Home
ಸುದ್ದಿಜಾಲ

'ಒನ್‌ಪ್ಲಸ್ 5' ಇಂದು ರಿಲೀಸ್..ಸ್ಮಾರ್ಟ್‌ಫೋನ್ ಖರೀದಿಸಲು ಏಕಿಷ್ಟು ಆತುರ!!?

ಅತ್ಯಂತ ಹೆಚ್ಚು ಫೀಚರ್ ಹೊಂದಿರುವ ಒನ್‌ಪ್ಲಸ್ 5 ಪ್ರಸ್ತುತ ಆಂಡ್ರಾಯ್ಡ್ ಪ್ರಪಂಚದಲ್ಲಿ ಹೊರಬರುತ್ತಿರುವ ಅತ್ಯುತ್ತಮ ಮೊಬೈಲ್ ಎನ್ನಲಾಗಿದೆ.!!

By Bhaskar N J

ಬಿಡುಗಡೆಗೂ ಮುನ್ನವೇ ದಾಖಲೆ ನಿರ್ಮಿಸಿರುವ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಪ್ರಪಂಚದಲ್ಲಿಯೇ ಕುತೋಹಲ ಮೂಡಿಸಿರುವ ಅತ್ಯಾಧುನಿಕ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 5 ಇಂದು ಬಹುತೇಕ ದೇಶಗಳಲ್ಲಿ ಬಿಡುಗಡೆಯಾಗುತ್ತಿದೆ.!! ಹಾಗಾಗಿ ಎಲ್ಲರೂ ಖರೀದಿಸಲು ಎಲ್ಲರೂ ಕಾಯುತ್ತಿದ್ದಾರೆ.!!

ಹೌದು, ಒನ್‌ಪ್ಲಸ್ ಕಂಪೆನಿಯ ಒನ್‌ಪ್ಲಸ್ 1 ಮತ್ತು ಒನ್‌ಪ್ಲಸ್ 3 ಸ್ಮಾರ್ಟ್‌ಫೋನ್ ಈಗಾಗಲೇ ಹಿಟ್ ಆಗಿದ್ದು, ಒನ್‌ಪ್ಲಸ್ 5 ಫೋನ್ ಫೀಚರ್ಸ್ ಎಲ್ಲರ ಕಣ್ಣು ಕುಕ್ಕುತ್ತಿದೆ.!! ಅತ್ಯಂತ ಹೆಚ್ಚು ಫೀಚರ್ ಹೊಂದಿರುವ ಒನ್‌ಪ್ಲಸ್ 5 ಪ್ರಸ್ತುತ ಆಂಡ್ರಾಯ್ಡ್ ಪ್ರಪಂಚದಲ್ಲಿ ಹೊರಬರುತ್ತಿರುವ ಅತ್ಯುತ್ತಮ ಮೊಬೈಲ್ ಎನ್ನಲಾಗಿದೆ.!!

ಹಾಗಾದರೆ, ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಫೀಚರ್ಸ್ ಏನು? ಸ್ಮಾರ್ಟ್‌ಫೋನ್ ಖರೀದಿಸಲು ಜನರು ಏಕಿಷ್ಟು ಆತುರಪಡುತ್ತಿದ್ದಾರೆ? ಭಾರತದಲ್ಲಿ ಯಾವಾಗ ಬಿಡುಗಡೆ? ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

5.5. ಇಂಚ್ ಡಿಸ್‌ಪ್ಲೇ!!

5.5. ಇಂಚ್ ಡಿಸ್‌ಪ್ಲೇ!!

ಒನ್‌ಪ್ಲಸ್‌ 3 ಸ್ಮಾರ್ಟ್‌ಫೋನ್‌ 5.5. ಇಂಚ್ ಡಿಸ್‌ಪ್ಲೇ ಹೊಂದಿದ್ದು, 1440*2560 ಪಿಕ್ಸೆಲ್ ರೆಸ್ಯುಲೇಶನ್ ಹೊಂದಿದೆ. ಫುಲ್ ಹೆಚ್‌ಡಿ ಗುಣಮಟ್ಟವನ್ನು ಹೊಂದಿರುವ ಡಿಸ್‌ಪ್ಲೇ ಮ್ಲಟಿಮೀಡಿಯಾಗೆ ಹೆಚ್ಚು ಸಪೋರ್ಟ್ ನೀಡಲಿದೆ.!!

ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್!!

ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್!!

ಪ್ರಸ್ತುತ ಇರುವ ವಿಶ್ವದ ಅತ್ಯುತ್ತಮ ಪ್ರೊಸೆಸರ್ ಎಂದರೆ ಅದು ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್.!! ಒನ್‌ಪ್ಲಸ್‌ 5 ಸ್ಮಾರ್ಟ್‌ಫೋನ್ 2.4GHz ಆಕ್ಟ-ಕೋರ್ ಜೊತೆಗೆ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್ ಹೋಂದಿದೆ. ಅಂದರೆ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಅತ್ಯದ್ಬುತವಾಗಿರಲಿದೆ.!!

RAM ಮತ್ತು ಆಂತರಿಕ ಮೆಮೊರಿ.!!

RAM ಮತ್ತು ಆಂತರಿಕ ಮೆಮೊರಿ.!!

ಅತ್ಯುತ್ತಮ ಫ್ಲಾಗ್‌ಶಿಪ್ ಫೋನ್‌ ಆಗಿರುವ ಒನ್‌ಪ್ಲಸ್‌ 5 8GB RAM ಮತ್ತು 64GB ಆಮತರಿಕ ಮೆಮೊರಿಯನ್ನು ಹೊಂದಿದೆ.!! ಇದೇ ಮೊದಲ ಬಾರಿಗೆ 8GB RAM ಹೊತ್ತು ಬರುತ್ತಿರುವ ಒನ್‌ಪ್ಲಸ್‌ ಮೊಬೈಲ್ ಈಗಾಗಲೇ ಎಲ್ಲಡೆ ಕುತೋಹಲ ಮೂಡಿಸಿದೆ.!!

ಕ್ಯಾಮೆರಾ ಹೇಗಿದೆ ಗೊತ್ತಾ?

ಕ್ಯಾಮೆರಾ ಹೇಗಿದೆ ಗೊತ್ತಾ?

ಒನ್‌ಪ್ಲಸ್‌ 5 ಸ್ಮಾರ್ಟ್‌ಫೊನ್ ಬಹುತೇಕ ಎಲ್ಲಾ ಫೀಚರ್ಸ್‌ಗಳಲ್ಲಿಯೂ ತನ್ನ ಹವಾ ತೋರಿಸಿದ್ದು, 16 ಮೆಗಾಫಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 23 ಮೆಗಾಫಿಕ್ಸೆಲ್ ರಿಯರ್ ಕ್ಯಾಮೆರಾ ಹೊಂದಿದೆ.!! ಅಂದರೆ ಚಿತ್ರಗಳ ಗುಣಮಟ್ಟಕ್ಕೆ ಒನ್‌ಪ್ಲಸ್ 5 ಮುಂದೆ ಸಾಟಿ ಯಾವುದಿದೆ?

4000mAh ಬ್ಯಾಟರಿ ಮತ್ತು ಬೆಲೆ?

4000mAh ಬ್ಯಾಟರಿ ಮತ್ತು ಬೆಲೆ?

ಒನ್‌ಪ್ಲಸ್‌ 5 ಸ್ಮಾರ್ಟ್‌ಫೊನ್ ಅತ್ಯುತ್ತಮ 4000mAh ಬ್ಯಾಟರಿ ಶಕ್ತಿ ಹೊಂದಿದ್ದು, ಸಂಪೂರ್ಣ 48 ಗಂಟೆಗಳ ಪೂರ್ಣ ಕಾರ್ಯಾಚರಣೆ ನೀಡಲಿದೆ ಎಂದು ಒನ್‌ಪ್ಲಸ್‌ ಕಂಪೆನಿ ಹೇಳಿಕೊಂಡಿದೆ. ಆದರೆ,ಸ್ಮಾರ್ಟ್‌ಫೊನ್ ಬೆಲೆಯ ಬಗ್ಗೆ ನಿಖರ ಮಾಹಿತಿ ಹೊರಬಿದ್ದಿಲ್ಲ. ಮೂಲಗಳ ಪ್ರಕಾರ ಒನ್‌ಪ್ಲಸ್‌ 5 ಬೆಲೆ 30 ರಿಂದ 35 ಸಾವಿರ ರೂಪಾಯಿಗಳಾಗಿರಲಿದೆ.!!

ಭಾರತದಲ್ಲಿ ಯಾವಾಗ ಬಿಡುಗಡೆ?

ಭಾರತದಲ್ಲಿ ಯಾವಾಗ ಬಿಡುಗಡೆ?

ಇಂದು ಪ್ರಪಂಚದ ಹಲವು ದೇಶಗಳಲ್ಲಿ ಒನ್‌ಪ್ಲಸ್‌ 5 ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದ್ದು, ಇನ್ನೆರಡು ದಿವಸಗಳಲ್ಲಿ ಅಂದರೆ ಜೂನ್ 22 ರಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ.!!

Best Mobiles in India

English summary
OnePlus 5 is due to launch today at 12pm EDT (9:30pm IST). to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+