ಇಂದು ಭಾರತದಲ್ಲೇ ಮೊದಲು ಬಿಡುಗಡೆಯಾಗುತ್ತಿದೆ 'ಒನ್‌ಪ್ಲಸ್ ಟಿವಿ'!

|

ವಿಶ್ವದ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಚೀನಾದ ಒನ್‌ಪ್ಲಸ್‌ ಕಂಪನಿ ಇಂದು ಭಾರತದಲ್ಲಿ ತನ್ನ ಒನ್‌ಪ್ಲಸ್ ಟಿವಿ ಬಿಡುಗಡೆ ಮಾಡಲು ಸಜ್ಜಾಗಿದೆ. ಸೆಪ್ಟೆಂಬರ್ 26 ರಂದು, ಅಂದರೆ ಇಂದು ದೆಹಲಿಯಲ್ಲಿ ‌ನಡೆಯಲಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಸಂಜೆ 7 ಗಂಟೆಗೆ ಸರಿಯಾಗಿ ತನ್ನ ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡುವುದಾಗಿ ಕಂಪೆನಿ ತಿಳಿಸಿದ್ದು, ಪ್ರೀಮಿಯಂ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಒನ್‌ಪ್ಲಸ್ ಕಂಪೆನಿ ಇದೀಗ ಸ್ಮಾರ್ಟ್‌ ಟಿವಿ ಉದ್ಯಮದಲ್ಲಿ ಯಶಸ್ಸು ಕಾಣಲು ಮುಂದಾಗಿದೆ.

ಜಾಹಿರಾತು ಮತ್ತು ಪ್ರಚಾರ

ಒನ್‌ಪ್ಲಸ್ ಟಿವಿ ಕುರಿತಂತೆ ಈಗಾಗಲೇ ಒನ್‌ಪ್ಲಸ್ ತಾಣದಲ್ಲಿ ಮತ್ತು ಅಮೆಜಾನ್‌ನಲ್ಲಿ ಜಾಹಿರಾತು ಮತ್ತು ಪ್ರಚಾರ ಆರಂಭವಾಗಿದ್ದು, ಆಕರ್ಷಕ ವಿನ್ಯಾಸದ ಮೂಲಕ ಗಮನ ಸೆಳೆಯುತ್ತಿರುವ ಟಿವಿಯ ಡೆಮೊ ಚಿತ್ರಗಳು ಹಾಗೂ ಫೀಚರ್ಸ್ ಬಗೆಗಿನ ಮಾಹಿತಿಗಳು ಒನ್‌ಪ್ಲಸ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದೆ. . ಇನ್ನು ಈ ಬಾರಿಯ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಲಭ್ಯವಾಗಲಿದೆ. ಹಾಗಾಗಿಯೇ, ಒನ್‌ಪ್ಲಸ್ ಟಿವಿ ಫೀಚಸ್ ಗೆಸ್ ಮಾಡಿ ಉಚಿತವಾಗಿ ಒನ್‌ಪ್ಲಸ್ ಟಿವಿ ಗೆಲ್ಲಲು ಅಮೆಜಾನ್ ಅವಕಾಶ ಕಲ್ಪಿಸಿದೆ.

ಪ್ರೀಮಿಯಮ್ ಟಿವಿ

ಒನ್‌ಪ್ಲಸ್‌ ಟಿವಿ ಬಿಡುಗಡೆಯ ವಿಶೇಷತೆ ಎಂದರೆ, ಒನ್‌ಪ್ಲಸ್‌ ಮೂಲತಃ ಚೀನಾದ ಕಂಪೆನಿಯಾಗಿದ್ದರೂ ಸಹ ಭಾರತದಲ್ಲೇ ಮೊದಲು ತನ್ನ ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡುತ್ತಿದೆ. ದೇಶದ ಪ್ರೀಮಿಯಮ್ ಟಿವಿ ಮಾರುಕಟ್ಟೆಯನ್ನೇ ಗುರಿಯಾಗಿಸಿಕೊಂಡಿರುವ ಒನ್‌ಪ್ಲಸ್ ಕಂಪೆನಿ, ಭಾರತದ ಟಿವಿ ಉದ್ಯಮವನ್ನೇ ಬದಲಾಯಿಸುವ ನಿರೀಕ್ಷೆಯನ್ನು ಹೊಂದಿದೆ. ಹಾಗಾದರೆ, ಪ್ರೀಮಿಯಮ್ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒನ್‌ಪ್ಲಸ್ ಕಂಪೆನಿಯ ಭಾರತದ ಮಾರುಕಟ್ಟೆಗೆ ತರುತ್ತಿರುವ ಪ್ರೀಮಿಯಮ್ ಟಿವಿ ಹೇಗಿರಲಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

 ಡಾಲ್ಟಿ ವಿಷನ್

ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಮನೆ ಮಾತಾಗಿರುವ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಅಲ್ಪಕಾಲದಲ್ಲೇ ಮೇಲುಗೈ ಸಾಧಿಸಿದೆ. ಇದೀಗ ಪ್ರೀಮಿಯಂ ಟಿವಿ ಮೂಲಕ ಭಾರತದ ಟಿವಿ ಮಾರುಕಟ್ಟೆಯಲ್ಲಿ ಬಿರುಗಾಳಿ ಬೀಸಲು ಬರುತ್ತಿದ್ದು, ಒನ್‌ಪ್ಲಸ್‌ ಟಿವಿ ಬಗೆಗಿನ ಪ್ರಾಥಮಿಕ ಮಾಹಿತಿಯಂತೆ, 55 ಇಂಚಿನ 4ಕೆ ಕ್ಯುಎಲ್‌ಇಡಿ ಪರದೆ, ಸ್ರೀನ್ ಗುಣಮಟ್ಟ ಹೆಚ್ಚಿಸಲು ಡಾಲ್ಟಿ ವಿಷನ್, ಸಿನಿಮ್ಯಾಟಿಕ್ ಸೌಂಡ್ ಸ್ಪೇಸ್‌ಗಾಗಿ ಡಾಲ್ಟಿ ಆಟ್ಮೋಸ್ 8 ಸ್ಪೀಕರ್ ನಂತಹ ಫೀಚರ್ಸ್ ಅನ್ನು ಸಾಧನವು ಒಳಗೊಂಡಿರಲಿದೆ.

 50 ವಾಟ್ಸ್ ಔಟ್‌ಪುಟ್

ಒನ್‌ಪ್ಲಸ್ ಟಿವಿ QLED ಡಿಸ್‌ಪ್ಲೇ ಹೊಂದಿದೆ. 50W ಸ್ಪೀಕರ್ ಔಟ್‌ಪುಟ್, ಆಂಡ್ರಾಯ್ಡ್ ಓಎಸ್ ಇದರ ವಿಶೇಷವಾಗಿದೆ. 50 ವಾಟ್ಸ್ ಔಟ್‌ಪುಟ್ ಸಹಿತ 8 ಸ್ಪೀಕರ್ ವ್ಯವಸ್ಥೆ, ಡಾಲ್ಬಿ ಅಟ್ಮೋಸ್ ಬೆಂಬಲ, 55 ಇಂಚಿನ 4K QLED ಡಿಸ್‌ಪ್ಲೇಗೆ ಡಾಲ್ಬಿ ವಿಶನ್ ಬೆಂಬಲವಿದ್ದು, HDR 4K ವೀಡಿಯೋಗಳನ್ನು ಸಲೀಸಾಗಿ ನೋಡಬಹುದಾಗಿದೆ. ಮೀಡಿಯಾಟೆಕ್ MT5670 ಚಿಪ್‌ಸೆಟ್ ಮತ್ತು Mali G51 GPU ಒನ್‌ಪ್ಲಸ್ ಟಿವಿಯಲ್ಲಿ ಇರಲಿದೆ. ಒನ್‌ಪ್ಲಸ್ ಟಿವಿಯ ಬೆಲೆ ಸೇರಿದಂತೆ ಇನ್ನಷ್ಟು ಮಾಹಿತಿಗಳು ಇಂದು ಸಂಜೆಯ ನಂತರ ಬಹಿರಂಗವಾಗಲಿವೆ.

Best Mobiles in India

English summary
The Chinese company OnePlus has released many teasers pertaining to OnePlus TV. The smart TV is teased to come with an advanced display and an all-new design. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X