OnePlus 13T ಫೋನ್ ಬಿಡುಗಡೆಗೆ ಮುನ್ನವೆ ಸಿಕ್ಕಿತು ಭರ್ಜರಿ ಸಿಹಿಸುದ್ದಿ!
ಭಾರತ ಸೇರಿದಂತೆ ವಿಶ್ವದಾದ್ಯಂತ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ OnePlus 13T ಸ್ಮಾರ್ಟ್‌ಫೋನ್ ಇದೇ ಏಪ್ರಿಲ್ 24 ರಂದು ಚೀನಾದಲ್ಲಿ ಬಿಡುಗಡೆಯಾಗುತ್ತಿದೆ. OnePlus ಕಂಪೆನಿಯು ತನ್ನ ಬಹುನಿರೀಕ್ಷಿತವಾದ ಈ OnePlus 13T ಸ್ಮಾರ್ಟ್‌ಫೋನನ್ನು ಕಾಂಪ್ಯಾಕ್ಟ್ ಸಾಧನವಾಗಿ ಪರಿಚಯಿಸಿಸುತ್ತಿದ್ದು, ಬಿಡುಗಡೆಗೆ ಮುಂಚಿತವಾಗಿ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸ್ಮಾರ್ಟ್‌ಫೋನ್ ಕುರಿತಾದ ಹೊಸ ಹೊಸ ಟೀಸರ್‌ಗಳನ್ನು ಹಂಚಿಕೊಳ್ಳುತ್ತಿದೆ. ಇತ್ತೀಚಿನ ಟೀಸರ್ ಒಂದು ಮುಂಬರುವ OnePlus 13T ಸ್ಮಾರ್ಟ್‌ಫೋನಿನ ಪ್ರಮುಖ ವೈಶಿಷ್ಟ್ಯಗಳಾದ ಚಿಪ್‌ಸೆಟ್ ಮತ್ತು ಕ್ಯಾಮೆರಾ ಕುರಿತು ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಮಾಹಿತಿಯ ಪ್ರಕಾರ, OnePlus 13T ಅತ್ಯಾಧುನಿಕ ಚಿಪ್‌ಸೆಟ್‌ನಿಂದ ಚಾಲಿತವಾಗಿರುವುದು ಖಚಿತವಾಗಿದ್ದು, ಒನ್‌ಪ್ಲಸ್ 13 ರಂತೆಯೇ ಈ ಫೋನ್ ಕೂಡ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುವುದು ದೃಢಪಟ್ಟಿದೆ.
ಹೌದು, OnePlus 13T ಸ್ಮಾರ್ಟ್‌ಫೋನ್ ಅತ್ಯಾಧುನಿಕ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಕಾರ್ಯಕ್ಷಮತೆ ಮತ್ತು ವೇಗದ ಕಾರ್ಯಾಚರಣೆಯನ್ನು ಖಚಿತಪಡಿಸುತ್ತದೆ ಎಂದು OnePlus ಕಂಪೆನಿ ಸಿಹಿಸುದ್ದಿ ನೀಡಿದೆ. ಹಾಗೆಯೇ, ಗೇಮಿಂಗ್ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲು, ಈ OnePlus 13T ಸ್ಮಾರ್ಟ್‌ಫೋನ್ ವಿಶೇಷವಾದ Wi-Fi G1 ಚಿಪ್ ಅನ್ನು ಒಳಗೊಂಡಿರುತ್ತದೆ ಈ ಚಿಪ್ ವೈರ್‌ಲೆಸ್ ಸಂಪರ್ಕವನ್ನು ಅತ್ಯುತ್ತಮವಾಗಿಸುತ್ತದೆ ಮತ್ತು ಕಡಿಮೆ ಲೇಟೆನ್ಸಿಯನ್ನು ಒದಗಿಸುತ್ತದೆ, ಇದು ಗೇಮಿಂಗ್‌ಗೆ ಬಹಳ ಮುಖ್ಯವಾಗಿದೆ. ಇನ್ನು ಈ ಫೋನಿನ ತೂಕವು ಕೇವಲ 185 ಗ್ರಾಂ ಇರಲಿದೆ ಎಂದು ಹೇಳಲಾಗಿದ್ದು, ಇದು ಹಿಡಿದುಕೊಳ್ಳಲು ಮತ್ತು ಸಾಗಿಸಲು ಅನುಕೂಲಕರವಾಗಿರುತ್ತದೆ. ಹಾಗಾಗಿ, OnePlus 13T ಸ್ಮಾರ್ಟ್‌ಫೋನ್ ಅತ್ಯುತ್ತಮ ಗೇಮಿಂಗ್ ಅನುಭವವನ್ನು ಒದಗಿಸುತ್ತದೆ ಎಂದು ಕಂಪೆನಿಯು ಟೀಸರ್‌ನಲ್ಲಿ ತಿಳಿಸಿದೆ.

ಕ್ಯಾಮೆರಾ ವಿಭಾಗದಲ್ಲಿಯೂ ಸಹ OnePlus 13T ಸ್ಮಾರ್ಟ್‌ಫೋನ್ ಗಮನಾರ್ಹ ಸುಧಾರಣೆಗಳನ್ನು ಹೊಂದುವ ನಿರೀಕ್ಷೆಯಿದೆ. ಕಂಪೆನಿಯ ಅಧಿಕೃತ ಟೀಸರ್‌ಗಳ ಪ್ರಕಾರ, ಈ OnePlus 13T ಸ್ಮಾರ್ಟ್‌ಫೋನ್ 50-ಮೆಗಾಪಿಕ್ಸೆಲ್ ಸೋನಿ ಸೆನ್ಸರ್‌ನಿಂದ ನೇತೃತ್ವ ವಹಿಸಲ್ಪಟ್ಟ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುತ್ತದೆ. ಈ ವ್ಯವಸ್ಥೆಯು 2x ಆಪ್ಟಿಕಲ್ ಜೂಮ್ ಮತ್ತು 4x ಲಾಸ್‌ಲೆಸ್ ಜೂಮ್ ಅನ್ನು ಬೆಂಬಲಿಸಲಿದೆ, ಇದು ಬಳಕೆದಾರರಿಗೆ ದೂರದ ವಸ್ತುಗಳನ್ನು ಸಹ ಸ್ಪಷ್ಟವಾಗಿ ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ಹೋಲಿಕೆಗಾಗಿ ಹೇಳುವುದಾದರೆ, ಈ ಹಿಂದಿನ OnePlus 13 ಮಾದರಿಯು ಟ್ರಿಪಲ್ ರಿಯರ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿತ್ತು, ಆದರೆ ಪ್ರಾಥಮಿಕ ಸೆನ್ಸರ್ 50-ಮೆಗಾಪಿಕ್ಸೆಲ್ ಸೋನಿ ಸಂವೇದಕವೇ ಆಗಿತ್ತು ಎಂದರೆ ನಿಮಗೆ ಖಂಡಿತ ಆಶ್ಚರ್ಯವಾಗುತ್ತದೆ.
ನಾವು ಈಗಾಗಲೇ ತಿಳಿದಿರುವಂತೆ, OnePlus 13T ಸ್ಮಾರ್ಟ್‌ಫೋನ್, ಕ್ಲೌಡ್ ಇಂಕ್ ಬ್ಲಾಕ್, ಮಾರ್ನಿಂಗ್ ಮಿಸ್ಟ್ ಗ್ರೇ ಮತ್ತು ಪೌಡರ್ (ಗುಲಾಬಿ) ಮೂರು ಆಕರ್ಷಕ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದರೊಂದಿಗೆ, ಈ ಸ್ಮಾರಟ್fಫೋನ್ 80W ವೇಗದ ಚಾರ್ಜಿಂಗ್ ಮತ್ತು 120Hz ರಿಫ್ರೆಶ್ ದರದೊಂದಿಗೆ 1.5K ರೆಸಲ್ಯೂಶನ್ ಡಿಸ್ಪ್ಲೇಯನ್ನು ಸಹ ಒಳಗೊಂಡಿರುತ್ತದೆ ಎಂದು ವದಂತಿಗಳಿವೆ. ಕಾರ್ಯಕ್ಷಮತೆಯ ವಿಷಯದಲ್ಲಿ, OnePlus 13T ಸ್ಮಾರ್ಟ್‌ಫೋನ್ 16GB LPDDR5X RAM ಮತ್ತು 512GB UFS 4.0 ಶೇಖರಣಾ ಸಾಮರ್ಥ್ಯವನ್ನು ಹೊಂದಿರುವ ಸಾಧ್ಯತೆ ಇದೆ. ಹಾಗೂ, ಈ ಸ್ಮಾರ್ಟ್‌ಫೋನ್ ColorOS 15 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ ಮತ್ತು ಕಿರಿದಾದ ಬೆಜೆಲ್‌ಗಳೊಂದಿಗೆ 6.32-ಇಂಚಿನ ಫ್ಲಾಟ್ ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.
ಇಷ್ಟೇ ಅಲ್ಲದೆ, OnePlus 13T ಬ್ಯಾಟರಿ ಸಾಮರ್ಥ್ಯವು 6,000mAh ಗಿಂತ ಹೆಚ್ಚಿರಲಿದೆ ಎಂದು ನಿರೀಕ್ಷಿಸಲಾಗಿದೆ, ಇದು ದೀರ್ಘಕಾಲದವರೆಗೆ ಬಾಳಿಕೆ ಬರುವ ಶಕ್ತಿಯನ್ನು ನೀಡುತ್ತದೆ. OnePlus 13T ಗಾಗಿ ಪೂರ್ವ-ಬುಕಿಂಗ್ ಈಗಾಗಲೇ ಚೀನಾದಲ್ಲಿ ಪ್ರಾರಂಭವಾಗಿದೆ. ಗಮನಾರ್ಹ ಬದಲಾವಣೆಯೆಂದರೆ, ಈ ಸ್ಮಾರ್ಟ್‌ಫೋನ್‌ನಲ್ಲಿ ಸಾಂಪ್ರದಾಯಿಕ ಅಲರ್ಟ್ ಸ್ಲೈಡರ್ ಬದಲಿಗೆ ಹೊಸ 'ಶಾರ್ಟ್‌ಕಟ್ ಕೀ' ಅನ್ನು ನೀಡಲಾಗಿದೆ. ಫೋನಿನ ದೇಹವು ಲೋಹದಿಂದ ಮಾಡಲ್ಪಟ್ಟಿದೆ, ಇದು ಪ್ರೀಮಿಯಂ ನೋಟ ಮತ್ತು ಗಟ್ಟಿತನವನ್ನು ನೀಡುತ್ತದೆ. ಒಟ್ಟಾರೆಯಾಗಿ, OnePlus 13T ಶಕ್ತಿಯುತ ಚಿಪ್‌ಸೆಟ್, ಸುಧಾರಿತ ಕ್ಯಾಮೆರಾ ವೈಶಿಷ್ಟ್ಯಗಳು ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಏಪ್ರಿಲ್ 24 ರಂದು ಚೀನಾದಲ್ಲಿ ನಡೆಯುವ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಫೋನಿನ ಕುರಿತಾದ ಹೆಚ್ಚಿನ ವಿವರಗಳು ಬಹಿರಂಗಗೊಳ್ಳಲಿವೆ.


Click it and Unblock the Notifications








