Home
ಸುದ್ದಿಜಾಲ

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಒನ್‌ಪ್ಲಸ್ ಇತಿಹಾಸದಲ್ಲೇ ಬೆಸ್ಟ್ ಫೋನ್‌..!

By Srinidhi

ಈಗಾಗಲೇ ಮಾರುಕಟ್ಟೆಗೆ 2018ರಲ್ಲಿ ಒಂದಷ್ಟು ಆಂಡ್ರಾಯ್ಡ್ ಟಾಪ್ ಎಂಡ್ ಸ್ಮಾರ್ಟ್ ಫೋನ್‌ಗಳು ಕಾಣಿಸಿಕೊಂಡಿವೆ. ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9, ಶಿಯೋಮಿ ಮಿ ಮಿಕ್ಸ್ 2s, ಹುವಾವೆ P2 ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಅಬ್ಬರಿಸುತ್ತಿದ್ದು, ಇವುಗಳ ನಂತರ ಸದ್ಯ ಮಾರುಕಟ್ಟೆಗೆ ಬರಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ಮೇಲೆ ಎಲ್ಲರ ಗಮನವು ಹರಿದಿದೆ.

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಒನ್‌ಪ್ಲಸ್ ಇತಿಹಾಸದಲ್ಲೇ ಬೆಸ್ಟ್ ಫೋನ್‌..!

ಈಗಾಗಲೇ ಮಾರುಕಟ್ಟೆಯಲ್ಲಿ ಒನ್‌ ಪ್ಲಸ್ 5T ಸ್ಮಾರ್ಟ್‌ಫೋನ್ ಔಟ್ ಆಫ್ ಸ್ಟಾಕ್ ಆಗಿದ್ದು, ಈ ಹಿನ್ನಲೆಯಲ್ಲಿ ಒನ್‌ಪ್ಲಸ್ 6 ಬರುವಿಕೆಯನ್ನು ಆಂಡ್ರಾಯ್ಡ್ ಬಳಕೆದಾರರು ಕಾಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಕುರಿತು ಮಾಹಿತಿಯೊಂದು ಲೀಕ್ ಆಗಿದ್ದು, ಈ ಫೋನಿನ ಹಿಂಭಾಗದಲ್ಲಿ ಒನ್‌ಪ್ಲಸ್ ವುಡನ್ ಪ್ಯಾನಲ್ ನೀಡಲಿದೆ ಎನ್ನಲಾಗಿದೆ.

ಮಾರುಕಟ್ಟೆಗೆ ನಿನ್ನೇ ತಾನೇ ಪರಿಚಯಗೊಂಡ ಶಿಯೋಮಿ ಮಿ ಮಿಕ್ಸ್ 2s ಸ್ಮಾರ್ಟ್‌ಫೋನಿನಲ್ಲಿ ಸೆರಾಮಿಕ್ ಬ್ಯಾಕ್ ಪ್ಯಾನಲ್ ಅನ್ನು ಕಾಣಬಹುದಾಗಿದ್ದು, ಇದೇ ಮಾದರಿಯಲ್ಲಿ ಒಪ್‌ಪ್ಲಸ್ ತನ್ ಸ್ಮಾರ್ಟ್‌ಫೋನ್ ಅನ್ನು ಯೂನಿಕ್ ಮಾಡಬೇಕು ಎನ್ನುವ ಸಲುವಾಗಿ ವುಡನ್ ಫಿನಿಷಿಂಗ್‌ಅನ್ನು ತನ್ನ ನೂತನ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ನೀಡಲಿದೆ ಎನ್ನುವ ಮಾಹಿತಿಯೂ ದೊರೆತಿದೆ.

ತುಂಬ ತೆಳುವಾದ ವಿನ್ಯಾಸವನ್ನು ಹೊಂದಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ 3.5mm ಇಯರ್ ಫೋನ್ ಜಾಕ್ ಅನ್ನು ನೀಡಲಾಗಿದ್ದು, ಇದು ಮೇಲ್ಭಾಗದ ಬದಲಾಗಿ ಕೆಳಭಾಗದಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಹಿಂಭಾಗದ ಮಧ್ಯ ಭಾಗದಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಉತ್ತಮ ಫೋಟೋಗಳನ್ನು ತೆಗೆಯಲು ಇದು ಸಹಾಯಕಾರಿಯಾಗಿದೆ.

Star Wars ಸಿನಿಮಾ ಪ್ರಿಯರಿಗೆ Oneplus 5T Star Wars Edition ಸ್ಮಾರ್ಟ್‌ಫೋನ್ ಖರೀದಿಸುವ ಸುವರ್ಣಾವಕಾಶ!!

ಈ ಸ್ಮಾರ್ಟ್‌ಫೋನಿನಲ್ಲಿ 6.28 ಇಂಚಿನ 19:9 ಅನುಪಾತದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 6GB/8GB RAM ಆಯ್ಕೆಯೊಂದಿಗೆ ಮಾರಾಟವಾಗಲಿದೆ. ಅಲ್ಲದೇ ಸ್ನಾಪ್‌ಡ್ರಾಗನ್ 845 ಚಿಪ್ ಸೆಟ್ ಅನ್ನು ಇದರಲ್ಲಿ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 20MP ಸೆಲ್ಫಿ ಕ್ಯಾಮೆರಾವನ್ನು ನೀಡುವ ಸಾಧ್ಯತೆ ಇದ್ದು, ರೂ.40000ದ ಅಸುಪಾನಿನಲ್ಲಿ ಮಾರಾಟವಾಗುವ ಸಾಧ್ಯತೆ ಇದೆ.

Best Mobiles in India

English summary
OnePlus 6 leaked image hints at wooden back panel. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+