Home
ಸುದ್ದಿಜಾಲ

OnePlus 12: ಭಾರತದಲ್ಲಿ ಒನ್‌ಪ್ಲಸ್‌ 12 ಲಾಂಚ್‌ ಡೇಟ್‌ ಬಹಿರಂಗ! ಬೆಲೆ ಎಷ್ಟಿರಲಿದೆ?

ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌ ಈಗಾಗಲೇ ಚೀನಾದಲ್ಲಿ ಧೂಳೆಬ್ಬಿಸಿದೆ. Sony LYT-808 ಸೆನ್ಸಾರ್‌ ಕ್ಯಾಮೆರ ಮೂಲಕ ಗಮನಸೆಳೆದಿರುವ ಒನ್‌ಪ್ಲಸ್‌ 12 ಇದೀಗ ಭಾರತಕ್ಕೂ ಕಾಲಿಡುವುದಕ್ಕೆ ಸಿದ್ಧತೆ ನಡೆಸಿದೆ. ಒನ್‌ಪ್ಲಸ್‌ ಕಂಪೆನಿಯ ಅಧಿಕೃತ ಮಾಹಿತಿಯಂತೆ ಈ ಸ್ಮಾರ್ಟ್‌ಫೋನ್‌ ಜನವರಿ 23 ರಂದು ಬಿಡುಗಡೆ ಆಗುವುದು ಕನ್ಫರ್ಮ್‌ ಆಗಿದೆ.

ಹೌದು, ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಹೊಸ ವರ್ಷಕ್ಕೆ ಕಾಲಿಡುವುದು ಪಕ್ಕಾ ಆಗಿದೆ. ಈ ಸ್ಮಾರ್ಟ್‌ಫೋನ್‌ ಜನವರಿ 23 ರಂದು ಸಂಜೆ 7:30 ಕ್ಕೆ ಅನಾವರಣಗೊಳ್ಳಲಿದೆ. ಇದು ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 8 gen 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ನೀಡಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಹೊಂದಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

OnePlus 12: ಭಾರತದಲ್ಲಿ ಒನ್‌ಪ್ಲಸ್‌ 12 ಲಾಂಚ್‌ ಡೇಟ್‌ ಬಹಿರಂಗ! ಬೆಲೆ ಎಷ್ಟಿದೆ?

ಒನ್‌ಪ್ಲಸ್‌ 12 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌ 6.82 ಇಂಚಿನ ಫ್ಲೂಯಿಡ್ AMOLED ಟೆಕ್ನಾಲಜಿ ಒಳಗೊಂಡ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1440 x 3168 ಪಿಕ್ಸೆಲ್‌ ಸ್ಕ್ರೀನ್‌ ಸೂಪರ್ ಕ್ರಿಸ್ಪ್ ರೆಸಲ್ಯೂಶನ್ ಅನ್ನು ನೀಡುತ್ತದೆ. ಇದು 120Hz ರಿಫ್ರೆಶ್ ರೇಟ್‌ ಬೆಂಬಲದೊಂದಿಗೆ ಬರಲಿದ್ದು, HDR10+ ಅನ್ನು ಸಹ ಬೆಂಬಲಿಸುತ್ತದೆ. ಇದರ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಹೊಂದಿದ್ದು, ಗೀರುಗಳು ಮತ್ತು ಹನಿಗಳ ವಿರುದ್ಧ ಬಾಳಿಕೆಯನ್ನು ನೀಡಲಿದೆ.

ಒನ್‌ಪ್ಲಸ್‌ 12 ಪ್ರೊಸೆಸರ್‌ ಯಾವುದು?
ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 Gen 3 SoC ಪ್ರೊಸೆಸರ್‌ ವೇಗದೊಂದಿಗೆ ಬರಲಿದೆ. ಇದು 5nm ಪ್ರಕ್ರಿಯೆಯನ್ನು ನೀಡಲಿದ್ದು, ಕ್ರಿಯೋ 780 ಆರ್ಕಿಟೆಕ್ಚರ್ ಅನ್ನು ಒಳಗೊಂಡಿರುವ CPU, 3.2GHz ನಲ್ಲಿ ಪ್ರೈಮ್ ಕೋರ್ ಅನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 13 ಆಧಾರಿತ OxygenOS 13ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB, 16GB RAM ಮತ್ತು 256GB, 24GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ವೇರಿಯೆಂಟ್‌ ಆಯ್ಕೆಗಳಲ್ಲಿ ಬರಲಿದೆ.

OnePlus 12: ಭಾರತದಲ್ಲಿ ಒನ್‌ಪ್ಲಸ್‌ 12 ಲಾಂಚ್‌ ಡೇಟ್‌ ಬಹಿರಂಗ! ಬೆಲೆ ಎಷ್ಟಿದೆ?

ಒನ್‌ಪ್ಲಸ್‌ 12 ಕ್ಯಾಮೆರಾ ಸೆಟ್‌ಅಪ್‌ ಏನಿದೆ?
ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಸೆನ್ಸಾರ್‌, ಎರಡನೇ ಕ್ಯಾಮೆರಾ 48MP ಅಲ್ಟ್ರಾವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 64MP ಟೆಲಿಫೋಟೋ ಲೆನ್ಸ್‌ 2x ಆಪ್ಟಿಕಲ್ ಜೂಮ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್‌ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಒನ್‌ಪ್ಲಸ್‌ 12 ಬ್ಯಾಟರಿ ಮತ್ತು ಇತರೆ
ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌ 5400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 100W ಸೂಪರ್‌ವೂಕ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಕೇವಲ 25 ನಿಮಿಷಗಳಲ್ಲಿ 0 ರಿಂದ 100% ವರೆಗೆ ಚಾರ್ಜ್‌ ಮಾಡಲಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ, Wi-Fi 6E, ಬ್ಲೂಟೂತ್ 5.3, NFC, USB-C 3.2 Gen 2, GPS, GLONASS ಅನ್ನು ಬೆಂಬಲಿಸಲಿದೆ. ಇದಲ್ಲದೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌, ಅಕ್ಸಿಲೆರೊಮೀಟರ್, ಗೈರೊಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸಾರ್‌, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಇ-ಕಾಪಾಸ್‌ ಹೊಂದಿದೆ.

OnePlus 12: ಭಾರತದಲ್ಲಿ ಒನ್‌ಪ್ಲಸ್‌ 12 ಲಾಂಚ್‌ ಡೇಟ್‌ ಬಹಿರಂಗ! ಬೆಲೆ ಎಷ್ಟಿದೆ?

ಒನ್‌ಪ್ಲಸ್‌ 12 ಬೆಲೆ ಮತ್ತು ಲಭ್ಯತೆ
ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಯಾವ ಬೆಲೆಯಲ್ಲಿ ಬರಲಿದೆ ಅನ್ನೊದು ಇನ್ನು ತಿಳಿದುಬಂದಿಲ್ಲ. ಆದರೆ ಚೀನಾದಲ್ಲಿ ಇದರ 12GB RAM +256GB ಸ್ಟೋರೇಜ್ ಆಯ್ಕೆಗೆ CNY 4,299 (ಸುಮಾರು 50,700ರೂ)ಬೆಲೆ ಹೊಂದಿದೆ. ಇನ್ನು 16GB+512GB ಆಯ್ಕೆಯನ್ನು CNY 4,799 (ಅಂದಾಜು 56,600ರೂ) ಮತ್ತು 16GB+1TB ರೂಪಾಂತರದ ಆಯ್ಕೆಯು CNY 5,299 (ಸುಮಾರು 62,500ರೂ)ಬೆಲೆಯಲ್ಲಿದೆ. ಇದನ್ನು ಜೇಡ್ ಬ್ಲಾಕ್, ಆಸ್ಟ್ರಲ್ ಗ್ರೀನ್ ಮತ್ತು ಮಿಸ್ಟಿ ವೈಟ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
OnePlus 12 India launch date revealed: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+