Home
ಸುದ್ದಿಜಾಲ

ಒನ್‌ಪ್ಲಸ್‌ 11 ಮೇಲೆ ಅಮೆಜಾನ್‌ನಲ್ಲಿ ಬಿಗ್‌ ಆಫರ್‌! ಫೋನ್‌ ಖರೀದಿಸಲು ಇಲ್ಲಿವೆ ಮುಖ್ಯ ಕಾರಣ?

ಬಿಡುಗಡೆ ಸಮಯದಲ್ಲಿ ಭಾರಿ ಸದ್ದು ಮಾಡಿದ್ದ ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್‌ ಇದೀಗ ಬಿಗ್‌ ಆಫರ್‌ ಪಡೆದುಕೊಂಡಿದೆ. ಜನಪ್ರಿಯ ಇ-ಕಾಮರ್ಸ್‌ ತಾಣ ಅಮೆಜಾನ್‌ನಲ್ಲಿ ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್‌ ನಿರೀಕ್ಷೆಗೂ ಮೀರಿದ ಡಿಸ್ಕೌಂಟ್‌ ನೀಡಲಾಗಿದೆ. ಜೊತೆಗೆ ನಿರ್ದಿಷ್ಟ ಬ್ಯಾಂಕ್‌ ಕಾರ್ಡ್‌ಗಳ ಮೂಲಕ ಹೆಚ್ಚುವರಿ ಆಫರ್‌ಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಹೌದು, ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್‌ ಅಮೆಜಾನ್‌ನಲ್ಲಿ ಬಿಗ್‌ ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಇದೀಗ ಮೂಲಬೆಲೆಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ಇದರಿಂದ ಒನ್‌ಪ್ಲಸ್‌ 11 ಅನ್ನು ರಿಯಾಯಿತಿಯಲ್ಲಿ ಖರೀದಿಸುವವರಿಗೆ ಬೆಸ್ಟ್‌ ಟೈಂ ಇದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಅನ್ನು ಯಾಕೆ ಖರೀದಿಸಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್‌ 11 ಮೇಲೆ ಅಮೆಜಾನ್‌ನಲ್ಲಿ ಬಿಗ್‌ ಆಫರ್‌! ಖರೀದಿಸಲು ಮುಖ್ಯ ಕಾರಣ?

ಒನ್‌ಪ್ಲಸ್‌ 11 ಮೇಲೆ ಏನೆಲ್ಲಾ ಆಫರ್‌
ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್‌ ಅನ್ನು ಪ್ರಸ್ತುತ ಅಮೆಜಾನ್‌ ನಲ್ಲಿ 56,998 ರೂಗಳ ಆರಂಭಿಕ ಬೆಲೆಯೊಂದಿಗೆ ಪಟ್ಟಿಮಾಡಲಾಗಿದೆ. ಈ ಸ್ಮಾರ್ಟ್‌ಫೋನ್‌ ಮೇಲೆ ಅಮೆಜಾನ್ 4,000 ರೂ.ಗಳ ಫ್ಲಾಟ್ ಡಿಸ್ಕೌಂಟ್ ಕೂಪನ್ ಅನ್ನು ನೀಡುತ್ತಿದೆ. ಇದರಿಂದ ಸ್ಮಾರ್ಟ್‌ಫೋನ್‌ ಬೆಲೆ 52,998 ರೂ.ಗೆ ಇಳಿಯಲಿದೆ. ಜೊತೆಗೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಹೆಚ್ಚುವರಿ 2,250 ರೂ. ರಿಯಾಯಿತಿಯೂ ಸಹ ಲಭ್ಯವಾಗುವುದಿರಂದ ಸ್ಮಾರ್ಟ್‌ಫೋನ್‌ ಅನ್ನು ನೀವು ಕೇವಲ 50,748 ರೂ.ಬೆಲೆಗೆ ಖರೀದಿಸಬಹುದಾಗಿದೆ.

ಒನ್‌ಪ್ಲಸ್‌ 11 ಫೋನ್‌ ಖರೀದಿಸುವುದಕ್ಕೆ ಪ್ರಮುಖ ಕಾರಣಗಳು
ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್‌ ಖರೀದಿಸುವುದಕ್ಕೆ ಪ್ರಮುಖ ಕಾರಣ ಇದರ ಕಾರ್ಯಕ್ಷಮತೆ. ಇದು ಪವರ್‌ಫುಲ್‌ ಸ್ನಾಪ್‌ಡ್ರಾಗನ್‌ 8 Gen 2 ಚಿಪ್‌ಸೆಟ್ ಅನ್ನು ಒಳಗೊಂಡಿದೆ. ಇದರಿಂದ ಬಹುಕಾರ್ಯಗಳನ್ನು ಮಾಡುವುದಕ್ಕೆ ಬೆಸ್ಟ್‌ ಎನಿಸಲಿದೆ. ಇದಲ್ಲದೆ ನಿಮ್ಮ ಸಾಫ್ಟ್‌ವೇರ್ ಅನುಭವವನ್ನು ವೈಯಕ್ತೀಕರಿಸಲು ನಿಮಗೆ ಸಾಕಷ್ಟು ಕಸ್ಟಮೈಸ್ ಮಾಡಬಹುದಾದ ಆಯ್ಕೆಗಳನ್ನು ಸಹ ಹೊಂದಿದೆ.

ಒನ್‌ಪ್ಲಸ್‌ 11 ಮೇಲೆ ಅಮೆಜಾನ್‌ನಲ್ಲಿ ಬಿಗ್‌ ಆಫರ್‌! ಖರೀದಿಸಲು ಮುಖ್ಯ ಕಾರಣ?

ಒನ್‌ಪ್ಲಸ್‌ 11 5G ಫೀಚರ್ಸ್‌ ಹೇಗಿದೆ?
ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಕ್ವಾಡ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇದು 1,440x3,216 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಈ ಡಿಸ್‌ಪ್ಲೇ 10 ಬಿಟ್ LTPO 3.0 ಅಮೋಲೆಡ್‌ ಸ್ಕ್ರೀನ್‌ ಹೊಂದಿದೆ. ಜೊತೆಗೆ 1,000Hz ವರೆಗಿನ ಟಚ್ ಸ್ಯಾಂಪ್ಲಿಂಗ್ ರೇಟ್‌ ಹಾಗೂ 525ppi ಪಿಕ್ಸೆಲ್ ಸಾಂದ್ರತೆಯನ್ನು ಬೆಂಬಲಿಸಲಿದೆ. ಇದರೊಂದಿಗೆ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಅನ್ನು ಪಡೆದುಕೊಂಡಿದೆ.

ಒನ್‌ಪ್ಲಸ್‌ 11 5G ಪ್ರೊಸೆಸರ್‌ ಯಾವುದು?
ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್‌ 13-ಆಧಾರಿತ OxygenOS 13 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 16GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ.

ಒನ್‌ಪ್ಲಸ್‌ 11 ಮೇಲೆ ಅಮೆಜಾನ್‌ನಲ್ಲಿ ಬಿಗ್‌ ಆಫರ್‌! ಖರೀದಿಸಲು ಮುಖ್ಯ ಕಾರಣ?

ಒನ್‌ಪ್ಲಸ್‌ 11 5G ಕ್ಯಾಮೆರಾ ಏನಿದೆ?
ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸಾರ್‌, ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ ಹಾಗೂ ಮೂರನೇ ಕ್ಯಾಮೆರಾ 32 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಅನ್ನು ಪಡೆದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಒನ್‌ಪ್ಲಸ್‌ 11 5G ಬ್ಯಾಟರಿ ಮತ್ತು ಇತರೆ
ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 100W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, Wi-Fi 7, ಬ್ಲೂಟೂತ್ 5.3, GPS , A-GPS, NFC, ಮತ್ತು USB 2.0 ಅನ್ನು ಬೆಂಬಲಿಸಲಿದೆ. ಜೊತೆಗೆ ಪ್ರಾಕ್ಸಿಮಿಟಿ, ಭೂಕಾಂತೀಯ, ಗೈರೊಸ್ಕೋಪ್ ಮತ್ತು ಆಂಬಿಯೆಂಟ್‌ ಲೈಟ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ.

Best Mobiles in India

English summary
OnePlus 11 Smartphone gets massive discount in amazon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+