ಇಂದಿನಿಂದ ಭಾರೀ ಆಫರ್‌ಗಳಲ್ಲಿ ಖರೀದಿಗೆ ಲಭ್ಯ 'ಒನ್‌ಪ್ಲಸ್ 7 ಪ್ರೊ'!

|

ಮೊಬೈಲ್ ಮಾರುಕಟ್ಟೆ ಭಾರೀ ನಿರೀಕ್ಷೆಯನ್ನು ಹೊತ್ತಿರುವ ಒನ್‌ಪ್ಲಸ್ ಕಂಪೆನಿಯ ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್ ಇದೀಗ ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿದೆ. ನೆನ್ನೆ ಅಮೆಜಾನ್ ಪ್ರೈಮ್ ಗ್ರಾಹಕರಿಗೆ ಮತ್ತು ಮೆಟ್ರೊ ನಗರಗಳ ಆಫ್‌ಲೈನ್ ಗ್ರಾಹಕರಿಗೆ ಮಾತ್ರ ಖರೀದಿಗೆ ಲಭ್ಯವಿದ್ದ ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಪೋನ್ ಇದೀಗ ತೆರೆದ ಮಾರಾಟಕ್ಕೆ ಸಿದ್ದವಾಗಿದ್ದು, ದೇಶದೆ ಗ್ರಾಹಕರು ಮಿರರ್ ಬ್ಲಾಕ್ ಬಣ್ಣದಲ್ಲಿ ಲಭ್ಯವಿರುವ ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಮೂರು ಮಾದರಿಗಳಲ್ಲಿ ಖರೀದಿಸಬಹುದಾಗಿದೆ.

ಭಾರತದಲ್ಲಿ ಪ್ರೀಮಿಯಂ ಮೊಬೈಲ್ ಮಾರುಕಟ್ಟೆಯ ದಿಗ್ಗಜನಾಗಿ ಮೆರೆಯುತ್ತಿರುವ ಒನ್‌ಪ್ಲಸ್ ಕಂಪೆನಿ ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್ ಮೇಲೆ ಈಗಾಗಲೇ ಭರ್ಜರಿ ಆಫರ್‌ಗಳನ್ನು ಘೊಷಿಸಿದೆ. ಎಸ್‌ಬಿಐ, ರಿಲಯನ್ಸ್ ಜಿಯೋ, ಒನ್‌ಪ್ಲಸ್ ಕ್ಯಾಶ್‌ಬ್ಯಾಕ್ ಹಾಗೂ ಡಾಟಾ ಮತ್ತು ಭದ್ರತಾ ಸೌಲಭ್ಯಗಳನ್ನು ನೀಡಿದೆ. ಒನ್‌ಪ್ಲಸ್ 7 ಸರಣಿ ಫೋನ್‌ಗಳ ಜೊತೆಗೆ ಜಿಯೋ ಬಳಕೆದಾರರು 299 ರೂ.ಗೆ ಮೊದಲ ಪ್ರೀಪೇಯ್ಡ್‌ ರಿಚಾರ್ಜ್ ಮಾಡಿಸಿದರೆ 5,400 ರೂಪಾಯಿವರೆಗಿನ ತ್ವರಿತ ಕ್ಯಾಷ್‌ಬ್ಯಾಕ್ ಹಾಗೂ ಒಟ್ಟು 9,300 ರೂ. ವರೆಗಿನ ಲಾಭ ಪಡೆಯಲಿದ್ದಾರೆ.!

ಇಂದಿನಿಂದ ಭಾರೀ ಆಫರ್‌ಗಳಲ್ಲಿ ಖರೀದಿಗೆ ಲಭ್ಯ 'ಒನ್‌ಪ್ಲಸ್ 7 ಪ್ರೊ'!

ಇನ್ನು 6GB RAM+128GB ಮಾದರಿಯ ಒನ್‌ಪ್ಲಸ್ 7 ಪ್ರೊ ಫೋನ್ ಬೆಲೆ 48,999ರೂ.ಗಳಾಗಿದ್ದರೆ, 8GB RAM+256 ಮಾದರಿಯ ಫೋನ್‌ ಬೆಲೆ 52,999 ರೂ.ಗಳು ಹಾಗೆಯೇ12GB RAM+256GB ಮಾದರಿ ಫೋನ್ ಬೆಲೆಯು 57,999ರೂ.ಗಳಾಗಿವೆ. ಹಾಗಾದರೆ, ಇದೇ ಮೊದಲ ಬಾರಿಗೆ ತ್ರಿವಳಿ ಕ್ಯಾಮೆರಾಗಳ ಜೊತೆಗೆ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾದ ಮೂಲಕ ಮೂರು ವೇರಿಯಂಟ್‌ ಪರಿಚಯವಾಗಿರುವ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಒನ್‌ಪ್ಲಸ್‌ 7 ಪ್ರೊ ಹೇಗಿದೆ?, ಫೋನ್‌ ಇತರೆ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಒನ್‌ಪ್ಲಸ್‌ 7 ಪ್ರೊ ಡಿಸ್‌ಪ್ಲೇ

ಒನ್‌ಪ್ಲಸ್‌ 7 ಪ್ರೊ ಡಿಸ್‌ಪ್ಲೇ

6.67 ಇಂಚಿನ ಕ್ವಾಡ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ನೀಡಲಾಗಿದ್ದು, ಡಿಸ್‌ಪ್ಲೇ ರೆಸಲ್ಯೂಶನ್ ಸಾಮರ್ಥ್ಯವು 3120x1440 ಆಗಿದೆ. ಹಾಗೇ ಫೋನಿನ್ ಸ್ಕ್ರೀನ್‌ನಿಂದ ಬಾಡಿಯ ನಡುವಿನ ಅನುಪಾತವು ಶೇ. 93ರಷ್ಟು ಆಗಿದ್ದು, ಡಿಸ್‌ಪ್ಲೇ ಪಿಕ್ಸಲ್ ಡೆನ್ಸಿಟಿಯು 516 ಆಗಿದೆ. ಡಿಸ್‌ಪ್ಲೇಯು ಸಂಪೂರ್ಣ ನಾಚ್ ರಹಿತವಾಗಿದ್ದು, ಸ್ಕ್ರೀನ್ ವಿಶಾಲವಾಗಿ ಕಾಣಿಸಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಸಾಮರ್ಥ್ಯದ ಬಲವಾದ ಪ್ರೊಸೆಸರ್ ಅನ್ನು ಒದಗಿಸಲಾಗಿದೆ. ಇದರೊಂದಿಗೆ 12GB RAM ಪ್ರೊಸೆಸರ್‌ಗೆ ಬೆಂಬಲ ನೀಡಲಿದೆ. ಆಂತರಿಕ ಸಂಗ್ರಹಕ್ಕಾಗಿ 256GB ಸ್ಥಳಾವಕಾಶವನ್ನು ಇದಗಿಸಲಾಗಿದ್ದು, ಹೆಚ್ಚಿನ ಡೇಟಾ ಬೇಡುವ ಗೇಮ್‌ಗಳನ್ನು ಆಡಲು ಮತ್ತು ಹೈ ಎಂಡ್‌ ಆಪ್‌ಗಳನ್ನು ಬಳಸಬಹುದಾಗಿದೆ.

 ತ್ರಿವಳಿ ಕ್ಯಾಮೆರಾ

ತ್ರಿವಳಿ ಕ್ಯಾಮೆರಾ

ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 16 ಮೆಗಾಪಿಕ್ಸ್‌ನಲ್ಲಿದ್ದು, ಅಲ್ಟ್ರಾವೈಲ್ಡ್ ಆಂಗಲ್ ಲೆಸ್‌ ಹೊಂದಿದೆ. ಹಾಗೇ ಮೂರನೇ ಕ್ಯಾಮೆರಾವು 8 ಮೆಗಾಪಿಕ್ಸಲ್ನಲ್ಲಿದ್ದು, ಟೆಲಿಪೋಟೊ ಸೆನ್ಸಾರ್‌ ಲೆನ್ಸ್ ಸಾಮರ್ಥ್ಯದಲ್ಲಿದೆ.

ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ

ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ ಮೂಲಕ ಕಂಪನಿಯು ಮೊದಲ ಬಾರಿಗೆ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾವನ್ನು ಪರಿಚಯಿಸಿದ್ದು, ಸೆಲ್ಫಿ ಕ್ಯಾಮೆರಾವು 16 ಮೆಗಾಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಸೆಲ್ಫಿ ಕ್ಯಾಮೆರಾ ಅತ್ಯುತ್ತಮ ಆಯ್ಕೆಗಳನ್ನು ಸಹ ನೀಡಲಾಗಿದ್ದು, ಉತ್ತಮವಾಗಿ ಫೋಟೋ ಮುಡಿಬರಲು ಸಹಕರಿಸಲಿವೆ.

ಸೌಂಡ್‌ ಮತ್ತು ಇತರೆ ಫೀಚರ್ಸ್

ಸೌಂಡ್‌ ಮತ್ತು ಇತರೆ ಫೀಚರ್ಸ್

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ ಮ್ಯೂಸಿಕ್‌ಗೆ ಕಂಪನಿಯು ಹೆಚ್ಚಿನ ಗಮನ ನೀಡಿದ್ದು, ಡಾಲ್ಬಿ ಅಟೊಮ್ ಸ್ಪೀಕರ್ಸ್ ಒದಗಿಸಲಾಗಿದ್ದು, ಇದರೊಂದಿಗೆ ವೈಬ್ರೆಶನ್ ಮೋಟರ್ ಸಹ ನೀಡಲಾಗಿದೆ. ಫೋಟೊಗ್ರಾಫಿಗಾಗಿ ಕ್ಯಾಮೆರಾದಲ್ಲಿ DXO ಮಾರ್ಕ್ ಆಯ್ಕೆ ನೀಡಲಾಗಿದೆ.

ಬ್ಯಾಟರಿ

ಬ್ಯಾಟರಿ

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನನಲ್ಲಿ 4000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಸ್ಮಾರ್ಟ್‌ಫೋನ್ ದೀರ್ಘಕಾಲದ ಬಾಳಿಕೆ ಬರಲು ಇದು ಸಹಕರಿಸಲಿದೆ.ಅತ್ಯುತ್ತಮ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ. ಕೇವಲ 10 ನಿಮಿಷದ ಚಾರ್ಜ್‌ ಸುಮಾರು 10 ಗಂಟೆಗಳವರೆಗೆ ಸ್ಮಾರ್ಟ್‌ಫೋನ್‌ಗೆ ಬಲ ನೀಡಲಿದೆ.

Best Mobiles in India

English summary
OnePlus 7 Pro Sale Date in India, Launch Offers, Availability, and More. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X