ಒನ್‌ಪ್ಲಸ್ 11 5G ಗೆ ಬದಲಿಯಾಗಿ ನೀವು ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್‌ಫೋನ್‌ಗಳು!
ಇತ್ತೀಚಿಗೆ ಬಿಡುಗಡೆಯಾದ ಒನ್‌ಪ್ಲಸ್ 11 5G ಸ್ಮಾರ್ಟ್‌ಫೋನ್ ಭಾರಿ ಸದ್ದು ಮಾಡ್ತಿದೆ. ತನ್ನ ಅತ್ಯಾಕರ್ಷಕ ಫೀಚರ್ಸ್ ಹಾಗೂ ಸ್ಟೈಲಿಶ್ ಡಿಸೈನ್ ಮೂಲಕ ಗಮನಸೆಳೆದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಭಾರತದಲ್ಲಿ 8GB + 128GB ಸ್ಟೋರೇಜ್ ಆಯ್ಕೆಗೆ 56,999ರೂ.ಬೆಲೆಯನ್ನು ಹೊಂದಿದೆ. ಒಂದು ವೇಳೆ ಇದೆ ಬೆಲೆಯಲ್ಲಿ ಒನ್‌ಪ್ಲಸ್ ಬದಲಿಗೆ ಬೇರೆ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್ ಖರೀದಿಸುವ ಆಯ್ಕೆ ಸಿಕ್ಕರೆ ಹೇಗಿರಲಿದೆ. ಇದಕ್ಕೆ ಉತ್ತರ ಖಂಡಿತ ಬೇರೆ ಆಯ್ಕೆಗಳು ಲಭ್ಯವಿದೆ ಎನ್ನಬಹುದು.

ಹೌದು, ಒನ್‌ಪ್ಲಸ್ 11 5G ಸ್ಮಾರ್ಟ್‌ಫೋನ್ ಬದಲಿಗೆ ನಿಮ್ಮ ಮನಗೆಲ್ಲುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿವೆ. ಪ್ರೀಮಿಯಂ ಬೆಲೆಯಲ್ಲಿ ಒನ್‌ಪ್ಲಸ್ 11 5G ಗೆ ಪೈಪೋಟಿ ನೀಡುತ್ತಿರುವ ಹಾಗೂ ಒಂದೇ ತೆರನಾದ ಫೀಚರ್ಸ್‌ಗಳನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ಗಳು ಕೂಡ ದೊರೆಯಲಿವೆ. ಹಾಗಾದ್ರೆ ಭಾರತದಲ್ಲಿ ಒನ್‌ಪ್ಲಸ್ 11 5G ಸ್ಮಾರ್ಟ್‌ಫೋನ್‌ಗೆ ಬದಲಿಯಾಗಿ ನೀವು ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿದೆ.
ಐಕ್ಯೂ 11
ಐಕ್ಯೂ 11 ಸ್ಮಾರ್ಟ್‌ಫೋನ್ ಒನ್‌ಪ್ಲಸ್ 11 5G ಸ್ಮಾರ್ಟ್‌ಫೋನ್‌ಗೆ ಪ್ರಬಲ ಪೈಪೋಟಿ ನೀಡಬಲ್ಲ ಸ್ಮಾರ್ಟ್‌ಫೋನ್ ಆಗಿದೆ. ಒನ್‌ಪ್ಲಸ್ 11 5G ಮಾದರಿಯಲ್ಲಿಯೇ ಈ ಸ್ಮಾರ್ಟ್‌ಫೋನ್ ಕೂಡ ಸ್ನಾಪ್‌ಡ್ರಾಗನ್ 8 Gen 2SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.78 ಇಂಚಿನ ಪಂಚ್-ಹೋಲ್ ಸ್ಯಾಮ್‌ಸಂಗ್ E6 ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ GN5 ಸೆನ್ಸಾರ್ ಪಡೆದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ 8GB ಮತ್ತು 256GB ಆಯ್ಕೆಗೆ 59,999ರೂ. ಬೆಲೆಯನ್ನು ಹೊಂದಿದೆ.

ಮೊಟೊರೊಲಾ ಎಡ್ಜ್ 30 ಅಲ್ಟ್ರಾ
ಒನ್‌ಪ್ಲಸ್ 11 5G ಬದಲಿಗೆ ನೀವು ಆಯ್ಕೆ ಮಾಡಬಹುದಾದ ಉತ್ತಮ ಆಯ್ಕೆಗಳಲ್ಲಿ ಮೊಟೊರೊಲಾ ಎಡ್ಜ್ 30 ಅಲ್ಟ್ರಾ ಕೂಡ ಒಂದಾಗಿದೆ. ಈ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಪೋಲ್ಡ್ ಕರ್ವ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೆ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಸೆನ್ಸಾರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಫೋನ್ 8GB ಮತ್ತು 128GB ಆಯ್ಕೆಗೆ 54,999ರೂ.ಬೆಲೆಯನ್ನು ಹೊಂದಿದೆ.
ಗೂಗಲ್ ಪಿಕ್ಸೆಲ್ 7
ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್‌ಫೋನ್ ಒನ್‌ಪ್ಲಸ್ 11 5G ಬದಲಿಗೆ ಲಭ್ಯವಾಗುವ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಇನ್ನು ಗೂಗಲ್ ಪಿಕ್ಸೆಲ್ 7 ಸ್ಮಾರ್ಟ್‌ಫೋನ್ 6.32 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಟೆನ್ಸರ್ G2 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸಲಿದೆ.
ಈ ಸ್ಮಾರ್ಟ್‌ಫೋನ್ 8GB ಮತ್ತು 128GB ಆಯ್ಕೆಗೆ 56,999ರೂ. ಬೆಲೆಯನ್ನು ಪಡೆದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್ 6.1 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡೈನಾಮಿಕ್ ಅಮೋಲೆಡ್ 2X ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 48Hz ತನಕ ಇಳಿಸಬಹುದಾಗಿದೆ. ಇನ್ನು ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಟೆಕ್ಷನ್ ಅನ್ನು ಪಡೆದುಕೊಂಡಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ ಪ್ರಸ್ತುತ ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್‌ನಲ್ಲಿ 8GB ಮತ್ತು 128GB ಆಯ್ಕೆಗೆ 57,999ರೂ. ಬೆಲೆಯನ್ನು ಹೊಂದಿದೆ.
ಒನ್‌ಪ್ಲಸ್ 10 ಪ್ರೊ
ಒನ್‌ಪ್ಲಸ್ 11 ಬದಲಿಗೆ ನೀವು ಖರೀದಿಸಬಹುದಾದ ಸ್ಮಾರ್ಟ್‌ಫೋನ್‌ಗಳ ಸಾಲಿನಲ್ಲಿ ಒನ್‌ಪ್ಲಸ್ ಬ್ರ್ಯಾಂಡ್‌ನ ಒನ್‌ಪ್ಲಸ್ 10 ಪ್ರೊ ಫೋನ್ ಕೂಡ ಸೇರಿದೆ. ಈ ಸ್ಮಾರ್ಟ್‌ಫೋನ್ 6.7 ಇಂಚಿನ QHD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1Hz ಮತ್ತು 120Hz ನಡುವೆ ಡೈನಾಮಿಕ್ ರಿಫ್ರೆಶ್ ರೇಟ್ ಒಳಗೊಂಡಿದೆ. ಜೊತೆಗೆ 5,000mAh ಡ್ಯುಯಲ್ ಸೆಲ್ ಬ್ಯಾಟರಿಯನ್ನು ಹೊಂದಿದೆ. ಇದು ಹೊಸ ವೈರ್ಡ್ ಚಾರ್ಜಿಂಗ್ ಟೆಕ್ನಾಲಜಿ ಹೊಂದಿದ್ದು, 32 ನಿಮಿಷಗಳಲ್ಲಿ ಶೂನ್ಯದಿಂದ 100% ಚಾರ್ಜ್ ಮಾಡಲಿದೆ. ಆದರೆ ಈ ಸ್ಮಾರ್ಟ್‌ಫೋನ್ ಬೆಲೆ ಸ್ವಲ್ಪ ಹೆಚ್ಚಾಗಿದ್ದು, ಇದು 8GB ಮತ್ತು 128GB ಆಯ್ಕೆಗೆ 60,999ರೂ. ಬೆಲೆಯನ್ನು ಪಡೆದುಕೊಂಡಿದೆ.


Click it and Unblock the Notifications








