Home
ಸುದ್ದಿಜಾಲ

ಸೈಲೆಂಟ್‌ ಆಗಿ ಲಾಂಚ್‌ ಆದ ಹೊಸ ಒನ್‌ಪ್ಲಸ್ ಫೋನ್‌‌; ಫೀಚರ್ಸ್‌ ಏನು?

ಒನ್‌ಪ್ಲಸ್ (OnePlus) ಫೋನ್‌ಗಳಿಗೆ ಭಾರತದಲ್ಲಿ ವಿಶೇ‍ಷ ಬೇಡಿಕೆ ಇದ್ದು, ಈ ನಡುವೆ ಸಾಕಷ್ಟು ಫೋನ್‌ಗಳು ಲಾಂಚ್‌ ಆಗಿವೆ. ಈಗ ಮತ್ತೊಂದು ಹೊಸ ಫೋನ್‌ ಅನ್ನು ಸೈಲೆಂಟ್‌ ಆಗಿ ಲಾಂಚ್‌ ಮಾಡಿದೆ. ಅಂದರೆ ಒನ್‌ಪ್ಲಸ್ 11R 5G ಸೋಲಾರ್ ರೆಡ್ ಎಡಿಶನ್ (OnePlus 11R 5G Solar Red Edition) ಅನ್ನು ಭಾರತದಲ್ಲಿ ಲಾಂಚ್‌ ಮಾಡಲಾಗಿದೆ.

ಹೌದು, ಒನ್‌ಪ್ಲಸ್ 11R 5G ಸೋಲಾರ್ ರೆಡ್ ಎಡಿಶನ್ ಅನ್ನು ಲಾಂಚ್ ಮಾಡಲಾಗಿದ್ದು, ಈ ಫೋನ್ ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಅತ್ಯಾಧುನಿಕ ಕಾರ್ಯಕ್ಷಮತೆಯ ಪ್ರೊಸೆಸರ್‌ ಸೇರಿದಂತೆ ವಿವಿಧ ಫೀಚರ್ಸ್‌ ಮೂಲಕ ಆಕರ್ಷಕವಾಗಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸೈಲೆಂಟ್‌ ಆಗಿ ಲಾಂಚ್‌ ಆದ ಹೊಸ ಒನ್‌ಪ್ಲಸ್ ಫೋನ್‌‌; ಫೀಚರ್ಸ್‌ ಏನು?

ಒನ್‌ಪ್ಲಸ್ 11R 5G ಸೋಲಾರ್ ರೆಡ್ ಎಡಿಶನ್ ಡಿಸ್‌ಪ್ಲೇ ವಿವರ: ಈ ಫೋನ್ 6.74 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 2772×1240 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹಾಗೂ 120 ಹರ್ಟ್ಸ್ ರೆಫ್ರೆಶ್ ರೇಟ್, 1450 ನಿಟ್ಸ್ ಬ್ರೈಟ್‌ನೆಸ್‌ ಆಯ್ಕೆ ಮೂಲಕ ಅತ್ಯುತ್ತಮ ಎನಿಸಿದೆ. ಈ ಮೂಲಕ ಬಳಕೆದಾರರು ಹೊಸ ಅನುಭವ ಪಡೆದುಕೊಳ್ಳಬಹುದಾಗಿದೆ.

ಒನ್‌ಪ್ಲಸ್ 11R 5G ಸೋಲಾರ್ ರೆಡ್ ಎಡಿಶನ್ ಪ್ರೊಸೆಸರ್‌ ಮಾಹಿತಿ: ಈ ಫೋನ್ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 + ಜನ್ 1 ಪ್ರೊಸೆಸರ್‌ ಬಲ ಹೊಂದಿದ್ದು, 18 GB RAM ಮತ್ತು 256 GB ಇಂಟರ್‌ ಸ್ಟೋರೇಜ್ ಸೌಲಭ್ಯ ನೀಡಲಾಗಿದೆ. ಇದರೊಂದಿಗೆ ಅಡ್ರಿನೋ 730 ಜಿಪಿಯು ಗ್ರಾಫಿಕ್ಸ್ ಕಾರ್ಡ್ ಬೆಂಬಲ ಈ ಫೋನ್‌ಗಿದ್ದು, ಅತ್ಯುತ್ತಮ ಕಾರ್ಯಕ್ಷಮತೆಯನ್ನು ನಿರೀಕ್ಷೆ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಆಕ್ಸಿಜನ್‌ ಓಎಸ್ 13 ಆಧಾರಿತ ಆಂಡ್ರಾಯ್ಡ 13 ಅನ್ನು ಈ ಫೋನ್‌ ರನ್‌ ಮಾಡಲಿದೆ.

ಒನ್‌ಪ್ಲಸ್ 11R 5G ಸೋಲಾರ್ ರೆಡ್ ಎಡಿಶನ್ ಕ್ಯಾಮೆರಾ ರಚನೆ: ಈ ಫೋನ್‌ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ 50 ಮೆಗಾಪಿಕ್ಸೆಲ್‌ ಪ್ರೈಮರಿ ಕ್ಯಾಮೆರಾ + 8 ಮೆಗಾಪಿಕ್ಸೆಲ್‌ ವೈಡ್‌ ಆಂಗಲ್‌ ಸೆನ್ಸರ್‌ + 2 ಮೆಗಾಪಿಕ್ಸೆಲ್‌ ಲೆನ್ಸ್ ನ ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿದೆ. ಇದರೊಂದಿಗೆ ವಿಡಿಯೋ ಕಾಲ್ ಹಾಗೂ ಸೆಲ್ಫಿ ಉದ್ದೇಶಕ್ಕೆ 16 ಮೆಗಾಪಿಕ್ಸೆಲ್‌ ಕ್ಯಾಮರಾ ಆಯ್ಕೆ ನೀಡಲಾಗಿದೆ.

ಒನ್‌ಪ್ಲಸ್ 11R 5G ಸೋಲಾರ್ ರೆಡ್ ಎಡಿಶನ್ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಫೋನ್ 100W ಸೂಪರ್ ವೂಕ್‌ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಅತ್ಯುತ್ತಮ ಬ್ಯಾಕಪ್‌ ಸಿಗಲಿದೆ. ಇದರೊಂದಿಗೆ ಸುಧಾರಿತ ವೈ-ಫೈ, ಬ್ಲೂಟೂತ್‌ ಹಾಗೂ ಇನ್ನಿತರೆ ಅಗತ್ಯ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.

ಒನ್‌ಪ್ಲಸ್ 11R 5G ಸೋಲಾರ್ ರೆಡ್ ಎಡಿಶನ್ ಬೆಲೆ ಹಾಗೂ ಲಭ್ಯತೆ: ಈ ಫೋನ್‌ಗೆ 45,999ರೂ.ಗಳನ್ನು ನಿಗದಿ ಮಾಡಲಾಗಿದ್ದು, ಒನ್‌ಪ್ಲಸ್‌ನ ಅಧಿಕೃತ ಸ್ಟೋರ್‌ ಹಾಗೂ ಅಮೆಜಾನ್‌ ಮೂಲಕ ಖರೀದಿ ಮಾಡಬಹುದಾಗಿದೆ. ಇದೇ ಅಕ್ಟೋಬರ್ 7ನೇ ತಾರೀಖಿನಿಂದ ಈ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ. ಮೊದಲು ಖರೀದಿ ಮಾಡುವ ಗ್ರಾಹಕರು 1000 ರೂ.ಗಳ ರಿಯಾಯಿತಿಯನ್ನು ಪಡೆಯಬಹುದಾಗಿದೆ.

ಅಂತೆಯೇ ಈ ಫೋನ್ ಅನ್ನು ಅಕ್ಟೋಬರ್ 8 ನೇ ತಾರೀಖಿನಂದು ಖರೀದಿ ಮಾಡುವ ಮೊದಲ ಗ್ರಾಹಕರಿಗೆ ನೋ ಕಾಸ್ಟ್ ಐಎಂಐ ಆಯ್ಕೆ ನೀಡಲಾಗುತ್ತದೆ. ಇದರೊಂದಿಗೆ ಎಕ್ಸ್‌ಚೇಂಜ್ ಕೊಡುಗೆ ಸಹ ಲಭ್ಯ ಇದ್ದು, ಈ ಫೋನ್ ಖರೀದಿಸುವ ಬಳಕೆದಾರರು 3000ರೂ.ವರೆಗೆ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಈ ಮೂಲಕ ಹೊಸ ಫೋನ್‌ ಅನ್ನು ಆಫರ್‌ನೊಂದಿಗೆ ಖರೀದಿ ಮಾಡಬಹುದಾಗಿದೆ.

Best Mobiles in India

English summary
OnePlus 11R 5G Solar Red Edition has been launched, this phone is seen in red color and is attractive with various features including cutting edge performance, high performance chipset
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+