ಹೆಚ್ಚು ಸುಧಾರಿತ ವೈಶಿಷ್ಟ್ತೆಗಳೊಂದಿಗೆ ಒನ್ ಪ್ಲಸ್ 5 ಟಿ ಚಾಲನೆ
ಗುರುವಾರ ನಡೆದ ಈವೆಂಟ್ ಒಂದರಲ್ಲಿ ಒನ್ ಪ್ಲಸ್ 5 ಟಿ ಅಧಿಕೃತವಾಗಿ ಬಿಡುಗಡೆಯಾಗಿದ್ದು ಭಾರತದಲ್ಲಿ ಪಿವಿಆರ್ ಸ್ಕ್ರೀನ್‌ಗಳಲ್ಲಿ ಈ ಮಾಹಿತಿ ದೊರಕಿದೆ. ಇದರ ಹಿಂದಿನ ಆವೃತ್ತಿಗಳಿಗೆ ಹೋಲಿಸಿದಲ್ಲಿ ಈ ಫೋನ್ ಹೆಚ್ಚು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಸುಧಾರಿತ ಕ್ಯಾಮರಾ, ಒನ್ ಪ್ಲಸ್‌ನ 5 ನ ಅದೇ ಬೆಲೆ 18:9 ಡಿಸ್‌ಪ್ಲೇಯು ಹೆಚ್ಚು ಸುಧಾರಿತ ವೈಶಿಷ್ಟ್ಯಪುರ್ಣ ಡಿವೈಸ್ ಅನ್ನಾಗಿ ರೂಪಿಸಿದೆ. ಆಂಡ್ರಾಯ್ಡ್ ನಾಗಟ್ 7.1.1 ಇದರಲ್ಲಿರುವುದೇ ಹೆಚ್ಚು ಮಹತ್ವಪೂರ್ಣ ಅಂಶವಾಗಿದೆ.

ಕಂಪನಿ ಹೇಳಿರುವಂತೆ ಡಿವೈಸ್ ಶೀಘ್ರದಲ್ಲಿಯೇ ಆಂಡ್ರಾಯ್ಡ್ 8.0 ಅಪ್‌ಡೇಟ್ ಅನ್ನು ಪಡೆದುಕೊಳ್ಳಲಿದೆ ಎಂದಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಒನ್ ಪ್ಲಸ್ ಆಂಡ್ರಾಯ್ಡ್ 8.0 ಒರಿಯೊ ಬೀಟಾವನ್ನು ತನ್ನ ಒನ್ ಪ್ಲಸ್ 5 ಗಾಗಿ ಬಿಡುಗಡೆ ಮಾಡಿತ್ತು. ಅಂತೆಯೇ ಒನ್ ಪ್ಲಸ್ 5 ಟಿ ಕೂಡ ಬೀಟಾವನ್ನು ಡಿಸೆಂಬರ್ ಕೊನೆಯಲ್ಲಿ ಪಡೆದುಕೊಳ್ಳಲಿದೆ. ಅಂತೆಯೆ 8.0 ಆವೃತ್ತಿಯ ಬೀಟಾ ಹಸ್ತಚಾಲಿತವಾಗಿ ಒನ್ ಪ್ಲಸ್ ಸ್ಮಾರ್ಟ್‌ಫೋನ್‌ಗಳೆಲ್ಲವೂ ಪಡೆದುಕೊಳ್ಳಲಿದೆ.
ಆಂಡ್ರಾಯ್ಡ್ ಒರಿಯೊದ ಒಟಿಎ ಅಪ್‌ಡೇಟ್ ಅನ್ನು ನಿಖರವಾಗಿ ಕಂಪನಿ ಯಾವಾಗ ಬಿಡುಗಡೆ ಮಾಡುತ್ತದೆ ಎಂಬುದನ್ನು ಇನ್ನೂ ಘೋಷಣೆ ಮಾಡಬೇಕಿದೆ ಇನ್ನು ಸ್ಟೇಬಲ್ 8.0 ಬಿಡುಗಡೆಯು 2018 ರ ಮುಂಚೆಯೇ ಫೋನ್‌ಗಳಲ್ಲಿ ಬರಲಿದೆ. ಈ ಅಪ್‌ಡೇಟ್ ಜೊತೆಗೆ ಕಂಪನಿಯು ಅತ್ಯಾಧುನಿಕ ಓಕ್ಸಿಜನ್ ಓಎಸ್ ಅನ್ನು ಮುಂದಿನ ವರ್ಷದ ಒಳಗಾಗಿ ಬಿಡುಗಡೆ ಮಾಡಲಿದೆ.
ಒರಿಯೊ 8.0 ಹೆಚ್ಚು ವೇಗದ ಬೂಸ್ಟರ್ ಸಮಯದೊಂದಿಗೆ ಬಂದಿದ್ದು ಅಟೊ ಫಿಲ್, ನೋಟಿಫಿಕೇಶನ್ ಡಾಟ್ಸ್, ಮರುವಿನ್ಯಾಸಗೊಂಡ ಸೆಟ್ಟಿಂಗ್ಸ್, ಸ್ಮಾರ್ಟ್ ಟೆಕ್ಸ್ಟ್ ಸೆಲೆಕ್ಶನ್, ರಿವೇಂಪ್‌ಡ್ ಗೂಗಲ್ ನೌ, ಗೂಗಲ್ ಪ್ಲೇ ಮ್ಯೂಸಿಕ್ ನೋಟಿಫಿಕೇಶನ್ ಮತ್ತು ಪಿಕ್ಚರ್ ಇನ್ ಪಿಕ್ಚರ್ ಮೋಡ್ ಅನ್ನು ಒಳಗೊಂಡಿದೆ.
ಇತ್ತೀಚೆಗೆ ತಾನೇ ಒನ್‌ಪ್ಲಸ್ 3 ಮತ್ತು ಒನ್‌ಪ್ಲಸ್ 3 ಟಿ ಆಂಡ್ರಾಯ್ಡ್ ಒರಿಯೊಗಾಗಿ ಓಪನ್ ಬೀಟಾವನ್ನು ಪಡೆದುಕೊಂಡಿತ್ತು. ಈ ವರ್ಷದ ಕೊನೆಯಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಸ್ಟೇಬಲ್ ಅಪ್‌ಡೇಟ್ ಅನ್ನು ಪಡೆದುಕೊಳ್ಳಲಿವೆ. ಒನ್ ಪ್ಲಸ್ 5 ಟಿ ಎರಡು ಆವೃತ್ತಿಗಳಲ್ಲಿ ಬರಲಿದ್ದು 6ಜಿಬಿ/8ಜಿಬಿ RAM ಅನ್ನು ಹೊಂದಿದೆ ಅಂತೆಯೇ ಸ್ಟೋರೇಜ್ 64/128ಜಿಬಿಯಾಗಿದೆ. ಬೆಲೆ 32,999 ಮತ್ತು 37,999 ಆಗಿದೆ. ಈ ಫೋನ್ ನವೆಂಬರ್ 21 ರಿಂದ ಮಾರಾಟಕ್ಕೆ ಬರಲಿದ್ದು ಅಮೆಜಾನ್ ಪ್ರೈಮ್ ಮೆಂಬರ್ಸ್ ಮತ್ತು ನಿಜವಾದ ಫ್ಲ್ಯಾಶ್ ಸೇಲ್ ನವೆಂಬರ್ 28 ರಿಂದ ಅಮೆಜಾನ್ ಇಂಡಿಯಾದ ಮೂಲಕ ನಡೆಯಲಿದೆ.


Click it and Unblock the Notifications








