ಮೊಬೈಲ್ ಮಾರುಕಟ್ಟೆ ಅಲ್ಲೋಲ ಕಲ್ಲೋಲ!..ಕೇವಲ 32,999 ರೂ.ಗೆ ಒನ್‌ಪ್ಲಸ್ 7 ಲಾಂಚ್!!

|

ಬೆಂಗಳೂರಿನಲ್ಲಿ ಒಸ್‌ಪ್ಲಸ್ 7 ಬಿಡುಗಡೆಯಾದ ಒಂದೇ ಕ್ಷಣದಲ್ಲಿ ಇತ್ತೀಚಿಗಷ್ಟೇ ಒನ್‌ಪ್ಲಸ್ 6ಟಿ ಸ್ಮಾರ್ಟ್‌ಫೋನ್ ಖರೀದಿಸಿದವರು ಅತ್ತುಬಿಟ್ಟಿರಬಹುದು.! ಏಕೆಂದರೆ, ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಯಾರೂ ಊಹಿಸಲು ಸಾಧ್ಯವಿಲ್ಲದಂತೆ ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ ಕೇವಲ 32,999 ರೂಪಾಯಿಗಳಿಗೆ ಮಾರಕಟ್ಟೆಗೆ ಬಿಡುಗಡೆಯಾಗಿದೆ. ಪ್ರೀಮಿಯಮ್ ಸ್ಮಾರ್ಟ್‌ಫೋನ್ ಒಂದು ಇಷ್ಟು ಕಡಿಮೆ ಬೆಲೆಗೆ ಬಿಡುಗಡೆಯಾಗಿರುವುದನ್ನು ನೋಡಿ ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳು ಗಾಬರಿಯಾಗಿವೆ.

ಹೌದು, ನ್ನೆನ್ನೆ ರಾತ್ರಿ ಬೆಂಗಳೂರಿನಲ್ಲಿ ನಡೆದ ಅದ್ದೂರಿ ಮೊಬೈಲ್ ಬಿಡುಗಡೆ ಸಮಾರಂಭದಲ್ಲಿ ರಾತ್ರಿ 8.30ಕ್ಕೆ ಒನ್‌ಪ್ಲಸ್ ಕಂಪೆನಿಯ ನೂತನ ಎರಡು ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಿವೆ. ಎರಡು ಸ್ಮಾರ್ಟ್‌ಫೋನ್‌ಗಳ ಜೊತೆಗೆ ಮೊಬೈಲ್ ಮಾರುಕಟ್ಟೆ ನಿರೀಕ್ಷೆಗೂ ಮೀರಿ ಒಟ್ಟು ಮೂರು ಹೊಸ ಉತ್ಪನ್ನಗಳನ್ನು ಒನ್‌ಪ್ಲಸ್ ಕಂಪೆನಿ ಲಾಂಚ್ ಮಾಡಿದೆ. ಒನ್‌ಪ್ಲಸ್ 7, ಒನ್‌ಪ್ಲಸ್ 7 ಪ್ರೊ ಹಾಗೂ ಒನ್‌ಪ್ಲಸ್ ಬ್ಲೂಟೂತ್ ಇಯರ್‌ಫೋನ್‌ ಮಾರುಕಟ್ಟೆಗೆ ಎಂಟ್ರಿ ನೀಡಿ ಮೊಬೈಲ್ ಗ್ರಾಹಕರ ಗಮನಸೆಳೆದಿವೆ.

ಮೊಬೈಲ್ ಮಾರುಕಟ್ಟೆ ಅಲ್ಲೋಲ ಕಲ್ಲೋಲ!..ಕೇವಲ 32,999 ರೂ.ಗೆ ಒನ್‌ಪ್ಲಸ್ 7 ಲಾಂಚ್!!

6GB RAM ಮತ್ತು 128GB ಮೆಮೊರಿ ಮಾದರಿಯಿಂದ ಆರಂಭವಾಗಿರುವ ಒನ್‌ಪ್ಲಸ್ 7 ಫೋನ್ ಬೆಲೆ 32,999 ರೂಪಾಯಿಗಳಿಗೆ ಬಿಡುಗಡೆಯಾಗಿದ್ದರೆ, 8GB RAM ಮತ್ತು 256GB ಮೆಮೊರಿ ಮಾದರಿಯ ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ ಬೆಲೆ 37,999 ರೂಪಾಯಿಗಳಾಗಿವೆ. ಹಾಗಾದರೆ, ನೆನ್ನೆ ಮಾರುಕಟ್ಟೆಯಲ್ಲಿ ಭಾರೀ ಹವಾ ಎಬ್ಬಿಸಿದ ಒಸ್‌ಪ್ಲಸ್ 7 ಸ್ಮಾರ್ಟ್‌ಫೋನ್ ಹೇಗಿದೆ?, ಒನ್‌ಪ್ಲಸ್ 6ಟಿಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾದ ಒನ್‌ಪ್ಲಸ್ 7 ಹೊಂದಿರುವ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹೇಗಿದೆ ಒನ್‌ಪ್ಲಸ್ 7 ಡಿಸೈನ್?

ಹೇಗಿದೆ ಒನ್‌ಪ್ಲಸ್ 7 ಡಿಸೈನ್?

ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್‌ಗಳ ವ್ಯತ್ಯಾಸಗಳಲ್ಲಿ ಸ್ಮಾರ್ಟ್‌ಫೋನಿನ ಡಿಸೈನ್ ಮೊದಲ ಸ್ಥಾನದಲ್ಲಿದೆ. ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಯಲ್ಲಿ ನೋಚ್ ವಿನ್ಯಾಸವನ್ನು ಹೊಂದಿದ್ದು, ಫೋನ್‌ ಬಾಡಿ ಸಂಪೂರ್ಣ ಗ್ಲಾಸ್ ಮೆಟಲ್ ಯುನಿಬಾಡಿಯಿಂದ ರಚಿತವಾಗಿದೆ. ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವ ಫೋನ್, ಕ್ಯಾಮೆರಾಗಳ ನಡುವೆ ಎಲ್‌ಇಡಿ ಫ್ಲ್ಯಾಶ್ ಆಯ್ಕೆಯೊಂದನ್ನು ಹೊರತುಪಡೆಸಿ, ಒನ್‌ಪ್ಲಸ್‌ 7 ನೋಡಲು ಬಹುತೇಕ ಒನ್‌ಪ್ಲಸ್‌ 6T ಮಾದರಿಯನ್ನೆ ಹೋಲುವಂತಿದೆ. ಅತ್ಯಂತ ಕಡಿಮೆ ಬೆಜೆಲ್ ಲೆಸ್ ವಿನ್ಯಾಸದಲ್ಲಿ ಫೋನ್ ಬಿಡುಗಡೆಯಾಗಿದೆ ಎಂದು ಹೇಳಬಹುದು.

ಒನ್‌ಪ್ಲಸ್ 7 ಡಿಸ್‌ಪ್ಲೇ ಹೇಗಿದೆ?

ಒನ್‌ಪ್ಲಸ್ 7 ಡಿಸ್‌ಪ್ಲೇ ಹೇಗಿದೆ?

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ 1080x2340 ಪಿಕ್ಸೆಲ್‌ಗಳ ರೆಸೊಲ್ಯೂಷನ್ ಹೊಂದಿರುವ 6.41 ಇಂಚಿನ ಆಪ್ಟಿಕ್ AMOLED ಕೆಪ್ಯಾಸಿಟಿವ್ ಟಚ್ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. 402 ಪಿಕ್ಸೆಲ್‌ಗಳ ಪಿಪಿಐ ಮತ್ತು 19.5: 9ರ ಆಕಾರ ಅನುಪಾತದಲ್ಲಿ ಸ್ಕ್ರೀನ್ ಅನ್ನು ನೀಡಲಾಗಿದ್ದು, ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಸ್ಕ್ರೀನ್ ಇದಾಗಿದೆ. DCI-P3 ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಹೊಂದಿರುವ ಸ್ಮಾರ್ಟ್‌ಫೋನ್ ಫೇಸ್ ಅನ್ಲಾಕ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಒನ್‌ಪ್ಲಸ್ 7 ಪ್ರೊಸೆಸರ್ ಹೇಗಿದೆ?

ಒನ್‌ಪ್ಲಸ್ 7 ಪ್ರೊಸೆಸರ್ ಹೇಗಿದೆ?

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್‌ನಲ್ಲಿ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಪ್ರಸ್ತುತ ಅತ್ಯಂತ ಉತ್ತಮ ಪ್ರೊಸೆಸರ್ ಅನ್ನು ಕೇವಲ 30 ಸಾವಿರ ರೂ. ಆಸುಪಾಸಿನ ಮೊಬೈಲ್‌ನಲ್ಲಿ ತಂದಿರುವುದು ಮಾರುಕಟ್ಟೆಗೆ ಆಶ್ಚರ್ಯ ಮೂಡಿಸಿದೆ. ಇದರೊಂದಿಗೆ 6GB ಸಾಮರ್ಥ್ಯದ RAM ಇರಲಿದ್ದು, ಹಾಗೂ 128GB ಸಂಗ್ರಹ ಸ್ಥಳಾವಕಾಶ ಒದಗಿಸಲಾಗಿದ್ದು, ಜೊತೆಗೆ UFS 3.0 ಸ್ಟೊರೇಜ್ ಮೋಡೆಲ್ ಬೆಂಬಲ ಪಡೆದಿದೆ. ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಮಲ್ಟಿಟಾಸ್ಕ್ ಕೆಲಸಗಳನ್ನು ಸರಾಗಗೊಳಿಸಿದೆ.

ಒನ್‌ಪ್ಲಸ್ 7 ರಿಯರ್ ಕ್ಯಾಮೆರಾ ಹೇಗಿದೆ?

ಒನ್‌ಪ್ಲಸ್ 7 ರಿಯರ್ ಕ್ಯಾಮೆರಾ ಹೇಗಿದೆ?

ಒನ್‌ಪ್ಲಸ್ 7 ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು, 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮರಾವು f / 1.7 ದ್ಯುತಿರಂಧ್ರ ಮತ್ತು 1.6-ಮೈಕ್ರಾನ್ ಪಿಕ್ಸೆಲ್ ಗಾತ್ರ ಹಾಗೂ ಒಂದು f / 2.4 ದ್ಯುತಿರಂಧ್ರದೊಂದಿಗೆ ಬಂದಿದೆ. 1.12-ಮೈಕ್ರಾನ್ ಸಾಮರ್ಥ್ಯದಲ್ಲಿ 5-ಮೆಗಾಪಿಕ್ಸೆಲ್ ಕ್ಯಾಮೆರಾವಿದೆ. ಆಟೋಫೋಕಸ್ ಪತ್ತೆಹಚ್ಚುವಿಕೆ ಸೆಟಪ್ ಹೊಂದಿರುವ ರಿಯರ್ ಕ್ಯಾಮೆರಾ ಸೆಟಪ್ ಡ್ಯುಯಲ್-ಎಲ್ಇಡಿ ಫ್ಲಾಶ್, ಹೆಚ್‌ಡಿಆರ್, ಪನೋರಮಾ ಆಯ್ಕೆಗಳನ್ನು ಹೊಂದಿರುವುದನ್ನು ನೋಡಬಹುದು.

ಒನ್‌ಪ್ಲಸ್ 7 ಸೆಲ್ಫೀ ಕ್ಯಾಮೆರಾ ಹೇಗಿದೆ?

ಒನ್‌ಪ್ಲಸ್ 7 ಸೆಲ್ಫೀ ಕ್ಯಾಮೆರಾ ಹೇಗಿದೆ?

ಎಫ್ / 2.0 ಅಪರ್ಚರ್ ಮತ್ತು 1.0-ಮೈಕ್ರಾನ್ ಪಿಕ್ಸೆಲ್ ಗಾತ್ರದಲ್ಲಿ 16-ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮರಾವನ್ನು ಹೊಂದಿದೆ. ಆಟೋ ಹೆಚ್‌ಡಿಆರ್, 1080p @ 30fps ವಿಡಿಯೋ ಸಾಮರ್ಥ್ಯ ಮತ್ತು ಗೈರೊ-ಇಐಎಸ್ ಫೀಚರ್ಸ್ ಅನ್ನು ಒನ್‌ಪ್ಲಸ್ 7 ಫೋನಿನ ಸೆಲ್ಫೀ ಕ್ಯಾಮೆರಾದಲ್ಲಿ ತರಲಾಗಿದೆ. ಫೇಸ್ ಅನ್ಲಾಕ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿರವ ಈ ಸ್ಮಾರ್ಟ್‌ಫೋನ್ ಸೆಲ್ಪೀ ಪ್ರಿಯರ ಅತ್ಯುತ್ತಮ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಲಿದೆ ಎಂದು ಹೇಳಬಹುದು

ಒನ್‌ಪ್ಲಸ್ 7 ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಒನ್‌ಪ್ಲಸ್ 7 ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸು 3,700mAh ಸಾಮರ್ಥ್ಯದ ತೆಗೆಯಲಾಗದಂತಂಹ ಬ್ಯಾಟರಿಯನ್ನು ಹೊಂದಿದೆ. ಇನ್ನುಳಿದಂತೆ Wi-Fi 802.11 a / b / g / n / ac, ಜಿಪಿಎಸ್, ಬ್ಲೂಟೂತ್ ವಿ 5.00, ಎನ್ಎಫ್ಸಿ, ಯುಎಸ್ಬಿ ಒಟಿಜಿ, ಯುಎಸ್ಬಿ ಟೈಪ್- ಸಿ, 3 ಜಿ, ಮತ್ತು 4ಜಿ ಹಾಗೂ ಅಕ್ಸೆಲೆರೊಮೀಟರ್, ಬೆಳಕಿನ ಸಂವೇದಕ, ದಿಕ್ಸೂಚಿ / ಮ್ಯಾಗ್ನೆಟೊಮೀಟರ್, ಗೈರೊಸ್ಕೋಪ್, ಸಾಮೀಪ್ಯ ಸಂವೇದಕ ಮತ್ತು ಫಿಂಗರ್ಪ್ರಿಂಟ್ ಸಂವೇದಕವನ್ನು ಒಳಗೊಂಡಿರುತ್ತದೆ

Best Mobiles in India

English summary
oneplus 7 smartphone was launched in 14th May 2019. oneplus unveils 7 Pro, and oneplus 7 . The oneplus 7 phone comes with a 6.41-inch touchscreen display with a resolution of 1080x2340 pixels at a pixel density of 402 pixels per inch (ppi) and an aspect ratio of 19.5:9. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X