Home
ಸುದ್ದಿಜಾಲ

ಭಾರತಕ್ಕೆ ಎಂಟ್ರಿ ಕೊಟ್ಟ ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ !..150W ವೇಗದ ಚಾರ್ಜಿಂಗ್!

ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ಕಂಪೆನಿ ಮುಂಚೂಣಿ ಬ್ರ್ಯಾಂಡ್‌ ಎನಿಸಿಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ಹೊಸ OnePlus 10T ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಕ್ಯಾಮರಾ ಮತ್ತು 2K ಡಿಸ್‌ಪ್ಲೇಗಾಗಿ ಹ್ಯಾಸೆಲ್‌ಬ್ಯಾಡ್ ಸಹಯೋಗದಂತಹ ಕೆಲವು 'ಪ್ರೊ' ಲೆವೆಲ್‌ ಫೀಚರ್ಸ್‌ಗಳನ್ನು ಕಳೆದುಕೊಂಡಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಕಂಪೆನಿ ಭಾರತದಲ್ಲಿ ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಮೊದಲ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ ಆಗಿದೆ. ಜೊತೆಗೆ 150W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡುವ ಒನ್‌ಪ್ಲಸ್‌ ಕಂಪೆನಿಯ ಮೊದಲ ಸ್ಮಾರ್ಟ್‌ಫೋನ್‌ ಎನಿಸಿಕೊಂಡಿದೆ. ಇದರಿಂದ ಈ ಸ್ಮಾರ್ಟ್‌ಫೋನ್‌ ಅನ್ನು ಕೇವಲ 19 ನಿಮಿಷಗಳಲ್ಲಿ 1 ರಿಂದ 100% ವರೆಗೆ ಚಾರ್ಜ್‌ ಆಗಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ.

ಒನ್‌ಪ್ಲಸ್‌

ಇನ್ನು ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ ಜೊತೆಗೆ ತನ್ನ ಮುಂದಿನ ಪೀಳಿಗೆಯ ಆಪರೇಟಿಂಗ್ ಸಿಸ್ಟಮ್ OxygenOS 13 ಅನ್ನು ಸಹ ಅನಾವರಣಗೊಳಿಸಿದೆ. ಆದರೆ ಪ್ರಸ್ತುತ ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ OxygenOS 13ನೊಂದಿಗೆ ಬರುವುದಿಲ್ಲ. ಬದಲಾಗಿ ಆಕ್ಸಿಜನ್ OS 12.1 ಜೊತೆಗೆ ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಒಂದು ವರ್ಷದ ನಂತರ OxygenOS 13ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ 6.7 ಇಂಚಿನ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 2,412x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಬಲವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 10-ಬಿಟ್ ಕಲರ್‌, RGB ಬಣ್ಣದ ಹರವು ಮತ್ತು HDR10+ ಬೆಂಬಲಿಸಲಿದೆ. ಇದು 120hz ಸ್ಕ್ರೀನ್ ರಿಫ್ರೆಶ್ ರೇಟ್‌ ಅನ್ನು ಸಹ ನೀಡಲಿದೆ. ಇದಲ್ಲದೆ 394ppi ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿರುವ ಈ ಡಿಸ್‌ಪ್ಲೇ 360Hz ವರೆಗಿನ ಹಾರ್ಡ್‌ವೇರ್ ಟಚ್‌ ರೆಸ್ಪಾನ್ಸ್‌ ಮತ್ತು 720Hz ನ ಸಾಫ್ಟ್‌ವೇರ್ ಟಚ್‌ ರೆಸ್ಪಾನ್ಸ್‌ ಅನ್ನು ನೀಡಲಿದೆ.

ಪ್ರೊಸೆಸರ್‌ ಬಲವೇನು?

ಪ್ರೊಸೆಸರ್‌ ಬಲವೇನು?

ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಕ್ಸಿಜನ್ OS 12.1 ಜೊತೆಗೆ ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ರನ್‌ ಆಗಲಿದೆ. ಈ ವರ್ಷದ ಅಂತ್ಯದ ವೇಳೆಗೆ ಈ ಫೋನ್‌ OxygenOS 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌16GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಡ್ಯುಯಲ್ LED ಫ್ಲ್ಯಾಷ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಹೊಂದಿದ್ದು, ಇದು 119.9 ಡಿಗ್ರಿಗಳ ಫೀಲ್ಡ್‌-ವ್ಯೂನೊಂದಿಗೆ f/2.2 ಲೆನ್ಸ್ ಅನ್ನು ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ.

ಬ್ಯಾಟರಿ ಬ್ಯಾಕ್‌ಅಪ್‌ ಏನು?

ಬ್ಯಾಟರಿ ಬ್ಯಾಕ್‌ಅಪ್‌ ಏನು?

ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ 4800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 150W SUPERVOOC ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಈ ಚಾರ್ಜರ್ ಕೇವಲ 19 ನಿಮಿಷಗಳಲ್ಲಿ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸ್ಮಾರ್ಟ್ ಬ್ಯಾಟರಿ ಹೆಲ್ತ್ ಅಲ್ಗಾರಿದಮ್, ಬ್ಯಾಟರಿ ಹೀಲಿಂಗ್ ಟೆಕ್ನಾಲಜಿ, ದಕ್ಷತೆಯನ್ನು ಸುಧಾರಿಸಲು VFC ಟ್ರಿಕಲ್ ಚಾರ್ಜಿಂಗ್ ಆಪ್ಟಿಮೈಸೇಶನ್ ಅಲ್ಗಾರಿದಮ್, ಚಾರ್ಜಿಂಗ್ ನಿರ್ವಹಿಸಲು ಕಸ್ಟಮೈಸ್ ಮಾಡಿದ ಸ್ಮಾರ್ಟ್ ಚಿಪ್ ಮತ್ತು 13 ಟೆಂಪ್‌ರೇಚರ್‌ ಸೆನ್ಸಾರ್‌ ಒಳಗೊಂಡ ಬ್ಯಾಟರಿ-ಸಂಬಂಧಿತ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಇತರೆ ಫೀಚರ್ಸ್‌ಗಳೇನು?

ಇತರೆ ಫೀಚರ್ಸ್‌ಗಳೇನು?

ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.3, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್‌, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಒಳಗೊಂಡಿದೆ. ಬಯೋಮೆಟ್ರಿಕ್ ಭದ್ರತೆಗಾಗಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಮತ್ತು ಫೇಸ್ ಅನ್‌ಲಾಕ್ ಫೀಚರ್ಸ್‌ ಅನ್ನು ಒಳಗೊಂಡಿದೆ.

ವಿಶೇಷ ಫೀಚರ್ಸ್‌

ವಿಶೇಷ ಫೀಚರ್ಸ್‌

ಇನ್ನು ಈ ಸ್ಮಾರ್ಟ್‌ಫೋನ್‌ ಮುಂದಿನ ಪೀಳಿಗೆಯ 3D ಕೂಲಿಂಗ್ ಸಿಸ್ಟಂ ಜೊತೆಗೆ ಕ್ರಯೋವೆಲೋಸಿಟಿ ವೇಪರ್ ಚೇಂಬರ್ ಅನ್ನು ಹೊಂದಿದೆ. ಸಾಮಾನ್ಯ ಗ್ರ್ಯಾಫೈಟ್‌ಗೆ ಹೋಲಿಸಿದರೆ 50% ಸುಧಾರಿತ ಶಾಖದ ಪ್ರಸರಣವನ್ನು ನೀಡಲು ಸಿಸ್ಟಮ್ 3D ಗ್ರ್ಯಾಫೈಟ್ ಅನ್ನು ಬಳಸುತ್ತದೆ. ಗೇಮಿಂಗ್ ಅನ್ನು ಸುಗಮ ಮತ್ತು ಸ್ಥಿರವಾದ ಅನುಭವವನ್ನು ನೀಡುವುದಕ್ಕಾಗಿ ಈ ಫೋನ್‌ನಲ್ಲಿ ಹೈಪರ್‌ಬೂಸ್ಟ್ ಗೇಮಿಂಗ್ ಎಂಜಿನ್ ಅನ್ನು ಕೂಡ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒನ್‌ಪ್ಲಸ್‌ 10T ಸ್ಮಾರ್ಟ್‌ಫೋನ್‌ 8GB RAM ಮತ್ತು 128GB ಇಂಟರ್‌ ಸ್ಟೋರೇಜ್ ಮಾದರಿಗೆ 49,999ರೂ. ಬೆಲೆಯಲ್ಲಿ ಪ್ರಾರಂಭವಾಗುತ್ತದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 12GB RAM + 256GB ಸ್ಟೋರೇಜ್ ಮಾದರಿಗೆ 54,999ರೂ. ಬೆಲೆಯನ್ನು ಪಡೆದುಕೊಂಡಿದೆ. ಹಾಗೆಯೇ 16GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಯು 55,999ರೂ. ಬೆಲೆಯನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಜೇಡ್ ಗ್ರೀನ್ ಮತ್ತು ಮೂನ್‌ಸ್ಟೋನ್ ಬ್ಲಾಕ್ ಕಲರ್‌ ಆಯ್ಕೆಗಳಲ್ಲಿ ಬರಲಿದೆ. ಈ ಸ್ಮಾರ್ಟ್‌ಫೋನ್‌ ಇದೇ ಆಗಸ್ಟ್ 6 ರಂದು ಫಸ್ಟ್‌ ಸೇಲ್‌ ನಡೆಸಲಿದೆ ಎಂದು ಒನ್‌ಪ್ಲಸ್‌ ಕಂಪೆನಿ ಹೇಳಿಕೊಂಡಿದೆ.

Best Mobiles in India

English summary
OnePlus 10T With 150W Charging Launched in India: Specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+