Home
ಸುದ್ದಿಜಾಲ

ಕನ್ಫರ್ಮ್‌..! ಭಾರತಕ್ಕೆ OnePlus 13s ಬರುತ್ತಿದೆ.. 6260mAh ಬ್ಯಾಟರಿ.. 512GB ಸ್ಟೋರೇಜ್‌.. ಬೆಲೆಯೂ ಕಡಿಮೆಯೇ?

ಒನ್‌ಪ್ಲಸ್ ಪ್ರಿಯರಿಗೆ ಅಂತೂ ಇಂತೂ ಒಳ್ಳೆಯ ಸುದ್ದಿ ಬಂದಿದೆ. ನೂತನ ಒನ್‌ಪ್ಲಸ್ 13s (OnePlus 13s) ಭಾರತಕ್ಕೆ ಎಂಟ್ರಿ ಕೊಡುವುದು ಖಚಿತವಾಗಿದೆ. ಹೌದು, ಶೀಘ್ರದಲ್ಲೇ ಈ ಒನ್‌ಪ್ಲಸ್ 13s ಮೊಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ಅಧಿಕೃತವಾಗಿ ಘೋಷಿಸಿದೆ. ಇದು ಕಂಪನಿಯ ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿದೆ. ಇದು Vivo X200 Pro Mini ಮತ್ತು OPPO Find X8s ಸೇರಿದಂತೆ ದೊಡ್ಡ ಕಂಪನಿಗಳ ಫೋನ್‌ಗಳಿಗೆ ನೇರವಾಗಿ ಸ್ಪರ್ಧಿಸಲಿದೆ. ಮುಂಬರುವ ಒನ್‌ಪ್ಲಸ್ 13S ಫೋನಿನ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಒನ್‌ಪ್ಲಸ್ 13s ಕ್ವಾಲ್ಕಾಮ್‌ನ ಶಕ್ತಿಶಾಲಿ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದು 6.3 ಡಿಸ್ಪ್ಲೇಯೊಂದಿಗೆ ಬರಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 6260mAh ಬ್ಯಾಟರಿ, 80W ವೇಗದ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿರುತ್ತದೆ. ಕಂಪನಿಯು ಒನ್‌ಪ್ಲಸ್ 13S ನ ಫೋಟೋವನ್ನು ಹಂಚಿಕೊಂಡಿದೆ. ಈ ಮೂಲಕ ಈ ಫೋನಿನ ಫಸ್ಟ್ ಲುಕ್ ಮತ್ತು ವಿನ್ಯಾಸವನ್ನು ಸಹ ಬಹಿರಂಗಪಡಿಸಿದೆ. ಇದು ಚೀನಾದಲ್ಲಿ ಬಿಡುಗಡೆಯಾದ ಒನ್‌ಪ್ಲಸ್ 13T (OnePlus 13T) ಅನ್ನು ಹೋಲುತ್ತದೆ.

ಭಾರತಕ್ಕೆ OnePlus 13s ಎಂಟ್ರಿ ಖಚಿತ! ಫೀಚರ್ಸ್ ಸೋರಿಕೆ.. ಬೆಲೆಯೂ ಕಡಿಮೆಯೇ?

ಭಾರತದಲ್ಲಿ ಒನ್‌ಪ್ಲಸ್ 13s ಬಿಡುಗಡೆ ಯಾವಾಗ

ಭಾರತದಲ್ಲಿ ಒನ್‌ಪ್ಲಸ್ 13s ಬಿಡುಗಡೆ ಕುರಿತು ಕಂಪನಿಯು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಇದು OnePlus 13 ಮತ್ತು OnePlus 13R ನಂತರ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಕಂಪನಿಯ 'ನಂಬರ್ 13' ಸರಣಿಯ ಮೂರನೇ ಮೊಬೈಲ್ ಆಗಿದೆ. ಒನ್‌ಪ್ಲಸ್ 13s ಮೈಕ್ರೋ ಸೈಟ್ ಈಗಾಗಲೇ ಒನ್‌ಪ್ಲಸ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಲೈವ್ ಆಗಿದೆ. ಅಲ್ಲಿ ಫೋನಿನ ಫೋಟೋಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಆದರೆ, ಒನ್‌ಪ್ಲಸ್ 13S ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ.

ಒನ್‌ಪ್ಲಸ್ 13s ಪ್ರೊಸೆಸರ್

ಒನ್‌ಪ್ಲಸ್ 13s ಫೋನನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಆಕ್ಟಾ-ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಘೋಷಿಸಿದೆ. ಇದನ್ನು 3 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳು ಮತ್ತು ಓರಿಯನ್ ಸಿಪಿಯು ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾಗಿದೆ. ಈ ಒನ್‌ಪ್ಲಸ್ 5G ಫೋನ್ ಎಐ (AI) ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಮೊಬೈಲ್ ಬಳಕೆಯನ್ನು ಸುಧಾರಿತ ಮತ್ತು ಸುಲಭಗೊಳಿಸುತ್ತದೆ. ಒನ್‌ಪ್ಲಸ್ 13s ಚೀನಾದಲ್ಲಿ ಬಿಡುಗಡೆಯಾದ ಒನ್‌ಪ್ಲಸ್ 13T ಫೋನಿನ ಮರುಬ್ರಾಂಡೆಡ್ ಆವೃತ್ತಿಯಾಗಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಒನ್‌ಪ್ಲಸ್ 13S ಫೋನ್ ಯಾವೆಲ್ಲಾ ವಿಶೇಷಣಗಳನ್ನು ಹೊಂದಿದೆ ಎನ್ನುವುದನ್ನು ತಿಳಿಯೋಣ ಬನ್ನಿ.

ಒನ್‌ಪ್ಲಸ್ 13s ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಒನ್‌ಪ್ಲಸ್ 13s ಮೊಬೈಲ್ 6.3 ಇಂಚಿನ ಕಾಂಪ್ಯಾಕ್ಟ್ ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ. ಇದು 1.5K ರೆಸಲ್ಯೂಶನ್ ಹೊಂದಿರುವ ಫ್ಲಾಟ್ OLED ಸ್ಕ್ರೀನ್‌ ಆಗಿದೆ. ಇದು 120Hz ರಿಫ್ರೆಶ್ ದರವನ್ನು ಹೊಂದಿರುತ್ತದೆ. ಹಾಗೆಯೇ 2640 × 1216 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 1600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಪಡೆದಿದೆ. ಮುಂಬರುವ ಈ ಒನ್‌ಪ್ಲಸ್ ಫೋನಿನಲ್ಲಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನವನ್ನು ಸಹ ಅಳವಡಿಸಲಾಗಿದೆ.

ಪ್ರೊಸೆಸರ್ ಸಾಮರ್ಥ್ಯ

ಒನ್‌ಪ್ಲಸ್ 13s ಫೋನನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ ಹೊಂದಿರಲಿದೆ. ಇದೇ ಪ್ರೊಸೆಸರ್ OnePlus 13 ಫೋನಿನಲ್ಲಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ಆಕ್ಸಿಜನ್ ಓಎಸ್ 15 ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 16GB RAM ಮತ್ತು 512GB ಸ್ಟೋರೇಜ್‌ ಆಯ್ಕೆಯೊಂದಿಗೆ ಬರುತ್ತದೆ.

ಭಾರತಕ್ಕೆ OnePlus 13s ಎಂಟ್ರಿ ಖಚಿತ! ಫೀಚರ್ಸ್ ಸೋರಿಕೆ.. ಬೆಲೆಯೂ ಕಡಿಮೆಯೇ?

ಕ್ಯಾಮೆರಾ ಸೆಟಪ್

ಒನ್‌ಪ್ಲಸ್ 13s ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಈ ಫೋನಿನಲ್ಲಿ OIS ವೈಶಿಷ್ಟ್ಯದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಇದರೊಂದಿಗೆ ದ್ವಿತೀಯ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹೊಂದಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಒನ್‌ಪ್ಲಸ್ 13S ಮೊಬೈಲ್ 6,260mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಈ ಬ್ಯಾಟರಿಯನ್ನು ವೈರ್ಡ್ ಮತ್ತು ವೈರ್‌ಲೆಸ್ ಎರಡರಲ್ಲೂ ಚಾರ್ಜ್ ಮಾಡಬಹುದು. ವರದಿಯ ಪ್ರಕಾರ, ಒನ್‌ಪ್ಲಸ್ 13S 5G ಫೋನಿನಲ್ಲಿ 80W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗುವುದು. ಇದರೊಂದಿಗೆ 50W ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನ ಸಹ ಇರಲಿದೆ.

ಇತರೆ ವೈಶಿಷ್ಟ್ಯಗಳು

ಒನ್‌ಪ್ಲಸ್ 13s ಫೋನ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP65 ರೇಟಿಂಗ್‌ ಪಡೆದಿದೆ. ಈ ಫೋನಿನಲ್ಲಿ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು, ಯುಎಸ್‌ಬಿ ಟೈಪ್ ಸಿ ಆಡಿಯೋ, 4 ಮೈಕ್ರೊಫೋನ್‌ಗಳು, ಡಾಲ್ಬಿ ಅಟ್ಮೋಸ್ ಸಹ ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G SA/NSA, ಡ್ಯುಯಲ್ 4G VoLTE, ವೈ-ಫೈ 7, ಬ್ಲೂಟೂತ್ 5.4, ಎನ್‌ಎಫ್‌ಸಿ ಮತ್ತು ಜಿಪಿಎಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.

Best Mobiles in India

English summary
OnePlus 13s with Snapdragon 8 Elite India Launch Confirmed; Amazon Microsite Goes Live
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+