Subscribe to Gizbot

ಒಂದೇ ಅಪ್ಲಿಕೇಶನ್‌ನಲ್ಲಿ ರೀಚಾರ್ಜ್ ಮಾಹಿತಿ

Written By:

ಒಂದೇ ರೀತಿಯ ಹಳೆಯ ಮೊಬೈಲ್ ಯೋಜೆನಯನ್ನು ನೀವಿನ್ನೂ ಬಳಸುತ್ತಿದ್ದೀರಾ? ಮೊಬೈಲ್ ಯೋಜನೆಗಳ ವಿವರಗಳಿಗಾಗಿ ಇನ್ನು ನಿಮ್ಮ ಸಮೀಪವಿರುವ ರೀಚಾರ್ಜ್ ಅಂಗಡಿಗಳಿಗೆ ಎಡತಾಕಬೇಕಾದ ಅಗತ್ಯವಿಲ್ಲ. ರೀಚಾರ್ಜ್ ವೋಚರ್‌ಗಳಲ್ಲಿ ಅದ್ಭುತ ಆಫರ್‌ಗಳ ಕುರಿತು ಪ್ಲಾನ್‌ಹೌಂಡ್‌ನಲ್ಲಿ ಪರಿಶೀಲಿಸಿಕೊಳ್ಳಿ.

ಓದಿರಿ: ಯೂಟ್ಯೂಬ್‌ನಲ್ಲಿ ಇನ್ನುಮುಂದೆ ಆಡಿಯೋ ಸ್ಟ್ರೀಮಿಂಗ್‌

ಹೌದು ಈ ಅಪ್ಲಿಕೇಶನ್ ನಿಮಗೆ ನಿಮ್ಮ ಸೇವೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತದೆ. ಫೈಂಡ್ ವೋಚರ್ ಅನ್ನು ಕ್ಲಿಕ್ ಮಾಡುವ ಮೂಲಕ ಆರಂಭಿಸಿ. ರೀಚಾರ್ಜ್ ಫ್ಲಾಪ್‌ನಲ್ಲಿ ನೀವಿದ್ದಾಗ ರೀಚಾರ್ಜ್ ವೋಚರ್ಸ್ ಟ್ಯಾಬ್ ಅನ್ನು ನೀವು ಕಾಣುತ್ತೀರಿ. ಇಲ್ಲಿ ಎಲ್ಲಾ ಮಾಹಿತಿಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಪ್ಲಾನ್, ಆಫರ್‌ಗಳು, ವ್ಯಾಲಿಡಿಟಿ, ಬೆಲೆ ಮಾಹಿತಿಯನ್ನು ಪಡೆದುಕೊಳ್ಳಲಿದ್ದೀರಿ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಮಾಹಿತಿ ಪಡೆಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅದ್ಭುತ ಆಫರ್

ರೀಚಾರ್ಜ್ ವೋಚರ್

ನಿಮ್ಮ ಬಳಕೆಯ ಅನುಸಾರವಾಗಿ ಯಾವುದೇ ಆಪರೇಟರ್‌ನಿಂದ ಪ್ಲಾನ್‌ಗಳ ಬಗ್ಗೆ ಈ ಹಿಂದೆ ನೀವು ತಿಳಿದುಕೊಳ್ಳಬೇಕಾಗಿತ್ತು. ಆದರೆ ಇದೀಗ ಈ ರೀಚಾರ್ಜ್ ವೋಚರ್‌ಗಳನ್ನು ಆಧರಿಸಿ ಯಾವುದೇ ಆಪರೇಟರ್‌ನಿಂದ ಪ್ಯಾಕ್‌ಗಳನ್ನು ಕಾಣಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಪ್ಯಾಕ್‌ಗಳ ಆಯ್ಕೆಯನ್ನು ಆಧರಿಸಿ ರೀಚಾರ್ಜ್ ವೋಚರ್‌ಗಳು ಇದ್ದು ಬಳಕೆಯನ್ನು ಆಧರಿಸಿ ಇಲ್ಲ.

ಲೈವ್ ರೇಟ್‌ಕಾರ್ಡ್‌

ಪ್ಲಾನ್‌ಗಳ ಹುಡುಕಾಟ

ನಿಮ್ಮ ಬಳಕೆಯನ್ನು ಆಧರಿಸಿ ಪ್ಲಾನ್‌ಗಳ ಹುಡುಕಾಟವನ್ನು ನಿಮಗಿಲ್ಲಿ ಮಾಡಬಹುದಾಗಿದೆ. ಇದೊಂದು ಲೈವ್ ರೇಟ್‌ಕಾರ್ಡ್‌ಗಳಾಗಿದ್ದು ನೀವಾಗಿಯೇ ಕುಳಿತಲ್ಲೇ ಇದರ ಬಳಕೆಯನ್ನು ಮಾಡಬಹುದಾಗಿದೆ.

ಧ್ಯೇಯ

ಪ್ಲಾನ್‌ಹೌಂಡ್‌

ಈ ರೀಚಾರ್ಜ್ ವೋಚರ್ ಹಿಂದಿನ ಕಥೆ ಬಿಚ್ಚಿಕೊಳ್ಳುವುದೇ ಪ್ಲಾನ್‌ಹೌಂಡ್‌ನಲ್ಲಾಗಿದೆ. ಎಲ್ಲಿಬೇಕಾದರೂ ಯಾವಾಗ ಬೇಕಾದರೂ ಸಹಾಯ ಮಾಡುವುದು ಎಂಬ ಧ್ಯೇಯ ವಾಕ್ಯವನ್ನು ಇದು ಹೊಂದಿದೆ.

ನಿಮಗೆ ಸಹಾಯ ಮಾಡಲಿದೆ

ಮೊಬೈಲ್ ಅಪ್ಲಿಕೇಶನ್

ಪ್ಲಾನ್‌ಹೌಂಡ್ ಪ್ರಶಸ್ತಿ ಸ್ವೀಕರಿಸಿರುವ ಮೊಬೈಲ್ ಅಪ್ಲಿಕೇಶನ್ ಆಗಿದ್ದು ಹೊಸ ಫೀಚರ್‌ಗಳು, ಶೀಫಾರಸುಗಳನ್ನು ಒಳಗೊಂಡು ಬಂದಿದೆ. ಶೀಫಾರಸುಗಳು ಯೋಜನೆಗಳು ಮತ್ತು ಪ್ಯಾಕ್‌ಗಳನ್ನು ಹುಡುಕಾಡಲು ನಿಮಗೆ ಸಹಾಯ ಮಾಡಲಿದೆ.

ಪ್ಲಾನ್‌ಗಳು ಮತ್ತು ಪ್ಯಾಕ್‌ಗಳ ಪರಿಚಯ

ಅಂಕಿತ್ ಮತ್ತು ಜಿಗರ್

ಪ್ಲಾನ್‌ಹೌಂಡ್ ನೀವು ಡೌನ್‌ಲೋಡ್ ಮಾಡಿಕೊಂಡ ನಂತರ, ರೆಕಮೆಂಡೇಶನ್ ಟ್ಯಾಬ್‌ಗೆ ಹೋಗಿ ಇಲ್ಲಿ ನಿಮಗೆ ಪ್ಲಾನ್‌ಗಳು ಮತ್ತು ಪ್ಯಾಕ್‌ಗಳ ಪರಿಚಯವನ್ನು ತಿಳಿದುಕೊಳ್ಳಬಹುದಾಗಿದೆ. ಅಂಕಿತ್ ಮತ್ತು ಜಿಗರ್ ಪ್ಲಾನ್ ಹೌಂಡ್ ಹಿಂದಿರುವ ಕಾಣದ ಕೈಗಳಾಗಿದ್ದಾರೆ.

ಮಾಹಿತಿ ಲಭ್ಯ

ಕಡಿಮೆ ದರದ ಆಫರ್‌

ಯಾವುದೇ ಪ್ಲಾನ್ ಅಥವಾ ಪ್ಯಾಕ್ ರೆಕಮೆಂಡೇಶನ್‌ಗೆ ನೀವು ಕ್ಲಿಕ್ ಮಾಡಿದಾಗ ನಿಮಗೆ ದರವನ್ನು ಇದು ತಿಳಿಸುತ್ತದೆ, ಕಡಿಮೆ ದರದ ಆಫರ್‌ಗಳ ಬಗ್ಗೆಯೂ ನಿಮಗಿಲ್ಲಿ ಮಾಹಿತಿ ಲಭ್ಯ.

ರೀಚಾರ್ಜ್

ಪ್ರಿಪೈಡ್ ಪ್ಲಾನ್

ಇದು ಪ್ರಿಪೈಡ್ ಪ್ಲಾನ್ ಆದಲ್ಲಿ, ರೀಚಾರ್ಜ್ ಅನ್ನು ನಿಮಗೆ ಮಾಡಿಕೊಳ್ಳಬಹುದು

ರೀಚಾರ್ಜ್ ಯೋಜನೆ

ಮೊಬೈಲ್ ಬಳಕೆ

ಇನ್ನು ನಿಮ್ಮ ಮೊಬೈಲ್ ಬಳಕೆಯನ್ನು ಈ ಅಪ್ಲಿಕೇಶನ್ ಅಭ್ಯಸಿಸುತ್ತದೆ ಮತ್ತು ಅದಕ್ಕೆ ಅನುಗುಣವಾದ ರೀಚಾರ್ಜ್ ಯೋಜನೆಗಳನ್ನು ನಿಮಗೆ ಆಫರ್ ಮಾಡುತ್ತದೆ. ಇನ್ನು ಯೂಸೇಜ್ ಸ್ಕ್ರೀನ್‌ನಲ್ಲಿ ಕೂಡ ನಿಮಗೆ ಅಗತ್ಯವಾಗಿರುವ ಪ್ಲಾನ್‌ಗಳ ಬಗ್ಗೆ ಹುಡುಕಾಟ ನಡೆಸಬಹುದಾಗಿದೆ.

ಫೋನ್ ಹೆಚ್ಚು ಪರಿತಪಿಸುವುದಿಲ್ಲ

ಫೋನ್‌ನ ಕಾರ್ಯಕ್ಷಮತೆ

ಅಪ್ಲಿಕೇಶನ್ ನಿಮ್ಮ ಫೋನ್‌ನ ಕಾರ್ಯಕ್ಷಮತೆಯ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಹಿನ್ನಲೆಯಲ್ಲಿ ಶಿಫಾರಸುಗಳನ್ನು ಅಪ್ಲಿಕೇಶನ್ ಒದಗಿಸುವುದರಿಂದ ಫೋನ್ ಹೆಚ್ಚು ಪರಿತಪಿಸುವುದಿಲ್ಲ.

ಉಳಿತಾಯ ಮಾಡುವ ಅಪ್ಲಿಕೇಶನ್

ಸಮಯ ಮತ್ತು ಹಣ

ನಿಮ್ಮ ಸಮಯ ಮತ್ತು ಹಣವನ್ನು ಉಳಿತಾಯ ಮಾಡುವ ಅಪ್ಲಿಕೇಶನ್ ಇದಾಗಿದ್ದು ನಿಮ್ಮ ಬೆರಳಲ್ಲೇ ತ್ವರಿತವಾಗಿ ಇದನ್ನು ನಿರ್ವಹಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Are you still holding on to the same old mobile plan ? Not anymore! Now, you don’t have to go in hunt for mobile plan details to each and every shop next to you. Its right there on your hand.Check out this exciting feature on Planhound, Recharge Vouchers.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot