Subscribe to Gizbot

ಸೋಲ್ಡ್‌ಔಟ್ ಆಯ್ತು ಒನ್‌ಪ್ಲಸ್ 5..ಎಲ್ಲರಿಗೂ ಆಶ್ಚರ್ಯ ಆಗಿದ್ದು ಇದಕ್ಕೆ!!?

Written By:

ಬಿಡುಗಡೆಗೂ ಮುನ್ನವೇ ಭಾರತದಲ್ಲಿ ಹವಾ ಎಬ್ಬಿಸಿದ್ದ ಒನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಕೇವಲ ಮೂರರಿಂದ ನಾಲ್ಕುಗಂಟೆಗಳಲ್ಲಿ ಅಮೆಜಾನ್‌ನಲ್ಲಿ ಸೋಲ್ಡ್‌ಔಟ್ ಆಗಿದೆ.!! ಇದೇ ಮೊದಲ ಬಾರಿಗೆ ಹೈ ಎಂಡ್‌ ಸ್ಮಾರ್ಟ್‌ಫೋನ್‌ ಒಂದು ಇಂತಹ ಮಾರಾಟವಾಗಿದ್ದು, ಎಲ್ಲರನ್ನು ಆಶ್ಚರ್ಯಚಿಕಿತರನ್ನಾಗಿಸಿದೆ.!!

ಇತ್ತೀಚಿಗೆ ಭಾರತದ ಮಾರುಕಟ್ಟೆಗೆ ಕಾಲಿಟ್ಟರೂ ಕೂಡ ಅತ್ಯುತ್ತಮ ಫೀಚರ್ಸ್ ಮೂಲಕ ಭಾರತೀಯರನ್ನು ಸೆಳೆದಿರುವ ಒನ್‌ಪ್ಲಸ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಬಿಸಿತುಪ್ಪದಂತೆ ಖರ್ಚಾಗುತ್ತಿದ್ದು, ಸ್ಮಾರ್ಟ್‌ಫೋನ್ ಅತ್ಯದ್ಭುತವಾಗಿದೆ ಎಂದು ಸ್ಮಾರ್ಟ್‌ಫೋನ್ ಬಳಕೆದಾರರು ಹೇಳುತ್ತಿದ್ದಾರೆ.!!

ಇನ್ನು ಇದೇ 27 ನೇ ತಾರೀಖು ಮತ್ತೆ ಅಮೆಜಾನ್‌ನಲ್ಲಿ ಫ್ಲಾಶ್‌ಸೇಲ್‌ನಲ್ಲಿ ಲಭ್ಯವಿದ್ದು, 32,999 ಮತ್ತು 37,999 ರೂಪಾಯಿ ಬೆಲೆಯ ಒನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಬಿಸಿತುಪ್ಪದಂತೆ ಖರ್ಚಾಗಲು ಕಾರಣವೇನು? ಮೊಬೈಲ್ ವಿಶೆಷತೆ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.5. ಇಂಚ್ ಡಿಸ್‌ಪ್ಲೇ!!

5.5. ಇಂಚ್ ಡಿಸ್‌ಪ್ಲೇ!!

ಒನ್‌ಪ್ಲಸ್‌ 3 ಸ್ಮಾರ್ಟ್‌ಫೋನ್‌ 5.5. ಇಂಚ್ ಡಿಸ್‌ಪ್ಲೇ ಹೊಂದಿದ್ದು, 1440*2560 ಪಿಕ್ಸೆಲ್ ರೆಸ್ಯುಲೇಶನ್ ಹೊಂದಿದೆ. ಫುಲ್ ಹೆಚ್‌ಡಿ ಗುಣಮಟ್ಟವನ್ನು ಹೊಂದಿರುವ ಡಿಸ್‌ಪ್ಲೇ ಮಲ್ಟಿಮೀಡಿಯಾಗೆ ಅತ್ಯಂತ ಸುಂದರ ಅನುಭವ ನೀಡಲಿದೆ.!!

ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್!!

ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್!!

ಪ್ರಸ್ತುತ ಇರುವ ವಿಶ್ವದ ಅತ್ಯುತ್ತಮ ಪ್ರೊಸೆಸರ್ ಎಂದರೆ ಅದು ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್.!! ಒನ್‌ಪ್ಲಸ್‌ 5 ಸ್ಮಾರ್ಟ್‌ಫೋನ್ 2.4GHz ಆಕ್ಟ-ಕೋರ್ ಜೊತೆಗೆ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್ ಹೋಂದಿದೆ. ಅಂದರೆ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಅತ್ಯದ್ಬುತವಾಗಿರಲಿದೆ.!!

RAM ಮತ್ತು ಆಂತರಿಕ ಮೆಮೊರಿ.!!

RAM ಮತ್ತು ಆಂತರಿಕ ಮೆಮೊರಿ.!!

ಅತ್ಯುತ್ತಮ ಫ್ಲಾಗ್‌ಶಿಪ್ ಫೋನ್‌ ಆಗಿರುವ ಒನ್‌ಪ್ಲಸ್‌ 5 6GB ಮತ್ತು 32GB ಹಾಗೂ 8GB RAM ಮತ್ತು 64GB ಆಂತರಿಕ ಮೆಮೊರಿಯನ್ನು ಹೊಂದಿರುವ ಎರಡು ವೆರಿಯಂಟ್‌ಗಳಲ್ಲಿ ಬಿಡುಗಡೆಯಾಗಿದೆ.! ಇದೇ ಮೊದಲ ಬಾರಿಗೆ 8GB RAM ಹೊತ್ತು ಬರುತ್ತಿರುವ ಒನ್‌ಪ್ಲಸ್‌ ಮೊಬೈಲ್ ಈಗಾಗಲೇ ಎಲ್ಲಡೆ ಕುತೋಹಲ ಮೂಡಿಸಿದೆ.!!

ಕ್ಯಾಮೆರಾ ಹೇಗಿದೆ ಗೊತ್ತಾ?

ಕ್ಯಾಮೆರಾ ಹೇಗಿದೆ ಗೊತ್ತಾ?

ಒನ್ಪ್ಲಸ್‌ 5 ಸ್ಮಾರ್ಟ್‌ಫೊನ್ ಬಹುತೇಕ ಎಲ್ಲಾ ಫೀಚರ್ಸ್‌ಗಳಲ್ಲಿಯೂ ತನ್ನ ಹವಾ ತೋರಿಸಿದ್ದು, 16 ಮೆಗಾಫಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 23 ಮೆಗಾಫಿಕ್ಸೆಲ್ ರಿಯರ್ ಕ್ಯಾಮೆರಾ ಹೊಂದಿದೆ.!! ಅಂದರೆ ಚಿತ್ರಗಳ ಗುಣಮಟ್ಟಕ್ಕೆ ಒನ್‌ಪ್ಲಸ್ 5 ಮುಂದೆ ಸಾಟಿ ಯಾವುದಿದೆ?

 4000mAh ಬ್ಯಾಟರಿ ಮತ್ತು ಬೆಲೆ?

4000mAh ಬ್ಯಾಟರಿ ಮತ್ತು ಬೆಲೆ?

ಒನ್‌ಪ್ಲಸ್‌ 5 ಸ್ಮಾರ್ಟ್‌ಫೊನ್ ಅತ್ಯುತ್ತಮ 4000mAh ಬ್ಯಾಟರಿ ಶಕ್ತಿ ಹೊಂದಿದ್ದು, ಡ್ಯಾಶ್ ಚಾರ್ಜಿಂಗ್ ಸೌಲಭ್ಯ ಲಭ್ಯವಿದೆ. ಸಂಪೂರ್ಣ 48 ಗಂಟೆಗಳ ಪೂರ್ಣ ಕಾರ್ಯಾಚರಣೆ ನೀಡಲಿದೆ ಎಂದು ಒನ್‌ಪ್ಲಸ್‌ ಕಂಪೆನಿ ಹೇಳಿದೆ. ಇನ್ನು ಸ್ಕ್ರಾಚ್‌ಗಾರ್ಡ್‌ ಮೊದಲೇ ಇನ್‌ಸ್ಟಾಲ್ ಆಗಿದೆ!!

ಓದಿರಿ:ಇಂದು ನಿಮಗೆ ಯಾವ ಸ್ಮಾರ್ಟ್‌ಫೋನ್ ಬೇಕು ಬುಕ್ ಮಾಡಿ!..ರೆಡ್‌ಮಿ.. ಮೊಟೊ..ಎಲ್ಲವೂ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The OnePlus 5 has been priced in India at Rs.32,999 for the 6GB RAM model to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot