Home
ಸುದ್ದಿಜಾಲ

ಒಂದೇ ತಿಂಗಳಲ್ಲಿ Arattai ಗೆ ಏನಾಯ್ತು?..ಈ ಪರಿಸ್ಥಿತಿಯನ್ನು ಯಾರು ಊಹಿಸಿದ್ದರು!

ಕೆಲವು ವಾರಗಳ ಹಿಂದಷ್ಟೇ Zoho ಕಂಪನಿ ಅಭಿವೃದ್ಧಿಪಡಿಸಿದ ದೇಶೀಯ Arattai ಮೆಸೇಜಿಂಗ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಭಾರೀ ಟ್ರೆಂಡ್ ಆಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. Arattai ಈಗ ಟಾಪ್ 100 ಉಚಿತ ಆ್ಯಪ್‌ಗಳ ಪಟ್ಟಿಯಿಂದ ಹೊರಬಿದ್ದಿದೆ. ಅಂದರೆ ಕೇವಲ ಒಂದು ತಿಂಗಳಲ್ಲಿ ಅದರ ವೇಗ ಸಂಪೂರ್ಣ ಕುಸಿದಂತಾಗಿದೆ. ವಾಟ್ಸ್ಆಪ್ ತನ್ನ ಪ್ರೈವಸಿ ನೀತಿಗಳ ವಿವಾದಕ್ಕೆ ಸಿಲುಕಿದ್ದ ಸಮಯದಲ್ಲಿ ಗಮನಸೆಳೆದಿದ್ದ Arattai ಮೆಸೇಜಿಂಗ್ ಅಪ್ಲಿಕೇಶನ್ ಇದೀಗ ಕುಸಿತ ಕಂಡಿರುವುದು ಆಶ್ಚರ್ಯಕರವಾಗಿದೆ.

2025ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶೀಯ ತಂತ್ರಜ್ಞಾನ ಉತ್ಪನ್ನಗಳ ಬಳಕೆಗೆ ಕರೆ ನೀಡಿದ ನಂತರ, Arattai ಆ್ಯಪ್‌ನಲ್ಲಿ ಡೌನ್‌ಲೋಡ್‌ಗಳು ವೇಗವಾಗಿ ಹೆಚ್ಚಾಗಿದ್ದವು. ದೇಶೀಯ ಆ್ಯಪ್‌ಗಳಿಗೆ ಬೆಂಬಲ ನೀಡುವ ಬಳಕೆದಾರರಿಂದ ಉತ್ತಮ ಸ್ಪಂದನೆ ದೊರೆತಿತ್ತು. ಕೇವಲ ಕೆಲವು ವಾರಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಸೆಳೆದಿತ್ತು ಮತ್ತು "ಸೋಶಿಯಲ್ ನೆಟ್‌ವರ್ಕಿಂಗ್" ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿತ್ತು. ಇದೀಗ Arattai ಅಪ್ಲಿಕೇಶನ್ ಗೂಗಲ್ ಪ್ಲೇನಲ್ಲಿನ ಟಾಪ್ 100 ಉಚಿತ ಆ್ಯಪ್‌ಗಳಿಂದಲೇ ಮಾಯವಾಗಿದೆ. ಇದಕ್ಕೆ ಕಾರಣ?

ವೈಶಿಷ್ಟ್ಯಗಳ ಕೊರತೆ Arattaiಗೆ ಅಡ್ಡಿಯಾಯಿತೇ?
Arattai ನಲ್ಲಿ ವಾಯ್ಸ್ ಮತ್ತು ವಿಡಿಯೋ ಕಾಲಿಂಗ್, ಭಾರತದೊಳಗೆ ಡೇಟಾ ಸಂಗ್ರಹಣೆ, ಮತ್ತು ಸುರಕ್ಷಿತ ಸಂವಹನ ವ್ಯವಸ್ಥೆ ಇವೆ. ಆದರೆ ಪಠ್ಯ ಸಂದೇಶಗಳಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ಇಲ್ಲದಿರುವುದು ಅದರ ದೊಡ್ಡ ಕೊರತೆಯಾಗಿರಬಹುದು. ಈ ವೈಶಿಷ್ಟ್ಯ ಈಗ ಅಭಿವೃದ್ಧಿ ಹಂತದಲ್ಲಿದೆ ಎಂದು ವರದಿಗಳು ಹೇಳುತ್ತಿವೆ. ಆದರೆ, ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯೇ ಇಂದಿನ ಪ್ರಮುಖ ಅಂಶವಾಗಿರುವುದರಿಂದ, ಈ ಕೊರತೆಯು Arattai ಯ ವಿಶ್ವಾಸಾರ್ಹತೆಯನ್ನು ಕುಗ್ಗಿಸಿರಬಹುದು. ಅಥವಾ ವಾಟ್ಸಾಪ್‌ನಂತಹ ದೈತ್ಯ ಪ್ರತಿಸ್ಪರ್ಧಿಗಳನ್ನು ಹಿಮ್ಮೆಟ್ಟಿಸುವ ತಂತ್ರ ಇಲ್ಲದಿರಬಹುದು.

ಒಂದೇ ತಿಂಗಳಲ್ಲಿ Arattai ಗೆ ಏನಾಯ್ತು?..ಈ ಪರಿಸ್ಥಿತಿಯನ್ನು ಯಾರು ಊಹಿಸಿದ್ದರು!

ಇದೀಗ Arattai ಕುಸಿತದಿಂದ ಒಂದು ಸ್ಪಷ್ಟ ಸಂದೇಶ ಹೊರಬಂದಿದೆ. ಯಾವುದೇ ಉತ್ಪನ್ನವು ಜನಪ್ರಿಯವಾಗಲು ಕೇವಲ 'Made in India' ಟ್ಯಾಗ್ ಸಾಕಾಗುವುದಿಲ್ಲ. ಬಳಕೆದಾರರು ಈಗ ಅನುಭವ, ಸುಲಭತೆ ಮತ್ತು ಸಂಪೂರ್ಣ ಸುರಕ್ಷತೆ ಬಯಸುತ್ತಿದ್ದಾರೆ ಎಂದು ಹೇಳಬಹುದು. ಅಥವಾ ದೇಶಿಯ ಒಲವನ್ನು ಹೊಂದಿರುವ ಬಳಕೆದಾರರ ಉತ್ತೇಜನವು ಕಡಿಮೆಯಾಗಿರಬಹುದು. ಆದರೆ, ಆದರೆ Zoho ತನ್ನ ಬಲವಾದ ಬ್ರ್ಯಾಂಡ್ ಮತ್ತು ನಿಷ್ಠಾವಂತ ಬಳಕೆದಾರರ ಆಧಾರದ ಮೇಲೆ ಮತ್ತೆ ಮಾರುಕಟ್ಟೆಗೆ ಮರಳುವ ಸಾಧ್ಯತೆಯಿದೆ. ಹೊಸ ವೈಶಿಷ್ಟ್ಯಗಳು ಮತ್ತು Zoho Pay ಇಂಟಿಗ್ರೇಷನ್‌ನಿಂದ Arattai ಮತ್ತೆ ಗಮನ ಸೆಳೆಯಬಹುದು.

ಏನಿದು Arattai ಆ್ಯಪ್?
ಶ್ರೀಧರ್ ವೆಂಬು ಎಂಬುವವರು ಹುಟ್ಟಿಹಾಕಿದ ತಮಿಳುನಾಡು ಮೂಲದ Zoho ಕಂಪನಿ ಅಭಿವೃದ್ಧಿಪಡಿಸಿದ ದೇಶೀಯ ಸುರಕ್ಷಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಈ Arattai ಆ್ಯಪ್. ಈ ಆ್ಯಪ್ ಹೊಸದೇನಲ್ಲ.ಇದು ಮೊದಲ ಬಾರಿಗೆ 2021ರಲ್ಲಿ ಬಿಡುಗಡೆಗೊಂಡಿತ್ತು. ವಾಟ್ಸ್ಆಪ್ ತನ್ನ ಪ್ರೈವಸಿ ನೀತಿಗಳ ವಿವಾದಕ್ಕೆ ಸಿಲುಕಿದ್ದ ಇತ್ತೀಚಿನ ಸಮಯದಲ್ಲಿ Arattaiಗೆ ಜನರ ಗಮನ ಸೆಳೆಯಲು ಅವಕಾಶ ಸಿಕ್ಕಿತ್ತು."Arattai" ಎಂಬ ಪದ ಕನ್ನಡದಲ್ಲಿ "ಹರಟೆ" ಅಂದರೆ "ಚಿಟ್‌ಚಾಟ್" ಎಂಬ ಅರ್ಥ. 2020ರ ಕೊನೆಯಲ್ಲಿ ಪರೀಕ್ಷಾ ಹಂತವಾಗಿ ಬಿಡುಗಡೆಗೊಂಡು, 2021ರಲ್ಲಿ ಅಧಿಕೃತ ಲಾಂಚ್ ಕಂಡಿತ್ತು.

ಒಂದೇ ತಿಂಗಳಲ್ಲಿ Arattai ಗೆ ಏನಾಯ್ತು?..ಈ ಪರಿಸ್ಥಿತಿಯನ್ನು ಯಾರು ಊಹಿಸಿದ್ದರು!

Zoho Pay ಇಂಟಿಗ್ರೇಷನ್ ಮೂಲಕ ಹೊಸ ಪ್ರಯತ್ನ
ಶ್ರೀಧರ್ ವೆಂಬು ಅವರ ಇತ್ತೀಚಿನ ಹೇಳಿಕೆಗಳ ಪ್ರಕಾರ, Zoho ಈಗ Arattai ಅನ್ನು ಇತರ Zoho ಉತ್ಪನ್ನಗಳೊಂದಿಗೆ ಸಂಪರ್ಕಿಸಲು ಮುಂದಾಗಿದೆ. ಅದರಲ್ಲಿ ಪ್ರಮುಖವಾದುದು Zoho Pay. ಇದು UPI ಪಾವತಿ ವ್ಯವಸ್ಥೆ ಹೊಂದಿದ್ದು, ನೇರವಾಗಿ ಚಾಟ್ ವಿಂಡೋದಲ್ಲೇ ಪಾವತಿಗಳನ್ನು ಮಾಡಲು ಅನುಕೂಲ ನೀಡಲಿದೆ. ಇದರೊಂದಿಗೆ Arattai ಕೇವಲ ಮೆಸೇಜಿಂಗ್ ಆ್ಯಪ್ ಆಗಿರದೇ, ಸಂವಹನ ಹಾಗೂ ಪಾವತಿ ವ್ಯವಸ್ಥೆಯನ್ನು ಒಟ್ಟುಗೂಡಿಸುವ ಪ್ಲಾಟ್‌ಫಾರ್ಮ್ ಆಗಿ ಮಾರ್ಪಾಡಾಗುವ ಸಾಧ್ಯತೆ ಇದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?, ನೀವು ಕೂಡ ಈ Arattai ಆ್ಯಪ್ ಬಳಸುತ್ತಿದ್ದೀರಾ ಎಂಬುದನ್ನು ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Arattai has now slipped out of the top 100 free apps list — a clear sign that its momentum has completely collapsed within just a month. It’s quite surprising to see the messaging app that once rose to fame amid WhatsApp’s privacy policy controversy now facing such a sharp decline.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+