OnePlus 13 ಬಿಡುಗಡೆ ದಿನಾಂಕ ಘೋಷಣೆ; ಟ್ರಿಪಲ್ 50MP ಕ್ಯಾಮೆರಾ, 6000mAh ಬ್ಯಾಟರಿ.. ಬೆಲೆ ನೋಡಿ
OnePlus 13 Launch Date: ಒನ್‌ಪ್ಲಸ್ ಪ್ರಿಯರ ಕಾಯುವಿಕೆ ಮುಗಿಯಿತು! ಬಹುನಿರೀಕ್ಷಿತ ಒನ್‌ಪ್ಲಸ್ 13 (OnePlus 13) ಮೊಬೈಲ್ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಈ ಹೊಸ ಫೋನನ್ನು ಅಕ್ಟೋಬರ್ 31 ರಂದು ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. ಮೊದಲು ಒನ್‌ಪ್ಲಸ್ 13 ಸ್ಮಾರ್ಟ್‌ಫೋನ್ ಚೀನಾದಲ್ಲಿ ಬಿಡುಗಡೆಯಾಗಲಿದೆ. ಬಳಿಕ ಭಾರತ ಸೇರಿದಂತೆ ಇನ್ನಿತರ ಮಾರುಕಟ್ಟೆಗೆ ಬರಲಿದೆ. ಈ ಹೊಸ ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಹೌದು, ಒನ್‌ಪ್ಲಸ್ 13 ಸ್ಮಾರ್ಟ್‌ಫೋನ್ ಅಕ್ಟೋಬರ್ 31 ರಂದು ಬಿಡುಗಡೆಯಾಗಲಿದೆ. ಈ ಮೊಬೈಲ್ ಮುಂದಿನ ವರ್ಷ ಜನವರಿಯಲ್ಲಿ (2025) ಭಾರತದಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ಅಕ್ಟೋಬರ್ 31 ರಂದು ಚೀನಾದಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಲಿದೆ. ಸಂಜೆ 4 ಗಂಟೆಗೆ ( ಭಾರತೀಯ ಕಾಲಮಾನ ಮಧ್ಯಾಹ್ನ 1.30) ಪ್ರಾರಂಭವಾಗುತ್ತದೆ. ಒನ್‌ಪ್ಲಸ್ 13 ಫೋನನ್ನು ಬಿಳಿ (ವೈಟ್ ಡ್ಯೂ ಡಾನ್), ಬ್ಲೂ (ಬ್ಲೂಸ್ ಅವರ್), ಕಪ್ಪು (ಅಬ್ಸಿಡಿಯನ್ ಸೀಕ್ರೆಟ್ ರಿಯಲ್ಮ್) ಬಣ್ಣದಲ್ಲಿ ಪರಿಚಯಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.

ಒನ್‌ಪ್ಲಸ್ 13 ಬೆಲೆ (ನಿರೀಕ್ಷಿತ)
12GB RAM + 256GB ಸ್ಟೋರೇಜ್ = 67,999 ರೂ.
16GB RAM + 512GB ಸ್ಟೋರೇಜ್ = 73,999 ರೂ.
24GB RAM + 1TB ಸ್ಟೋರೇಜ್ = 84,999 ರೂ.
ಒನ್‌ಪ್ಲಸ್ 13 ಕಂಪನಿಯ ಅತ್ಯಂತ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಆಗಿದೆ. ಫೋನಿನ ಮೂಲ ರೂಪಾಂತರ 12GB RAM ಮತ್ತು 256GB ಸ್ಟೋರೇಜ್‌ನೊಂದಿಗೆ ಬಿಡುಗಡೆಯಾಗಲಿದೆ. ಇದರ ಬೆಲೆ 60 ಸಾವಿರಕ್ಕಿಂತ ಹೆಚ್ಚು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ, ಒನ್‌ಪ್ಲಸ್ 12 5G ಫೋನಿನ 12GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 64,999 ರೂ. ಇದೆ. 16GB + 512GB ಸ್ಟೋರೇಜ್ ರೂಪಾಂತರದ ಬೆಲೆ 69,999 ರೂ. ಆಗಿದೆ.
ಒನ್‌ಪ್ಲಸ್ 13 ಪೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಒನ್‌ಪ್ಲಸ್ 13 5G ಫೋನ್ 6.8 ಇಂಚಿನ 2K ಕ್ವಾಡ್ ಮೈಕ್ರೋ ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು OLED ಪ್ಯಾನೆಲ್ ಆಗಿರಲಿದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 6000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಫೋನ್ ಅಲ್ಟ್ರಾಸಾನಿಕ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿರಲಿದೆ.
ಪ್ರೊಸೆಸರ್ ಸಾಮರ್ಥ್ಯ
ಹೊಸ ಒನ್‌ಪ್ಲಸ್ 13 ಅನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 4 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗುತ್ತದೆ. ಇದು 8 ಕೋರ್ ಪ್ರೊಸೆಸರ್ ಆಗಿದೆ. ಓರಿಯನ್ ಸಿಪಿಯು ಜೊತೆಗೆ 4.09 GHz ವರೆಗಿನ ಗಡಿಯಾರದ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ, ಅಡ್ರಿನೊ 760 ಜಿಪಿಯು (Adreno 760 GPU) ಅನ್ನು ಹೊಂದಿರಲಿದೆ.
ಸ್ಟೋರೇಜ್ ಆಯ್ಕೆ
ಮುಂಬರುವ ಒನ್‌ಪ್ಲಸ್ 13 ಫೋನನ್ನು 24GB RAM ನೊಂದಿಗೆ ಪರಿಚಯಿಸಲಾಗುತ್ತದೆ. ಪ್ರಸ್ತುತ, ಭಾರತದಲ್ಲಿ 24GB RAM ಮೆಮೊರಿ ಹೊಂದಿರುವ ಯಾವುದೇ ಮೊಬೈಲ್ ಫೋನ್ ಇಲ್ಲ. ಇದನ್ನು LPDDR5x RAM ನಲ್ಲಿ ಬಿಡುಗಡೆ ಮಾಡಬಹುದು. ಜೊತೆಗೆ, ಈ ಸ್ಮಾರ್ಟ್‌ಫೋನ್ 1TB UFS 4.0 ಸ್ಟೋರೇಜ್ ಸಹ ಹೊಂದಿರಲಿದೆ.
ಕ್ಯಾಮೆರಾ ಸೆಟಪ್
ನೂತನ ಒನ್‌ಪ್ಲಸ್ 13 ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದು ಹ್ಯಾಸೆಲ್‌ಬ್ಲಾಡ್ ಲೆನ್ಸ್‌ನೊಂದಿಗೆ ಬರುತ್ತದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ LYT-808 ಕ್ಯಾಮೆರಾ ಹೊಂದಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ LYT 600 ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ LYT 600 ಪೆರಿಸ್ಕೋಪ್ ಕ್ಯಾಮೆರಾ ಇರಲಿದೆ. ಸೆಲ್ಫಿ ಪ್ರಿಯರಿಗಾಗಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರಲಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಒನ್‌ಪ್ಲಸ್ 13 ಫೋನನ್ನು 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇದು 100W SUPERVOOC ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರಲಿದೆ. ಜೊತೆಗೆ, 50W ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವೂ ಲಭ್ಯವಿರುತ್ತದೆ.


Click it and Unblock the Notifications








