ಭಾರತದಲ್ಲಿ ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ ಬೆಲೆ ವಿವರ ಬಹಿರಂಗ! ಫೀಚರ್ಸ್ ನಿರೀಕ್ಷೆ ಏನು?
ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ 'ಸ್ಮೂತ್ ಬಿಯಾಂಡ್ ಬಿಲೀಫ್' ಈವೆಂಟ್ ಮೂಲಕ ಭಾರತಕ್ಕೆ ಎಂಟ್ರಿ ನೀಡಲು ಸಿದ್ಧವಾಗಿದೆ. ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಇದೇ ಜನವರಿ 23ಕ್ಕೆ ಲಾಂಚ್ ಆಗುವುದು ಪಕ್ಕಾ ಆಗಿದೆ. ಇದೀಗ ಬಿಡುಗಡೆಗೂ ಮುನ್ನವೇ ಫೋನ್‌ನ ಬೆಲೆ ವಿವರಗಳು ಬಹಿರಂಗವಾಗಿದ್ದು, ಟೆಕ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಹೌದು, ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ ಬೆಲೆ ವಿವರ ಬಹಿರಂಗವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 Gen 3 SoC ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 5,400mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 100W ವೈರ್ಡ್ SuperVOOC ಚಾರ್ಜಿಂಗ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ನೊಂದಿಗೆ ಬರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಒನ್‌ಪ್ಲಸ್ 12 ಫೋನ್ ನಿರೀಕ್ಷಿತ ಬೆಲೆ ಏನು?
ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ 12GB RAM ಹೊಂದಿರುವ ಮೂಲ ರೂಪಾಂತರಕ್ಕೆ 64,999ರೂ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಇದರ 16GB RAM ಮಾದರಿಯು 69,999ರೂ ಬೆಲೆಯಲ್ಲಿ ಇರಲಿದೆ ಎಂದು ಅಂದಾಜಿಸಾಗಿದೆ. ಇನ್ನು ಸ್ಮಾರ್ಟ್‌ಫೋನ್ ಇದೇ ಜನವರಿ 30 ರಿಂದ ಮಾರಾಟವಾಗಲಿದೆ. ಆದರೆ ಫೆಬ್ರವರಿಯಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಹೇಳಲಾಗುತ್ತದೆ.
ಒನ್‌ಪ್ಲಸ್ 12 ಫೀಚರ್ಸ್ ಹೇಗಿದೆ?
OnePlus 12 ಸ್ಮಾರ್ಟ್‌ಫೋನ್ 1,440 x 3,168 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.82 ಇಂಚಿನ QHD+ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದು 120Hz ನಡುವಿನ ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ. ಇದಲ್ಲದೆ ಡಿಸ್‌ಪ್ಲೇ 4,500 ನಿಟ್ಸ್ ಬ್ರೈಟ್‌ನೆಸ್ ಬೆಂಬಲವನ್ನು ಸಹ ನೀಡಲಿದೆ. ಇನ್ನು ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 3SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ ColorOS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 24GB RAM ಮತ್ತು 1TB ಇಂಟರ್ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯಲ್ಲಿ ಬರಲಿದೆ.

ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್ ಹ್ಯಾಸೆಲ್ಬ್ಲಾಡ್-ಟ್ಯೂನ್ಡ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ರಚನೆಯಲ್ಲಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಇರಲಿದೆ. ಎರಡನೇ ಕ್ಯಾಮೆರಾ 64 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹೊಂದಿರಲಿದ್ದು, ಮೂರನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನಲ್ಲಿರಲಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 100W SuperVOOC ಚಾರ್ಜಿಂಗ್ 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 5,400mAh ಬ್ಯಾಟರಿಯನ್ನು ಹೊಂದಿರಲಿದೆ.

ಇತರೆ ಆಯ್ಕೆಗಳು
ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.4, GPS, NFC, ಮತ್ತು USB ಟೈಪ್-C ಪೋರ್ಟ್ ಹೊಂದಿದೆ. ಇದಲ್ಲದೆ ಗೈರೊಸ್ಕೋಪ್, ಅಕ್ಸಿಲೆರೊಮೀಟರ್, ಮ್ಯಾಗ್ನೆಟೋಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್ ಮತ್ತು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿರಲಿದೆ.
ಇದಲ್ಲದೆ ಒನ್‌ಪ್ಲಸ್ ತನ್ನ ಒನ್‌ಪ್ಲಸ್ 12R ನಾಲ್ಕನೇ ತಲೆಮಾರಿನ LTPO 120Hz ProXDR ಡಿಸ್‌ಪ್ಲೇಯೊಂದಿಗೆ ಬರಲಿದೆ ಎಂದು ಬಹಿರಂಗಪಡಿಸಿದೆ. ಅದಾಗ್ಯೂ ಕಂಪನಿಯು ಡಿಸ್‌ಪ್ಲೇ ಗಾತ್ರವನ್ನು ದೃಢೀಕರಿಸಿಲ್ಲ. ಆದರೆ ಸೋರಿಕೆ ಮಾಹಿತಿ ಪ್ರಕಾರ ಒನ್‌ಪ್ಲಸ್ 12R 6.78 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಎಂಬ ಮಾಹಿತಿ ಇದೆ. ಇನ್ನು ಈ LTPO ಡಿಸ್‌ಪ್ಲೇ ಬ್ಯಾಟರಿ ಅವಧಿಯನ್ನು ಉಳಿಸುವ ಕೆಲಸ ಮಾಡುತ್ತದೆ. ಅಂದರೆ ಡಿಸ್‌ಪ್ಲೇ ಆಟೋಮ್ಯಾಟಿಕ್ ಆಗಿ ರಿಫ್ರೆಶ್ ರೇಟ್ ಅನ್ನು ಸೆಟ್ ಮಾಡಿಕೊಳ್ಳುವ ಕೆಲಸ ಮಾಡುತ್ತದೆ.


Click it and Unblock the Notifications








