ಹೊಸ ವರ್ಷಕ್ಕೆ ಭರ್ಜರಿ ಡಿಸ್ಕೌಂಟ್ ನಲ್ಲಿ ಲಭ್ಯವಾಗಲಿದೆ ಒನ್ ಪ್ಲಸ್ 6ಟಿ
ಪ್ರೀಮಿಯಂ ಸ್ಮಾರ್ಟ್ ಫೋನ್ ಮಾರುಕಟ್ಟೆಯ ನಾಯಕ ಎಂದು ಕರೆಸಿಕೊಳ್ಳುವ ಒನ್ ಪ್ಲಸ್ ತನ್ನ ನೂತನ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಒನ್ ಪ್ಲಸ್ 6ಟಿಯನ್ನು ಭಾರತದಲ್ಲಿ ಪ್ರಕಟಿಸಿದೆ. ಡಿಸೆಂಬರ್ 29 ರಿಂದ ಜನವರಿ 6 ರ ವರೆಗೆ ಇದಕ್ಕೆ ಭರ್ಜರಿ ರಿಯಾಯಿತಿ ಬೆಲೆ ಸಿಗುತ್ತದೆ.

ಹೊಸ ವರ್ಷಕ್ಕಾಗಿ ಒನ್ ಪ್ಲಸ್ 6ಟಿಗೆ ಭರ್ಜರಿ ರಿಯಾಯಿತಿ
HDFC ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ 1,500 ರುಪಾಯಿ ಇನ್ಸೆಂಟ್ ರಿಯಾಯಿತಿಯು ಇಎಂಐ ಟ್ರಾನ್ಸ್ಯಾಕ್ಷನ್ ಗೆ ಲಭ್ಯವಾಗುತ್ತದೆ. ಗ್ರಾಹಕರು ಒನ್ ಪ್ಲಸ್ 6ಟಿಯನ್ನು ಅಮೇಜಾನ್.ಇನ್ ,ಒನ್ ಪ್ಲಸ್.ಇನ್ ಮತ್ತು ಆಫ್ ಲೈನ್ ಕ್ರೋಮಾ ಔಟ್ ಲೆಟ್ ಗಳಲ್ಲಿ ಮತ್ತು ಒನ್ ಪ್ಲಸ್ ನ ಎಕ್ಸ್ ಕ್ಲೂಸೀವ್ ಆಫ್ ಲೈನ್ ಸ್ಟೋರ್ ಗಳಲ್ಲಿ ಖರೀದಿಸಲು ಅವಕಾಶವಿದ್ದು 6 ತಿಂಗಳ ನೋ-ಕಾಸ್ಟ್ ಇಎಂಐ ಆಯ್ಕೆ ಲಭ್ಯವಿರುತ್ತದೆ.
ಈಗಾಗಲೇ ಒನ್ ಪ್ಲಸ್ ಹ್ಯಾಂಡ್ ಸೆಟ್ ಹೊಂದಿರುವವರು ತನ್ನ ಹ್ಯಾಂಡ್ ಸೆಟ್ ನ್ನು ಎಕ್ಸ್ ಚೇಂಜ್ ಕೂಡ ಮಾಡಿಕೊಳ್ಳಬಹುದು. ನೂತನ ಒನ್ ಪ್ಲಸ್ 6ಟಿ ಗೆ ಹೆಚ್ಚುವರಿಯಾಗಿ 2,000 ರುಪಾಯಿ ಎಕ್ಸ್ ಚೇಂಜ್ ಆಫರ್ ಲಭ್ಯವಿದೆ. ಇನ್ನು ಇತರೆ ಫೋನ್ ಗಳನ್ನು ಎಕ್ಸ್ ಚೇಂಜ್ ಮಾಡಿಕೊಳ್ಳುವುದಾದರೆ 1,500 ರುಪಾಯಿಯ ಎಕ್ಸ್ ಚೇಂಜ್ ಆಫರ್ ಲಭ್ಯವಾಗುತ್ತದೆ.

ಒನ್ ಪ್ಲಸ್ 6ಟಿ ಬೆಲೆ:
ಮೂರು ವಿಭಿನ್ನ ಸ್ಟೋರೇಜ್ ವೇರಿಯಂಟ್ ನಲ್ಲಿ ಒನ್ ಪ್ಲಸ್ 6ಟಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಬೇಸ್ ವೇರಿಯಂಟ್ ಆಗಿರುವ 6GB RAM ಮತ್ತು 128GB ಸ್ಟೋರೇಜ್ ವ್ಯವಸ್ಥೆಯ ಫೋನಿನ ಬೆಲೆ 37,999 ರುಪಾಯಿಗಳು.ಎರಡನೇ ವೇರಿಯಂಟ್ 8GB RAM ಮತ್ತು 128GB ಸ್ಟೋರೇಜ್ ಗೆ 41,999 ರುಪಾಯಿಗಳು.ಕೊನೆಯದಾಗಿ 8GB RAM ಮತ್ತು 256GB ಸ್ಟೋರೇಜ್ ವೇರಿಯಂಟ್ ನ ಬೆಲೆ 45,999 ರುಪಾಯಿಗಳು.

ಒನ್ ಪ್ಲಸ್ 6ಟಿ ವೈಶಿಷ್ಟ್ಯತೆಗಳು
ವೈಶಿಷ್ಟ್ಯತೆಗಳ ವಿಚಾರಕ್ಕೆ ಬಂದರೆ ಒನ್ ಪ್ಲಸ್ 6ಟಿ 6.41-ಇಂಚಿನ FHD+ (2340x1080 ಪಿಕ್ಸಲ್) AMOLED ಡಿಸ್ಪ್ಲೇ ಜೊತೆಗೆ 19.5:9 ಅನುಪಾತವನ್ನು ಹೊಂದಿದೆ ಮತ್ತು ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಇದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ಜೊತೆಗೆ 6GB ಮತ್ತು 8GB RAM ಆಯ್ಕೆಗಳಿದ್ದು 128GB ಮತ್ತು 256GB ಇನ್- ಬಿಲ್ಟ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ.
ಫೋಟೋ ಕ್ಲಿಕ್ಕಿಸಲು ಒನ್ ಪ್ಲಸ್ 6ಟಿಯಲ್ಲಿ 16MP ಸೋನಿ IMX371 ಸೆನ್ಸರ್ ಜೊತೆಗೆ EIS ಮತ್ತು f/2.0 ಅಪರ್ಚರ್ ಮುಂಭಾಗದಲ್ಲಿದೆ. ಹಿಂಭಾಗದಲ್ಲಿ 16MP ಸೋನಿ IMX519 ಸೆನ್ಸರ್ ಜೊತೆಗೆ OIS, EIS ಮತ್ತು f/1.7 ಅಪರ್ಚರ್ ನ್ನು ಹೊಂದಿದೆ ಜೊತೆಗೆ 20MP ಸೋನಿ IMX376K ಸೆನ್ಸರ್ ಜೊತೆಗೆ f/1.7 ಅಪರ್ಚರ್ ಮತ್ತು ಡುಯಲ್ LED ಫ್ಲ್ಯಾಶ್.
3700mAh ಬ್ಯಾಟರಿಯನ್ನು ಹೊಂದಿರುವ ಈ ಫೋನ್ ಆಂಡ್ರಾಯ್ಡ್ 9.0 ಪೈ ಆಧಾರಿತ OxygenOSನ್ನು ಒಳಗೊಂಡಿದೆ. ಒನ್ ಪ್ಲಸ್ 6 ನ ಸಕ್ಸಸರ್ ಫೋನ್ ಆಗಿರುವ ಇದು ಹೋಲಿಸಿದರೆ ಒನ್ ಪ್ಲಸ್ 6 ಗಿಂತ ಸಣ್ಣ ನಾಚ್ ನ್ನುಹೊಂದಿದೆ ಮತ್ತು ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ನ್ನುಹೊಂದಿದೆ. ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಕೇವಲ ಸ್ಮಾರ್ಟ್ ಫೋನ್ ನ್ನು ಅನ್ ಲಾಕ್ ಮಾತ್ರವೇ ಮಾಡುವುದಿಲ್ಲ ಬದಲಾಗಿ ಇದು ಲಾಚ್ ಆಪ್ ಗಳಿಗೆ ಶಾರ್ಟ್ ಕಟ್ ಗೆ ವರ್ತಿಸುತ್ತದೆ.


Click it and Unblock the Notifications








