Home
ಸುದ್ದಿಜಾಲ

OnePlus 8 Pro: ಬರಲಿದೆಯೇ ವಾಯರ್‌ಲೆಸ್‌ ಚಾರ್ಜಿಂಗ್‌ ಬೆಂಬಲಿತ ‌ಫೋನ್‌!

ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ಒನ್‌ಪ್ಲಸ್‌ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌8ಪ್ರೊ ಬಿಡುಗಡೆಗೆ ತಯಾರಿ ನಡೆಸಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ವಾಯರ್‌ಲೆಸ್‌ ಚಾರ್ಜಿಂಗ್‌ ಮಾದರಿಯಲ್ಲಿ ಬರಲಿದೆ ಅನ್ನೊ ಸುದ್ದಿ ಹರಿದಾಡ್ತಿದೆ. ಈಗಾಗ್ಲೆ ಒನ್‌ಪ್ಲಸ್‌ 7 ಆವೃತ್ತಿಗಳಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದ್ದು, 8ನೇ ಆವೃತ್ತಿಯಲ್ಲಿ ಇಂತಹದೊಂದು ಪ್ರಯತ್ನಕ್ಕೆ ಕೈ ಹಾಕಿದೇ ಅನ್ನೊ ಮಾತು ಟೆಕ್‌ ವಲಯದಲ್ಲಿ ಬಾರಿ ಸೌಂಡ್‌ ಮಾಡ್ತಿದೆ.

ಹೌದು

ಹೌದು, ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ ಕಂಪೆನಿ ತನ್ನ ಹೊಸ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌8ಪ್ರೊ ಆವೃತ್ತಿಯಲ್ಲಿ ವಾಯರ್‌ ಲೆಸ್‌ ಸ್ಮಾರ್ಟ್‌ಫೋನ್‌ ಅನ್ನ ಬಿಡುಗಡೆ ಮಾಡಲಿದೆ ಎಂದು ಹೇಳಲಾಗ್ತಿದೆ. ಇದಕ್ಕೆ ಸಂಬಂದಿಸಿದಂತೆ ಟಿಪಸ್ಟರ್‌ನಲ್ಲಿ ಪೋಟೋವೊಂದು ಹರಿದಾಡಿದ್ದು ಅದು ಒನ್‌ಪ್ಲಸ್‌8ಪ್ರೊ ಸ್ಮಾರ್ಟ್‌ಫೋನ್‌ ಎಂದೇ ಹೇಳಲಾಗ್ತಿದೆ. ಹಾಗೇ ನೋಡಿದ್ರೆ ಒನ್‌ಪ್ಲಸ್‌ 7 ಬಿಡುಗಡೆ ಮಾಡುವ ಸಂದರ್ಭದಲ್ಲಿ ಒನ್‌ಪ್ಲಸ್‌ನ ಸಿಇಒ Pete Lau ವಾಯರ್‌ ಲೆಸ್‌ ಚಾರ್ಜಿಂಗ್‌ ಮಾದರಿ ಉತ್ತಮವಾದುದ್ದಲ್ಲ ಅಂತಾ ಹೇಳಿದ್ದುಂಟು.

ಒನ್‌ಪ್ಲಸ್

ಸದ್ಯ ಒನ್‌ಪ್ಲಸ್ 8 ಪ್ರೊ 120hz ಪ್ಲೋಯಿಡ್‌ ಡಿಸ್‌ಪ್ಲೇ, ಹಾಗೂ ಸ್ನಾಪ್‌ಡ್ರಾಗನ್ 865 ಎಸ್‌ಒಸಿ ಪ್ರೊಸೆಸರ್‌ ಹೊಂದಿದ್ದು, ಕ್ವಾಡ್ ಕ್ಯಾಮೆರಾ ಸೆಟಪ್ ಜೊತೆಗೆ ಡ್ಯುಯಲ್-ಮೋಡ್ 5 ಜಿ ಬೆಂಬಲದೊಂದಿಗೆ ಬರಲಿದೆ. ಎಂದು ಹೇಳಲಾಗ್ತಿತ್ತು. ಆದರೆ ಇದೀಗ ಹರಿದಾಡ್ತಿರುವ ಸುದ್ದಿ ಪ್ರಕಾರ ಒನ್‌ಪ್ಲಸ್‌8ಪ್ರೊ ವಾಯರ್‌ ಲೆಸ್‌ ಚಾರ್ಜಿಂಗ್‌ ತಂತ್ರಜ್ಞಾನದೊಂದಿಗೆ ಬರೋದು ಪಕ್ಕಾ ಎಂದೇ ಹೇಳಲಾಗ್ತಿದೆ.

ಕಂಪೆನಿ

ಇನ್ನು ಒನ್‌ಪ್ಲಸ್ ಕಂಪೆನಿ ಇಲ್ಲಿಯವರೆಗೂ ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೂಲಕವೇ ಗ್ರಾಹಕರ ಸ್ನೇಹಿ ಎಂದು ಖ್ಯಾತಿ ಪಡೆದಿದೆ. ಬಜೆಟ್‌ ಬೆಲೆಯಲ್ಲಿ ಪ್ರೀಮಿಯಂ ಫೀಚರ್ಸ್‌ಗಳುಳ್ಳ ಸ್ಮಾರ್ಟ್‌ಫೋನ್‌ಗಳನ್ನ ನಿಡುತ್ತಿರೋದ್ರಿಂದ ಸಹಜವಾಗಿಯೇ ಇತರೆ ಸ್ಮಾರ್ಟ್‌ಫೋನ್‌ಗಳಿಗೆ ಒನ್‌ಪ್ಲಸ್‌ ಟಕ್ಕರ್‌ ನೀಡ್ತಿದೆ. ಆದರೆ ಇದೇ ಮೊದಲ ಬಾರಿಗೆ ಒನ್‌ಪ್ಲಸ್‌ ವಾಯರ್‌ ಲೆಸ್‌ ಚಾರ್ಜಿಂಗ್‌ ಟೆಕ್ನಾಲಜಿಯುಳ್ಳ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದರೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿಸಲೇಬೇಕಾದ ಅನಿವಾರ್ಯತೆಗೆ ಕಂಪೆನಿ ಸಿಲುಕಲಿದೆ,

ಹೆಚ್ಚು

ಅಷ್ಟೇ ಅಲ್ಲ ಒನ್‌ಪ್ಲಸ್‌ ಹೆಚ್ಚು ಜನಪ್ರಿಯವಲ್ಲದ ವಾಯರ್‌ಲೆಸ್‌ ತಂತ್ರಜ್ಞಾನದಂತಹ ಪೀಚರ್ಸ್‌ಗಳನ್ನ ನೀಡುವುದಿಲ್ಲ, ಇದರ ಮೂಲಕ ಉತ್ಪಾದನ ವೆಚ್ಚವನ್ನು ಕಡಿತಗೊಳಿಸುವುದು ಹಾಗೂ ಮಾರುಕಟ್ಟೆಯಲ್ಲಿ ಸ್ಪರ್ಧೆಗಿಂತ ಕಡಿಮೆ ಬೆಲೆಯನ್ನು ನಿಗದಿ ಪಡಿಸುವುದು ಒನ್‌ಪ್ಲಸ್‌ನ ಉದ್ದೇಶವಾಗಿದೆ. ಇದೇ ಕಾರಣಕ್ಕಾಗಿ ಒನ್‌ಪ್ಲಸ್‌ ಕಂಪನಿಯು ವೈರ್‌ಲೆಸ್ ಚಾರ್ಜಿಂಗ್ ಉದ್ದೇಶವನ್ನ ಬಿಟ್ಟುಬಿಟ್ಟಿದೆ. ಆದಾಗ್ಯೂ, ಸದ್ಯ ಆನ್‌ಲೈನ್‌ನಲ್ಲಿ ಸೋರಿಕೆಯಾದ ಮಾಹಿತಿ ಪ್ರಕಾರ ಒನ್‌ಪ್ಲಸ್‌ 8ಪ್ರೊ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಿದರೆ, ಇದು ಒನ್‌ ಪ್ಲಸ್‌ ಕಂಪನಿಯ ಮೊದಲ ವಾಯರ್‌ಲೆಸ್‌ ಚಾರ್ಜಿಂಗ್‌ ಸ್ಮಾರ್ಟ್‌ಫೋನ್‌ ಆಗಿರಲಿದೆ.

Best Mobiles in India

English summary
OnePlus 8 Pro is expected to be a premium offering, and its rumoured specifications include Snapdragon 865 SoC and 120Hz Fluid Display.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+