ನಾಳೆ OnePlus 13R ಫಸ್ಟ್ ಸೇಲ್; ಮೊದಲ ದಿನವೇ 3000 ಡಿಸ್ಕೌಂಟ್.. ಇಷ್ಟು ಕಡಿಮೆಗೆ ಸಿಗುತ್ತಾ?
ಬಹುನಿರೀಕ್ಷಿತ ಒನ್‌ಪ್ಲಸ್ 13R (OnePlus 13R) ಸ್ಮಾರ್ಟ್‌ಫೋನ್ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಇದನ್ನು ಒನ್‌ಪ್ಲಸ್ 13 (OnePlus 13) ಸರಣಿಯಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಅಂದಹಾಗೆ, ಈ ಮೊಬೈಲ್ ಇಂದು (ಜನವರಿ 13) ಅಮೆಜಾನ್ ಮೂಲಕ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ಕಂಪನಿಯು 3,000 ರೂ. ರಿಯಾಯಿತಿ, ನೋ ಕಾಸ್ಟ್ ಇಎಂಐ ಮತ್ತು 12,000 ರೂ. ವರೆಗೆ ಎಕ್ಸ್‌ಚೇಂಜ್ ಆಫರ್ ಘೋಷಿಸಿದೆ. ಬನ್ನಿ, ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಒನ್‌ಪ್ಲಸ್ 13R ಫೋನಿನಲ್ಲಿ ಎರಡು 50 ಮೆಗಾಪಿಕ್ಸೆಲ್ ಕ್ಯಾಮೆರಾಗಳು ಲಭ್ಯವಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 6.78 ಇಂಚಿನ ಡಿಸ್ಪ್ಲೇ ಲಭ್ಯವಿದೆ. ಜೊತೆಗೆ 12GB RAM + 256GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಫೋನಿನ ಆಫರ್ ಬೆಲೆ ತಿಳಿಯಲು ಮುಂದೆ ಓದಿ.

ಒನ್‌ಪ್ಲಸ್ 13R: ಟಾಪ್ 5 ಫೀಚರ್ಸ್
ಡಿಸ್ಪ್ಲೇ ಹೇಗಿದೆ
ಒನ್‌ಪ್ಲಸ್ 13R ಫೋನ್ 6.78 ಇಂಚಿನ 8T LTPO ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2780 × 1264 ಪಿಕ್ಸೆಲ್ ರೆಸಲ್ಯೂಶನ್, 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಹೊಂದಿದೆ. ಈ ಡಿಸ್ಪ್ಲೇಯು ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ.
ಸ್ನಾಪ್‌ಡ್ರಾಗನ್ ಪ್ರೊಸೆಸರ್
ಒನ್‌ಪ್ಲಸ್ 13R ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಗ್ರಾಫಿಕ್ಸ್‌ಗಾಗಿ ಈ ಫೋನ್, ಅಡ್ರಿನೊ 750 ಜಿಪಿಯು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ OxygenOS 15.0 ನೊಂದಿಗೆ ಕೆಲಸ ಮಾಡುತ್ತದೆ.
ಸ್ಟೋರೇಜ್ ಆಯ್ಕೆ
ಒನ್‌ಪ್ಲಸ್ 13R ಸ್ಮಾರ್ಟ್‌ಫೋನ್ 12GB RAM ಮತ್ತು16GB RAM ಹೊಂದಿದೆ. ಈ ಫೋನಿನಲ್ಲಿ 256GB ಮತ್ತು 512GB ಸ್ಟೋರೇಜ್ ಆಯ್ಕೆ ಲಭ್ಯವಿದೆ.
ಮೂರು ಬೊಂಬಾಟ್ ಕ್ಯಾಮೆರಾಗಳು
ಒನ್‌ಪ್ಲಸ್ 13R ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್ಇಡಿ ಫ್ಲಾಶ್‌ನೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಪ್ರಾಥಮಿಕ ಕ್ಯಾಮೆರಾ ಲಭ್ಯವಿದೆ. ಜೊತೆಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ 2x ತೃತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.
ಬಿಗ್ ಬ್ಯಾಟರಿ
ಒನ್‌ಪ್ಲಸ್ 13R ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಈ ಮೊಬೈಲ್ 80W ವೇಗದ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ.

ಇತರೆ ವೈಶಿಷ್ಟ್ಯಗಳು
ಒನ್‌ಪ್ಲಸ್ 13R ಮೊಬೈಲ್ ಇನ್ ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಇನ್‌ಫ್ರಾರೆಡ್ ಸಂವೇದಕ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಯುಎಸ್‌ಬಿ ಟೈಪ್ ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, 5G, ಡ್ಯುಯಲ್ 4G VoLTE, ವೈ-ಫೈ 7, ಬ್ಲೂಟೂತ್ 5.4 ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.
ಒನ್‌ಪ್ಲಸ್ 13R ಬೆಲೆ ಮತ್ತು ಲಭ್ಯತೆ
ಒನ್‌ಪ್ಲಸ್ 13R ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗಲಿದೆ. ಫೋನಿನ 12GB + 256GB ಸ್ಠೋರೇಜ್ ರೂಪಾಂತರವು 42,999 ರೂ.ಗೆ ಲಭ್ಯವಿದೆ. 16GB + 512GB ಸ್ಟೋರೇಜ್ ಬೆಲೆ 49,999 ರೂ. ಆಗಿದೆ. ಈ ಮೊಬೈಲ್ ಜನವರಿ 13 ರಿಂದ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಕಂಪನಿಯು ಮೊದಲ ಮಾರಾಟದ ಪ್ರಯುಕ್ತ ಮೂರು ರೂಪಾಂತರಗಳ ಮೇಲೆ 3,000 ರೂ. ರಿಯಾಯಿತಿ ನೀಡುತ್ತಿದೆ.
ನೀವು 12,000 ರೂ. ಎಕ್ಸ್‌ಚೇಂಜ್ ಆಫರ್‌ನ ಲಾಭ ಪಡೆಯಬಹುದು. ಜೊತೆಗೆ 4,000 ರೂ. ವರೆಗೆ ಎಕ್ಸ್‌ಚೇಂಜ್ ಬೋನಸ್ ಸಹ ಸಿಗುತ್ತದೆ. ಈ ಮೂಲಕ ಒನ್‌ಪ್ಲಸ್ 13R ಫೋನನ್ನು 23,999 ರೂ.ಗೆ ಮಾರಾಟವಾಗಲಿದೆ. ನೀವು 12 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಸೌಲಭ್ಯ ಪಡೆಯಬಹುದು. ಇದು ಕಂಪನಿಯ ಅಧಿಕೃತ ವೆಬ್‌ಸೈಟ್, ಒನ್‌ಪ್ಲಸ್ ಸ್ಟೋರ್, ಅಮೆಜಾನ್ ಮೂಲಕ ಮಾರಾಟವಾಗಲಿದೆ.


Click it and Unblock the Notifications








