Home
ಸುದ್ದಿಜಾಲ

BGMI ಮಾಸ್ಟರ್ಸ್ ಸೀಸನ್ 4 ಗೆ ಆಯ್ಕೆಯಾದ OnePlus ಫೋನ್ ಯಾವುದು ನೋಡಿ!

ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ಗೇಮಿಂಗ್ ಸಮುದಾಯಕ್ಕೆ ಒಂದು ಮಹತ್ವದ ಸುದ್ದಿಯಿದೆ. ಮುಂಬರುವ BGMI ಮಾಸ್ಟರ್ಸ್ ಸರಣಿಯ (BGMS) ಸೀಸನ್ 4 ರಲ್ಲಿ, OnePlus 13 ಅಧಿಕೃತ ಸ್ಮಾರ್ಟ್‌ಫೋನ್ ಆಗಿ ಕಾರ್ಯನಿರ್ವಹಿಸಲಿದೆ.! ಹೌದು, BGMI ಮಾಸ್ಟರ್ಸ್ ಸರಣಿಯ (BGMS) ಸೀಸನ್ 4 ಪಂದ್ಯಾವಳಿಗೆ ನೋಡ್ವಿನ್ ಗೇಮಿಂಗ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ OnePlus ಘೋಷಿಸಿದೆ. ಕಂಪನಿಯು ಕೇವಲ ಅಧಿಕೃತ ಸ್ಮಾರ್ಟ್‌ಫೋನ್ ಪಾಲುದಾರ ಮಾತ್ರವಲ್ಲದೆ, ಈ ಬೃಹತ್ ಇಸ್ಪೋರ್ಟ್ಸ್ ಈವೆಂಟ್‌ಗೆ ಶೀರ್ಷಿಕೆ ಪ್ರಾಯೋಜಕತ್ವ ಕೂಡ ಹೊಂದಿದೆ.

2022 ರಲ್ಲಿ ಪ್ರಾರಂಭವಾದ BGMI ಮಾಸ್ಟರ್ಸ್ ಆಫ್‌ಲೈನ್ ಇಸ್ಪೋರ್ಟ್ಸ್ ಪಂದ್ಯಾವಳಿಯು ದೇಶದಲ್ಲಿ ಗಮನಾರ್ಹ ಯಶಸ್ಸನ್ನು ಕಂಡಿದೆ. ಆದಾಗ್ಯೂ, ನೋಡ್ವಿನ್ ಗೇಮಿಂಗ್ ಇನ್ನೂ ನಾಲ್ಕನೇ ಸೀಸನ್‌ನ ನಿಖರ ದಿನಾಂಕಗಳನ್ನು ಘೋಷಿಸಿಲ್ಲ. ಆದರೆ, ಗುರುವಾರದಂದು OnePlus ಕಂಪೆನಯು BGMS ಸೀಸನ್ 4 ರ ಅಧಿಕೃತ ಸ್ಮಾರ್ಟ್‌ಫೋನ್ ಆಗಿ OnePlus 13 ರ ಪಾತ್ರವನ್ನು ದೃಢಪಡಿಸಿದೆ. ಈ ಪ್ರಬಲ ಸಾಧನವು ಕ್ರಾಫ್ಟನ್‌ನ ಜನಪ್ರಿಯ ಬ್ಯಾಟಲ್ ರಾಯಲ್ ಆಟವಾದ BGMI ಯ ಆಕರ್ಷಕ ಪಂದ್ಯಗಳನ್ನು ನಡೆಸಲು ಸೂಕ್ತವಾದ ವೇದಿಕೆಯನ್ನು ಒದಗಿಸಲಿದೆ ಎಂದು ಕಂಪೆನಿಯು ಮಾಹಿತಿ ನೀಡಿದೆ.

BGMS ಒಂದು ಲೀಗ್ ಹಂತವನ್ನು ಒಳಗೊಂಡಿರುತ್ತದೆ, ಅಲ್ಲಿ ತಂಡಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ. ನಂತರ, ಬೃಹತ್ ಗ್ರ್ಯಾಂಡ್ ಫೈನಲ್ ಹಂತವು ಗಣನೀಯವಾಗಿ ದೊಡ್ಡ ಬಹುಮಾನ ನಿಧಿಯನ್ನು ಹೊಂದಿರುತ್ತದೆ. ಕಳೆದ ವರ್ಷ, ಆಟಗಾರರು ಒಟ್ಟು 1.5 ಕೋಟಿ ರೂ.ಗಳ ಬಹುಮಾನಕ್ಕಾಗಿ ಸ್ಪರ್ಧಿಸಿದ್ದರು. ಈ ವರ್ಷವೂ ದೊಡ್ಡ ಮೊತ್ತದ ಬಹುಮಾನ ನಿಧಿ ನಿರೀಕ್ಷಿಸಲಾಗಿದೆ. ನೋಡ್ವಿನ್ ಗೇಮಿಂಗ್ ಮತ್ತು ಸ್ಟಾರ್ ಸ್ಪೋರ್ಟ್ಸ್ ನಡುವಿನ ಪಾಲುದಾರಿಕೆಯು ಪಂದ್ಯಾವಳಿಯನ್ನು ಟಿವಿ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಹೆಚ್ಚಿನ ಪ್ರೇಕ್ಷಕರಿಗೆ ತಲುಪುತ್ತದೆ.

BGMI ಮಾಸ್ಟರ್ಸ್ ಸೀಸನ್ 4 ಗೆ ಆಯ್ಕೆಯಾದ OnePlus ಫೋನ್ ಯಾವುದು ನೋಡಿ!

ಇತ್ತ OnePlus 13 ಫೋನನ್ನು 2025 ರ ಆರಂಭದಲ್ಲಿ ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಕಂಪನಿಯ ಪ್ರಮುಖ ಸ್ಮಾರ್ಟ್‌ಫೋನ್ ಆಗಿ ಬಿಡುಗಡೆ ಮಾಡಲಾಯಿತು. Snapdragon 8 Elite ಚಿಪ್‌ಸೆಟ್ ಅನ್ನು ಹೊಂದಿರುವ ಈ ಫೋನ್ ತನ್ನ ಪ್ರಬಲ ವೈಶಿಷ್ಟ್ಯಗಳೊಂದಿಗೆ ತಕ್ಷಣವೇ ಗಮನ ಸೆಳೆಯಿತು. ಇದು ಗೇಮಿಂಗ್‌ಗೆ ಅಗತ್ಯವಿರುವ ಉನ್ನತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಸುಗಮ ಗೇಮಿಂಗ್ ಅನುಭವವನ್ನು ಖಾತ್ರಿಪಡಿಸುವ 24GB ವರೆಗೆ RAM ಮತ್ತು 1TB ವರೆಗೆ ಮೆಮೊರಿ ಬೆಂಬಲಿಸುವ ಇದು ಆಟಗಾರರಿಗೆ ಯಾವುದೇ ಕಾರ್ಯಕ್ಷಮತೆಯ ಮಿತಿಯಿಲ್ಲದೆ ಆಟವಾಡಲು ಅನುವು ಮಾಡಿಕೊಡುತ್ತದೆ.

OnePlus 13 ಫೋನ್ ಈ ಕೆಳಗಿನ ಪ್ರಮುಖ ಫೀಚರ್ಸ್ ಹೊಂದಿದೆ.
6.82-ಇಂಚಿನ 120Hz LTPO 4.1 OLED ಪರದೆಯನ್ನು 4,500nits ವರೆಗಿನ ಗರಿಷ್ಠ ಹೊಳಪು ಮತ್ತು ಸೆರಾಮಿಕ್ ಗಾರ್ಡ್ ರಕ್ಷಣೆಯೊಂದಿಗೆ ಹೊಂದಿದೆ.
ಫೋನ್ ಕಂಪನಿಯ OxygenOS 15 ಸ್ಕಿನ್‌ನೊಂದಿಗೆ Android 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ನಾಲ್ಕು ವರ್ಷಗಳ Android OS ಅಪ್‌ಗ್ರೇಡ್‌ಗಳು ಮತ್ತು ಆರು ವರ್ಷಗಳವರೆಗೆ ಭದ್ರತಾ ನವೀಕರಣಗಳನ್ನು ಪಡೆಯುವ ನಿರೀಕ್ಷೆಯಿದೆ,
ಕ್ಯಾಮೆರಾ ವಿಭಾಗದಲ್ಲಿ, ನ 50-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ವಿಭಾಗದಲ್ಲಿ, ಡ್ಯುಯಲ್-ಸೆಲ್ 6,000mAh ಬ್ಯಾಟರಿ ಜೊತೆಗೆ 100W (ವೈರ್ಡ್) ಮತ್ತು 50W (ವೈರ್‌ಲೆಸ್) ನಲ್ಲಿ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ.

OnePlus 13 ಸ್ಮಾರ್ಟ್‌ಫೋಣಿನಲ್ಲಿನ ಪ್ರಬಲ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಂಯೋಜನೆಯು BGMS ಸೀಸನ್ 4 ಕ್ಕೆ ಪರಿಪೂರ್ಣ ಆಯ್ಕೆಯಂತೆ ಕಾಣುತ್ತಿದೆ. ಆದರೆ, ನಾವು ಪಂದ್ಯಾವಳಿ ಶುರುವಾಗುವವರೆಗೂ ಇದಕ್ಕಾಗಿ ಕಾದುನೋಡಬೇಕು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂದು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
OnePlus 13 is the flagship smartphone from the company, featuring a Snapdragon 8 Elite chip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+