ಭಾರತದಲ್ಲಿ ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ! ಬೆಲೆ ಎಷ್ಟು?

|

ಒನ್‌ಪ್ಲಸ್‌ ಕಂಪೆನಿ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರಮುಖ ಬ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಹೊಂದಿದೆ. ಇದು ನಾಲ್ಕು ಪಟ್ಟು ವೇಗದ ಕೃತಕ ಬುದ್ಧಿಮತ್ತೆ (AI) ಸಂಸ್ಕರಣೆ ಮತ್ತು ಕೊನೆಯ ತಲೆಮಾರಿನ ಸ್ನಾಪ್‌ಡ್ರಾಗನ್ ಚಿಪ್‌ಗಿಂತ 25% ಹೆಚ್ಚು ಪರಿಣಾಮಕಾರಿ ಗ್ರಾಫಿಕ್ಸ್ ಕಾರ್ಯಕ್ಷಮತೆಯನ್ನು ನೀಡಲಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಕಂಪೆನಿ ಭಾರತದಲ್ಲಿ ಹೊಸ ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.7 ಇಂಚಿನ QHD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1Hz ಮತ್ತು 120Hz ನಡುವೆ ಡೈನಾಮಿಕ್ ರಿಫ್ರೆಶ್ ರೇಟ್‌ ಒಳಗೊಂಡಿದೆ. ಜೊತೆಗೆ 5,000mAh ಡ್ಯುಯಲ್‌ ಸೆಲ್‌ ಬ್ಯಾಟರಿಯನ್ನು ಹೊಂದಿದೆ. ಇದು ಹೊಸ ವೈರ್ಡ್ ಚಾರ್ಜಿಂಗ್ ಟೆಕ್ನಾಲಜಿ ಹೊಂದಿದ್ದು, 32 ನಿಮಿಷಗಳಲ್ಲಿ ಶೂನ್ಯದಿಂದ 100% ಚಾರ್ಜ್ ಮಾಡಲಿದೆ. ಇನ್ನುಳಿದಂತೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ 1,440x3,216 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ QHD+ ಲಿಕ್ವಿಡ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಎರಡನೇ ತಲೆಮಾರಿನ ಲೋ-ಟೆಂಪ್‌ರೇಚರ್‌ ಪಾಲಿಕ್ರಿಸ್ಟಲಿನ್ ಆಕ್ಸೈಡ್ (LTPO) ತಂತ್ರಜ್ಞಾನವನ್ನು ಆಧರಿಸಿದೆ. ಇದು 1Hz ಮತ್ತು 120Hz ನಡುವೆ ಡೈನಾಮಿಕ್ ರಿಫ್ರೆಶ್ ರೇಟ್‌ ನೀಡಲಿದೆ. ಈ ಡಿಸ್‌ಪ್ಲೇ sRGB ಬಣ್ಣದ ಹರವುಗಳನ್ನು ಸಹ ಬೆಂಬಲಿಸುತ್ತದೆ. ಇದಲ್ಲದೆ, ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಪಡೆದಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್‌ 12 ನಲ್ಲಿ ಆಕ್ಸಿಜನ್‌ OS 12.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ IMX789 ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL JN1 ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೋನಿ IMX615 ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 80W ಸೂಪರ್‌ವೂಕ್‌ ವೈರ್ಡ್ ಚಾರ್ಜಿಂಗ್ ಮತ್ತು 50W ಏರ್‌ವೂಕ್‌ ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್‌, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ ಬೇಸ್ ಮಾಡೆಲ್‌ 8GB + 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 66,999ರೂ.ಬೆಲೆ ಹೊಂದಿದೆ. ಇನ್ನು ಈ ಫೋನ್ 12GB + 256GB ಸ್ಟೋರೇಜ್ ಮಾಡೆಲ್‌ ಆಯ್ಕೆಗೆ 71,999ರೂ. ಬೆಲೆ ಹೊಂದಿದೆ. ಇದು ಎಮರಾಲ್ಡ್ ಫಾರೆಸ್ಟ್ ಮತ್ತು ವೊಲ್ಕ್ಯಾನಿಕ್ ಬ್ಲಾಕ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
OnePlus 10 Pro with top-notch Snapdragon 8 Gen 1 SoC Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X