Home
ಸುದ್ದಿಜಾಲ

ಜ.13ಕ್ಕೆ OnePlus 13 ಲಾಂಚ್; 3000 ರೂ.ನ ಸ್ಪೆಷಲ್ ಗಿಫ್ಟ್‌.. ಕೇವಲ 11ಕ್ಕೆ ಬೋನಸ್.. ವಿಶೇಷತೆಗಳೇನು?

ಒನ್‌ಪ್ಲಸ್‌ ತನ್ನ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಬಹುನಿರೀಕ್ಷಿತ ಒನ್‌ಪ್ಲಸ್‌ 13 (OnePlus 13) ಫೋನಿನ ಭಾರತದ ಬಿಡುಗಡೆ ಖಚಿತವಾಗಿದೆ. ಹೌದು, ಈ ಸ್ಮಾರ್ಟ್‌ಫೋನ್‌ಗಾಗಿ ಮೊಬೈಲ್‌ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಇದೀಗ, ಕಂಪನಿಯು ಈ ಕಾಯುವಿಕೆಗೆ ಅಂತ್ಯವಾಡಿದೆ. ಒನ್‌ಪ್ಲಸ್‌ 13 ಫೋನನ್ನು ಜನವರಿ 13 ರಂದು ಭಾರತದಲ್ಲಿ ಅನಾವರಣಗೊಳಿಸಲಾಗುವುದು. ಈಗಾಗಲೇ, ಮುಂಬರುವ ಫೋನಿನ ಪುಟವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಲೈವ್ ಮಾಡಲಾಗಿದೆ. ನೀವು, ಕೇವಲ 11 ರೂ.ಗೆ ಒನ್‌ಪ್ಲಸ್‌ 13 ಬೋನಸ್ ಪಡೆಯಬಹುದು. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಒನ್‌ಪ್ಲಸ್‌ 13 ಹೊಸ ವರ್ಷಕ್ಕೆ (ಜನವರಿ) ಬಿಡುಗಡೆಯಾಗಲಿದೆ. ಆದರೆ, ಕಂಪನಿಯು ನಿಗದಿತ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಈ ಫೋನ್‌ ಮೂರು 50MP ಕ್ಯಾಮೆರಾಗಳನ್ನು ಹೊಂದಿರಲಿದೆ. ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಫೋನಿನಲ್ಲಿ 6.82 ಇಂಚಿನ ಡಿಸ್ಪ್ಲೇ ಲಭ್ಯವಿರಲಿದೆ. ಜೊತೆಗೆ 16GB RAM + 512GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 100W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ.

ಜ.13ಕ್ಕೆ OnePlus 13 ಲಾಂಚ್; ಮೂರು 50MP ಕ್ಯಾಮೆರಾಗಳು.. ಬೆಲೆ, ವಿಶೇಷತೆಗಳೇನು?

3000 ರೂ.ಗಳ ವಿಶೇಷ ಉಡುಗೊರೆ ಲಭ್ಯ

ಒನ್‌ಪ್ಲಸ್‌ 13 ಫೋನಿನ ಪೇಜ್‌ ಕಂಪನಿಯ ವೆಬ್‌ಸೈಟ್‌ನಲ್ಲಿ ಲೈವ್ ಆಗಿದೆ. ಈ ಪುಟದಲ್ಲಿ 'Notify Me' ಅನ್ನು ಇನ್‌ಸ್ಟಾಲ್ ಮಾಡಲಾಗಿದೆ. ನೀವು, ಇದನ್ನು ಆಯ್ಕೆ ಮಾಡಿದರೆ 3,000 ರೂ. ಮತ್ತು 500 ರೆಡ್ ಕಾಯಿನ್ಸ್ ಮೌಲ್ಯದ ಒನ್‌ಪ್ಲಸ್‌ ಉತ್ಪನ್ನಗಳನ್ನು ನೀಡಲಾಗುತ್ತದೆ. ಈ ಬೋನಸ್ ಕೇವಲ 11 ರೂ.ಗೆ ಲಭ್ಯವಿದೆ. ಕಂಪನಿಯು, ಡಿಸೆಂಬರ್ 18 ರಂದು ಸಂಜೆ 6.30 ಗಂಟೆಗೆ ತನ್ನ ಮೊದಲ ಬೋನಸ್ ಡ್ರಾಪ್ ಮಾರಾಟವನ್ನು ಪ್ರಾರಂಭಿಸುತ್ತದೆ.

ಒನ್‌ಪ್ಲಸ್‌ 13 ಫೋನಿನ ಬೆಲೆ (ನಿರೀಕ್ಷಿತ)

ಭಾರತದಲ್ಲಿ ಒನ್‌ಪ್ಲಸ್‌ 13 ಫೋನಿನ 12GB RAM + 256GB ಸ್ಟೋರೇಜ್‌ ರೂಪಾಂತರವನ್ನು 70,000 ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಚೀನಾದಲ್ಲಿ ಒನ್‌ಪ್ಲಸ್‌ 13 ಅನ್ನು 52,300 ರೂ.ಗೆ (CNY 4,499) ಬಿಡುಗಡೆ ಮಾಡಲಾಗಿದೆ.

ಒನ್‌ಪ್ಲಸ್‌ 13 ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಒನ್‌ಪ್ಲಸ್‌ 13 ಮೊಬೈಲ್ 6.82 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು 2K+ LTPO ಅಮೋಲೆಡ್ ಡಿಸ್ಪ್ಲೇ ಆಗಿರಲಿದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 4500 ನಿಟ್ಸ್‌ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದು ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಒನ್‌ಪ್ಲಸ್‌ 13 ಫೋನನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್‌ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗುತ್ತದೆ. ಇದು ಗ್ರಾಫಿಕ್ಸ್‌ಗಾಗಿ, 900MHz ಅಡ್ರಿನೊ 830 ಜಿಪಿಯು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 15 ಆಧಾರಿತ ಆಕ್ಸಿಜನ್ ಓಎಸ್‌15 ನೊಂದಿಗೆ ಕೆಲಸ ನಿರ್ವಹಿಸುತ್ತದೆ.

ಜ.13ಕ್ಕೆ OnePlus 13 ಲಾಂಚ್; ಮೂರು 50MP ಕ್ಯಾಮೆರಾಗಳು.. ಬೆಲೆ, ವಿಶೇಷತೆಗಳೇನು?

ಸ್ಟೋರೇಜ್‌ ಆಯ್ಕೆ

ಒನ್‌ಪ್ಲಸ್‌ 13 ಸ್ಮಾರ್ಟ್‌ಫೋನ್‌ 12GB, 16GB ಮತ್ತು 24GB RAM ಹೊಂದಿರಲಿದೆ. ಇದರಲ್ಲಿ 256GB ಮತ್ತು 512GB ಸ್ಟೋರೇಜ್ ಲಭ್ಯವಿರಲಿದೆ.

ಕ್ಯಾಮೆರಾ ಸೆಟಪ್

ಒನ್‌ಪ್ಲಸ್‌ 13 ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರಲಿದೆ. ಜೊತೆಗೆ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೋನಿ ತೃತೀಯ ಕ್ಯಾಮೆರಾ ಹೊಂದಿರಲಿದೆ. ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಒನ್‌ಪ್ಲಸ್‌ 13 ಫೋನ್ 6000mAh ಸಾಮರ್ಥ್ಯದ ಡ್ಯುಯಲ್ ಸೆಲ್ ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ಜೊತೆಗೆ 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸಹ ಲಭ್ಯವಿರಲಿದೆ.

Best Mobiles in India

English summary
OnePlus 13 Launch in India Officially Teased: Expected launch date on January 13: know details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+