Subscribe to Gizbot

ಅಮೆಜಾನ್‌ನಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಬಂಪರ್..!

Posted By: Lekhaka

ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಅಧಿಕೃತವಾಗಿ ಲಾಂಚ್ ಆಗದೆ ಇದ್ದರೂ ಸಹ ಸ್ಮಾರ್ಟ್ ಫೋನ್ ಕುರಿತಂತೆ ಸಾಕಷ್ಟು ವಿಚಾರಗಳು ಬಹಿರಂಗಗೊಂಡಿದೆ. ಈಗಾಗಲೇ ಸ್ಮಾರ್ಟ್ ಫೋನ್ ಶಿಪಿಂಗ್ ಆಗುತ್ತಿದ್ದು, ಹೊಸದಾಗಿ ಸ್ಮಾರ್ಟ್ ಫೋನ್ ಖರೀದಿಸುವ ಮುನ್ನವೇ ಆಂಡ್ರಾಯ್ಡ್ P ಬಿಟಾ ಆಪ್ ಡೇಟ್ ಅನ್ನು ಕಂಪನಿ ನೀಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ಅಮೆಜಾನ್ ಸಹ ಈ ಸ್ಮಾರ್ಟ್ ಫೋನ್ ಮಾರಾಟಕ್ಕೆ ಸಿದ್ಧತೆಯನ್ನು ನಡೆಸಿದೆ.

ಅಮೆಜಾನ್‌ನಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಬಂಪರ್..!

ಮೇ 17ರಂದು ಫಾಸ್ಟ್ ಮತ್ತು ಫಸ್ಟ್ ಸೇಲ್ ಆಯೋಜಿಸಿದ್ದು, ಅಂದೇ ಈ ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಲಾಂಚ್ಆ ಗಲಿದೆ. ಅಂದು ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಖರೀದಿಸುವವರಿಗೆ ರೂ.1000 ಗಿಫ್ಟ್ ಕಾರ್ಡ್ ಸಹ ದೊರೆಯಲಿದೆ. ಅಲ್ಲದೇ ಅಮೆಜಾನ್ ಪೇ ಬ್ಯಾಲೆನ್ಸ್ ಮೂಲಕ ರೂ,1000 ಕ್ಯಾಷ್ ಬ್ಯಾಕ್ ಸಹ ಪಡೆದುಕೊಳ್ಳಬಹುದಾಗಿದೆ.

ಇದಲ್ಲದೇ ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ನೀಡುವ ಒಂದು ವರ್ಷದ ಗ್ಯಾರೆಂಟಿಯೊಂದಿಗೆ ಮತ್ತೆ ಮೂರು ತಿಂಗಳ ಗ್ಯಾರೆಂಟಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಇದರೊಂದಿಗೆ ನೀಡಲಾಗಿದೆ.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?

ಕ್ಯಾಷ್ ಬ್ಯಾಕ್ ಪಡೆದುಕೊಳ್ಳುವುದು ಹೇಗೆ..?

ಹಂತ 01: ಮೊದಲು ಮೇ 13 ರಿಂದ ಮೇ 16ರ ವರೆಗೆ ರೂ.1000ಕ್ಕೆ ಗಿಫ್ಟ್ ಕಾರ್ಡ್ ಅನ್ನು ಖರೀದಿಸಿರಿ.

ಹಂತ 02: ಈ ಗಿಫ್ಟ್ ಕಾರ್ಡ್ ಅನ್ನು ಮೇ 21 ಮತ್ತು 22 ರಂದು ನಡೆಯಲಿರುವ ಸೇಲ್ ನಲ್ಲಿ ಖರೀದಿಸಿ. ರೂ. 1000ದ ಗಿಫ್ಟ್ ಕಾರ್ಡ್ ಗೆ ರೂ.2000ದ ಮೌಲ್ಯವನ್ನು ಪಡೆದುಕೊಳ್ಳುವಿರಿ.

ಈಗಾಗಲೇ ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಅನ್ನು ದೇಶದ ಮೂಲೆ ಮೂಲೆಗೂ ತಲುಪಿಸುವ ಸಲುವಾಗಿ ಮೇ 21 ಮತ್ತು 22 ರಂದು ಮುಂಬೈ, ಬೆಂಗಳೂರು, ದೆಹಲಿ, ಚೆನ್ನೈ, ಪುಣೆ, ಕೊಲ್ಕತ್ತಾ, ಹೈದ್ರಾಬಾದ್ ಮತ್ತು ಅಹಮದಾಬಾದ್ ನಲ್ಲಿ ಪಾಪ್ ಪಾಪ್ ಇವೆಂಟ್ ಗಳನ್ನು ಆಯೋಜನೆ ಮಾಡಿದೆ ಎನ್ನಲಾಗಿದೆ.

ಮುಂಬೈನಲ್ಲಿ ಈ ಸ್ಮಾರ್ಟ್ ಫೋನ್ ಮೇ 17ರಂದು ಲಾಂಚ್ ಆಗಲಿದ್ದು, ಮಾರುಕಟ್ಟೆಯಲ್ಲಿ ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಈಗಾಗಲೇ ಹವಾ ಎಬ್ಬಿಸಿದೆ ಎನ್ನಲಾಗಿದೆ.

English summary
OnePlus 6 Fast AF Sale to happen from May 13 to May 16 on Amazon. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot