ಭಾರತದಲ್ಲಿ ನಾಳೆ OnePlus 13s ಬಿಡುಗಡೆ: ಲೈವ್ ವೀಕ್ಷಣೆ ಮತ್ತು ಸಂಪೂರ್ಣ ಮಾಹಿತಿ!
ಭಾರತದ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ OnePlus 13s ಸ್ಮಾರ್ಟ್‌ಫೋನ್ ನಾಳೆ (ಜೂನ್ 5) ದೇಶದಲ್ಲಿ ಅಧಿಕೃತವಾಗಿ ಬಿಡುಗಡೆಗೊಳ್ಳಲಿದೆ. ಚೀನಾದ ಎಲೆಕ್ಟ್ರಾನಿಕ್ಸ್ ದೈತ್ಯ OnePlus ಈಗಾಗಲೇ ಫೋನ್‌ನ ಹಲವಾರು ಪ್ರಮುಖ ವಿವರಗಳನ್ನು ಟೀಸರ್‌ಗಳ ಮೂಲಕ ಬಹಿರಂಗಪಡಿಸುವ ಮೂಲಕ ದೇಶದ ಮೊಬೈಲ್ ಪ್ರಿಯರ ಕಾತುರವನ್ನು ಹೆಚ್ಚಿಸಿದೆ. ಈ ಹೊಸ OnePlus 13s ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್, ಹೊಸ 'ಪ್ಲಸ್ ಕೀ' ಮತ್ತು OnePlus AI ವೈಶಿಷ್ಟ್ಯಗಳೊಂದಿಗೆ ಮೂರು ಬಣ್ಣಗಳಲ್ಲಿ ಬರುತ್ತದೆ ಎಂದು ದೃಢಪಡಿಸಲಾಗಿದೆ. ಈ ಬಹುನಿರೀಕ್ಷಿತ ಬಿಡುಗಡೆ ಕಾರ್ಯಕ್ರಮವನ್ನು YouTube ಮತ್ತು OnePlus ಇಂಡಿಯಾ ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಹಾಗಾಗಿ, ಈ ಲೇಖನದಲ್ಲಿ OnePlus 13s ಲೈವ್‌ಸ್ಟ್ರೀಮ್ ವೀಕ್ಷಿಸುವುದು ಹೇಗೆ? ಮತ್ತು ಇದುವರೆಗೆ ತಿಳಿದಿರುವ ಎಲ್ಲಾ ಮಾಹಿತಿಗಳನ್ನು ನೋಡೋಣ ಬನ್ನಿ.
ಲೈವ್‌ಸ್ಟ್ರೀಮ್ ವೀಕ್ಷಿಸುವುದು ಹೇಗೆ?
OnePlus 13s ಬಿಡುಗಡೆ ಕಾರ್ಯಕ್ರಮವು ಜೂನ್ 5 ರಂದು ಮಧ್ಯಾಹ್ನ 12:00 ಗಂಟೆಗೆ (IST) ಪ್ರಾರಂಭವಾಗಲಿದೆ. ನೀವು ಈ ಕಾರ್ಯಕ್ರಮವನ್ನು OnePlus ಇಂಡಿಯಾ YouTube ಚಾನೆಲ್ ಮತ್ತು ಕಂಪನಿಯ ಅಧಿಕೃತ ಇಂಡಿಯಾ ವೆಬ್‌ಸೈಟ್ ಮೂಲಕ ನೇರ ಪ್ರಸಾರ ವೀಕ್ಷಿಸಬಹುದು. ಈವೆಂಟ್ ಕುರಿತು ಇತ್ತೀಚಿನ ಅಪ್‌ಡೇಟ್‌ಗಳನ್ನು ಪಡೆಯಲು, OnePlus ಇಂಡಿಯಾ ವೆಬ್‌ಸೈಟ್‌ನಲ್ಲಿರುವ "ನನಗೆ ಸೂಚಿಸಿ" (Notify Me) ಬಟನ್ ಅನ್ನು ಕ್ಲಿಕ್ ಮಾಡಬಹುದು.
OnePlus 13s: ನಿರೀಕ್ಷಿತ ಬೆಲೆ ಮತ್ತು ಲಭ್ಯತೆ
ಜನಪ್ರಿಯ ಟಿಪ್‌ಸ್ಟರ್ ಯೋಗೇಶ್ ಬ್ರಾರ್, 91Mobiles ಸಹಯೋಗದೊಂದಿಗೆ, OnePlus 13s ನ ನಿರೀಕ್ಷಿತ ಬೆಲೆಯನ್ನು ಬಹಿರಂಗಪಡಿಸಿದ್ದಾರೆ. ಭಾರತದಲ್ಲಿ ಇದರ ಬೆಲೆ ಸುಮಾರು ರೂ. 55,000 ಇರಬಹುದು ಎಂದು ಅಂದಾಜಿಸಲಾಗಿದೆ. ಈ ಬೆಲೆ ಶ್ರೇಣಿಯು OnePlus 13s ಅನ್ನು OnePlus 13R (ರೂ. 42,999) ಗಿಂತ ಹೆಚ್ಚು ಮತ್ತು OnePlus 13 (ರೂ. 69,999) ಗಿಂತ ಕಡಿಮೆ ಸ್ಥಾನದಲ್ಲಿರಿಸುತ್ತದೆ. ಇದು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಪ್ರಮುಖ ಮಾದರಿಯ ಕಾರ್ಯಕ್ಷಮತೆಯನ್ನು ಬಯಸುವ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. OnePlus 13s ಅಮೆಜಾನ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ. RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳು ಅಥವಾ ಬಣ್ಣ ಆಯ್ಕೆಗಳ ಕುರಿತು ಹೆಚ್ಚಿನ ವಿವರಗಳು ಬಿಡುಗಡೆ ಕಾರ್ಯಕ್ರಮದಲ್ಲಿ ಬಹಿರಂಗಗೊಳ್ಳುವ ನಿರೀಕ್ಷೆಯಿದೆ.'
OnePlus 13s: ಪ್ರಮುಖ ವೈಶಿಷ್ಟ್ಯಗಳು
ಜೂನ್ 5 ರಂದು ನಡೆಯುವ ಬಿಡುಗಡೆ ಕಾರ್ಯಕ್ರಮಕ್ಕೆ ಮುಂಚಿತವಾಗಿ, OnePlus ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ OnePlus 13s ಸ್ಮಾರ್ಟ್‌ಫೋನಿನ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಟೀಸರ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ, ಮತ್ತು ಮೀಸಲಾದ Wi-Fi ಸಂಪರ್ಕ ಚಿಪ್ ಅನ್ನು ಹೊಂದಿದೆ. ಡಿಸ್‌ಪ್ಲೇ ವಿಭಾಗದಲ್ಲಿ, ಕಾಂಪ್ಯಾಕ್ಟ್ ಆಗಿರುವ ಈ OnePlus 13s ಸ್ಮಾರ್ಟ್‌ಪೋನ್ 6.32-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ, ಇದು OnePlus 13 (6.82-ಇಂಚು) ಮತ್ತು OnePlus 13R (6.78-ಇಂಚು) ಹ್ಯಾಂಡ್‌ಸೆಟ್‌ಗಳಿಗೆ ಹೋಲಿಸಿದಾಗ ಚಿಕ್ಕದಾಗಿದೆ. ಈ ಕಾಂಪ್ಯಾಕ್ಟ್ ವಿನ್ಯಾಸವು ಒಂದು ಕೈಯಲ್ಲಿ ಹಿಡಿದುಕೊಳ್ಳಲು ಸುಲಭವಾದ ಫೋನ್ ಬಯಸುವ ಬಳಕೆದಾರರನ್ನು ಆಕರ್ಷಿಸಬಹುದು.

OnePlus 13s ಪೋನ್ Apple ನ ಆಕ್ಷನ್ ಬಟನ್‌ನಿಂದ ಪ್ರೇರಿತ 'ಪ್ಲಸ್ ಕೀ' ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿರುತ್ತದೆ. ಇದು ಬಳಕೆದಾರರಿಗೆ ವಿವಿಧ ಕಾರ್ಯಗಳಿಗಾಗಿ ಕೀಯನ್ನು ಕಸ್ಟಮೈಸ್ ಮಾಡಲು ಅವಕಾಶ ನೀಡುತ್ತದೆ. ಸೆಲ್ಫಿ ಕ್ಯಾಮೆರಾ 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಸೆಲ್ಫಿಗಳನ್ನು ಖಾತ್ರಿಪಡಿಸುತ್ತದೆ. OnePlus ತನ್ನ ಮುಂಬರುವ ಸ್ಮಾರ್ಟ್‌ಫೋನ್‌ಗಳಲ್ಲಿ 'OnePlus AI' ವೈಶಿಷ್ಟ್ಯಗಳನ್ನು ಪ್ರಚಾರ ಮಾಡುತ್ತಿದೆ, ಇದು ಆನ್-ಡಿವೈಸ್ ಪ್ರೊಸೆಸಿಂಗ್ ಮತ್ತು ಕಂಪನಿಯ ಹೊಸ ಖಾಸಗಿ ಕಂಪ್ಯೂಟಿಂಗ್ ಕ್ಲೌಡ್‌ನ ಮಿಶ್ರಣವನ್ನು ಬಳಸಿಕೊಂಡು AI ಕಾರ್ಯಗಳನ್ನು ಬೆಂಬಲಿಸುತ್ತದೆ. OnePlus 13s ಬ್ಯಾಟರಿ ಕಾರ್ಯಕ್ಷಮತೆಯ ಕುರಿತು ಹೆಚ್ಚಿನ ಮಾಹಿತಿ ನಾಳೆ ಬಿಡುಗಡೆಯಾದ ನಂತರ ಲಭ್ಯವಾಗಲಿದೆ. ಈ ಹೊಸ OnePlus 13s ಸ್ಮಾರ್ಟ್‌ಫೋನ್ ಕುರಿತು ನಿಮ್ಮ ನಿರೀಕ್ಷೆಗಳೇನು? ಕಾಮೆಂಟ್ ಮಾಡಿ ನಮಗೆ ತಿಳಿಸಿ.


Click it and Unblock the Notifications








