Subscribe to Gizbot

ಬಿಡುಗಡೆಯಾದ ವಾರದಲ್ಲೇ ಮಾರಾಟದಲ್ಲಿ ದಾಖಲೆ ನಿರ್ಮಿಸಿದ ‘ಒನ್ ಪ್ಲಸ್ 5’

Posted By: Precilla Dias

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳ ಆರ್ಭಟವು ಹೆಚ್ಚಾಗಿದ್ದು, ಬೆಳವಣಿಗೆಯ ದರವು ಅಧಿಕವಾಗಿದೆ. ಇದರಲ್ಲೂ ಚೀನಾ ಮೂಲದ ಕಂಪನಿಗಳ ಪಾಲು ಹೆಚ್ಚಿದ್ದು, ಅತೀ ಹೆಚ್ಚು ಮಾರಾಟವಾಗುವ ಮತ್ತು ಲಾಂಚ್ ಆಗುವ ಫೋನ್ ಗಳಲ್ಲಿ ಚೀನಾ ಕಂಪನಿಗಳದ್ದು ಸಿಂಹಪಾಲಾಗಿದೆ.

ಬಿಡುಗಡೆಯಾದ ವಾರದಲ್ಲೇ ಮಾರಾಟದಲ್ಲಿ ದಾಖಲೆ ನಿರ್ಮಿಸಿದ ‘ಒನ್ ಪ್ಲಸ್ 5’

ಇದೇ ಮಾದರಿಯಲ್ಲಿ ಹೊಸ ಅಲೆಯನ್ನು ಎಬ್ಬಿಸಿರುವ ಒನ್ ಪ್ಲಸ್ ಕಂಪನಿಯ ನೂತನ ಟಾಪ್ ಎಂಡ್ ಸ್ಮಾರ್ಟ್ ಫೋನ್ ಒನ್ ಪ್ಲಸ್ 5 ಭಾರತೀಯ ಮಾರುಕಟ್ಟೆಯಲ್ಲಿ ಹೊಸದೊಂದು ದಾಖಲೆಯನ್ನು ನಿರ್ಮಿಸಿದೆ ಎನ್ನಲಾಗಿದೆ.

ಕೇವಲ ಆನ್ ಲೈನ್ ಶಾಪಿಂಗ್ ತಾಣ ಅಮೆಜಾನ್ ನಲ್ಲಿ ಮಾತ್ರವೇ ಮಾರಾಟವಾಗುತ್ತಿದ್ದ ಒನ್ ಪ್ಲಸ್ 5 ಸ್ಮಾರ್ಟ್ ಪೋನ್, ಲಾಂಚ್ ಆದ ವಾರದಲ್ಲೇ ಅತೀ ಹೆಚ್ಚು ಮಾರಾಟವಾದ ಒನ್ ಪ್ಲಸ್ ಫೋನಾಗಿದೆ ಎಂದು ಒನ್ ಪ್ಲಸ್ ಟ್ವೀಟರ್ ನಲ್ಲಿ ತಿಳಿಸಿದೆ. ಇದು ಒನ್ ಪ್ಲಸ್ 3T ಫೋನಿಗಿಂತಲೂ ಮೂರುಪಟ್ಟು ಹೆಚ್ಚು ಮಾರಾಟವಾಗಿದೆ ಎಂದು ಹೇಳಕೊಂಡಿದೆ. '

ಭಾರತೀಯ ಮಾರುಕಟ್ಟೆಯಲ್ಲಿ ಒನ್ ಪ್ಲಸ್ 5 ಸ್ಮಾರ್ಟ್ ಫೋನ್ ಎರಡು ಆವೃತ್ತಿಯಲ್ಲಿ ಲಾಂಚ್ ಮಾಡಲಾಗಿತ್ತು. 6GB RAM ಮತ್ತು 64 GB ಇಂಟರ್ನಲ್ ಮೆಮೊರಿ ಹೊಂದಿರುವ ಒಂದು ಮಾದರಿ ಮತ್ತು 8GB RAM ಮತ್ತು 128 GB ಇಂಟರ್ನಲ್ ಮೆಮೊರಿ ಹೊಂದಿರುವ ಮತ್ತೊಂದು ಆವೃತ್ತಿಯನ್ನು ಪರಿಚಯಿಸಿತ್ತು. ಇವುಗಳನ್ನು ಕ್ರಮವಾಗಿ ರೂ.32,999 ಹಾಗೂ ರೂ.37,999ಕ್ಕೆ ಮಾರಾಟ ಮಾಡುತ್ತಿದೆ.

ಕೇಲವ ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲೇ ಅತ್ಯಂತ ವೇಗವಾಗಿ ಮಾರಾಟವಾಗುತ್ತಿರುವ ಸ್ಮಾರ್ಟ್ ಫೋನ್ ಗಳಲ್ಲಿ ಒನ್ ಪ್ಲಸ್ 5 ಮೊದಲನೆ ಸ್ಥಾನದಲ್ಲಿದೆ ಎನ್ನಲಾಗಿದೆ. ಈಗಾಗಲೇ ಗ್ರಾಹಕರು ಒನ್ ಪ್ಲಸ್ ಕೊಳ್ಳಲು ಮುಗಿಬಿಳುತ್ತಿದ್ದಾರೆ ಎನ್ನಲಾಗಿದೆ.

English summary
OnePlus 5 creates a sales record on Amazon India in the launch week outselling the sales of the OnePlus 3T.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot