OnePlus 13T: 50MP + 50MP + 32MP ಕ್ಯಾಮೆರಾಗಳು.. 6200mAh ಬ್ಯಾಟರಿ.. ಇದೇ ತಿಂಗಳು ಬಿಡುಗಡೆ
ಒನ್‌ಪ್ಲಸ್ ಮತ್ತೊಂದು ಹೊಸ ಹೊಸ ಮೊಬೈಲ್ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ OnePlus 13 ಮತ್ತು OnePlus 13R ಫೋನ್‌ಗಳನ್ನು ಪರಿಚಯಿಸಿದೆ. ಇದೀಗ, ಒನ್‌ಪ್ಲಸ್ 13T (OnePlus 13T) ಮಾರುಕಟ್ಟೆಗೆ ಬರುತ್ತಿದೆ. ಕಳೆದ ಹಲವು ದಿನಗಳಿಂದ ಈ ಮೊಬೈಲ್‌ಗೆ ಸಂಬಂಧಿಸಿದ ವಿವರಗಳು ಹೊರಬರುತ್ತಿವೆ. ಆದರೆ, ಇದೀಗ ಕಂಪನಿಯು ಅಧಿಕೃತವಾಗಿ ಫೋನ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒನ್‌ಪ್ಲಸ್ 13T ಫೋನಿನ ಬಾಕ್ಸ್ ಫೋಟೋವನ್ನು ಹಂಚಿಕೊಂಡಿದೆ. ಬನ್ನಿ, ಈ ಫೋನ್ ಯಾವಾಗ ಬಿಡುಗಡೆಯಾಗಲಿದೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ನೂತನ ಒನ್‌ಪ್ಲಸ್ 13T ಫೋನನ್ನು ಈ ತಿಂಗಳು (ಏಪ್ರಿಲ್) ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ. ಒನ್‌ಪ್ಲಸ್ '13' ಸರಣಿಯ ಈ ಹೊಸ 5G ಮೊಬೈಲ್ ಅನ್ನು ಮೊದಲು ಚೀನಾದಲ್ಲಿ ಬಿಡುಗಡೆ ಮಾಡಲಾಗುವುದು. ಬಳಿಕ ಭಾರತ ಸೇರಿದಂತೆ ಇತರೆ ಮಾರುಕಟ್ಟೆಗಳಿಗೆ ಈ ಫೋನ್ ಎಂಟ್ರಿ ಕೊಡಲಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರುತ್ತದೆ. ಈ ಫೋನಿನಲ್ಲಿ 50MP + 50MP + 32MP ಕ್ಯಾಮೆರಾಗಳು ಲಭ್ಯವಿರುತ್ತವೆ. ಈ ಮೊಬೈಲ್ 6.3 ಇಂಚಿನ ಡಿಸ್ಪ್ಲೇ, 16GB RAM + 512GB ಸ್ಟೋರೇಜ್, 6200mAh ಬ್ಯಾಟರಿ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಬರುತ್ತದೆ.

ಒನ್‌ಪ್ಲಸ್ 13T ಬಿಡುಗಡೆ ಯಾವಾಗ?
ಒನ್‌ಪ್ಲಸ್ ತನ್ನ ಹೊಸ ಒನ್‌ಪ್ಲಸ್ 13T ಫೋನನ್ನು ಈ ತಿಂಗಳು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಪ್ರಸ್ತುತ ಸ್ಮಾರ್ಟ್‌ಫೋನ್‌ನ ನಿಖರವಾದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಈ ಒನ್‌ಪ್ಲಸ್ 13T ಮೊಬೈಲ್ ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ಎಂದು ಹೇಳಲಾಗಿದೆ. ಇದನ್ನು ಪ್ರೀಮಿಯಂ ವಿನ್ಯಾಸದಲ್ಲಿ ನಿರ್ಮಿಸಲಾಗುವುದು. ಕಂಪನಿಯು 'ಸ್ಮಾಲ್ ಸ್ಕ್ರೀನ್ ಪವರ್‌ಹೌಸ್' ಎಂಬ ಟ್ಯಾಗ್‌ಲೈನ್‌ನೊಂದಿಗೆ ಇದನ್ನು ಪ್ರಚಾರ ಮಾಡುತ್ತಿದೆ. ವಿಶೇಷವೆಂದರೆ, ಈ ಫೋನಿನ ವಿನ್ಯಾಸವು ಐಫೋನ್ 16e ನಂತೆಯೇ ಇರುವ ಸಾಧ್ಯತೆಯಿದೆ.
ಒನ್‌ಪ್ಲಸ್ 13T ಬೆಲೆ (ನಿರೀಕ್ಷಿತ)
ಒನ್‌ಪ್ಲಸ್ 13T ಮೊಬೈಲ್ ಇತ್ತೀಚೆಗೆ ಬಿಡುಗಡೆಯಾದ Realme GT 7 Pro ರೇಸಿಂಗ್ ಆವೃತ್ತಿಗಿಂತ ಕಡಿಮೆ ಬೆಲೆಯನ್ನು ಹೊಂದಿರಲಿದೆ. ಇದು ಸುಮಾರು 37,000 ರೂ. ನಿಂದ ಪ್ರಾರಂಭವಾಗುತ್ತದೆ. ಒನ್‌ಪ್ಲಸ್ 10T ಮೊಬೈಲ್ 2022ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಿತ್ತು. ಇದು ಕೊನೆಯ ಒನ್‌ಪ್ಲಸ್ 'T' ಮಾಡೆಲ್ ಫೋನ್ ಆಗಿತ್ತು. ಇದರ ಬೆಲೆ 49,999 ರೂ. ಆಗಿದೆ.

ಒನ್‌ಪ್ಲಸ್ 13T ವೈಶಿಷ್ಟ್ಯಗಳು (ಸೋರಿಕೆ)
ಡಿಸ್ಪ್ಲೇ ವಿವರ
ಒನ್‌ಪ್ಲಸ್ 13T ಮೊಬೈಲ್ 6.31 ಇಂಚಿನ ಡಿಸ್ಪ್ಲೇ ಹೊಂದಿರುತ್ತದೆ. ಇದು 1.5K ರೆಸಲ್ಯೂಶನ್ ಬೆಂಬಲ ಹೊಂದಿರುವ LTPO OLED ಪ್ರೀಮಿಯಂ ಸ್ಕ್ರೀನ್ ಆಗಿರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ. ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನವನ್ನು ಸಹ ಹೊಂದಿರಲಿದೆ.
ಪ್ರೊಸೆಸರ್ ಸಾಮರ್ಥ್ಯ
ಒನ್‌ಪ್ಲಸ್ 13T ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದೇ ಪ್ರೊಸೆಸರ್ OnePlus 13 ಫೋನಿನಲ್ಲಿಯೂ ಇದೆ. ಈ ಪ್ರೊಸೆಸರ್ ಹೊಂದಿರುವ ವಿಶ್ವದ ಅತ್ಯಂತ ಕೈಗೆಟುಕುವ ಸ್ಮಾರ್ಟ್‌ಫೋನ್ ಇದಾಗಿರುತ್ತದೆ. ಈ ಸ್ಮಾರ್ಟ್‌ಫೋನ್ 16GB RAM ಮತ್ತು 512GB ಸ್ಟೋರೇಜ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ.
ಕ್ಯಾಮೆರಾ ಸೆಟಪ್
ಒನ್‌ಪ್ಲಸ್ 13T ಮೊಬೈಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಎರಡನೇ ಕ್ಯಾಮೆರಾವು 2x ಜೂಮ್‌ನೊಂದಿಗೆ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಒಳಗೊಂಡಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗುವುದು. ಪ್ರಸ್ತುತ, OnePlus 13 ಸರಣಿಯಲ್ಲಿರುವ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್‌ಗಿಂತ ಭಿನ್ನವಾಗಿರುತ್ತದೆ. ಅಂದರೆ, ಬಾರ್ ಆಕಾರದ ಡ್ಯುಯಲ್ ಕ್ಯಾಮೆರಾ ವಿನ್ಯಾಸವನ್ನು ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಒನ್‌ಪ್ಲಸ್ 13T ಫೋನ್ 6200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ನಿರೀಕ್ಷೆಯಿದೆ. ಕಂಪನಿಯು OnePlus 13 ಮೊಬೈಲ್ ಅನ್ನು 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ತಂತ್ರಜ್ಞಾನ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗುವುದು.


Click it and Unblock the Notifications








