Home
ಸುದ್ದಿಜಾಲ

ಫಸ್ಟ್ ಡೇ ಫಸ್ಟ್ ಮೊಬೈಲ್ ಖರೀದಿಸೋ ಅವಕಾಶ.. ಯಾರಿಗುಂಟು ಯಾರಿಗಿಲ್ಲ...!!

By Gizbot Bureau

ಫಸ್ಟ್ ಡೇ ಫಸ್ಟ್ ಶೋ ಫಿಲ್ಮ್ ನೋಡಿದ ಹಾಗೆ ಫಸ್ಟ್ ಡೇ ಫಸ್ಟ್ ಮೊಬೈಲ್ ಖರೀದಿಸೋ ಆಸೆ ನಿಮಗಿದ್ದರೆ.,, ಖಂಡಿತ ಇವತ್ತು ಸರಿಯಾದ ಸಮಯ. ಯಾಕೆ ಅಂತ ಕೇಳ್ತಾ ಇದ್ದೀರಾ... ಎಸ್. ಇವತ್ತು ಮಧ್ಯರಾತ್ರಿಯಿಂದ ಮೋಸ್ಟ್ ಎಕ್ಸ್ ಪೆಕ್ಟೆಟೆಡ್ ಫೋನ್ ಒನ್ ಪ್ಲಸ್ 6 ನ ಸಿಲ್ಕ್ ವೈಟ್ ಮೊಬೈಲ್ ಗಳು ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಅಮೇಜಾನ್ ಇಂಡಿಯಾ ಮತ್ತು ಒನ್ ಪ್ಲಸ್ ಸ್ಟೋರ್ ನಲ್ಲಿ ಈ ಮೊಬೈಲ್ ಇವತ್ತು ಖರೀದಿಸಲು ಸಿಗಲಿದೆ.

ಫಸ್ಟ್ ಡೇ ಫಸ್ಟ್ ಮೊಬೈಲ್ ಖರೀದಿಸೋ ಅವಕಾಶ.. ಯಾರಿಗುಂಟು ಯಾರಿಗಿಲ್ಲ...!!


ಒನ್ ಪ್ಲಸ್ 6 ನಾಲ್ಕು ವೇರಿಯಂಟ್ ನಲ್ಲಿ ಸಿಗುತ್ತೆ. ಮಿರರ್ ಬ್ಲಾಕ್, ಮಿಡ್ ನೈಟ್ ಬ್ಲಾಕ್, ಸಿಲ್ಕ್ ವೈಟ್ ಲಿಮಿಟೆಡ್ ಎಡಿಷನ್ ಮತ್ತು ಮಾರ್ವಲ್ ಏವೆಂಜರ್ಸ್ ಲಿಮಿಟೆಡ್ ಎಡಿಷನ್. ಐಫೋನ್ ಎಕ್ಸ್ ನಂತೆ ನಾಚ್ ಇದ್ದು ಹಿಂಭಾಗದಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಹೊಂದಿರುತ್ತದೆ.. 8ಜಿಬಿ RAM ಮತ್ತು ಜಿಬಿ 256ಜಿಬಿ ಆನ್ ಬೋರ್ಡ್ ಸ್ಟೋರೇಜ್ ಇರುವ ಮಾರ್ವಲ್ ಏವೆಂಜರ್ಸ್ ಲಿಮಿಟೆಡ್ ಎಡಿಷನ್ ನ ಬೆಲೆ 44,999 ರುಪಾಯಿಗಳಾಗಿವೆ

. ಮೊದಲ ಮಾರಾಟದ ಭಾರತೀಯ ಬೆಲೆ ಮತ್ತು ಆಫರ್ ಗಳ ವಿವರ ಇಲ್ಲಿದೆ ನೋಡಿ...

Oneplus 6 First Impressions - Gizbot Kannada

ಒನ್ ಪ್ಲಸ್ 6 ಸಿಲ್ಕ್ ವೈಟ್ ನ ಭಾರತೀಯ ಮಾರುಕಟ್ಟೆಯ ದರ 39,999 ರುಪಾಯಿಗಳು.ಖರೀದಿದಾರರಿಗೆ ಒನ್ ಪ್ಲಸ್ ಕ್ಯಾಷ್ ಬ್ಯಾಕ್ ಆಫರ್ ನೀಡುತ್ತಿದ್ದು ಸಿಟಿಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿದರೆ 2000 ರುಪಾಯಿ ಕ್ಯಾಷ್ ಬ್ಯಾಕ್ ಸಿಗಲಿದೆ. ಎಲ್ಲಾ ಪ್ರಮುಖ ಬ್ಯಾಂಕ್ ಗಳಿಂದ ಇಎಮ್ ಐ ಸೌಲಭ್ಯದಲ್ಲೂ ಮೊಬೈಲ್ ಖರೀದಿಸಲು ಅವಕಾಶವಿದೆ.

ಕೋಟರ್ 811 ಆಪ್ ಡೌನ್ ಲೋಡ್ ಮಾಡುವ ಮುಖಾಂತರ 1 ವರ್ಷದ ಮೊಬೈಲ್ ಅಪಘಾತ ವಿಮೆಯನ್ನು ಕೂಡ ಮಾಡಿಕೊಡಲಾಗುತ್ತೆ.ಅಮೇಜಾನ್ ಪ್ರೈಮ್ ವೀಡಿಯೋ ಗಿಫ್ಟ್ ಕಾರ್ಡ್ ದೊರೆಯಲಿದ್ದು ಅದು 250 ರುಪಾಯಿ ಬೆಲೆಯದ್ದಾಗಿರುತ್ತೆ ಮತ್ತು ಅಮೇಜಾನ್ ಕಿಂಡಲ್ ಇ-ಬುಕ್ಸ್ ನಲ್ಲಿ ಖರೀದಿಸಲು 500 ಆಫರ್ ಡಿಸ್ಕೌಂಟ್ ಸಿಗಲಿದೆ. ಐಡಿಯಾ ಚಂದಾದಾರರು ಕೂಡ 2000 ರುಪಾಯಿಯ ಕ್ಯಾಷ್ ಬ್ಯಾಕ್ ಪಡೆಯಲು ಅರ್ಹರು. ಅಷ್ಟೇ ಅಲ್ಲ, ಕ್ಲಿಯರ್ ಟ್ರಿಪ್ ನಲ್ಲಿ ವಿಮಾನ ಅಥವಾ ಹೋಟೆಲ್ ಬುಕ್ಕಿಂಗ್ ಮಾಡಿದರೆ 25,000 ರುಪಾಯಿ ವರೆಗಿನ ಲಾಭಗಳು ಇವರಿಗೆ ಸಿಗಲಿದೆ ಎಂದು ಒನ್ ಪ್ಲಸ್ ತಿಳಿಸಿದೆ.

. ಒನ್ ಪ್ಲಸ್ 6 ಸಿಲ್ಕ್ ವೈಟ್ ನ ವೈಶಿಷ್ಟ್ಯಗಳು

ಒನ್ ಪ್ಲಸ್ ಒನ್ ನಂತೆ ಇದೂ ಕೂಡ ಮೃದುವಾದ ಟೆಕ್ಚರ್ ಹೊಂದಿದೆ.,6 ಬೇರೆಬೇರೆ ಪದರಗಳನ್ನೊಳಗೊಂಡ ಗಾಜನ್ನು ನೀಡಲಾಗಿದ್ದು ಆ ಮೂಲಕ ಮೃದುವಾದ ಮತ್ತು ಬಿಳಿಯ ಮೇಲ್ಮೀಯನ್ನು ಪಡೆಯಲು ಸಾಧ್ಯವಾಗಿದೆ. 8ಜಿಬಿ RAM ಮತ್ತು 128ಜಿಬಿ ಸ್ಟೋರೇಜ್ ವ್ಯವಸ್ಥೆ ಇದೆ. ಡಿಸೈನ್, RAM, ಸ್ಟೋರೇಜ್ ಹೊರತು ಪಡಿಸಿದರೆ ಹಾರ್ಡ್ ವೇರೇ ವಿಭಾಗದಲ್ಲಿ ಎಲ್ಲವೂ ಒನ್ ಪ್ಲಸ್ 6 ನಂತೆಯೇ ಇದೆ.

ಡುಯಲ್ ಸಿಮ್ ಹಾಕಲು ಅವಕಾಶವಿರುವ ಇದು Android 8.1 Oreo ಜೊತೆಗೆ OxygenOS 5.1 ನಿಂದ ರನ್ ಆಗುತ್ತೆ. ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಮಾಡಲು ಅವಕಾಶವಿದೆ. 6.28-ಇಂಚಿನ ಫುಲ್HD+ (1080x2280 ಪಿಕ್ಸಲ್) ಫುಲ್ ಆಪ್ಟಿಕ್ AMOLED ಡಿಸ್ಪ್ಲೇಯು 19:9 ಅನುಪಾತದಲ್ಲಿದೆ ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಸಾಕೆಟ್ ನ್ನು ಹೊಂದಿದೆ. ಇದರಲ್ಲಿ ಎರಡು ಹಿಂಭಾಗದ ಕ್ಯಾಮರಾ ಇದ್ದು 16 ಮೆಗಾಪಿಕ್ಸಲ್ ಪ್ರೈಮರಿ ಸೋನಿ IMX519 ಸೆನ್ಸರ್ ಮತ್ತು f/1.7 ದ್ಯುತಿರಂದ್ರವನ್ನು ಹೊಂದಿದೆ.20 ಮೆಗಾಪಿಕ್ಸಲ್ ನ ಸೆಕೆಂಡರಿ ಕ್ಯಾಮರಾವಿದ್ದು ಸೋನಿ IM376K ಸೆನ್ಸರ್ ಇದೆ. ಡುಯಲ್ LED ಫ್ಲ್ಯಾಶ್ ಇದೆ. ಸೆಲ್ಫೀ ತೆಗೆದುಕೊಳ್ಳಲು 16 ಮೆಗಾ ಪಿಕ್ಸಲ್ ಸೋನಿ IMX371 ಸೆನ್ಸಾರ್ ಇದ್ದು f/2.0 ದ್ಯುತಿರಂದ್ರ ಹೊಂದಿದೆ.

ಒನ್ ಪ್ಲಸ್ 6 ವಿಧದಲ್ಲಿ ಲಭ್ಯ, 64ಜಿಬಿ, 128 ಜಿಬಿ,ಮತ್ತು 256 ಜಿಬಿ ಆನ್ ಬೋರ್ಡ್ ಸ್ಟೋರೇಜ್ ಅವಕಾಶವಿದ್ದು, ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಇನ್ನಷ್ಟು ಹಿಗ್ಗಿಸಿಕೊಳ್ಳಬಹುದು. ಕನೆಕ್ಟಿವಿಟಿ ವಿಚಾರಕ್ಕೆ ಬರುವುದಾದರೆ 4G VoLTE, ವೈಫೈ 802.11ac, ಬ್ಲೂಟೂತ್ v5.0, GPS/ A-GPS, USB Type-C, ಮತ್ತು 3.5ಎಂಎಂ ಹೆಡ್ ಫೋನ್ ಜ್ಯಾಕ್ ಇದೆ. ಬೆರಳಚ್ಚು ತಂತ್ರಜ್ಞಾನ ಮತ್ತು ಫೇಸ್ ಅನ್ ಲಾಕ್ ವೈಶಿಷ್ಟ್ಯೆತೆ ಇದ್ದು, ಇದು ಫ್ರಂಟ್ ಕ್ಯಾಮರಾ ಸೆನ್ಸರ್ ಸಹಾಯದಿಂದ ಕೆಲಸ ಮಾಡುತ್ತೆ. 3300mAh ಬ್ಯಾಟರಿ ಇದೆ ಮತ್ತು ಫೋನಿನ ಒಟ್ಟು ಅಳತೆ 155.7x75.4x7.75ಎಂಎಂ ಆಗಿದೆ.

ಖರೀದಿಸೋ ಆಸೆ ನಿಮಗಿದ್ದರೆ ಖಂಡಿತ ಟ್ರೈ ಮಾಡಬಹುದು,

Best Mobiles in India

English summary
OnePlus 6 Silk White version to go on sale in India today
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+