Home
ಸುದ್ದಿಜಾಲ

ಬರಲಿದೆ OnePlus 13T ಫೋನ್; 6000mAh ಬ್ಯಾಟರಿ.. 50MP + 50MP ಕ್ಯಾಮೆರಾಗಳು.. ಬೆಲೆಯೂ ಸೋರಿಕೆ

ಒನ್‌ಪ್ಲಸ್ ಮೊಬೈಲ್‌ಗಳು ಯಾರಿಗೆ ಇಷ್ಟ ಇಲ್ಲ ಹೇಳಿ. ಗ್ರಾಹಕರು ಹೊಸ ಒನ್‌ಪ್ಲಸ್ ಫೋನ್‌ ಬಿಡುಗಡೆಯಾಗುವುದನ್ನೇ ಕಾಯುತ್ತಿರುತ್ತಾರೆ. ಅದರಂತೆ, ಒನ್‌ಪ್ಲಸ್‌ ಕೂಡ ಬಿನ್ನಿ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದೀಗ, ಮತ್ತೊಂದು ನೂತನ ಒನ್‌ಪ್ಲಸ್ ಮೊಬೈಲ್ ಬಿಡುಗಡೆಗೆ ಸಿದ್ಧವಾಗುತ್ತಿದೆ. ಹೌದು, ಕಂಪನಿಯು ಒನ್‌ಪ್ಲಸ್ 13T (OnePlus 13T) ಹೆಸರಿನೊಂದಿಗೆ ಇದನ್ನು ಅನಾವರಣಗೊಳಿಸಲಿದೆ. ಇದು ಕಡಿಮೆ ಬಜೆಟ್‌ ವಿಭಾಗದಲ್ಲಿ ಬರಲಿದೆ. ಪ್ರಸ್ತುತ, ಮುಂಬರುವ ಒನ್‌ಪ್ಲಸ್ 13T ಫೋನಿನ ವಿನ್ಯಾಸ, ಬೆಲೆ ಮತ್ತು ಬಿಡುಗಡೆ ದಿನಾಂಕ ಸೋರಿಕೆಯಾಗಿದೆ.

ಒನ್‌ಪ್ಲಸ್ 13T ಸ್ಮಾರ್ಟ್‌ಫೋನ್‌ ಮೇ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದು OnePlus 13T ಅಥವಾ OnePlus 13 Mini ಹೆಸರಿನೊಂದಿಗೆ ಬರಬಹುದು. ಇದರ ನಿಖರವಾದ ಹೆಸರು ಇನ್ನೂ ಸ್ಪಷ್ಟವಾಗಿಲ್ಲ. ಈ ಮೊಬೈಲ್ ನಯವಾದ ಮತ್ತು ಸುಂದರವಾದ ವಿನ್ಯಾಸವನ್ನು ಹೊಂದಿರುತ್ತದೆ. ಇದು ಆಕರ್ಷಕ ಕ್ಯಾಮೆರಾ ಮಾಡ್ಯೂಲ್ ಸಹ ಒಳಗೊಂಡಿರುತ್ತದೆ. ಈ ಫೋನಿನಲ್ಲಿ 6.31 ಇಂಚಿನ ಕಾಂಪ್ಯಾಕ್ಟ್ ಡಿಸ್ಪ್ಲೇ ಇರುತ್ತದೆ. ವಿಶೇಷವೆಂದರೆ, ಈ ಒನ್‌ಪ್ಲಸ್ ಮೊಬೈಲ್ 6,000mAh ದೊಡ್ಡ ಬ್ಯಾಟರಿಯನ್ನು ಹೊಂದಿರುತ್ತದೆ.

ಬರಲಿದೆ OnePlus 13T ಫೋನ್; 6000mAh ಬ್ಯಾಟರಿ, 50MP ಕ್ಯಾಮೆರಾ.. ಬೆಲೆ ಲೀಕ್

ಅತ್ಯಂತ ಸುಂದರ ಕಾಂಪ್ಯಾಕ್ಟ್ ಫೋನ್

ಒನ್‌ಪ್ಲಸ್ 13T ಬಗ್ಗೆ ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ ವೀಬೊದಲ್ಲಿ ಪೋಸ್ಟ್ ಮಾಡಲಾಗಿದೆ. ಅದರಂತೆ, ಇದು ದೀರ್ಘ ಬ್ಯಾಟರಿ ಬಾಳಿಕೆ ಹೊಂದಿರುವ 6.3 ಇಂಚಿನ ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ಫೋನ್ ಆಗಿದೆ. ಆದರೆ, ಈ ಫೋನಿನ ಹೆಸರನ್ನು ಬಹಿರಂಗಪಡಿಸಿಲ್ಲ. ಕಂಪನಿಯು ಈ ಹಿಂದೆ ಒನ್‌ಪ್ಲಸ್ 13T ಪೋಸ್ಟ್‌ನಲ್ಲಿ ಬಳಸಿದ್ದ ಅದೇ ಎಮೋಜಿಯನ್ನು ಬಳಸಲಾಗಿದೆ. ಇದು ಮುಂಬರುವ ಒನ್‌ಪ್ಲಸ್ 13T ಬಗ್ಗೆ ಸುಳಿವು ನೀಡುತ್ತದೆ. ಇದು ಸರಳ, ಸ್ವಚ್ಛ ಮತ್ತು ಆಕರ್ಷಕ ಕ್ಯಾಮೆರಾ ಮಾಡ್ಯೂಲ್ ಹೊಂದಿರುತ್ತದೆ. ಇದು ಅತ್ಯಂತ ಸುಂದರವಾದ ಕಾಂಪ್ಯಾಕ್ಟ್ ಫೋನ್ ಆಗಿರುತ್ತದೆ. ಜೊತೆಗೆ ಫ್ಲಾಟ್ ಡಿಸ್ಪ್ಲೇಯನ್ನು ಹೊಂದಿರುತ್ತದೆ.

ಒನ್‌ಪ್ಲಸ್ 13T ವೈಶಿಷ್ಟ್ಯಗಳು (ನಿರೀಕ್ಷಿತ)

ಡಿಸ್ಪ್ಲೇ ವಿವರ

ಟಿಪ್‌ಸ್ಟರ್ ಮುಂಬರುವ ಒನ್‌ಪ್ಲಸ್ 13T ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅದರಂತೆ ಈ ಒನ್‌ಪ್ಲಸ್‌ ಮೊಬೈಲ್ 6.31 ಇಂಚಿನ ಡಿಸ್ಪ್ಲೇ ಹೊಂದಿರುತ್ತದೆ. ಇದು 1.5K ರೆಸಲ್ಯೂಶನ್ ಬೆಂಬಲ ಹೊಂದಿರುವ LTPO OLED ಡಿಸ್ಪ್ಲೇ ಆಗಿರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಒನ್‌ಪ್ಲಸ್ 13T ಅಥವಾ ಒನ್‌ಪ್ಲಸ್ 13T ಮಿನಿ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 ಜೆನ್ ಎಲೈಟ್‌ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಈ ಪ್ರೊಸೆಸರ್ ಹೊಂದಿರುವ ಅತ್ಯಂತ ಕೈಗೆಟುಕುವ ಸ್ಮಾರ್ಟ್‌ಫೋನ್ ಇದಾಗಿರುತ್ತದೆ ಎಂದು ಟಿಪ್‌ಸ್ಟರ್ ಸ್ಮಾರ್ಟ್ ಪಿಕಾಚು ವೈಬೊದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕ್ಯಾಮೆರಾ ಸೆಟಪ್

ಒನ್‌ಪ್ಲಸ್ 13T ಮೊಬೈಲ್ ಪ್ರಸ್ತುತ, OnePlus 13 ಸರಣಿಯಲ್ಲಿರುವ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್‌ಗಿಂತ ಭಿನ್ನವಾಗಿರುತ್ತದೆ. ಅಂದರೆ, ಬಾರ್ ಆಕಾರದ ಡ್ಯುಯಲ್ ಕ್ಯಾಮೆರಾ ವಿನ್ಯಾಸವನ್ನು ಹೊಂದಿದೆ ಎಂದು ಹೇಳಲಾಗಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಇರುತ್ತದೆ. ಹಾಗೆಯೇ 2x ಜೂಮ್‌ನೊಂದಿಗೆ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.

ಬ್ಯಾಟರಿ ಹೇಗಿರಲಿದೆ

ಒನ್‌ಪ್ಲಸ್ 13T ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ನಿರೀಕ್ಷೆಯಿದೆ. ಕಂಪನಿಯು OnePlus 13 ಮೊಬೈಲ್ ಅನ್ನು 6,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ.

ಒನ್‌ಪ್ಲಸ್ 13T ಬೆಲೆ (ನಿರೀಕ್ಷಿತ)

ಒನ್‌ಪ್ಲಸ್ 13T (ಒನ್‌ಪ್ಲಸ್ 13 ಮಿನಿ) ಮೇ ತಿಂಗಳಲ್ಲಿ ಅಥವಾ 2025ರ ಎರಡನೇ ತ್ರೈಮಾಸಿಕದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇತ್ತೀಚೆಗೆ ಬಿಡುಗಡೆಯಾದ Realme GT 7 Pro ರೇಸಿಂಗ್ ಆವೃತ್ತಿಗಿಂತ ಕಡಿಮೆ ಬೆಲೆಯನ್ನು ಹೊಂದಿರಲಿದೆ. ಇದು ಸುಮಾರು 37,000 ರೂ. ನಿಂದ ಪ್ರಾರಂಭವಾಗುತ್ತದೆ. ಒನ್‌ಪ್ಲಸ್ 10T ಮೊಬೈಲ್ 2022ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಿತ್ತು. ಇದು ಕೊನೆಯ ಒನ್‌ಪ್ಲಸ್ 'T' ಮಾಡೆಲ್ ಫೋನ್ ಆಗಿತ್ತು. ಇದರ ಬೆಲೆ 49,999 ರೂ. ಆಗಿದೆ.

Best Mobiles in India

English summary
OnePlus 13T/13 Mini Could Be the Cheapest Snapdragon 8 Elite-Powered Phone leaked
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+