ಒನ್ ಪ್ಲಸ್ 5 ಮಿಡ್ ನೈಟ್ ಬ್ಲಾಕ್ ಮಾರುಕಟ್ಟೆಗೆ..!!

Written By: Lekhaka

ಭಾರತೀಯ ಮಾರುಕಟ್ಟೆಯಲ್ಲಿ ಸಂಚಲನವನ್ನು ಮೂಡಿಸಿದ್ದ ಒನ್ ಪ್ಲಸ್ 5 ಸ್ಮಾರ್ಟ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಗಳಿಸಿಕೊಂಡಿದೆ ಬಿಡುಗಡೆಯ ವಾರದಲ್ಲಿಯೇ ಔಟ್ ಆಫ್ ಸ್ಟಾಕ್ ಆಗಿದ್ದ ಒನ್ ಪ್ಲಸ್ 5 ಮತ್ತೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ, 8GB + 128 GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಮಿಡ್ ನೈಟ್ ಬ್ಲಾಕ್ ಆವೃತ್ತಿ ಮಾರಾಟಕ್ಕೆ ಲಭ್ಯವಿದೆ.

ಒನ್ ಪ್ಲಸ್ 5 ಮಿಡ್ ನೈಟ್ ಬ್ಲಾಕ್ ಮಾರುಕಟ್ಟೆಗೆ..!!

ಮಿಡ್ ನೈಟ್ ಬ್ಲಾಕ್ ಆವೃತ್ತಿ ಲಿಮಿಟೆಡ್ ಸ್ಟಾಕ್ ಆಗಿದ್ದು, ಇದೇ ಆವೃತ್ತಿ ಬೇಕು ಎನ್ನುವವರು ಶೀಘ್ರವೇ ಫೋನ್ ಬುಕ್ ಮಾಡಬೇಕಾಗಿದೆ. ಇಲ್ಲವಾದರೆ ದೊರೆಯುವುದು ಕಷ್ಟವಾಗಲಿದೆ. ಅದರಲ್ಲೂ ಫ್ಲಾಷ್ ಸೇಲಿನಲ್ಲಿ ಕ್ಷಣ ಮಾತ್ರವೇ ಈ ಫೋನ್ ಉಳಿಯಲಿದೆ.

8GB + 128 GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಮಿಡ್ ನೈಟ್ ಬ್ಲಾಕ್ ಆವೃತ್ತಿಯ ಫೋನಿನ ಬೆಲೆ ರೂ.37,999 ಆಗಿದ್ದು, ಒನ್ ಪ್ಲಸ್ ತನ್ನ ನಂಬಿಕಸ್ಥ ಗ್ರಾಹಕರಿಗಾಗಿ ರೆಫರೆನ್ಸ್ ಎಂಬ ಆಯ್ಕೆಯನ್ನು ನೀಡಿದ್ದು, ಇದು ಕೇವಲ ಒನ್ ಪ್ಲಸ್ ಕೊಳ್ಳಲೇ ಬೇಕು ಎಂದವರನ್ನು ರೆಫರ್ ಮಾಡಬಹುದಾಗಿದೆ. ಇದರಿಂದ ರಿವರ್ಡ್ ಪಾಯಿಂಟ್ ಸಹ ದೊರೆಯಲಿದೆ.

ಒನ್ ಪ್ಲಸ್ 5 ಸ್ಮಾರ್ಟ್ ಫೋನ್ 5.5 ಇಂಚಿನ FHD ಅಮೊಲೈಡ್ ಡಿಸ್ ಪ್ಲೇಯನ್ನು ಹೊಂದಿದೆ ಎನ್ನಲಾಗಿದೆ. ಇದು 2.5D ಕರ್ವಡ್ ಗ್ಲಾಸ್ ಡಿಸೈನ್ ಹಾಗೂ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆಯನ್ನು ತನ್ನದಾಗಿಸಿಕೊಂಡಿದೆ.

ಈ ಫೋನಿನಲ್ಲಿ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 835 ಪ್ರೋಸೆಸರ್, ಆಡ್ರಿನೋ 540 GPU ಇದೆ. 6 GB RAM + 64GB ಇಂಟರ್ನಲ್ ಮೆಮೊರಿ ಮತ್ತು 8GB RAM + 128GB ಇಂಟರ್ನಲ್ ಮೆಮೊರಿ ಮಾದರಿಯಲ್ಲಿ ದೊರೆಯಲಿದೆ.

ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು, 16 MP+20MP ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ 16 MP ಕ್ಯಾಮೆರಾವನ್ನು ನೀಡಲಾಗಿದೆ. ಆಂಡ್ರಾಯ್ಡ್ ನ್ಯಾಗಾ ಮತ್ತು ಆಕ್ಸಿಜನ್ ಓಎಸ್ ಇರದಲ್ಲಿದೆ.

Read more about:
English summary
Thanks to popular demand, the OnePlus 5 Midnight Black 8GB+128GB variant is back in stock.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot