Home
ಸುದ್ದಿಜಾಲ

ಸ್ವಲ್ಪ ಕಾಯಿರಿ.. ಶೀಘ್ರದಲ್ಲೇ OnePlus 13R ಬಿಡುಗಡೆ; ಬೆಲೆ, ಫೀಚರ್ಸ್ ಲೀಕ್!

ಒನ್‌ಪ್ಲಸ್‌ ಪ್ರಿಯರಿಗೆ ಡಬಲ್ ಗುಡ್‌ ನ್ಯೂಸ್‌ ಇದೆ. ಶೀಘ್ರದಲ್ಲೇ ಎರಡು ಪವರ್ ಫುಲ್ ಫೋನ್‌ಗಳು ಗ್ರಾಹಕರ ಕೈಸೇರಲಿವೆ. ಹೌದು, ಇದೇ ಅಕ್ಟೋಬರ್ 31 ರಂದು ಬಹುನಿರೀಕ್ಷಿತ ಒನ್‌ಪ್ಲಸ್ 13 (OnePlus 13) ಮೊಬೈಲ್ ಬಿಡುಗಡೆಯಾಗಲಿದೆ. ಇದರ ಬೆನ್ನಲ್ಲೇ, ಒನ್‌ಪ್ಲಸ್ 13R (OnePlus 13R) ಸಹ ಲಾಂಚ್ ಆಗುವ ಸಾಧ್ಯತೆಯಿದೆ. ಒನ್‌ಪ್ಲಸ್ 13R ಫೋನಿನ ಬೆಲೆ ಒನ್‌ಪ್ಲಸ್ 13 ಗಿಂತ ಸ್ವಲ್ಪ ಕಡಿಮೆ ಇರಲಿದೆ. ಆದರೆ, ಈ ಮೊಬೈಲ್‌ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

ಕಂಪನಿಯು ಒನ್‌ಪ್ಲಸ್ 13 ಫೋನನ್ನು ಮೊದಲು ಚೀನಾದಲ್ಲಿ ಬಿಡುಗಡೆ ಮಾಡಲಿದೆ. ಬಳಿಕ, ಭಾರತೀಯ ಮಾರುಕಟ್ಟೆಗೆ ಬರಲಿದೆ. ಈ ಮಧ್ಯೆಯೇ, ಒನ್‌ಪ್ಲಸ್ 13R ಕೂಡ ಸದ್ದು ಮಾಡುತ್ತಿದೆ. ಮುಂಬರುವ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳು ಸೋರಿಕೆಯಾಗಿವೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿರಲಿದೆ. ಫೋನಿನಲ್ಲಿ 6.7 ಇಂಚಿನ ಡಿಸ್ಪ್ಲೇ ಇರಲಿದೆ. ಇದು 6500mAh ಬ್ಯಾಟರಿ, ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಹೊಂದಿರಲಿದೆ.

ಸ್ವಲ್ಪ ಕಾಯಿರಿ.. ಶೀಘ್ರದಲ್ಲೇ OnePlus 13R ಬಿಡುಗಡೆ; ಬೆಲೆ, ಫೀಚರ್ಸ್ ಲೀಕ್!

ಒನ್‌ಪ್ಲಸ್ 13R ಫೋನಿನ ಬೆಲೆ

ಒನ್‌ಪ್ಲಸ್ 13R ಫೋನನ್ನು ಮೊದಲು ಚೀನಾದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಬಳಿಕ, ಮುಂದಿನ ವರ್ಷ (2025) ಭಾರತೀಯ ಮಾರುಕಟ್ಟೆಗೆ ಬರಲಿದೆ. ಈ ಫೋನಿನ ಭಾರತೀಯ ಬೆಲೆಯು ಚೀನಾದ ದರಕ್ಕಿಂತ ಕಡಿಮೆ ಇರುತ್ತದೆ. ಭಾರತದಲ್ಲಿ ಒನ್‌ಪ್ಲಸ್ 13R ಅನ್ನು 40,000 ರೂ. ಬೆಲೆಯಲ್ಲಿ ಪ್ರಾರಂಭಿಸಲಾಗುತ್ತದೆ. ಫೋನಿನ ಟಾಂಪ್ ವೇರಿಯಂಟ್ ಬೆಲೆಯು 52,000 ರೂ. ಆಗಿರುತ್ತದೆ ಎಂದು ಹೇಳಲಾಗಿದೆ.

ಒನ್‌ಪ್ಲಸ್ 13R ಫೋನಿನ ವೈಶಿಷ್ಟ್ಯಗಳು (ಸೋರಿಕೆ)

ಡಿಸ್ಪ್ಲೇ ವಿವರ

ಒನ್‌ಪ್ಲಸ್ 13R ಮೊಬೈಲ್ 6.7 ಇಂಚಿನ BOE ಓಎಲ್‌ಇಡಿ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು LTPO ತಂತ್ರಜ್ಞಾನದೊಂದಿಗೆ ಬರಲಿದೆ. ಡಿಸ್ಪ್ಲೇಯು 1.5K ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿರಲಿದೆ. ಜೊತೆಗೆ, ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಒಳಗೊಂಡಿರಲಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಒನ್‌ಪ್ಲಸ್ 13R ಫೋನಿನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಅಳವಡಿಸಲಿದೆ. ಇದು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾದ ಆಕ್ಟಾ ಕೋರ್ ಪ್ರೊಸೆಸರ್ ಆಗಿದೆ. ಒನ್‌ಪ್ಲಸ್ 12R ಮೊಬೈಲ್ ಸ್ನಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಹೊಂದಿದೆ.

ಸ್ಟೋರೇಜ್ ಆಯ್ಕೆ

ಒನ್‌ಪ್ಲಸ್ 13R ಮೊಬೈಲ್ ಅನ್ನು 16GB RAM ಮತ್ತು 512GB ಸ್ಟೋರೇಜ್‌ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗುವುದು. ಇದು ಫೋನಿನ ಟಾಪ್ ವೇರಿಯಂಟ್ ಆಗಿರಲಿದೆ. ಮೂಲ ರೂಪಾಂತರವು 12GB RAM ನೊಂದಿಗೆ ಬರಲಿದೆ. ಫೋನಿನಲ್ಲಿ LPDDR5X RAM ತಂತ್ರಜ್ಞಾನ ಲಭ್ಯವಿರಲಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚಿನ ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ನಿರ್ವಹಿಸಲಿದೆ.

ಸ್ವಲ್ಪ ಕಾಯಿರಿ.. ಶೀಘ್ರದಲ್ಲೇ OnePlus 13R ಬಿಡುಗಡೆ; ಬೆಲೆ, ಫೀಚರ್ಸ್ ಲೀಕ್!

ಕ್ಯಾಮೆರಾ ಸೆಟಪ್

ಕಂಪನಿಯು ಒನ್‌ಪ್ಲಸ್ 13R ಫೋನಿನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅಳವಡಿಸಲಿದೆ. ಇದು 50 ಮೆಗಾಪಿಕ್ಸೆಲ್ ಸೋನಿ IMX906 ಕ್ಯಾಮೆರಾ ಹೊಂದಿರುವ ನಿರೀಕ್ಷೆಯಿದೆ. ಇದರೊಂದಿಗೆ, ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು ಟೆಲಿಫೋಟೋ ಲೆನ್ಸ್ ಸಹ ಲಭ್ಯವಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರಲಿದೆ. ಒನ್‌ಪ್ಲಸ್ 12R ಫೋನಿನಲ್ಲಿ ಸಹ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಮುಂಬರುವ ಒನ್‌ಪ್ಲಸ್ 13R ಅನ್ನು 6500mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು. ಇಲ್ಲಿಯವರೆಗೆ, ಇಷ್ಟು ದೊಡ್ಡ ಬ್ಯಾಟರಿಯೊಂದಿಗೆ ಒನ್‌ಪ್ಲಸ್‌ ಮೊಬೈಲ್‌ ಬಿಡುಗಡೆಯಾಗಿಲ್ಲ. ಇದನ್ನು ಚಾರ್ಜ್ ಮಾಡಲು, 100W SuperVOOC ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು. ಇನ್ನೂ, ಒನ್‌ಪ್ಲಸ್ 12R ಫೋನ್ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

Best Mobiles in India

English summary
OnePlus 13R launch soon in India: price, features and specs leak: check details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+