Home
ಸುದ್ದಿಜಾಲ

ಮಾರುಕಟ್ಟೆಗೆ ಬರಲಿದೆ ಲಾವಾ ರೆಡ್ ಒನ್ ಪ್ಲಸ್ 5T ಸ್ಮಾರ್ಟ್ ಫೋನ್..!

By Lekhaka

ಮಾರುಕಟ್ಟೆಯಲ್ಲಿ ಒನ್ ಪ್ಲಸ್ ಹೊಸದಾಗಿ ಲಾಂಚ್ ಮಾಡಿರುವ ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಸಖತ್ ಸದ್ದು ಮಾಡುತ್ತಿದೆ. ಇದೇ ಕೆಲವು ದಿನಗಳ ಹಿಂದೆ ಒನ್ ಪ್ಲಸ್ 5T ಸ್ಟಾರ್ ವಾರ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದ ಕಂಪನಿ ಮತ್ತೊಂದು ಹೊಸ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯ ಮಾಡುವ ಸನಿಹದಲ್ಲಿದೆ ಎನ್ನಲಾಗಿದೆ.

ಮಾರುಕಟ್ಟೆಗೆ ಬರಲಿದೆ ಲಾವಾ ರೆಡ್ ಒನ್ ಪ್ಲಸ್ 5T ಸ್ಮಾರ್ಟ್ ಫೋನ್..!


ಹೊಸದಾಗಿ ಲಾಂಚ್ ಆಗುವ ಒನ್ ಪ್ಲಸ್ 5T ಲಾವಾ ರೆಡ್ ಬಣ್ಣದ ಆವೃತ್ತಿಯೂ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಲಿದೆ. ಮೂಲಗಳ ಪ್ರಕಾರ ಇದೇ ಜನವರಿ 26ರಂದು ಈ ಸ್ಮಾರ್ಟ್ ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಈ ಆವೃತ್ತಿಯ ಫೋನ್ ಹೆಚ್ಚು ಮಾರಾಟವಾಗುವ ಸಾಧ್ಯತೆ ಇದೆ.

ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಿದ್ದು, ಈ ಹೊಸ ಆವೃತ್ತಿಯ ಮೂಲಕ ಮತ್ತಷ್ಟು ಜನರನ್ನು ಆಕರ್ಷಿಸಲು ಮುಂದಾಗಿದೆ ಎನ್ನಲಾಗಿದೆ. 8GB RAM ಮತ್ತು 128GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳುವ ಈ ಫೋನ್ ಒನ್ ಪ್ಲಸ್ ಬಿಡುಗಡೆ ಮಾಡಿರುವ ಟಾಪ್ ಎಂಡ್ ಫೋನ್ ಆಗಿದೆ.

ಒನ್ ಪ್ಲಸ್ 5T ಸ್ಮಾರ್ಟ್ ಫೋನಿನಲ್ಲಿ 6 ಇಂಚಿನ ಅಮೊಲೈಡ್ FHD ಪ್ಲಸ್ ಗುಣಮಟ್ಟದ ಡಿಸ್ ಪ್ಲೇಯನ್ನು ಹೊಂದಿದ್ದು, ಇದು 18:9 ಅನುಪಾತದಿಂದ ಕೂಡಿದೆ ಎನ್ನಲಾಗಿದೆ. ಅಲ್ಲದೇ ಇದರಲ್ಲಿ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 835 ಪ್ರೋಸೆಸೆರ್ ಅನ್ನು ಅಳವಡಿಸಲಾಗಿದ್ದು, ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

Star Wars ಸಿನಿಮಾ ಪ್ರಿಯರಿಗೆ Oneplus 5T Star Wars Edition ಸ್ಮಾರ್ಟ್‌ಫೋನ್ ಖರೀದಿಸುವ ಸುವರ್ಣಾವಕಾಶ!!

ಇದಲ್ಲದೇ ಒನ್ ಪ್ಲಸ್ 5T 3300mAh ಬ್ಯಾಟರಿಯೊಂದಿಗೆ ಡ್ಯಾಷ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ. ಆಂಡ್ರಾಯ್ಡ್ ಒರಿಯಾ ದಲ್ಲಿ ಕಾರ್ಯನಿರ್ವಹಿಸುವ ಈ ಫೋನ್ ಹಿಂಭಾಗದಲ್ಲಿ 16MP + 20MP ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಇದು ರೂ, 37,999ಕ್ಕೆ ದೊರೆಯುತ್ತಿದೆ.

Best Mobiles in India

English summary
OnePlus 5T Lava Red color variant was launched in China initially. Now, it looks like this variant of the OnePlus 5T could be launched in India on January 26. The device is said to be available only in the high-end variant with 8GB RAM and 128GB storage space and carry the same price tag of Rs. 37,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+