Home
ಸುದ್ದಿಜಾಲ

ಒನ್‌ಪ್ಲಸ್‌ 12 ಬ್ಯಾಟರಿ ಸಾಮರ್ಥ್ಯ ಬಹಿರಂಗ! ಕ್ಷಣಾರ್ಧದಲ್ಲಿ ಫುಲ್‌ ಚಾರ್ಜಿಂಗ್‌!

ಬಹು ನಿರೀಕ್ಷಿತ ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌ ಎಂಟ್ರಿಗೆ ಕೆಲ ದಿನಗಳಷ್ಟೇ ಬಾಕಿಯಿದೆ. ಇದೆ ಸಂದರ್ಭದಲ್ಲಿ ಒನ್‌ಪ್ಲಸ್‌ ಕಂಪೆನಿ ತನ್ನ ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌ ಬ್ಯಾಟರಿ ಸಾಮರ್ಥ್ಯದ ವಿವರಗಳನ್ನು ಬಹಿರಂಗಪಡಿಸಿದೆ. ಅಂದರೆ ಬ್ಯಾಟರಿ, ಚಾರ್ಜಿಂಗ್ ಮತ್ತು ಕನೆಕ್ಟಿವಿಟಿ ಆಯ್ಕೆಗಳ ವಿವರಗಳನ್ನು ಕಂಪನಿಯು ದೃಢಪಡಿಸಿದೆ.

ಹೌದು, ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನಿನ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಇವುಗಳನ್ನು ಧೃಡಪಡಿಸುವ ಲೈವ್ ಇಮೇಜ್‌ಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಈ ಇಮೇಜ್‌ಗಳನ್ನು ಪೇಲ್ ಗ್ರೀನ್ ಮತ್ತು ವೈಟ್ ಬಣ್ಣದ ಆಯ್ಕೆಗಳಲ್ಲಿ ಕಾಣಬಹುದಾಗಿದೆ. ಹಾಗಾದ್ರೆ ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌ನ ಬ್ಯಾಟರಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್‌ 12 ಬ್ಯಾಟರಿ ಸಾಮರ್ಥ್ಯ ಬಹಿರಂಗ! ಕ್ಷಣಾರ್ಧದಲ್ಲಿ ಫುಲ್‌ ಚಾರ್ಜಿಂಗ್‌!

ಒನ್‌ಪ್ಲಸ್‌ 12 ಬ್ಯಾಟರಿ ವಿಶೇಷ
ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌ 5,400mAh ಬ್ಯಾಟರಿಯನ್ನು ಒಳಗೊಂಡಿರಲಿದೆ. ಇದು 100W ವೈರ್ಡ್ SuperVOOC ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ ಎಂದು ಕಂಪನಿಯು Weibo ಪೋಸ್ಟ್‌ನಲ್ಲಿ ದೃಢಪಡಿಸಿದೆ. ಅಂದರೆ ಈ ಸ್ಮಾರ್ಟ್‌ಫೋನ್‌ ವಾಯರ್‌ಲೆಸ್‌ ಚಾರ್ಜಿಂಗ್‌ ಅನ್ನು ಸಹ ಬೆಂಬಲಿಸಲಿದೆ ಅನ್ನೊದು ಕನ್ಫರ್ಮ್‌ ಆಗಿದೆ. ಇದನ್ನು ವೈರ್ಡ್ ಚಾರ್ಜಿಂಗ್‌ನಲ್ಲಿ ಚಾರ್ಜ್‌ ಮಾಡಿದರೆ 26 ನಿಮಿಷಗಳಲ್ಲಿ 0 ರಿಂದ 100% ವರೆಗೆ ಚಾರ್ಜ್ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಒನ್‌ಪ್ಲಸ್‌ 12 ವಿಶೇಷತೆ ಏನು?
ಒನ್‌ಪ್ಲಸ್‌ 12 "ಮಲ್ಟಿ-ಫಂಕ್ಷನಲ್ ಇನ್ಫ್ರಾರೆಡ್ ರಿಮೋಟ್ ಕಂಟ್ರೋಲ್ ಫಂಕ್ಷನ್" ಹೊಂದಿದೆ. ಇದರಿಂದ ಬಳಕೆದಾರರು ತಮ್ಮ ಹ್ಯಾಂಡ್‌ಸೆಟ್‌ ಮೂಲಕವೇ ಗೃಹೋಪಯೋಗಿ ಉಪಕರಣಗಳನ್ನು ನಿಯಂತ್ರಿಸಬಹುದು ಎಂದು ಒನ್‌ಪ್ಲಸ್‌ ಸಂಸ್ಥೆ ಹೇಳಿದೆ. ಜೊತೆಗೆ ಈ ಫೋನ್ "ಆಲ್-ರೀಜನ್ ಮಲ್ಟಿ-ಫಂಕ್ಷನಲ್ NFC" ನೊಂದಿಗೆ ಬರಲಿದ್ದು, ಹೊಸ ಲೋ-ಎನರ್ಜಿಯ ಬ್ಲೂಟೂತ್ 5.4 ಅನ್ನು ಬೆಂಬಲಿಸುತ್ತದೆ.

ಒನ್‌ಪ್ಲಸ್‌ 12 ಬ್ಯಾಟರಿ ಸಾಮರ್ಥ್ಯ ಬಹಿರಂಗ! ಕ್ಷಣಾರ್ಧದಲ್ಲಿ ಫುಲ್‌ ಚಾರ್ಜಿಂಗ್‌!

ಒನ್‌ಪ್ಲಸ್‌ 12 ಡಿಸ್‌ಪ್ಲೇ ವಿಶೇಷ
ಇನ್ನು ಸೋರಿಕೆಯಾಗಿರುವ ಲೈವ್‌ ಇಮೇಜ್‌ಗಳ ಪ್ರಕಾರ ಈ ಸ್ಮಾರ್ಟ್‌ಫೋನ್‌ 6.82 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ. ಇದು ಈಗಾಗಲೇ ಡಿಸ್‌ಪ್ಲೇಮೇಟ್‌ ನಿಂದ A+ ಪ್ರಮಾಣೀಕರಣವನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಇದು ಡಿಸ್ಪ್ಲೇಮೇಟ್ A+ ರೇಟಿಂಗ್ ಪಡೆಯುವ ಮೊದಲ 2K ರೆಸಲ್ಯೂಶನ್ ಡಿಸ್‌ಪ್ಲೇ ಇದಾಗಿದೆ ಎನ್ನಲಾಗಿದೆ. ಇದರಿಂದ ಡಿಸ್‌ಪ್ಲೇ ಸ್ಕ್ರೀನ್‌ಗಳು ಬ್ರೈಟ್‌ನೆಸ್‌, ಐ ಪ್ರೊಟೆಕ್ಷನ್‌ ಅನ್ನು ನೀಡಲಿದೆ ಎಂದು ಒನ್‌ಪ್ಲಸ್‌ ಕಂಪೆನಿ ಹೇಳಿಕೊಂಡಿದೆ. ಈ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇಯಲ್ಲಿ ಓರಿಯೆಂಟಲ್ ಸ್ಕ್ರೀನ್‌ಗಳು ಮಲ್ಟಿ-ಚಾನೆಲ್ ಲೋಡ್ ಕಡಿತ ಟೆಕ್ನಾಲಜಿಯನ್ನು ಹೊಂದಿವೆ.

ಒನ್‌ಪ್ಲಸ್ 12 ಪ್ರೊಸೆಸರ್‌ ಮಾಹಿತಿ
ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 3 SoC ಪ್ರೊಸೆಸರ್‌ ಹೊಂದಿರಲಿದೆ. ಇದು ಆಂಡ್ರಾಯ್ಡ್‌ 14-ಆಧಾರಿತ ColorOS 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB + 512GB, 16GB + 1TB, ಮತ್ತು 24GB + 1TB ಸ್ಟೋರೇಜ್‌ ವೇರಿಯೆಂಟ್‌ ಆಯ್ಕೆಗಳಲ್ಲಿ ಬರಲಿದೆ ಎಂದು ನಿರೀಕ್ಷೆ ಇಡಲಾಗಿದೆ.

ಒನ್‌ಪ್ಲಸ್‌ 12 ಬ್ಯಾಟರಿ ಸಾಮರ್ಥ್ಯ ಬಹಿರಂಗ! ಕ್ಷಣಾರ್ಧದಲ್ಲಿ ಫುಲ್‌ ಚಾರ್ಜಿಂಗ್‌!

ಒನ್‌ಪ್ಲಸ್ 12 ಕ್ಯಾಮೆರಾ ಸೆಟ್‌ಅಪ್‌ ಏನಿರಲಿದೆ?
ಒನ್‌ಪ್ಲಸ್ 12 ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಪಡೆದಿರುವ ನಿರೀಕ್ಷೆಯಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ IMX966 ಸೆನ್ಸಾರ್‌, 84° ಫೀಲ್ಡ್ ಆಫ್ ವ್ಯೂ ಹೊಂದಿರಲಿದೆ. ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೋನಿ IMX581 ಸೆನ್ಸಾರ್‌ ಹಾಗೂ ಮೂರನೇ ಕ್ಯಾಮೆರಾ 64 ಮೆಗಾಪಿಕ್ಸೆಲ್‌ OmniVision OV64B ಸೆನ್ಸಾರ್ ಇರಲಿದೆ. ಇದರ ಸೆಲ್ಫಿ ಕ್ಯಾಮೆರಾ ವಿವರಗಳು ಕೂಡ ಬಹಿರಂಗವಾಗಿಲ್ಲ.

Best Mobiles in India

English summary
OnePlus 12 Smartphone Battery Details Confirmed; Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+