ಭಾರತದಲ್ಲಿ ಇಂದಿನಿಂದ OnePlus 13s ಮಾರಾಟ: ಮತ್ತಷ್ಟು ಅದ್ಭುತ ಕೊಡುಗೆಗಳು ಪ್ರಕಟ!
ಭಾರತದಲ್ಲಿ ಬಹುನಿರೀಕ್ಷಿತ ಕಾಂಪ್ಯಾಕ್ಟ್ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ OnePlus 13s ಇಂದಿನಿಂದ ಖರೀದಿಗೆ ಲಭ್ಯವಾಗಿದೆ. 5,000 ರೂ. ತ್ವರಿತ ಬ್ಯಾಂಕ್ ರಿಯಾಯಿತಿಯೊಂದಿಗೆ, ಆಯ್ದ ಆಫ್‌ಲೈನ್ ಸ್ಟೋರ್‌ಗಳಲ್ಲಿ 15 ತಿಂಗಳ ನೋ-ಕಾಸ್ಟ್ EMI ಸೌಲಭ್ಯ ಸೇರಿದಂತೆ ಹಲವಾರು ವಿಶೇಷ ಕೊಡುಗೆಗಳೊಂದಿಗೆ OnePlus 13s ಅನ್ನು ಈಗ 49,999 ರೂ.ಗಳ ಪರಿಣಾಮಕಾರಿ ಆರಂಭಿಕ ಬೆಲೆಯಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಹಾಗಾದರೆ, OnePlus 13s ಸ್ಮಾರ್ಟ್‌ಫೋನ್ ಖರೀದಿಯ ಮೇಲೆ ನೀಡಲಾದ ಎಲ್ಲಾ ಕೊಡುಗೆಗಳು ಮತ್ತು ಫೋನಿನ ಸಂಪೂರ್ಣ ಫೀಚರ್ಸ್ ಯಾವುವು ನೋಡೋಣ ಬನ್ನಿ.
OnePlus 13s: ಖರೀದಿಯ ಮೇಲಿನ ಎಲ್ಲಾ ಕೊಡುಗೆಗಳು
OnePlus 13s ನ 12GB + 256GB ಮಾದರಿಯ ಬೆಲೆ 54,999 ರೂ. ಮತ್ತು 12GB + 512GB ಮಾದರಿಯ ಬೆಲೆ 59,999 ರೂ. ಆದರೆ, SBI ಕ್ರೆಡಿಟ್ ಕಾರ್ಡ್ ಬಳಕೆದಾರರು 5,000 ರೂ. ತ್ವರಿತ ರಿಯಾಯಿತಿಯನ್ನು ಪಡೆಯುತ್ತಾರೆ, ಇದರಿಂದ ಪರಿಣಾಮಕಾರಿ ಬೆಲೆಗಳು ಕ್ರಮವಾಗಿ 49,999 ರೂ. ಮತ್ತು 54,999 ರೂ. ಗೆ ಇಳಿಯುತ್ತವೆ. ಆಯ್ದ ಕ್ರೆಡಿಟ್ ಕಾರ್ಡ್‌ಗಳಲ್ಲಿ ಒಂಬತ್ತು ತಿಂಗಳ ನೋ-ಕಾಸ್ಟ್ EMI ಆಯ್ಕೆಗಳು ಮತ್ತು ಆಯ್ದ ಆಫ್‌ಲೈನ್ ಸ್ಟೋರ್‌ಗಳಲ್ಲಿ 15 ತಿಂಗಳ ನೋ-ಕಾಸ್ಟ್ EMI ಸೌಲಭ್ಯವೂ ಲಭ್ಯವಿದೆ. ಗ್ರಾಹಕರು 5,000 ರೂ. ವರೆಗೆ ವಿನಿಮಯ ಬೋನಸ್ ಸಹ ಪಡೆಯಬಹುದು.
ಇನ್ನು, ಜುಲೈ 1 ರ ಮೊದಲು OnePlus 13s ಖರೀದಿಸುವ ಗ್ರಾಹಕರು ಉಚಿತ 180 ದಿನಗಳ ಫೋನ್ ಬದಲಿ ಯೋಜನೆಗೆ ಅರ್ಹರಾಗುತ್ತಾರೆ ಎಂದು ಕಂಪೆನಿ ತಿಳಿಸಿದೆ. ಹಾಗೆಯೇ, ಜುಲೈ 14 ರ ಮೊದಲು ರೆಡ್ ಕೇಬಲ್ ಕ್ಲಬ್ ಮೂಲಕ ಖರೀದಿಸಿದರೆ, ಮೂರು ವರ್ಷಗಳ ಬ್ಯಾಟರಿ ಸಂರಕ್ಷಣಾ ಯೋಜನೆಯನ್ನು ಪಡೆಯಬಹುದು. ಜಿಯೋ ಪೋಸ್ಟ್‌ಪೇಯ್ಡ್ ಬಳಕೆದಾರರು ಆಯ್ದ ಯೋಜನೆಗಳಲ್ಲಿ 2,250 ರೂ. ವರೆಗೆ ಉಳಿಸಬಹುದು. ಈ ಹ್ಯಾಂಡ್‌ಸೆಟ್ ಕಪ್ಪು ವೆಲ್ವೆಟ್, ಹಸಿರು ಸಿಲ್ಕ್ ಮತ್ತು ಪಿಂಕ್ ಸ್ಯಾಟಿನ್ ಬಣ್ಣಗಳಲ್ಲಿ ಲಭ್ಯವಿದೆ, ಆದರೆ 512GB ಆಯ್ಕೆಯನ್ನು ಕಪ್ಪು ಮತ್ತು ಹಸಿರು ಬಣ್ಣಗಳಲ್ಲಿ ಮಾತ್ರ ನೀಡಲಾಗುತ್ತದೆ.
OnePlus 13s ಪ್ರಸ್ತುತ OnePlus ಸ್ಟೋರ್ ಅಪ್ಲಿಕೇಶನ್, OnePlus ಇಂಡಿಯಾ ಇ-ಸ್ಟೋರ್ ಮತ್ತು ಅಮೆಜಾನ್ ಮೂಲಕ ಆನ್‌ಲೈನ್‌ನಲ್ಲಿ ಲಭ್ಯವಿದೆ. ಆಫ್‌ಲೈನ್ ಚಾನೆಲ್‌ಗಳಲ್ಲಿ, ಇದನ್ನು OnePlus ಎಕ್ಸ್‌ಪೀರಿಯೆನ್ಸ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್, ಕ್ರೋಮಾ, ವಿಜಯ್ ಸೇಲ್ಸ್, ಬಜಾಜ್ ಎಲೆಕ್ಟ್ರಾನಿಕ್ಸ್ ಮತ್ತು ಆಯ್ದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಖರೀದಿಸಬಹುದು. OnePlus 13s ಫೋನ್ 6.32-ಇಂಚಿನ 1.5K LTPO ಡಿಸ್‌ಪ್ಲೇ, Snapdragon 8 Elite SoC ಮತ್ತು 5,850mAh ಬ್ಯಾಟರಿಯಂತಹ ಪ್ರಮುಖ ಫೀಚರ್ಸ್ ಹೊಂದಿದೆ. ಇದರ ಸಂಪೂರ್ಣ ಫೀಚರ್ಸ್ ಈ ಕೆಳಗಿನಂತಿದೆ.
OnePlus 13s ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು,
OnePlus 13s ಸ್ಮಾರ್ಟ್‌ಫೋನ್ 6.32-ಇಂಚಿನ 1.5K (1,216×2,640 ಪಿಕ್ಸೆಲ್‌ಗಳು) LTPO ProXDR ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರ, 1,600 nits ಗರಿಷ್ಠ ಬ್ರೈಟ್‌ನೆಸ್ ಮತ್ತು 2,160Hz PWM ಡಿಮ್ಮಿಂಗ್ ದರವನ್ನು ನೀಡುತ್ತದೆ. ಇದರ ಅಕ್ವಾ ಟಚ್ 2.0 ತಂತ್ರಜ್ಞಾನ ಮತ್ತು ಗ್ಲೋವ್ ಮೋಡ್ ಮೂಲಕ ಒದ್ದೆಯಾದ ಕೈಗಳಿಂದ ಅಥವಾ ಕೈಗವಸುಗಳನ್ನು ಧರಿಸಿದ್ದಾಗಲೂ ಫೋನ್ ಅನ್ನು ಬಳಸಬಹುದು.
ಕಾರ್ಯಕ್ಷಮತೆ ವಿಭಾಗದಲ್ಲಿ, ಈ OnePlus 13s ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ SoC ಯಿಂದ ಚಾಲಿತವಾಗಿದ್ದು, 12GB LPDDR5X RAM ಮತ್ತು 512GB ವರೆಗೆ UFS 4.0 ಆನ್‌ಬೋರ್ಡ್ ಸ್ಟೋರೇಜ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 15 ಆಧಾರಿತ ಆಕ್ಸಿಜನ್OS 15 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೂ, ಸುರಕ್ಷತೆಗಾಗಿ, ಇನ್-ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ನೀಡಲಾಗಿದೆ.

ಕ್ಯಾಮೆರಾ ವಿಭಾಗದಲ್ಲಿ, OnePlus 13s ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಸೋನಿ LYT-700 ಪ್ರಾಥಮಿಕ ಸಂವೇದಕ (OIS ಬೆಂಬಲದೊಂದಿಗೆ f/1.8 ಅಪರ್ಚರ್) ಮತ್ತು 50-ಮೆಗಾಪಿಕ್ಸೆಲ್ S5KJN5 ಟೆಲಿಫೋಟೋ ಶೂಟರ್ (f/2.0 ಅಪರ್ಚರ್, 2x ಆಪ್ಟಿಕಲ್ ಜೂಮ್ ಮತ್ತು EIS ಬೆಂಬಲದೊಂದಿಗೆ) ಸೇರಿವೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, ಇದು 32-ಮೆಗಾಪಿಕ್ಸೆಲ್ ಮುಂಭಾಗದ ಸಂವೇದಕವನ್ನು (f/2.0 ಅಪರ್ಚರ್ ಮತ್ತು EIS ಬೆಂಬಲದೊಂದಿಗೆ) ಹೊಂದಿದೆ.
ಬ್ಯಾಟರಿ ವಿಭಾಗದಲ್ಲಿ, 80W SuperVOOC ಚಾರ್ಜಿಂಗ್ ಬೆಂಬಲದೊಂದಿಗೆ ಬೃಹತ್ 5,850mAh ಬ್ಯಾಟರಿಇದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, Wi-Fi 7, ಬ್ಲೂಟೂತ್ 6.0, NavIC ಜೊತೆ GPS, NFC ಮತ್ತು USB ಟೈಪ್-C ಪೋರ್ಟ್ ಸೇರಿವೆ. ಫೋನ್ 150.8×71.7×8.2mm ಅಳತೆ ಮತ್ತು 185g ತೂಕವನ್ನು ಹೊಂದಿದೆ.
ಕಸ್ಟಮೈಸ್ ಮಾಡಬಹುದಾದ 'ಪ್ಲಸ್ ಕೀ' ಮತ್ತು AI ವೈಶಿಷ್ಟ್ಯಗಳು:
OnePlus 13s ನಲ್ಲಿ ಹೊಸದಾಗಿ ಕಸ್ಟಮೈಸ್ ಮಾಡಬಹುದಾದ ಪ್ಲಸ್ ಕೀ ಯನ್ನು ಸೇರಿಸಲಾಗಿದೆ. ಇದನ್ನು ದೀರ್ಘವಾಗಿ ಒತ್ತಿದರೆ ರಿಂಗ್, ವೈಬ್ರೇಟ್ ಮತ್ತು ಸೈಲೆಂಟ್ ಮೋಡ್‌ಗಳ ನಡುವೆ ಬದಲಾಯಿಸಬಹುದು. ಅಲ್ಲದೆ, ಕ್ಯಾಮೆರಾ ತೆರೆಯುವುದು, ಆನ್-ಸ್ಕ್ರೀನ್ ಪಠ್ಯವನ್ನು ಅನುವಾದಿಸುವುದು ಅಥವಾ ಫ್ಲ್ಯಾಷ್‌ಲೈಟ್ ಆನ್ ಮಾಡುವಂತಹ ಕ್ರಿಯೆಗಳಿಗೆ ಇದನ್ನು ಕಸ್ಟಮೈಸ್ ಮಾಡಬಹುದು. ಕೀಲಿಯನ್ನು ಒಮ್ಮೆ ಒತ್ತಿದರೆ AI ಪ್ಲಸ್ ಮೈಂಡ್ ಸ್ಪೇಸ್ ಅನ್ನು ಪ್ರಾರಂಭಿಸಬಹುದು.
ಮೈಂಡ್ ಸ್ಪೇಸ್ ವೈಶಿಷ್ಟ್ಯದ ಮೂಲಕ, ಬಳಕೆದಾರರು ಲೇಖನಗಳು, ಫೋಟೋಗಳು, ಚಾಟ್‌ಗಳು ಮತ್ತು ವೇಳಾಪಟ್ಟಿಗಳಂತಹ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಉಳಿಸಬಹುದು ಮತ್ತು ಸುಲಭವಾಗಿ ನ್ಯಾವಿಗೇಟ್ ಮಾಡಬಹುದು. ಈ ಸ್ಮಾರ್ಟ್‌ಫೋನ್ AI ಡಿಟೇಲ್ ಬೂಸ್ಟ್, AI ಅನ್‌ಬ್ಲರ್, AI ರಿಫ್ಲೆಕ್ಷನ್ ಎರೇಸರ್, AI ರಿಫ್ರೇಮ್‌ನಂತಹ ಹಲವಾರು AI-ಬೆಂಬಲಿತ ಇಮೇಜಿಂಗ್ ಪರಿಕರಗಳನ್ನು ಹೊಂದಿದೆ. ಇದು Google ನ ಸರ್ಕಲ್ ಟು ಸರ್ಚ್ ಮತ್ತು Google ಜೆಮಿನಿ ಮುಂತಾದ AI ಉತ್ಪಾದಕತಾ ಪರಿಕರಗಳಿಗೂ ಬೆಂಬಲ ನೀಡುತ್ತದೆ.


Click it and Unblock the Notifications








