Home
ಸುದ್ದಿಜಾಲ

ಭರ್ಜರಿ ಸಿಹಿಸುದ್ದಿ: ಭಾರತದಲ್ಲಿ OnePlus 15R ಲಾಂಚ್ ಡೇಟ್ ಫಿಕ್ಸ್!

OnePlus ತನ್ನ ಮುಂಬರುವ ಬಹುನಿರೀಕ್ಷಿತ ಮಿಡ್‌ರೇಂಜ್ ಪ್ರೀಮಿಯಂ ಸ್ಮಾರ್ಟ್‌ಫೋನ್ 'OnePlus 15R' ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.! ಭಾರತದಲ್ಲಿ ಮುಂಬರುವ ಡಿಸೆಂಬರ್ 17 ರಂದು OnePlus 15R ಮತ್ತು OnePlus Pad Go 2 ಎರಡೂ ಸಾಧನಗಳನ್ನು ಪರಿಚಯಿಸುವುದಾಗಿ ಕಂಪೆನಿಯು ತಿಳಿಸಿದ್ದು, OnePlus 15R ಫೋನ್ ಮತ್ತು OnePlus Pad Go 2 ಎರಡೂ ಸಾಧನಗಗಳ ಬಣ್ಣ ಆಯ್ಕೆಗಳು, ಲಭ್ಯತೆ ಮತ್ತು ಇತರೆ ಕೆಲವು ಗಮನಾರ್ಹ ಅಂಶಗಳನ್ನು ಟೀಸ್ ಮಾಡಿದೆ. ಈ ಮೂಲಕ ಮಿಡ್‌ರೇಂಜ್ ಪ್ರೀಮಿಯಂ ಫೋನ್ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿಯೊಂದು ದೊರೆತಿದೆ.!

OnePlus ಹೊಸ ಟೀಸರ್ ಒಂದನ್ನು ಪ್ರಕಟಿಸಿದ್ದು, ಇದರಲ್ಲಿ OnePlus 15R ಮತ್ತು OnePlus Pad Go 2 ಎರಡೂ ಸಾಧನಗಳಲ್ಲಿ ಡಿಸೆಂಬರ್ 17 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ದೃಢಪಡಿಸಿದೆ. ಇವುಗಳಲ್ಲಿ OnePlus 15R ಫೋನ್ Charcoal Black ಮತ್ತು Minty Green ಬಣ್ಣ ಆಯ್ಕೆಗಳಲ್ಲಿ ಬರಲಿದೆ. ಇತ್ತ OnePlus Pad 2 ಟ್ಯಾಬ್ Shadow Black ಮತ್ತು Lavender Drift ಬಣ್ಣಗಳಲ್ಲಿ ಬರಲಿದೆ. ಇನ್ನು ಬಿಡುಗಡೆಯಾದ ನಂತರ ಈ ಎರಡು ಸಾಧನಗಳು ಅಮೆಜಾನ್ ಮತ್ತು OnePlus ಆನ್‌ಲೈನ್ ಸ್ಟೋರ್ ಮೂಲಕ ಖರೀದಿಗೆ ಲಭ್ಯವಿರುತ್ತವೆ ಎಂದು ತಿಳಿಸಲಾಗಿದೆ.

OnePlus 15 ಸಹೋದರನಾಗಿ ಮಿಡ್‌ರೇಂಜ್ ಪ್ರೀಮಿಯಂ OnePlus Ace 6T ಫೋನ್ ಶೀಘ್ರದಲ್ಲೇ ಚೀನಾದಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಫೋನ್ ಭಾರತ ಸೇರಿದಂತೆ ಜಾಗತಿಕವಾಗಿ OnePlus 15R ಆಗಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. OnePlus ಇತ್ತೀಚಿಗಷ್ಟೇ ತನ್ನ ಮುಂಬರುವ OnePlus Ace 6T ಅಧಿಕೃತ ಚಿತ್ರಗಳನ್ನು ಮೊದಲ ಬಾರಿಗೆ ಹಂಚಿಕೊಂಡಿತ್ತು. ಈ ಟೀಸರ್‌ಗಳು ಫೋನ್‌ನ ವಿನ್ಯಾಸ ಮತ್ತು ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡುತ್ತಿವೆ. ಅದರಂತೆ, ಮಿಡ್‌ರೇಂಜ್ OnePlus 15R ವಿನ್ಯಾಸವು ಸಹ ಫ್ಲಾಗ್‌ಶಿಪ್ OnePlus 15 ನಂತೆಯೇ ಇರುವುದನ್ನು ನಿರೀಕ್ಷಿಸಲಾಗಿದೆ.

ಭರ್ಜರಿ ಸಿಹಿಸುದ್ದಿ: ಭಾರತದಲ್ಲಿ OnePlus 15R ಲಾಂಚ್ ಡೇಟ್ ಫಿಕ್ಸ್!

OnePlus Ace 6T: ಫ್ಲಾಟ್ ಫ್ರೇಮ್ ವಿನ್ಯಾಸ ಮತ್ತು ಮೂರು ಬಣ್ಣಗಳ ಆಯ್ಕೆ!
OnePlus Weibo ನಲ್ಲಿ ಬಿಡುಗಡೆ ಮಾಡಿದ ಚಿತ್ರಗಳಲ್ಲಿ, OnePlus Ace 6T ಫೋನ್ ಅನ್ನು ಕಪ್ಪು, ಹಸಿರು ಮತ್ತು ನೇರಳೆ (violet) ಬಣ್ಣಗಳಲ್ಲಿ ನೋಡಬಹುದು. ಚಿತ್ರಗಳಲ್ಲಿ ಕಾಣಿಸಿರುವಂತೆ, ಈ ಫೋನ್‌ನಲ್ಲಿ ಸಮತಟ್ಟಾದ ಫ್ರೇಮ್ ಮತ್ತು ದೊಡ್ಡ ಫ್ಲಾಟ್ ಡಿಸ್‌ಪ್ಲೇ ಇದೆ. OnePlus ಹೇಳುವಂತೆ, ಇದರಲ್ಲಿ "ಅಲ್ಟ್ರಾ-ನ್ಯಾರೋ" ಬೆಸೆಲ್‌ಗಳು ಇರುತ್ತವೆ. ಇನ್ನು ಫೋನಿನ ಹಿಂಭಾಗದಲ್ಲಿ ಗ್ಲಾಸ್-ಫೈಬರ್ ಆಧಾರಿತ 'ಸಿಲ್ಕ್ ಗ್ಲಾಸ್' ಫಿನಿಷ್ ನೀಡಲಾಗಿರುವುದನ್ನು ಸಹ ನೋಡಬಹುದು.

OnePlus Ace 6T: OnePlus 15 ತರಹದ ಕ್ಯಾಮೆರಾ ಡಿಸೈನ್
ಹಿಂಭಾಗದ ಚೌಕಾಕಾರದ ಕ್ಯಾಮೆರಾ ಮೋಷೂಲ್ OnePlus 15 ನಲ್ಲಿ ಕಂಡ ವಿನ್ಯಾಸದಂತೆಯೇ ಇದೆ. ಕಂಡಂತೆ, ಇದು ಎರಡು ಕ್ಯಾಮೆರಾ ಸೆನ್ಸಾರ್‌ಗಳು ಮತ್ತು ಒಂದು LED ಫ್ಲ್ಯಾಶ್ ಹೊಂದಿದೆ. ಸೆನ್ಸಾರ್‌ಗಳು ಲಂಬವಾಗಿ ಪಿಲ್-ಆಕಾರದಲ್ಲಿ ಅಳವಡಿಸಲಾಗಿದೆ. ಇಷ್ಟೇ ಅಲ್ಲದೆ, ಈ Ace 6T ಫೋನಿನಲ್ಲಿಯೂ OnePlus ತನ್ನ ಫ್ಲಾಗ್‌ಶಿಪ್ ಮಾದರಿಗಳಲ್ಲಿರುವಂತೆ ಕಸ್ಟಮೈಸ್ ಮಾಡಬಹುದಾದ Plus Key ಒದಗಿಸಿದೆ. ಇದರಿಂದ ಈ ಫೋನ್ ಕುರಿತ ಹೈಪ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

OnePlus Ace 6T: 8,000mAh ಬ್ಯಾಟರಿ
OnePlus Ace 6T ಫೋನಿನ ವಿನ್ಯಾಸ ಮತ್ತು ಬಣ್ಣಗಳ ಜೊತೆಗೆ, ಕಂಪನಿಯು ಈ ಮುಂಬರುವ ಹ್ಯಾಂಡ್‌ಸೆಟ್‌ನ ಪ್ರಮುಖ ವಿವರಣೆಯನ್ನು ಸಹ ಬಹಿರಂಗಪಡಿಸಿದೆ. ಬ್ರ್ಯಾಂಡ್ ಪ್ರಕಾರ, ಮುಂಬರುವ OnePlus Ace 6T ಫೋನ್ ಬೃಹತ್ 8,000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವುದು ಖಚಿತವಾಗಿದೆ. ಇದು ಇಲ್ಲಿಯವರೆಗಿನ ಯಾವುದೇ OnePlus ಸ್ಮಾರ್ಟ್‌ಫೋನ್‌ಗಿಂತ ದೊಡ್ಡ ಸೆಲ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

OnePlus Ace 6T: Snapdragon 8 Gen 5 ಇರುವ ಚಿಪ್‌ಸೆಟ್ ಸಾಧ್ಯತೆ
OnePlus Ace 6T ಫೋನಿನ ಅಧಿಕೃತ ಸ್ಪೆಸಿಫಿಕೇಶನ್‌ಗಳ ಬಗ್ಗೆ OnePlus ಇನ್ನೂ ಸಂಪೂರ್ಣ ಮಾಹಿತಿ ನೀಡಿಲ್ಲ. ಆದರೆ ನಂಬಲರ್ಹ ಟಿಪ್‌ಸ್ಟರ್‌ @Gadgetsdata ಪ್ರಕಾರ, OnePlus Ace 6T ನಲ್ಲಿ Snapdragon 8 Gen 5 ಪ್ರೊಸೆಸರ್ ಇರಬಹುದು. ಇದು Snapdragon 8 Elite ಮಟ್ಟದ ಶಕ್ತಿಶಾಲಿ ಪ್ರದರ್ಶನ ನೀಡುವ ಸಾಧ್ಯತೆ ಇದೆ. ಕೆಲವು ವರದಿಗಳು ಈ ಫೋನ್ 50MP ಮುಖ್ಯ ಕ್ಯಾಮೆರಾ, ಮತ್ತು 15MP ಅಲ್ಟ್ರಾ-ವೈಡ್ ಕ್ಯಾಮೆರಾ ನಿರೀಕ್ಷೆಯಿದೆ ಎಂದು ಹೇಳಿವೆ.

OnePlus Pad Go 2: ಸ್ಟೈಲೊ ಬೆಂಬಲದೊಂದಿಗೆ ಹೊಸ ಟ್ಯಾಬ್ಲೆಟ್
ಮತ್ತೊಂದೆಡೆ, OnePlus Pad Go (2023) ಗೆ ಉತ್ತರಾಧಿಕಾರಿಯಾಗಿ OnePlus Pad Go 2 ಅನ್ನು Shadow Black ಮತ್ತು Lavender Drift ಎಂಬ ಎರಡು ಬಣ್ಣಗಳಲ್ಲಿ ಪರಿಚಯಿಸಲಾಗುತ್ತಿದೆ. ಈ ಟ್ಯಾಬ್ಲೆಟ್‌ನಲ್ಲಿ ಒಂದೇ ಒಂದು ಹಿಂಭಾಗದ ಕ್ಯಾಮೆರಾ ಇದ್ದರೂ, ಇದು ಬಳಕೆದಾರರು ನಿರೀಕ್ಷಿಸಿರುವ ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ, Stylo ಎಂದೇ ಕರೆಯುವ ಸ್ಟೈಲಸ್ ಬೆಂಬಲ, 5G ಸಂಪರ್ಕ ಮತ್ತು ಹಿಂಭಾಗದಲ್ಲಿ ಸಿಂಗಲ್ ಕ್ಯಾಮೆರಾ ವಿಶೇಷತೆಗಳನ್ನು ಖಚಿತಪಡಿಸಲಾಗಿದೆ.

Best Mobiles in India

English summary
OnePlus has officially confirmed the launch date for the OnePlus 15R. The company will unveil both the OnePlus 15R and the OnePlus Pad Go 2 in India on December 17. Alongside the announcement, OnePlus has also teased the colour options, availability details, and key features of both the upcoming smartphone and tablet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+