿ ಓಲಾಗೆ ತಿಳಿದಿದೆ ಮತ್ತು ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಂಡು ಪ್ರಯಾಣಿಕರ ಭದ್ರತೆಯನ್ನು ಕಾಪಾಡುವುದಕ್ಕೆ ಓಲಾ ಹೊಸ ವಿಧಾನವೊಂದನ್ನು ಕಂಡುಕೊಂಡಿದೆ.

ನಕಲಿ ಡ್ರೈವರ್‌ಗಳ ಪತ್ತೆಗೆ ಓಲಾದಿಂದ ಸೆಲ್ಫೀ ದೃಡೀಕರಣ..!

ಹೇಗೆ ಪ್ರಾಕ್ಸಿ ಡ್ರೈವರ್ ಗಳನ್ನು ಓಲಾ ಗುರುತಿಸುತ್ತದೆ ಎಂದು ಕೇಳುತ್ತಿದ್ದೀರಾ? ಅದಕ್ಕಾಗಿಯೇ ಓಲಾದಲ್ಲಿ ಈಗ ಕ್ಯಾಬ್ ಡ್ರೈವರ್ ಗಳ ಸೆಲ್ಫೀ ವೆರಿಫಿಕೇಷನ್ ಎಂಬ ಹೊಸ ವೈಶಿಷ್ಟ್ಯವೊಂದನ್ನು ಪರಿಚಯ ಮಾಡಲಾಗುತ್ತಿದೆ. ಈಗಾಗಲೇ ಈ ಭದ್ರತಾ ವೈಶಿಷ್ಟ್ಯತೆಯ ನ್ನು ದೆಹಲಿಯಲ್ಲಿ ಪರೀಕ್ಷೆ ಮಾಡಲಾಗುತ್ತಿದೆ ಮತ್ತು ಇತರ ಎಲ್ಲಾ ಸಿಟಿಗಳನ್ನು ಸದ್ಯದಲ್ಲೇ ಬರುವ ನಿರೀಕ್ಷೆ ಇದೆ.

ಓಲಾದಲ್ಲಿ ಡ್ರೈವರ್ ಗಳಿಂದ ನಡೆಯುತ್ತಿರುವ ತಪ್ಪು ಸಂಚಾರವನ್ನು ತಡೆಯುವ ನಿಟ್ಟಿನಲ್ಲಿ ಸ್ಮಾರ್ಟ್ ಫೋನ್ ನಲ್ಲಿರುವ ಫೇಸ್ ಐಡಿ ವೈಶಿಷ್ಟ್ಯವನ್ನು ಬಳಸಿಕೊಂಡು ಮತ್ತು ಸೆಲ್ಫೀ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಕ್ಕೆ ಓಲಾ ತನ್ನ ಭದ್ರತೆಯನ್ನು ಹೆಚ್ಚಿಸಿ ಪ್ರಯಾಣಿಕರಿಗೆ ಅನುಕೂಲಕರವಾದ ವಾತಾವರಣ ಸೃಷ್ಟಿಸುವುದಕ್ಕೆ ಮುಂದಾಗುತ್ತಿದೆ.

ಸೆಲ್ಫೀ ದೃಢೀಕರಣ ಹೇಗೆ ಕೆಲಸ ಮಾಡುತ್ತದೆ ?

ಈ ವಿಧಾನವು ಬಹಳ ಸರಳವಾಗಿ ಕೆಲಸ ಮಾಡುತ್ತದೆ. ದಿನದ ಯಾವುದೇ ಸಂದರ್ಬದಲ್ಲಿ ಓಲಾ ಡ್ರೈವರ್ ಬಳಿ ಲೈವ್ ಫೋಟೋ ಕಳಿಸುವಂತೆ ಓಲಾ ಕೇಳುತ್ತದೆ. ಕೂಡಲೇ ಡ್ರೈವರ್ ಅದನ್ನು ಕಳುಹಿಸಬೇಕು. ಆತ ಒಮ್ಮೆ ಸೆಲ್ಫೀ ಫೋಟೋ ಕ್ಲಿಕ್ಕಿಸಿ ಕಳುಹಿಸಿದ ಕೂಡಲೇ ಅದು ಓಲಾ ಸಿಸ್ಟಮ್ ಗೆ ತೆರಳುತ್ತದೆ ಮತ್ತು ಆ ಚಿತ್ರವು ಇವರ ಡಾಟಾಬೇಸ್ ನಲ್ಲಿರುವ ಫೋಟೋದೊಡನೆ ಮ್ಯಾಚ್ ಆಗಬೇಕು. ಒಂದು ವೇಳೆ ಮ್ಯಾಚ್ ಆಗದೇ ಇದ್ದರೆ ಓಲಾ ಆ ಡ್ರೈವರ್ ವಿರುದ್ಧ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತದೆ.

ಒಂದು ವೇಳೆ ಡ್ರೈವರ್ ಹೀಗೆ ಕಳ್ಳಾಟವಾಡಿ ಸಿಕ್ಕಿಬಿದ್ದರೆ ಏನು ಕ್ರಮ ತೆಗೆದುಕೊಳ್ಳಲಾಗುತ್ತೆ?

ಒಂದು ವೇಳೆ ಸುಳ್ಳು ಡ್ರೈವರ್ ಗಳು ಕ್ಯಾಬ್ ಚಲಾಯಿಸುತ್ತಿರುವುದು ಪತ್ತೆಯಾದರೆ, ನಿಜವಾದ ಡ್ರೈವರ್ ನ್ನು ವಿಚಾರಣೆಗೆ ಕರೆಸಲಾಗುತ್ತದೆ. ತನ್ನ ಕ್ಯಾಬ್ ನ್ನು ಇತರರಿಗೆ ನೀಡಿದ ಉದ್ದೇಶ ಮತ್ತು ಇತರೆ ಹಲವಾರು ಪ್ರಶ್ನೆಗಳಿಗೆ ಆತ ಸಮಂಜಸ ಕಾರಣವನ್ನು ನೀಡಬೇಕಾಗುತ್ತದೆ. ಒಂದು ವೇಳೆ ಸಿಕ್ಕಿಬಿದ್ದಲ್ಲಿ ಆತನ ವಿರುದ್ಧ ಕಠಿಣ ಕ್ರಮವನ್ನು ಓಲಾ ತೆಗೆದುಕೊಳ್ಳಲಿದೆ. ಇದು ರ್ಯಾಂಡಮ್ ಆಗಿ ಕಳುಹಿಸಲಾಗುತ್ತದೆ. ಇಂತಹದ್ದೇ ವ್ಯಕ್ತಿಗೆ ನಿರ್ಧಿಷ್ಟವಾಗಿ ಕಳುಹಿಸುವುದಲ್ಲ. ಆಲ್ಗೋರಿತ್ತಮ್ ಬೇಸ್ ಆಗಿ ಕಳುಹಿಸಿಕೊಡಲಾಗುತ್ತದೆ. ಅದಕ್ಕೆ ಡ್ರೈವರ್ ಗಳು ಪ್ರತಿಕ್ರಿಯಿಸಲೇ ಬೇಕು. ಇದು ನಿಜವಾದ ಡ್ರೈವರ್ ಗಳನ್ನು ಗುರುತಿಸಲು ಮತ್ತು ಸುಳ್ಳು ಚಾಲಕರ ತಡೆಗೆ ಸಹಾಯ ಮಾಡಲಿದೆ.

ಭಾರತದಲ್ಲಿ ಮೇ ತಿಂಗಳಲ್ಲಿ ಸ್ಟ್ರೀಟ್ ಸೇಫ್ ವೈಶಿಷ್ಟ್ಯವನ್ನು ಓಲಾ ಬಿಡುಗಡೆಗೊಳಿಸಿತ್ತು. ದೆಹಲಿ ಪೋಲೀಸ್ ಕಮಿಷನರ್ ಅಮೂಲ್ಯ ಪಾಟ್ನಾಯಕ್ ಇದನ್ನು ಬಿಡುಗಡೆಗೊಳಿಸಿದ್ದರು ಮತ್ತು ಇದು ಮೂರು ಪ್ರಮುಖ ವಿಚಾರಗಳ ಬಗ್ಗೆ ತಿಳುವಳಿಕೆ ನೀಡುವ ಪ್ರಯತ್ನವಾಗಿತ್ತು. ಚಾಲನೆಯ ವೇಗ, ಡ್ರಿಂಕ್ ಎಂಡ್ ಡ್ರೈವ್, ಮತ್ತು ಚಾಲನೆಯ ಸಂದರ್ಬದಲ್ಲಿ ಮೊಬೈಲ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಿತ್ತು.

ಈಗ ಓಲಾ ಸೆಲ್ಫೀ ದೃಢೀಕರಣ ವೈಶಿಷ್ಟ್ಯತೆಯನ್ನು ಪರಿಚಯಿಸಿರುವುದರಿಂದ ಪ್ರಯಾಣಿಕರು ಮುಂದಿನ ದಿನಗಳಲ್ಲಿ ಓಲಾದಲ್ಲಿ ಸುರಕ್ಷಿತವಾಗಿ ತೆರಳಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ.

Best Mobiles in India

English summary
Ola wants only registered drivers on duty, pilots random selfies authentication for surprise checks. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+